ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಪರೇಶನ್ ಕಮಲ 'ಕಾಂಚಾಣ': ಇದೇ ಮೊದಲ ಬಾರಿಗೆ ಸತ್ಯ ಒಪ್ಪಿಕೊಂಡ ಬಿಜೆಪಿ

|
Google Oneindia Kannada News

ಕೊಪ್ಪಳ, ಕಲಬುರಗಿ, ನ 30: ಸಚಿವ ಕೆ.ಎಸ್.ಈಶ್ವರಪ್ಪನವರಿಗೆ ನಾಲಿಗೆಗೂ ಮೆದುಳಿಗೂ ಕನೆಕ್ಷನ್ ತಪ್ಪಿ ಹೋಗಿದೆ ಎಂದು ವಿರೋಧ ಪಕ್ಷದ ನಾಯಕರು ಹಲವು ಬಾರಿ ವ್ಯಂಗ್ಯವಾಡಿದ್ದುಂಟು. ಈಗ, ಗೊತ್ತಿದ್ದೋ ಗೊತ್ತಿಲ್ಲದೇನೋ ಅವರ ಮತ್ತೊಂದು ಹೇಳಿಕೆ ಬಿಜೆಪಿಗೆ ತೀವ್ರ ಮುಜುಗರವನ್ನು ತಂದೊಡ್ಡಿದೆ.

ಒಂದಲ್ಲಾ ಒಂದು ವಿವಾದಕಾರಿ ಹೇಳಿಕೆಯನ್ನು ನೀಡುತ್ತಾ, ಮತ್ತೆ ಅದಕ್ಕೆ ಇನ್ನೊಂದು ಸಮಜಾಯಿಷಿ ನೀಡುವ ಈಶ್ವರಪ್ಪ, ಇತ್ತೀಚೆಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್ ನಿರಾಣಿ ರಾಜ್ಯದ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಹೇಳಿದ್ದರು. ಇದು, ವಿವಾದಕ್ಕೆ ಕಾರಣವಾದ ನಂತರ ಅದಕ್ಕೆ ಸ್ಪಷ್ಟನೆಯನ್ನು ನೀಡಿದ್ದರು.

ಪರಿಷತ್ ಚುನಾವಣೆ: ಮೈಸೂರು ಜೆಡಿಎಸ್ ಅಭ್ಯರ್ಥಿ ಕಿಡ್ನಿ ಮಾರಾಟಗಾರನೇ?ಪರಿಷತ್ ಚುನಾವಣೆ: ಮೈಸೂರು ಜೆಡಿಎಸ್ ಅಭ್ಯರ್ಥಿ ಕಿಡ್ನಿ ಮಾರಾಟಗಾರನೇ?

ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಪರವಾಗಿ ಮಾತನಾಡುತ್ತಿದ್ದ ಈಶ್ವರಪ್ಪ, ಆಪರೇಶನ್ ಕಮಲದ ವಿಚಾರವನ್ನು ತೆಗೆದು, ಕಾಂಚಾಣದ ಹೊಳೆ ಹರಿಸಲಾಗಿತ್ತು ಎನ್ನುವುದನ್ನು ಬಹಿರಂಗವಾಗಿಯೇ ಒಪ್ಪಿಕೊಂಡಿದ್ದಾರೆ.

ನಿರಾಣಿ ಮುಂದಿನ ಸಿಎಂ ಮತ್ತು ಆಪರೇಶನ್ ಕಮಲದ ವಿಚಾರವನ್ನು ಅನಾವಶ್ಯಕವಾಗಿ ಕೆದಕಿ, ಈಶ್ವರಪ್ಪ ವಿರೋಧ ಪಕ್ಷದವರಿಗೆ ಸುಖಾಸುಮ್ಮನೆ ಆಹಾರ ಕೊಟ್ಟಂತಾಗಿದೆ ಎಂದು ಬಿಜೆಪಿಯವರು ಕೈಕೈ ಹಿಸುಕಿ ಕೊಳ್ಳುತ್ತಿದ್ದಾರೆ. ಈಶ್ವರಪ್ಪ ಹೇಳಿದ್ದೇನು?

