ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಬಕಾರಿ ಮಂತ್ರಿ ಖಾತೆ, ಸತೀಶ ಜಾರಕಿಹೊಳಿ ಕ್ಯಾತೆ

|
Google Oneindia Kannada News

ಬೆಳಗಾವಿ, ಡಿ. 6: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದಕ್ಕೆ ಮತ್ತೊಂದು ಉದಾಹರಣೆ ಸಿಕ್ಕಿದೆ. ಈ ಬಾರಿ ಮಂತ್ರಿ ಪದವಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವುದು ಅಬಕಾರಿ ಸಚಿವ ಸತೀಶ ಜಾರಕಿಹೊಳಿ.

ಸಮಾಜ ಸೇವೆಯ ಸಾಕಷ್ಟು ಕೆಲಸಗಳು ನನಗಿದೆ. ಅಬಕಾರಿಯಂತಹ ಭಾರವಾದ ಖಾತೆ ಬೇಡ ಎಂದು ಸಂಪುಟ ಸೇರುವ ಮುನ್ನವೇ ತಿಳಿಸಿದ್ದೆ. ನನಗೆ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಕೊಟ್ಟರೆ ಒಳ್ಳೆಯದು ಎಂದು ಮನವಿ ಮಾಡಿದ್ದೆ ಎಂದು ಹೇಳಿದ್ದಾರೆ.[ನಿಗಮ-ಮಂಡಳಿ ಪಟ್ಟಿ ಬಿಡುಗಡೆ, ಯಾರಿಗೆ ಯಾವ ಸ್ಥಾನ?]

satish

ನನಗೆ ಕಾರ್ಯದಕ್ಷತೆಯಿಂದ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಕೆಲವು ಅಡೆತಡೆಗಳು ಕಾಡುತ್ತಿವೆ. ಅಬಕಾರಿ ಖಾತೆ ನಿರ್ವಹಿಸುವುದು ಸ್ವಲ್ಪ ಕಷ್ಟದ ಕೆಲಸವಾಗಿಯೇ ಪರಿಣಮಿಸಿದೆ ಎಂದು ಹೇಳಿದರು.

ಸ್ಮಶಾನದಲ್ಲಿ ಸಚಿವ
ಮೂಢನಂಬಿಕೆ ವಿರೋಧಿ ಹೋರಾಟದಲ್ಲಿ ಭಾಗಿಯಾಗಿರುವ ಸತೀಶ ಜಾರಕಿಹೊಳಿ ಬೆಳಗಾವಿಯ ರುದ್ರಭೂಮಿಯಲ್ಲಿ ಅಂಬೇಡ್ಕರ್ ಮಹಾಪರಿನಿರ್ವಾಣ ದಿನವನ್ನು ಸಮಾಜ ಪರಿವರ್ತನಾ ದಿನವನ್ನಾಗಿ ಆಚರಿಸಲಿದ್ದಾರೆ. ರಾಜ್ಯದ ವಿವಿಧೆಡೆಯಿಂದ ಹೊರಟಿರುವ ಜಾಥಾ ರುದ್ರಭೂಮಿಯಲ್ಲಿ ಸಮಾವೇಶಗೊಳ್ಳಲಿದೆ.[ಸ್ಮಶಾನದಲ್ಲಿ ಇದೇನು ಅಬಕಾರಿ ಸಚಿವರ ಕಾರ್ಯಕ್ರಮ!]

ಸಚಿವ ಸಂಪುಟದಲ್ಲಿ ಅಸಮಾಧಾನ ನಿರಂತರವಾಗಿದೆ . ಹಿಂದೊಮ್ಮೆ ಮೀನುಗಾರಿಕಾ ಸಚಿವ ಅಭಯ್ ಚಂದ್ರ ಜೈನ್ ತಮ್ಮ ಖಾತೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ನಾನು ಅಹಿಂಸೆ ಪ್ರತಿಪಾದನೆ ಮಾಡುವ ಜೈನ ಧರ್ಮಕ್ಕೆ ಸೇರಿದ್ದು, ಮೀನುಗಾರಿಕೆ ಇಲಾಖೆಯೊಂದಿಗಿನ ಕೆಲಸ ನನ್ನ ಧಾರ್ಮಿಕ ಭಾವನೆಗೆ ಧಕ್ಕೆ ತರುತ್ತದೆ ಎಂದು ಅಭಯ್ ಚಂದ್ರ ಜೈನ್ 2113 ರಲ್ಲಿ ಹೇಳಿದ್ದರು.[ಖಾತೆ ಕ್ಯಾತೆ, ಮಾತು ಬದಲಿಸಿದ ಅಭಯಚಂದ್ರ]

ಈಗಷ್ಟೇ ನಿಗಮ ಮಂಡಳಿ ಆಪರೇಷನ್ ನಿಂದ ಹೊರಬಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮತ್ತು ಕೆಪಿಸಿಸಿಗೆ ಇಂಥ ಘಟನೆಗಳು ತಲೆನೋವು ತರಿಸುವುದೆಂತೂ ಸುಳ್ಳಲ್ಲ.

English summary
Excise and Belagavi district minister Satish Jarkiholi openly express dissatisfaction on his minister post. 'I realy want sports and youth affairs minister post. To run Excise department is very difficult to me' he said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X