ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಗ್ಗದ ದರದಲ್ಲಿ ಮದ್ಯ, ಮದ್ಯದಂಗಡಿ ಹೆಚ್ಚಳ, ಗೊಂದಲ, ಸ್ಪಷ್ಟನೆ

|
Google Oneindia Kannada News

ಬೆಂಗಳೂರು, ಜನವರಿ 01: ರಾಜ್ಯದಲ್ಲಿ ಕಡಿಮೆ ದರದ ಮತ್ತು ಉತ್ತಮ ಗುಣ ಮಟ್ಟದ ಮದ್ಯ ಸರಬರಾಜಿಗೆ ಬೇಡಿಕೆ ಇದೆ ಎಂದು 2013 ರಿಂದಲೂ ಸರ್ಕಾರದಲ್ಲಿ ಪ್ರಸ್ತಾವನೆ ಇತ್ತು. ಆದರೆ, ತಾವು ಅಬಕಾರಿ ಸಚಿವರಾದ ನಂತರ ಇಂತಹ ಯಾವುದೇ ಪ್ರಸ್ತಾವನೆಯನ್ನು ಸರ್ಕಾರದ ಮುಂದೆ ಮಂಡಿಸಿರುವುದಿಲ್ಲ ಎಂದು ಅಬಕಾರಿ ಸಚಿವ ಎಚ್ ನಾಗೇಶ್ ಅವರು ಸ್ಪಷ್ಟಪಡಿಸಿದ್ದಾರೆ.

ಬಡಜನರು ಹೆಚ್ಚು ಬಳಕೆ ಮಾಡುವ ಕಡಿಮೆ ದರದ ಮದ್ಯವನ್ನು ಸಹಾಯಧನ ( ಸಬ್ಸಿಡಿ ) ದರದಲ್ಲಿ ಪೂರೈಕೆ ಮಾಡುವುದು ಸೂಕ್ತವಲ್ಲವೇ ? ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಂದರ್ಭದಲ್ಲಿ ಇಂತಹ ಬೇಡಿಕೆಯು ಹಿಂದಿನಿಂದ ಇದೆ ಎಂದು ಉತ್ತರಿಸಿರುತ್ತೇನೆ.

ಮದ್ಯ ಪ್ರಿಯರಿಗೆ ಸಿಹಿ ಸುದ್ದಿ ಕೊಟ್ಟ ಗೋವಾ ಸರ್ಕಾರ!ಮದ್ಯ ಪ್ರಿಯರಿಗೆ ಸಿಹಿ ಸುದ್ದಿ ಕೊಟ್ಟ ಗೋವಾ ಸರ್ಕಾರ!

ಆದರೆ, ನನ್ನ ಈ ಹೇಳಿಕೆಯು ಕೆಲವು ಮಾಧ್ಯಮಗಳಲ್ಲಿ ವ್ಯತಿರಿಕ್ತವಾಗಿ ಬಿಂಬಿಸಲಾಗಿದೆ. ಪ್ರಸ್ತುತ ಅಗ್ಗದ ಅಥವಾ ಸಬ್ಸಿಡಿ ಮದ್ಯ ಪೂರೈಸುವ ಯಾವುದೇ ಪ್ರಸ್ತಾವನೆಯು ರಾಜ್ಯ ಸರ್ಕಾರದ ಪರಿಶೀಲನೆಯಲ್ಲಿ ಇಲ್ಲ ಎಂಬುದನ್ನು ಮತ್ತೊಮ್ಮೆ ಸ್ಪಷ್ಟಪಡಿಸಬಯಸುತ್ತೇನೆ ಎಂದು ಅಬಕಾರಿ ಸಚಿವರು ಹೇಳಿದರು.