ಕುಮಾರಸ್ವಾಮಿಗೆ ಯಡಿಯೂರಪ್ಪ ದೂರವಾಣಿ ಕರೆ: ಏನಿದು ರಾಜಕೀಯ?ಕುಮಾರಸ್ವಾಮಿಗೆ ಯಡಿಯೂರಪ್ಪ ದೂರವಾಣಿ ಕರೆ: ಏನಿದು ರಾಜಕೀಯ?

 ಅವನ್ಯಾರನ್ನೋ ಕರೆದುಕೊಂಡು ಬಾ..ಅವನಿಗೆ ದುಡ್ಡು ಕೊಡು

ಅವನ್ಯಾರನ್ನೋ ಕರೆದುಕೊಂಡು ಬಾ..ಅವನಿಗೆ ದುಡ್ಡು ಕೊಡು

"ರಾಜ್ಯದಲ್ಲಿ ನಾಲ್ಕು ಬಾರಿ ಬಿಜೆಪಿ ಅಧಿಕಾರಕ್ಕೆ ಬಂತು, ಯಡಿಯೂರಪ್ಪನವರು ಮುಖ್ಯಮಂತ್ರಿಗಳಾದರು. ಆದರೆ, ನಮ್ಮ ದುರಾದೃಷ್ಟ ಪೂರ್ಣ ಬಹುಮತ ಸಿಗಲಿಲ್ಲ. ಹಾಗಾಗಿ, ಅವನ್ಯಾರನ್ನೋ ಕರೆದುಕೊಂಡು ಬಾ..ಅವನಿಗೆ ದುಡ್ಡು ಕೊಡು.. ಇದೇ ಆಯಿತು"ಎಂದು ಸಚಿವ ಈಶ್ವರಪ್ಪ ಹೇಳುವ ಮೂಲಕ ಆಪರೇಶನ್ ಕಮಲದ ಬಗ್ಗೆ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಸರಣಿ ಹೇಳಿಕೆಯ ಮೂಲಕ ಎಡವಟ್ಟು ಮಾಡಿಕೊಳ್ಳುವ ಈಶ್ವರಪ್ಪನವರ ಈ ಹೇಳಿಕೆಗೆ ರಾಜ್ಯ ಬಿಜೆಪಿ ನಾಯಕರ ಪ್ರತಿಕ್ರಿಯೆ ಸದ್ಯಕ್ಕೆ ವ್ಯಕ್ತವಾಗಿಲ್ಲ.

 ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಮಹಾನ್ ದೇಶಭಕ್ತ

ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಮಹಾನ್ ದೇಶಭಕ್ತ

"ಆದರೆ, ಈ ಬಾರಿ ಹಿಂದಿನಂತೆ ಆಗುವುದಿಲ್ಲ, ನಮ್ಮ ಪಕ್ಷ ಗೆಲ್ಲುವುದು ಖಚಿತ. ವಿಧಾನ ಪರಿಷತ್ ಚುನಾವಣೆಯ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಿದ್ದೇನೆ. ಬಿಜೆಪಿ ಅಭ್ಯರ್ಥಿಗಳ ಗೆಲುವು ನಿಶ್ಚಿತ. ಸಿದ್ದರಾಮಯ್ಯನವರ ಕಣಕಣದಲ್ಲೂ ಮೋಸಗಾರಿಕೆ ಇದೆ, ಅವರು ಮಹಾನ್ ಕುಡುಕ, ಅದ್ಯಾವಾಗ ಕುಡಿಯುತ್ತಾರೆ ಎನ್ನುವುದು ಗೊತ್ತಾಗುವುದಿಲ್ಲ. ನಮ್ಮ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಮಹಾನ್ ದೇಶಭಕ್ತ" ಎಂದು ಈಶ್ವರಪ್ಪ ಹೇಳಿದ್ದಾರೆ.

