ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಪಚುನಾವಣೆಯ ಈ ವೇಳೆ, ಯಾರಾದ್ರೂ ಮುಂದೆ ಬನ್ನಿ: ತುರ್ತಾಗಿ ಈಶ್ವರಪ್ಪ ಬಾಯಿಗೆ ಬೀಗ ಹಾಕಬೇಕಿದೆ

|
Google Oneindia Kannada News

ರಾಜಕೀಯ ಚಟುವಟಿಕೆಗಳು ಹೆಚ್ಚಿಲ್ಲದ ವೇಳೆಯೂ, ಸಚಿವ ಕೆ.ಎಸ್. ಈಶ್ವರಪ್ಪ, ಸದಾ ಸುದ್ದಿಯಲ್ಲಿರುವುದು, ವಿವಾದಕಾರಿ ಹೇಳಿಕೆಯಿಂದಾಗಿ. ಇವರ ಹೇಳಿಕೆಯಿಂದ, ಪಕ್ಷವೂ ಅಂತರ ಕಾಯ್ದುಕೊಂಡಿದ್ದು ಇದೆ.

ಬಿಜೆಪಿ ಸರಕಾರದ ಉಳಿವಿಗೆ ನಿರ್ಣಾಯಕವಾಗಿರುವ, ಉಪಚುನಾವಣೆಯ ಈ ಹೊಸ್ತಿಲಲ್ಲಿ, ಅಳೆದುತೂಗಿ ಮಾತನಾಡಬೇಕೆಂದು, ಬಿಜೆಪಿ ಮುಖಂಡರಿಗೆ, ಸಿಎಂ ಯಡಿಯೂರಪ್ಪ ಕಟ್ಟಪ್ಪಣೆ ಮಾಡಿದ್ದಾರೆ.

ಸಿದ್ದರಾಮಯ್ಯ ಯೋಗ್ಯರೋ ಅಯೋಗ್ಯರೋ?: ಕೆಎಸ್ ಈಶ್ವರಪ್ಪಸಿದ್ದರಾಮಯ್ಯ ಯೋಗ್ಯರೋ ಅಯೋಗ್ಯರೋ?: ಕೆಎಸ್ ಈಶ್ವರಪ್ಪ

ಆದರೂ, ಈಶ್ವರಪ್ಪ, ವಿರೋಧಿಗಳನ್ನು ಟೀಕಿಸುವ ಬರದಲ್ಲಿ, ಅಸಂಬದ್ದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಕಾಂಗ್ರೆಸ್, ಈಗ ಅದೇ ಹೇಳಿಕೆಗಳನ್ನು ಇಟ್ಟುಕೊಂಡು, ಬಿಜೆಪಿ ವಿರುದ್ದ ತಿರುಗಿಬೀಳುತ್ತಿದೆ.

ಬಿಜೆಪಿ ಸೋಲಿಗೆ ಕಾರಣವಾಗಿದ್ದು ಪ್ರಶಾಂತ್ ಕಿಶೋರ್ ತಂತ್ರಬಿಜೆಪಿ ಸೋಲಿಗೆ ಕಾರಣವಾಗಿದ್ದು ಪ್ರಶಾಂತ್ ಕಿಶೋರ್ ತಂತ್ರ

ಸಿದ್ದರಾಮಯ್ಯನವರನ್ನು ಲೇವಡಿ ಮಾಡಲು ಹೋಗಿ, ಈಶ್ವರಪ್ಪ, ಮತ್ತೆ, ಪಕ್ಷದ ಪ್ರಮುಖರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈಶ್ವರಪ್ಪ ನೀಡಿದ ಹೇಳಿಕೆಯನ್ನು, ಖುದ್ದು, ಬಿಜೆಪಿ ಸಚಿವರೇ ವಿರೋಧಿಸಿದ್ದಾರೆ. ಈಶ್ವರಪ್ಪನವರ ಕೆಲವೊಂದು, ವಿವಾದಕಾರಿ ಹೇಳಿಕೆಗಳು ಹೀಗಿದೆ..

ಭ್ರಮೆಯೋ, ಹಗಲುಕನಸೋ.. ಅವನೊಬ್ಬ ಹುಚ್ಚ

ಭ್ರಮೆಯೋ, ಹಗಲುಕನಸೋ.. ಅವನೊಬ್ಬ ಹುಚ್ಚ

"ಉಪಚುನಾವಣೆಯ ನಂತರ ನಾನೇ ಸಿಎಂ ಎಂದು ಹೇಳಿಕೊಂಡು ಸಿದ್ದರಾಮಯ್ಯ ತಿರುಗಾಡುತ್ತಿದ್ದಾನೆ. ಇದು ಭ್ರಮೆಯೋ, ಹಗಲುಕನಸೋ.. ಅವನೊಬ್ಬ ಹುಚ್ಚ. ಸದಾ ಅಧಿಕಾರದಲ್ಲೇ ಇರಬೇಕೆಂದು ಬಯಸುವ ಸಿದ್ದರಾಮಯ್ಯಗೆ, ಸಿಎಂ ಸ್ಥಾನದ ಹುಚ್ಚಿನಿಂದ ಹೊರಬರಲು ಇನ್ನೂ ಸಾಧ್ಯವಾಗುತ್ತಿಲ್ಲ".