ಬಾರ್, ಪಬ್ ಸಮಯ ಅವಧಿ ಬಗ್ಗೆ ಸ್ಪಷ್ಟನೆ

ಬಾರ್, ಪಬ್ ಸಮಯ ಅವಧಿ ಬಗ್ಗೆ ಸ್ಪಷ್ಟನೆ

ಅಬಕಾರಿ ಇಲಾಖೆಯ ನಿಯಮಗಳ ಪ್ರಕಾರ ಸಿ ಎಲ್ 2 (ಎಂ ಆರ್ ಪಿ ಔಟ್‍ಲೆಟ್ ಮತ್ತು ವೈನ್‍ಸ್ಟೋರ್ಸ್) ಗಳಲ್ಲಿ ರಾತ್ರಿ 10-30 ಗಂಟೆಯವರೆಗೆ ಮತ್ತು ಸಿ ಎಲ್ 9 ( ಬಾರ್ ಅಂಡ್ ರೆಸ್ಟೋರೆಂಟ್ ಹಾಗೂ ಪಬ್ ) ಗಳಲ್ಲಿ ಬೆಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಮಧ್ಯರಾತ್ರಿ 1-00 ಗಂಟೆಯವರೆಗೆ ಹಾಗೂ ಉಳಿದೆಡೆಗಳಲ್ಲಿ ರಾತ್ರಿ 11-30 ಗಂಟೆಯವರೆಗೆ ಮದ್ಯಪೂರೈಕೆಗೆ ಅವಕಾಶವಿದೆ ಎಂದು ಎಚ್ ನಾಗೇಶ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎಂಎಸ್ಐಎಲ್ ಮದ್ಯದಂಗಡಿ ವಿಸ್ತರಣೆ

ಎಂಎಸ್ಐಎಲ್ ಮದ್ಯದಂಗಡಿ ವಿಸ್ತರಣೆ

ಎಂಎಸ್ಐಎಲ್ ಮದ್ಯದಂಗಡಿ: ಗ್ರಾಮೀಣ ಭಾಗದ ಕಿರಾಣಿ ಅಂಗಡಿಗಳಲ್ಲಿ ಹೆಚ್ಚು ಬೆಲೆ ನೀಡಿ ಜನರು ಮದ್ಯ ಖರೀದಿಸುವುದನ್ನು ತಪ್ಪಿಸಲು ಪ್ರತಿ ವಿಧಾನಸಭಾ ಶಾಸಕರ ಕ್ಷೇತ್ರಗಳಲ್ಲಿ ಎಂಎಸ್ಐಎಲ್ ಮೂಲಕ ಮದ್ಯದಂಗಡಿ ತೆರೆಯುವುದಾಗಿ ತಿಳಿಸಿದರು.

ರಾಜ್ಯದೆಲ್ಲೆಡೆ ಸದ್ಯ 765 ಎಂಎಸ್ಐಎಲ್ ಮಳಿಗೆಗಳಿದ್ದು, ಮತ್ತೆ 408 ಮಳಿಗೆಗಳನ್ನು ತೆರೆಯಲು ಅನುವು ಮಾಡಿಕೊಡಲಾಗಿದೆ. ಎಲ್ಲಿ ಬೇಡಿಕೆ ಇದಿಯೋ ಅಂತಹ ಕಡೆ ಮಳಿಗೆ ತೆರೆಯಲು ಅವಕಾಶ ಮಾಡಿಕೊಡಲಾಗುವುದು, ಬೆಂಗಳೂರು ನಗರ ಹೊರತುಪಡಿಸಿದರೆ, ಉಳಿದ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಕಡಿಮೆ ದರದ ಮದ್ಯವೇ ಹೆಚ್ಚು ಮಾರಾಟವಾಗಿ ರಾಜ್ಯ ಬೊಕ್ಕಸಕ್ಕೆ ಆದಾಯ ತರುತ್ತಿದೆ ಎಂದರು.

ಅಬಕಾರಿ ತೆರಿಗೆ ಸಂಗ್ರಹ

ಅಬಕಾರಿ ತೆರಿಗೆ ಸಂಗ್ರಹ

ಪ್ರಸಕ್ತ ವರ್ಷದಲ್ಲಿ ಡಿ.30ರವರೆಗೆ 16,100 ಕೋಟಿ ರೂ. ರಾಜಸ್ವ ಸಂಗ್ರಹಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ 20,950ಕೋಟಿ ರೂ. ರಾಜಸ್ವ ಸಂಗ್ರಹದ
ಗುರಿಯನ್ನು ನಮ್ಮ ಇಲಾಖೆಗೆ ನೀಡಲಾಗಿದೆ. ಮುಂದಿನ ಮೂರು ತಿಂಗಳಲ್ಲಿ ಈ ಗುರಿ ತಲುಪುವ ನಿರೀಕ್ಷೆ ಇದೆ. ಡಿಸೆಂಬರ್ ಒಂದೇ ತಿಂಗಳಲ್ಲಿ 1700 ಕೋಟಿ ರೂ. ಅಬಕಾರಿ ತೆರಿಗೆ ಸಂಗ್ರಹವಾಗಿದೆ ಎಂದರು.

