ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಾ. ಸುಧಾಕರ್‌ಗೆ ಡಬಲ್ ಧಮಾಕಾ, ಶ್ರೀರಾಮುಲುಗೆ ಶಾಕ್ ಮೇಲೆ ಶಾಕ್!

|
Google Oneindia Kannada News

ಬೆಂಗಳೂರು, ಅ. 12: ಆರೋಗ್ಯ ಇಲಾಖೆ ಖಾತೆಯನ್ನು ಕೊನೆಗೂ ಸಚಿವ ಡಾ. ಸುಧಾಕರ್ ಅವರು ಪಡೆದುಕೊಳ್ಳುವಲ್ಲಿ ಸಫಲರಾಗಿದ್ದಾರೆ. ಜೊತೆಗೆ ಆರೋಗ್ಯ ಇಲಾಖೆ ಬದಲಾಗಿ ಸಚಿವ ಶ್ರೀರಾಮುಲು ಅವರಿಗೆ ಸಮಾಜ ಕಲ್ಯಾಣ ಇಲಾಖೆಯನ್ನು ಹಂಚಿಕೆ ಮಾಡಿದ ಸಿಎಂ ಯಡಿಯೂರಪ್ಪ ಅವರ ಸಲಹೆಯಂತೆ ರಾಜ್ಯಪಾಲ ವಾಲಾ ಅವರು ಅಧಿಕೃತ ಆದೇಶ ಹೊರಡಿಸಿದ್ದಾರೆ.

ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಅವರಿಗೆ ಆರೋಗ್ಯ ಇಲಾಖೆಯನ್ನು, ಸಚಿವ ಶ್ರೀರಾಮುಲು ಅವರಿಗೆ ಸಮಾಜ ಕಲ್ಯಾಣ ಇಲಾಖೆಯನ್ನು ಮರು ಹಂಚಿಕೆ ಮಾಡಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಆದೇಶ ಮಾಡಿದ್ದಾರೆ. ಡಿಸಿಎಂ ಗೋವಿಂದ ಕಾರಜೋಳ ಅವರಿಗೆ ಹಾಲಿ ಇರುವ ಲೋಕೋಪಯೋಗಿ ಇಲಾಖೆಯನ್ನು ಉಳಿಸಿ ಸಮಾಜ ಕಲ್ಯಾಣ ಇಲಾಖೆಯನ್ನು ಹಿಂದಕ್ಕೆ ಪಡೆಯಲಾಗಿದೆ. ಸಮಾಜ ಕಲ್ಯಾಣ ಇಲಾಖೆಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮ್ಮ ಬಳಿ ಇಟ್ಟು ಕೊಂಡಿರುವುದು ಈಗಿನ ಅಸಮಾಧಾನಕ್ಕೆ ಕಾರಣವಾಗಿದೆ.

ಹಿಂದುಳಿದ ವರ್ಗ ಸಿಎಂ ಬಳಿ

ಹಿಂದುಳಿದ ವರ್ಗ ಸಿಎಂ ಬಳಿ

ವಿಪರ್ಯಾಸವೆಂದರೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಜೊತೆಗೆ ಸಚಿವ ರಾಮುಲು ಅವರಿಗೆ ನೀಡಲಾದ್ದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜವಾಬ್ದಾರಿ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ತಮ್ಮಲ್ಲಿ ಇಟ್ಟುಕೊಳ್ಳುವ ಮೂಲಕ ಕೇವಲ ಸಮಾಜ ಕಲ್ಯಾಣ ಇಲಾಖೆಯನ್ನು ಕೊಟ್ಟಿರುವುದು ಶ್ರೀರಾಮುಲು ಅವರಿಗೆ ಆಗಿರುವ ಹಿನ್ನಡೆ ಎಂದೇ ಹೇಳಲಾಗುತ್ತಿದೆ.

ಆರೋಗ್ಯ ಸಚಿವ ಶ್ರೀರಾಮುಲು ಖಾತೆ ಬದಲಾವಣೆ: ಅಸಮಾಧಾನ ಸ್ಫೋಟ!ಆರೋಗ್ಯ ಸಚಿವ ಶ್ರೀರಾಮುಲು ಖಾತೆ ಬದಲಾವಣೆ: ಅಸಮಾಧಾನ ಸ್ಫೋಟ!

ಡಾ. ಸುಧಾಕರ್‌ಗೆ ಡಬಲ್ ಧಮಾಕಾ!

ಡಾ. ಸುಧಾಕರ್‌ಗೆ ಡಬಲ್ ಧಮಾಕಾ!

