ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಸ್ ದರ ಏರಿಕೆ ಸದ್ಯಕ್ಕಿಲ್ಲ, ಸಿಎಂ ನಿರ್ಧಾರ ಮಾಡ್ತಾರೆ: ಸಚಿವ ತಮ್ಮಣ್ಣ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 9: ದಸರಾ ಸಮಯದಲ್ಲಿ ಕರ್ನಾಟಕದ ಜನತೆಗೆ ಸಿಹಿ ಸುದ್ದಿಯೊಂದು ದೊರೆತಿದೆ. ರಾಜ್ಯದಲ್ಲಿ ಸದ್ಯಕ್ಕೆ ಬಸ್ ದರ ಏರಿಕೆ ಇಲ್ಲ, ಆದರೆ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ನಿರ್ಧಾರ ಮಾಡಲಿದ್ದಾರೆ ಎಂದು ಸಚಿವ ಡಿಸಿ ತಮ್ಮಣ್ಣ ಹೇಳಿದ್ದಾರೆ.

ಸಾರಿಗೆಯ ನಾಲ್ಕು ನಿಗಮಗಳು ಸಂಕಷ್ಟದಲ್ಲಿರುವ ಕಾರಣ ಸಾರಿಗೆ ಇಲಾಖೆಯು ಶೇ.18ರಷ್ಟು ಬಸ್ ದರ ಏರಿಕೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ ಸದ್ಯಕ್ಕೆ ಹೆಚ್ಚಳ ಮಾಡುವುದಿಲ್ಲ ಎಂದರು.

ಪ್ರಯಾಣಿಕರೆ ಸ್ವಲ್ಪ ನಿಟ್ಟುಸಿರು ಬಿಡಿ, ಬಸ್‌ ಟಿಕೆಟ್ ದರ ಏರಿಕೆ ಸದ್ಯಕ್ಕಿಲ್ಲ ಪ್ರಯಾಣಿಕರೆ ಸ್ವಲ್ಪ ನಿಟ್ಟುಸಿರು ಬಿಡಿ, ಬಸ್‌ ಟಿಕೆಟ್ ದರ ಏರಿಕೆ ಸದ್ಯಕ್ಕಿಲ್ಲ

ಪೆಟ್ರೋಲ್ ಡೀಸೆಲ್ ದರ ಏರಿಕೆಯಾದ ಬೆನ್ನಲ್ಲೇ ರಾಜ್ಯದ ನಾಲ್ಕು ಸಾರಿಗೆಗಳು ನಷ್ಟ ಅನುಭವಿಸಿದ್ದವು, ನಂತರ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿಯವರು ಸಾರ್ವಜನಿಕರ ಒತ್ತಡದ ಮೇರೆಗೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು 2 ರೂ ಕಡಿಮೆ ಮಾಡಿದ್ದರು. ಆ ಸಂದರ್ಭದಲ್ಲಿ ಬಸ್ ದರ ಏರಿಕೆ ಮಾಡಿದರೆ ರಾಜ್ಯದ ಜನರಿಗೆ ಮತ್ತೊಂದು ಬರೆ ಎಳೆದಂತಾಗುತ್ತದೆ ಎಂದು ಬಸ್ ದರ ಏರಿಕೆ ನಿರ್ಧಾರವನ್ನು ತಡೆಹಿಡಿದಿದ್ದರು.

 Minister Thammanna says no bus fare hike right now

ಈ ಕುರಿತು ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿಯವರ ಜತೆಗೆ ಚರ್ಚಿಸಿರುವ ಸಚಿವ ಡಿಸಿ ತಮ್ಮಣ್ಣ ಸದ್ಯಕ್ಕೆ ಬಸ್ ಪ್ರಯಾಣ ದರ ಏರಿಕೆ ಇಲ್ಲ ಎಂದು ತಿಳಿಸಿದ್ದಾರೆ. ಈಗ ರಾಜ್ಯದ ಜನರು ನಿಟ್ಟುಸಿರು ಬಿಡುವಂತಾಗಿದೆ.

ಬಸ್ ಪ್ರಯಾಣ ದರ ಏರಿಕೆ ಆದೇಶಕ್ಕೆ ಬ್ರೇಕ್ ಹಾಕಿದ ಕುಮಾರಸ್ವಾಮಿ ಬಸ್ ಪ್ರಯಾಣ ದರ ಏರಿಕೆ ಆದೇಶಕ್ಕೆ ಬ್ರೇಕ್ ಹಾಕಿದ ಕುಮಾರಸ್ವಾಮಿ

ತೈಲ ದರ ಏರಿಕೆಯಿಂದ ಸಾರಿಗೆ ನಿಗಮಗಳಿಗೆ ಮಾಸಿಕ ಕೋಟ್ಯಂತರ ರೂ ಹೆಚ್ಚುವರಿ ಹೊರೆಯಾಗುತ್ತಿದೆ ಎಂಬ ಕಾರಣ ನೀಡಿ ನಾಲ್ಕು ಸಾರಿಗೆ ನಿಗಮಗಳು ಟಿಕೆಟ್ ದರ ಏರಿಕೆ ಸಂಬಂಧ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದವು. ನಾಲ್ಕು ನಿಗಮಗಳು ಆರ್ಥಿಕ ಸಂಕಷ್ಟದಲ್ಲಿರುವುದರಿಂದ ತೈಲ ದರ ಏರಿಕೆಯಿಂದ ನಿಗಮಗಳ ಆರ್ಥಿಕ ಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ.

ಬಸ್‌ ಪ್ರಯಾಣ ದರ ಶೇ.18ರಷ್ಟು ಹೆಚ್ಚಳಕ್ಕೆ ಸರ್ಕಾರ ಚಿಂತನೆ ಬಸ್‌ ಪ್ರಯಾಣ ದರ ಶೇ.18ರಷ್ಟು ಹೆಚ್ಚಳಕ್ಕೆ ಸರ್ಕಾರ ಚಿಂತನೆ

ಹೀಗಾಗಿ ದರ ಏರಿಕೆ ಅನಿವಾರ್ಯವಾಗಿರುವುದರಿಂದ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಈ ನಿರ್ಧಾರ ತೆಗೆದುಕೊಳ್ಳಲು ನಿರ್ಧರಿಸಿದ್ದರು. ನಾಲ್ಕು ನಿಗಮಗಳ ಬಸ್ ಪ್ರಯಾಣ ದರ ಶೇ,.18ರಷ್ಟು ಹೆಚ್ಚಳ ಮಾಡುವಂತೆ ಸಾರಿಗೆ ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ ರಾಜ್ಯ ಸರ್ಕಾರ ಶೇ.16ರಷ್ಟು ಹೆಚ್ಚಳ ಮಾಡುವಂತೆ ಸೂಚಿಸಿತ್ತು.

English summary
Transport minister D.C.Thammanna had said government has not decided to hike bus fare right now but chief minister will take appropriate decision soon
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X