ಕಡಿಮೆ ಬೆಲೆಯಲ್ಲಿ ಮದ್ಯ

ಕಡಿಮೆ ಬೆಲೆಯಲ್ಲಿ ಮದ್ಯ

ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ್ದ ಸಚಿವ ನಾಗೇಶ್, ಸಾರಾಯಿ ನಿಷೇಧ ನಂತರ ಬಡವರಿಗೆ ಕಡಿಮೆ ದರದಲ್ಲಿ ಮದ್ಯ ಕಲ್ಪಿಸಬೇಕೆಂಬ ಉದ್ದೇಶದಿಂದ ಅಂದಿನ ಕಾಲದಲ್ಲೇ ಕಡಿಮೆ ಬೆಲೆ ಮದ್ಯವನ್ನು ತರಲಾಗಿತ್ತು. ಆದರೆ, ವರ್ಷದಿಂದ ವರ್ಷಕ್ಕೆ ಅದರ ಬೆಲೆ ಹೆಚ್ಚಳವಾದ ಹಿನ್ನೆಲೆಯಲ್ಲಿ ಇದನ್ನು ಅವರು ಖರೀದಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದರು.

ಆರೋಗ್ಯಕ್ಕೆ ಹಾನಿಯಾಗದ ರೀತಿಯಲ್ಲಿ ಕಡಿಮೆ ದರದಲ್ಲಿ ಮದ್ಯ ತಯಾರಿಸಬೇಕಾಗಿದೆ. ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು
ಮುಂದಿನ ಮುಂಗಡ ಪತ್ರದ ವೇಳೆಗೆ ಬಡವರಿಗೆ ಸಿಹಿ ಸುದ್ದಿ ಕೊಡುವ ಭರವಸೆ ನೀಡಿದ್ದರು.

ಮನೆ ಬಾಗಿಲಿಗೆ ಮದ್ಯ ಹೇಳಿಕೆ

ಮನೆ ಬಾಗಿಲಿಗೆ ಮದ್ಯ ಹೇಳಿಕೆ

"ಸಂಚಾರಿ ವೈನ್ ಶಾಪ್‌ಗಳನ್ನು ಆರಂಭಿಸಲು ಸರ್ಕಾರ ಚಿಂತನೆ ನಡೆಸಿದೆ. ಎಲ್ಲೆಲ್ಲಿ ವೈನ್ ಶಾಪ್‌ಗಳು ಲಭ್ಯವಿಲ್ಲವೋ ಅಲ್ಲಿ ಸಂಚಾರಿ ವೈನ್ ಶಾಪ್‌ಗಳನ್ನು ಆರಂಭಿಸಲು ಕ್ರಮ ತೆಗೆದುಕೊಳ್ಳಲಾಗುವುದು. ಇದರಿಂದ ಸರ್ಕಾರಕ್ಕೆ ಉತ್ತಮ ಆದಾಯ ಬರಲಿದೆ. ತಾಂಡಾಗಳಲ್ಲಿ ಸಂಚಾರಿ ವೈನ್ ಶಾಪ್‌ಗಳ ವ್ಯವಸ್ಥೆ ಮಾಡಲು ಉದ್ದೇಶಿಸಲಾಗಿದೆ'' ಎಂದು ಹೇಳಿಕೆ ನೀಡಿ ನಂತರ ಯೂ ಟರ್ನ್ ಹೊಡೆದಿದ್ದರು.

English summary
Excise Minister H. Nagesh has done it again. The Minister disowned his statement on ensuring supply of cheap liquor of good quality to the poor from government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X