 ಜೆಡಿಎಸ್ ಪಕ್ಷಕ್ಕೆ ಸಿದ್ದರಾಮಯ್ಯನವರು ಮೋಸ ಮಾಡಿದ್ದಾಯಿತು

ಜೆಡಿಎಸ್ ಪಕ್ಷಕ್ಕೆ ಸಿದ್ದರಾಮಯ್ಯನವರು ಮೋಸ ಮಾಡಿದ್ದಾಯಿತು

ಕಲಬುರಗಿಯಲ್ಲಿ ಹಿಂದುಳಿದ ವರ್ಗಗಳ ಮೋರ್ಚಾ ಪದಾಧಿಕಾರಿಗಳು ಹಾಗೂ ಪ್ರಮುಖರ ಸಭೆಯಲ್ಲಿ ಭಾಗವಹಿಸಿದ ನಂತರ ಮಾತನಾಡುತ್ತಾ ಈಶ್ವರಪ್ಪ, "ಜೆಡಿಎಸ್ ಪಕ್ಷಕ್ಕೆ ಸಿದ್ದರಾಮಯ್ಯನವರು ಮೋಸ ಮಾಡಿದ್ದಾಯಿತು, ಈಗ ಕಾಂಗ್ರೆಸ್ ಪಕ್ಷವನ್ನು ಅವರು ನಿರ್ನಾಮ ಮಾಡಲಿದ್ದಾರೆ. ಅವರ ರಕ್ತದಲ್ಲೇ ಮೋಸ ಎನ್ನುವುದು ಇದೆ. ನಾವು ವಿಧಾನ ಪರಿಷತ್ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗೆಲುವನ್ನು ಸಾಧಿಸಲಿದ್ದೇವೆ"ಎಂದು ಈಶ್ವರಪ್ಪ ಹೇಳಿದ್ದಾರೆ.

 ಆಪರೇಶನ್ ಕಮಲದ ವಿಚಾರದಲ್ಲಿ ಹಣ ಸಂದಾಯವಾಗಿದೆ - ಈಶ್ವರಪ್ಪ

ಆಪರೇಶನ್ ಕಮಲದ ವಿಚಾರದಲ್ಲಿ ಹಣ ಸಂದಾಯವಾಗಿದೆ - ಈಶ್ವರಪ್ಪ

ಆಪರೇಶನ್ ಕಮಲದ ವಿಚಾರದಲ್ಲಿ ಹಣ ಸಂದಾಯವಾಗಿದೆ ಎನ್ನುವುದನ್ನು ಈಶ್ವರಪ್ಪ ಒಪ್ಪಿಕೊಳ್ಳುವ ಮೂಲಕ, ಬಿಜೆಪಿಗೆ ಪರಿಷತ್ ಚುನಾವಣೆಯ ವೇಳೆ ಮುಜುಗರವನ್ನು ತಂದೊಡ್ಡಿದ್ದಾರೆ. ಮುರುಗೇಶ್ ನಿರಾಣಿ ವಿಚಾರದಲ್ಲೂ ಅವರು ಆಡಿದ ಮಾತಿನಿಂದಾಗಿ, ಬಸವರಾಜ ಬೊಮ್ಮಾಯಿಯವರು ಇನ್ನು ಹೆಚ್ಚು ದಿನ ಮುಖ್ಯಮಂತ್ರಿಯಾಗಿ ಇರುವುದಿಲ್ಲ ಎಂದು ಕಾಂಗ್ರೆಸ್ ನವರು ಬಿಜೆಪಿಯನ್ನು ಟೀಕಿಸಲಾರಂಭಿಸಿದ್ದರು.

"ನಮ್ಮ ನಾಯಕರಾದ ಮುರುಗೇಶ್ ನಿರಾಣಿ ಅವರು ರಾಜ್ಯದ ಮುಖ್ಯಮಂತ್ರಿ ಆಗುವುದು ನೂರಕ್ಕೆ ನೂರರಷ್ಟು ‌ಖಚಿತ. ನಾನು ಈ ರೀತಿ ಹೇಳಿದೆ ಎಂದರೆ, ಈಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರನ್ನು ತೆಗೆದುಬಿಡುತ್ತಾರೆ ಎಂದು ಯಾರೊಬ್ಬರೂ ಅನ್ಯಥಾ ‌ಭಾವಿಸಬಾರದು" ಎಂದು ಬೀಳಗಿಯಲ್ಲಿ ಈಶ್ವರಪ್ಪ ಹೇಳಿದ್ದರು.

Recommended Video

ಮೊದಲನೇ ಪಂದ್ಯದ Pitch ಸಿದ್ದಪಡಿಸಿದವರಿಗೆ Dravid ಕೊಟ್ಟ ಬಹುಮಾನ | Oneindia Kannada

English summary
KS Eshwarappa says Operation Lotus Indirect Statement During Speech. Minister KS Eshwarappa Accepted Bjp Had Paid to MLAs for Operation Kamala at Koppal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X