ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮರಾಠ ಸಮುದಾಯಕ್ಕೆ ಶುಭ ಸುದ್ದಿ ನೀಡಿದ ಎಚ್ ಆಂಜನೇಯ

ಶಂಕರಪ್ಪ ನೇತೃತ್ವದ ವರದಿಯ ಶಿಫಾರಸ್ಸಿನಂತೆ ಪ್ರವರ್ಗ 3ಬಿ ನಲ್ಲಿರುವ ಮರಾಠ ಜನಾಂಗವನ್ನು 2ಎ ಗೆ ಸೇರಿಸುವ ಬಗ್ಗೆ ಪರಿಶೀಲನೆಯಲ್ಲಿದೆ ಸಮಾಜ ಕಲ್ಯಾಣ ಸಚಿವರಾದ ಹೆಚ್. ಆಂಜನೇಯ ಅವರು ಭರವಸೆ ನೀಡಿದ್ದಾರೆ.

By Mahesh
|
Google Oneindia Kannada News

ಬೆಂಗಳೂರು, ಮಾರ್ಚ್ 16 : ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಹಿಂದುಳಿದಿರುವ ಮರಾಠ ಸಮಾಜಕ್ಕೆ ರಾಜಕೀಯದಲ್ಲಿ ಸ್ಥಾನ-ಮಾನ ಸಿಕ್ಕಾಗ ಮಾತ್ರ ವಿಧಾನಸಭೆಯಲ್ಲಿ ನಮ್ಮ ಸಮಾಜಕ್ಕೆ ಆಗುತ್ತಿರುವ ಅನ್ಯಾಯ, ವಂಚನೆಯನ್ನು ಸರ್ಕಾರದ ಗಮನಕ್ಕೆ ತರಲು ಸಾಧ್ಯ ಎಂಬ ಕೂಗಿಗೆ ಕೊನೆ ಬೆಲೆ ಸಿಗುವ ಕಾಲ ಬಂದಿದೆ.

ಶಂಕರಪ್ಪ ನೇತೃತ್ವ್ಪದ ಆಯೋಗದ ವರದಿಯ ಶಿಫಾರಸ್ಸಿನಂತೆ ಪ್ರವರ್ಗ 3ಬಿ ನಲ್ಲಿರುವ ಮರಾಠ ಜನಾಂಗವನ್ನು 2ಎ ಗೆ ಸೇರಿಸುವ ಬಗ್ಗೆ ಪರಿಶೀಲನೆಯಲ್ಲಿದೆ ಸಮಾಜ ಕಲ್ಯಾಣ ಸಚಿವರಾದ ಎಚ್. ಆಂಜನೇಯ ಅವರು ತಿಳಿಸಿದರು.[ಕ್ಷತ್ರಿಯ ಮರಾಠರೇ, ಬೆಂಗಳೂರು ಚಲೋಗೆ ಸಿದ್ಧರಾಗಿ; ಸಿಂಧ್ಯಾ]

Minister H Anjaneya assurance on Kshatriya Maratha Community to 2A category

ರಾಜ್ಯದ ಮರಾಠ ಸಮಾಜದವರನ್ನು ಹಿಂದುಳಿದ ಪ್ರವರ್ಗ 2ಎ ಗೆ ಸೇರಿಸಬೇಕೆನ್ನುವ ಶಾಸಕ ಗೋವಿಂದ ಕಾರಜೋಳ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಬಗ್ಗೆ ಬಹಿರಂಗ ವಿಚಾರಣೆಯನ್ನು ಈಗಾಗಲೇ ಪೂರ್ಣಗೊಳಿಸಲಾಗಿದೆ.

ಸಾಮಾಜಿಕ ಸಮೀಕ್ಷೆ ವರದಿ ಅನ್ವಯ ಸರ್ಕಾರ ಸಾಮಾಜಿಕ ನ್ಯಾಯ ಕೊಡಲು ಬದ್ಧವಾಗಿದೆ. ಈ ಬಗ್ಗೆ ಆಯೋಗದ ಮೂಲಕ ಸಮೀಕ್ಷೆ ನಡೆಸಲಾಗುತ್ತಿದ್ದು, ಸಮೀಕ್ಷೆಯ ಪೂರ್ಣ ವರದಿ ಬಂದ ನಂತರ ಈ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದರು.

ಮರಾಠ ಸಮಾಜದವರನ್ನು 3 ಎ ಯಿಂದ 2ಎಗೆ ಸೇರಿಸಬೇಕೆಂದು ಒತ್ತಾಯಿಸಿ, 'ಬೆಂಗಳೂರು ಚಲೋ' ಕಾರ್ಯಕ್ರಮಕ್ಕೆ ಮರಾಠ ಸಮಾಜದವರು ಸಿದ್ದರಾಗಬೇಕೆಂದು ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯಾ ಅವರು ಇತ್ತೀಚೆಗೆ ಚನ್ನಗಿರಿ ತಾಲ್ಲೂಕಿನ ಹೊದಿಗೆರೆಯಲ್ಲಿ ನಡೆದ ಶಿವಾಜಿ ಮಹಾರಾಜರ ತಂದೆ ಷಹಾಜಿ ಮಹಾರಾಜರ 353 ನೇ ಪುಣ್ಯತಿಥಿ ಸಮಾರಂಭದಲ್ಲಿ ಕರೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು. ರಾಜ್ಯದಲ್ಲಿ ಸರಿ ಸುಮಾರು 40 ಲಕ್ಷಕ್ಕೂ ಅಧಿಕ ಮರಾಠಿಗರು ನೆಮ್ಮದಿಯ ನೆಲೆ ಕಂಡಿದ್ದಾರೆ.

English summary
Minister H Anjaneya today gave assurance regarding including Kshatriya Maratha Community to 2A category instead of 3A. This long pending demand from Maratha community. Senior politician PGR Sindhia lead the protest recently demanding the same.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X