ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಳ್ಳಂಬೆಳಗ್ಗೆ ಕೃಷಿ ಮಾರುಕಟ್ಟೆಗಳಿಗೆ ಸಚಿವರುಗಳ ಭೇಟಿ, ರೈತರೊಂದಿಗೆ ಚರ್ಚೆ

|
Google Oneindia Kannada News

ಬೆಂಗಳೂರು, ಏ. 03: ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲಾಗದೆ ಕಂಗೆಟ್ಟಿರುವ ರೈತರಿಗೆ ಧೈರ್ಯ ತುಂಬುವ ನಿಟ್ಟಿನಲ್ಲಿ ಕೃಷಿ ವಲಯಕ್ಕೆ ಸಂಬಂಧಿಸಿದ ಸಚಿವರು ಬೆಂಗಳೂರಿನ ತರಕಾರಿ ಹಾಗೂ ಇರುಳ್ಳಿ, ಆಲೂಗಡ್ಡೆ ಮಾರುಕಟ್ಟೆಗಳಿಗೆ ಬೆಳ್ಳಂಬೆಳಗ್ಗೆ ಭೇಟಿ ಕೊಟ್ಟು ರೈತರಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಕೃಷಿ ಸಚಿವ ಬಿ.ಸಿ. ಪಾಟೀಲ್, ತೋಟಗಾರಿಕಾ ಸಚಿವ ನಾರಾಯಣಗೌಡ, ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಗೋಪಾಲಯ್ಯ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್.ಆರ್. ವಿಶ್ವನಾಥ್ ಅವರುಗಳು ಹಿರಿಯ ಅಧಿಕಾರಿಗಳೊಂದಿಗೆ ಬೆಂಗಳೂರಿನ ತರಕಾರಿ ಮತ್ತು ಈರುಳ್ಳಿ ಆಲೂಗಡ್ಡೆ ಮಾರುಕಟ್ಟೆಗಳಿಗೆ ಭೇಟಿ ನೀಡಿದರು.

ಏ.5ರಂದು ದೀಪ ಹಚ್ಚಿ ಲಕ್ಷ್ಮಣ ರೇಖೆ ದಾಟಬೇಡಿ, ಇದೇ ರಾಮಬಾಣ: ಮೋದಿ ಏ.5ರಂದು ದೀಪ ಹಚ್ಚಿ ಲಕ್ಷ್ಮಣ ರೇಖೆ ದಾಟಬೇಡಿ, ಇದೇ ರಾಮಬಾಣ: ಮೋದಿ

ಇದೇ ಸಂದರ್ಭದಲ್ಲಿ ಬ್ಯಾಟರಾಯನಪುರ ಹಾಗೂ ದಾಸನಪುರ ಮಾರುಕಟ್ಟೆ ಪ್ರಾಂಗಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತರಕಾರಿ, ಸೊಪ್ಪು ಹಾಗೂ ಇರುಳ್ಳಿ, ಆಲೂಗಡ್ಡೆ ಸಾಗಿಸುವಾಗ ಪೊಲೀಸರು ಅಥವಾ ಇನ್ನಿತರ ಅಧಿಕಾರಿಗಳು ತೊಂದರೆ ಕೊಡುತ್ತಾರೆಯೆ ಎಂದು ರೈತರು ಹಾಗು ವ್ಯಾಪಾರಸ್ಥರನ್ನು ಕೇಳಿದ ಸಚಿವರು, ಹಾಗೇನಾದರೂ ಇದಲ್ಲಿ ತಿಳಿಸುವಂತೆ ಮನವಿ ಮಾಡಿಕೊಂಡರು. ಯಾವುದೇ ತೊಂದರೆಯನ್ನು ಕೃಷಿ ಉತ್ಪನ್ನಗಳನ್ನು ಸಾಗಣೆ ಮಾಡಲು ಪೊಲೀಸರು ತೊಂದರೆ ಮಾಡಿಲ್ಲ ಎಂದು ಮಾರುಕಟ್ಟೆಯಲ್ಲಿದ್ದ ಕೃಷಿಕರು ಹಾಗೂ ವ್ಯಪಾರಸ್ಥರು ಮಾಹಿತಿ ಕೊಟ್ಟಿದ್ದಾರೆ.

Ministers visited to agricultural markets and received information from farmers.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರುಗಳು, ಸಾಮಾಜಿಕ ಅಂತರ ಎನ್ನುವುದು ಸ್ವಯಂಪ್ರೇರಣೆಯಾಗಬೇಕು. ಸಾಮಾಜಿಕ ತುರ್ತು ಪರಿಸ್ಥಿತಿ ಇದಾಗಿರುವುದರಿಂದ ನಮ್ಮಷ್ಟಕ್ಕೆ ನಾವು ನಿಬಂಧನೆ ಹಾಕಿಕೊಳ್ಳಬೇಕು. ಪೊಲೀಸರಿಂದಾಗಲೀ ಅಥವಾ ಸರ್ಕಾರದ ಒತ್ತಾಯವಾಗಿ ಆಗಲೀ ಆಗಬಾರದು. ಸಾಮಾಜಿಕ ಅಂತರ ಎನ್ನುವುದು ಕೊರೊನಾ ಮಹಾಮಾರಿಯ ವಿರುದ್ಧ ಸಮರ ಸಾರಲು ಇರುವ ಏಕೈಕ ಪರಿಹಾರ. ಜನರ ಹಾಗೂ ಸಾಮಾಜಿಕ ಆರೋಗ್ಯದ ಹಿತದೃಷ್ಟಿಯಿಂದಲೇ ಸಾಮಾಜಿಕ ಅಂತರ ಲಾಕ್‌ಡೌನ್‌ಗೆ ಕರೆ ನೀಡಲಾಗಿದೆ ಎಂಬುದನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ.

English summary
Ministers visited to agricultural markets and received information from farmers. Minister advised to sell agricultural products fallowinf social distance.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X