ಡಾ. ಸುಧಾಕರ್ ಅವರಿಗೆ ಡಬಲ್ ಧಮಾಕ ಹೊಡೆದಿದ್ದು, ಶ್ರೀರಾಮುಲು ಅವರಿಗೆ ಯಡಿಯೂರಪ್ಪ ಶಾಕ್ ಮೇಲೆ ಶಾಕ್ ಕೊಟ್ಟಿದ್ದಾರೆ. ವೈದ್ಯಕೀಯ ಶಿಕ್ಷಣದ ಜೊತೆಗೆ ಕುಟುಂಬ ಕಲ್ಯಾಣವನ್ನು ಹೆಚ್ಚುವರಿಯಾಗಿ ನೀಡಲಾಗಿದ್ದರೆ, ಶ್ರೀರಾಮುಲು ಅವರಿಂದ ಎರಡು ಖಾತೆಗಳನ್ನು ಕಿತ್ತುಕೊಂಡು ಒಂದೇ ಖಾತೆ ಕೊಟ್ಟಿರುವುದು ಶ್ರೀರಾಮುಲು ಅವರು ಸಿಡಿದೇಳುವಂತೆ ಮಾಡಿದೆ.

ಹೊಂದಾಣಿಕೆ ಗೊಂದಲ

ಹೊಂದಾಣಿಕೆ ಗೊಂದಲ

ನಿನ್ನೆ ಮುಖ್ಯಮಂತ್ರಿ ನಿವಾಸದಲ್ಲಿ ನಡೆದ ಕೋವಿಡ್ ಉಸ್ತುವಾರಿಗಳ ಸಭೆಯ ಬಳಿಯ ತೀರ್ಮಾನ ಕೈಗೊಂಡಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಕೋವಿಡ್ ನಿರ್ವಹಣೆಯಲ್ಲಿ ಸಚಿವ ಶ್ರೀರಾಮುಲು ಮತ್ತು ಸಚಿವ ಡಾ. ಸುಧಾಕರ್ ಅವರ ಮಧ್ಯೆ ಹೊಂದಾಣಿಕೆಯಾಗದೆ ಗೊಂದಲ ಏರ್ಪಟ್ಟಿದೆ. ಇದೇ ಸಂದರ್ಭದಲ್ಲಿ ಇಲಾಖೆ ನಿರ್ವಹಣೆಯಲ್ಲಿ ಹಸ್ತಕ್ಷೇಪದ ಕುರಿತು ಪದೇ ಪದೇ ಶ್ರೀರಾಮುಲು ಅವರು ಆಕ್ಷೇಪ ವ್ಯಕ್ತಪಡಿಸಿದ್ದರು.

ಸಿಎಂ ನನ್ನ ಮೇಲೆ ನಂಬಿಕೆ ಇಟ್ಟು ಆರೋಗ್ಯ ಇಲಾಖೆ ನೀಡಿದ್ದಾರೆ: ಸಚಿವ ಕೆ.ಸುಧಾಕರ್ಸಿಎಂ ನನ್ನ ಮೇಲೆ ನಂಬಿಕೆ ಇಟ್ಟು ಆರೋಗ್ಯ ಇಲಾಖೆ ನೀಡಿದ್ದಾರೆ: ಸಚಿವ ಕೆ.ಸುಧಾಕರ್

ಡಿಸಿಎಂ ಸ್ಥಾನ ಪಡೆಯಲು ಪ್ರಯತ್ನ!

ಡಿಸಿಎಂ ಸ್ಥಾನ ಪಡೆಯಲು ಪ್ರಯತ್ನ!

ಈ ನಡುವೆ ಉಪ ಮುಖ್ಯಮಂತ್ರಿ ಸ್ಥಾನ ಸಿಗದ್ದಿದ್ದಕ್ಕೆ ಆರಂಭದಿಂದಲೂ ಮುನಿಸಿಕೊಂಡಿದ್ದ ಸಚಿವ ರಾಮುಲು ಅವರು ಡಿಸಿಎಂ ಸ್ಥಾನ ಪಡೆದುಕೊಳ್ಳಲು ಸತತ ಪ್ರಯತ್ನ ನಡೆಸಿದ್ದರು. ಆದರೆ ಸಚಿವ ರಮೇಶ್ ಜಾರಕಿಹೊಳಿ ಅಡ್ಡ ಗಾಲು ಹಾಕುವ ಮೂಲಕ ರಾಮುಲುಗೆ ಡಿಸಿಎಂ ತಪ್ಪಿಸಿ ತಾವು ಡಿಸಿಎಂ ಆಗಬೇ ಕೆಂದು ನಿರಂತರ ಪ್ರಯತ್ನ ನಡೆಸಿದ್ದಾರೆ. ಹೀಗಾಗಿ ಮುಖ್ಯಮಂತ್ರಿಗಳು ಮೂಲ ನಿವಾಸಿಗಳಿಗಿಂತ ವಲಸಗರಿಗೆ ಆದ್ಯತೆ ನೀಡುತ್ತಿರುವುದು ಮೊದಲಿಂದಲೂ ಸಿಟ್ಟಿತ್ತು. ಈಗ ತಮ್ಮ ಜೊತೆ ಚೆರ್ಚಿಸಿದೆ ಏಕಾಏಕಿ ಖಾತೆ ಬದಲಾವಣೆ ಮಾಡಿರುವುದು ಶ್ರೀರಾಮುಲು ಅವರ ಅಸಮಾಧಾನಕ್ಕೆ ಕಾರಣವಾಗಿದೆ.

English summary
Minister Sriramulu has a setback in re allocation of portfolio. Dr. Sudhakar was hit by a double Dhamaka, giving him two important portfolios. Health department withdrawn from Sriramulu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X