ಕೊರಟಗೆರೆಯಲ್ಲಿ ಪರಮೇಶ್ವರರನ್ನು ಸೋಲಿಸಿಲ್ಲ ಅಂತಾ ಸಿದ್ದರಾಮಯ್ಯ ಹೇಳಲಿ

ಕೊರಟಗೆರೆಯಲ್ಲಿ ಪರಮೇಶ್ವರರನ್ನು ಸೋಲಿಸಿಲ್ಲ ಅಂತಾ ಸಿದ್ದರಾಮಯ್ಯ ಹೇಳಲಿ

"ಸಿದ್ದರಾಮಯ್ಯಗೆ ಸಿಎಂ ಹುಚ್ಚು ಹಿಡಿದುಬಿಟ್ಟಿದೆ, ಕೊರಟಗೆರೆಯಲ್ಲಿ ಪರಮೇಶ್ವರರನ್ನು ಸೋಲಿಸಿಲ್ಲ ಅಂತಾ ಸಿದ್ದರಾಮಯ್ಯ ಹೇಳಲಿ ನೋಡೋಣ, ಒಳ್ಳೆಯ ಮಾತಾಡಿ, ನೂರ್ಕಾಲ ಬಾಳಲಿ. ನಾನು ಕುರುಬ ಸಮಾಜದ ನಾಯಕ ಅಂತಾ ಸಿದ್ದರಾಮಯ್ಯ ಹೇಳ್ತಾರೆ.ಒಬ್ಬ ಕುರುಬನನ್ನು ಉದ್ದಾರ ಮಾಡಿದ್ದು ಹೇಳಲಿ ನೋಡೋಣ. ಸಿದ್ದರಾಮಯ್ಯನವರ ಪಕ್ಷ ಸಾಯ್ತಿದೆ, ಅವರು ಸಾಯಿಸುತ್ತಿದ್ದಾರೆ, ಆದರೆ ಅವರು ಸಾಯಬಾರದು".

ಪಕ್ಷವನ್ನು ಛಿದ್ರ ಛಿದ್ರ ಮಾಡುತ್ತಾರೆ

ಪಕ್ಷವನ್ನು ಛಿದ್ರ ಛಿದ್ರ ಮಾಡುತ್ತಾರೆ

"ಬಿಜೆಪಿ ಬಗ್ಗೆ ಸಿದ್ದರಾಮಯ್ಯ ಬಳಸುವ ಭಾಷೆ ನೋಡಿದರೆ ಅವರು ಯೋಗ್ಯರೋ, ಅಯೋಗ್ಯರೋ ಅಂತಾ ಜನ ತೀರ್ಮಾನಿಸಬೇಕು. ಸಿದ್ದರಾಮಯ್ಯ ನೂರು ಕಾಲ ಬದುಕಲಿ ಆದರೆ ಅವರು ಯಾವ ಪಕ್ಷಕ್ಕೆ ಹೋಗುತ್ತಾರೋ ಆ ಪಕ್ಷವನ್ನು ಛಿದ್ರ ಛಿದ್ರ ಮಾಡುತ್ತಾರೆ".

ಸಿದ್ದರಾಮಯ್ಯ ಹೋದಲ್ಲಿ ಗೋವಿಂದಾ..

ಸಿದ್ದರಾಮಯ್ಯ ಹೋದಲ್ಲಿ ಗೋವಿಂದಾ..

"ಸಿದ್ದರಾಮಯ್ಯ ಅವರಿಗೆ ನಾನು ಕೆಟ್ಟದ್ದನ್ನು ಬಯಸಿಲ್ಲ. ಅವರು ಸಿಎಂ ಆದಾಗ ನನ್ನ ಕ್ಷೇತ್ರಕ್ಕೆ ಸಹಾಯ ಮಾಡಿದ್ದಾರೆ. ನಾನು ಕೂಡಾ ಅವರ ಕ್ಷೇತ್ರಕ್ಕೆ ಸಹಾಯ ಮಾಡುತ್ತೇನೆ. ಆದರೆ ಅವರು ಯಾವ ಪಕ್ಷಕ್ಕೆ ಹೋಗುತ್ತಾರೋ ಆ ಪಕ್ಷ ಗೋವಿಂದಾ.. ಅವರು ಎಂದಿಗೂ ಮತ್ತೆ ಸಿಎಂ ಆಗಲ್ವೇ".

ಉಪಚುನಾವಣೆಯ ಈ ವೇಳೆ, ತುರ್ತಾಗಿ ಈಶ್ವರಪ್ಪ ಬಾಯಿಗೆ ಬೀಗ ಹಾಕಬೇಕಿದೆ

ಉಪಚುನಾವಣೆಯ ಈ ವೇಳೆ, ತುರ್ತಾಗಿ ಈಶ್ವರಪ್ಪ ಬಾಯಿಗೆ ಬೀಗ ಹಾಕಬೇಕಿದೆ

"ಉಪಚುನಾವಣೆಯಲ್ಲಿ ಬಿಜೆಪಿ ಎಂಟು ಸ್ಥಾನ ಗೆಲ್ಲದಿದ್ದರೆ, ನಾನು ರಾಜೀನಾಮೆ ನೀಡುತ್ತೇನೆ. ಕಾಂಗ್ರೆಸ್, ಎಂಟು ಸ್ಥಾನ ಗೆಲ್ಲದಿದ್ದರೆ ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರಾ. ನಮಗೆ ಸವಾಲು ಹಾಕುವ ಮೊದಲು, ಪಕ್ಷದಲ್ಲಿ ಅವರನ್ನು ಎಲ್ಲಿ ಇಟ್ಟಿದ್ದಾರೆ ಎನ್ನುವುದನ್ನು ಸಿದ್ದರಾಮಯ್ಯ ಅರಿತುಕೊಳ್ಳಲಿ".

English summary
Minister KS Eshwarappa Statement May Damage BJP During Karnataka By Elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X