ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಚೇರಿಯಲ್ಲಿ ಸಿಬ್ಭಂದಿಗಳು ಗೈರು; ಸಚಿವರಿಂದ ಖಡಕ್ ಎಚ್ಚರಿಕೆ

|
Google Oneindia Kannada News

ಬೆಂಗಳೂರು, ಫೆಬ್ರವರಿ 24 : ಜನರ ದೂರುಗಳನ್ನು ಆಲಿಸಿ ಪರಿಹಾರ ನೀಡಲು ಸಹಾಯವಾಣಿ ಕೇಂದ್ರ ತೆರೆಯಲಾಗಿದೆ. ಆದರೆ, ಕೇಂದ್ರದಲ್ಲಿ ಸಿಬ್ಬಂದಿಗಳು ಗೈರಾಗಿದ್ದನ್ನು ಕಂಡು ಸಚಿವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು, ಖಡಕ್ ಎಚ್ಚರಿಕೆ ನೀಡಿದರು.

ಸೋಮವಾರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ. ಗೋಪಾಲಯ್ಯ ಬೆಂಗಳೂರಿನ ಕನ್ನಿಂಗ್ ಹ್ಯಾಮ್‌ ರಸ್ತೆಯಲ್ಲಿರುವ ಇಲಾಖೆಯ ಸಹಾಯವಾಣಿ ಕೇಂದ್ರಕ್ಕೆ ಭೇಟಿ ನೀಡಿದರು. ಅಲ್ಲಿನ ಅವ್ಯವಸ್ಥೆಗಳನ್ನು ನೋಡಿ ಸಿಬ್ಬಂದಿ ವರ್ಗದವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ಗಣರಾಜ್ಯೋತ್ಸವಕ್ಕೆ ಗೈರು; ಬಿಬಿಎಂಪಿ ಅಧಿಕಾರಿಗಳ ವೇತನ ಕಡಿತ ಗಣರಾಜ್ಯೋತ್ಸವಕ್ಕೆ ಗೈರು; ಬಿಬಿಎಂಪಿ ಅಧಿಕಾರಿಗಳ ವೇತನ ಕಡಿತ

ಕಚೇರಿಗೆ ಸರಿಯಾದ ಸಮಯಕ್ಕೆ ಬಾರದ ಅಧಿಕಾರಿಗಳು, ಸಿಬ್ಬಂದಿಗಳಿಗೆ ತರಾಟೆ ತೆಗೆದುಕೊಂಡರು. ಹಾಜರಾತಿ ಪುಸ್ತಕಕ್ಕೆ ಸಹಿ ಹಾಕದಿದ್ದಕ್ಕೆ ಆಕ್ರೋಶಗೊಂಡರು. ಪುಸ್ತಕ ಇರೋದು ಯಾಕೆ?, ಸಹಿ ಹಾಕಬೇಕು ಅಲ್ವಾ ಹುಡುಗಾಟಕ್ಕೆ ಇದೆ ಅಂತ ತಿಳಿದುಕೊಂಡಿದ್ದೀರಾ? ಎಂದು ಪ್ರಶ್ನೆ ಮಾಡಿದರು.

ನೂತನ ಸಚಿವರು ಎಲ್ಲಿ, ಯಾವ ಕೊಠಡಿಗಳಲ್ಲಿ ಸಿಗುತ್ತಾರೆ? ನೂತನ ಸಚಿವರು ಎಲ್ಲಿ, ಯಾವ ಕೊಠಡಿಗಳಲ್ಲಿ ಸಿಗುತ್ತಾರೆ?

Minister Upset For Officials Absent In Call Center

ಸಹಾಯವಾಣಿ ಕೇಂದ್ರದಲ್ಲಿ ಫೋನ್ ಕರೆಗಳನ್ನು ಸ್ವೀಕರಿಸಿದ ಕೆ. ಗೋಪಾಲಯ್ಯ ಜನರ ಸಮಸ್ಯೆ ಆಲಿಸಿದರು. ಕೇಂದ್ರಕ್ಕೆ ಸರ್ವರ್ ಡೌನ್, ಕಡಿಮೆ ಅಕ್ಕಿ ಕೊಡುತ್ತಿದ್ದಾರೆ ಮುಂತಾದ ದೂರುಗಳು ಹೆಚ್ಚಾಗಿ ಬರುತ್ತಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಸದನಕ್ಕೆ ಸುಳ್ಳು ಹೇಳಿದ ಗೃಹ ಸಚಿವ ಬಸವರಾಜ ಬೊಮ್ಮಾಯಿಸದನಕ್ಕೆ ಸುಳ್ಳು ಹೇಳಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ

Minister Upset For Officials Absent In Call Center

ಕೇಂದ್ರದಲ್ಲಿ ಶೇ 50ರಷ್ಟು ಸಿಬ್ಬಂದಿಗಳು ಗೈರಾಗಿದ್ದನ್ನು ಕಂಡು ಬೇಸರ ವ್ಯಕ್ತಪಡಿಸಿದ ಸಚಿವರು ಇನ್ನು ಮುಂದೆ ಈ ರೀತಿ ನಡೆಯಲು ಬಿಡುವುದಿಲ್ಲ ಎಂದು ಖಡಕ್ ಎಚ್ಚರಿಕೆ ಕೊಟ್ಟರು. ಸಮಯಕ್ಕೆ ಸರಿಯಾಗಿ ಬಾರದ ಸಿಬ್ಬಂದಿಗಳಿಗೆ, ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ಸೂಚಿಸಿದರು.

English summary
Karnataka food and civil supplies minister K.Gopalaiah visited department call center in Bengaluru. Minister upset for officials absent.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X