ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದ ಜನತೆಗೆ ಅಭಿನಂದನೆ ಸಲ್ಲಿಸಿದ ಡಿಕೆ ಶಿವಕುಮಾರ್

|
Google Oneindia Kannada News

ಬೆಂಗಳೂರು, ಮಾ 23: ರಾಜ್ಯದ ವಿದ್ಯುತ್ ಉತ್ಪಾದನೆ ಹೆಚ್ಚಾಗಲು ಸಹಕರಿಸಿದ ರೈತರು ಮತ್ತು ಸಾರ್ವಜನಿಕರನ್ನು ಇಂಧನ ಸಚಿವ ಡಿ ಕೆ ಶಿವಕುಮಾರ್ ಅಭಿನಂದಿಸಿದ್ದಾರೆ. ಕರ್ನಾಟಕದ ಜನರು ವಿವಿಧ ವಿದ್ಯುಚ್ಛಕ್ತಿ ಸಂಪನ್ಮೂಲಗಳ ಬಳಕೆಯಲ್ಲಿ ಮುಂಚೂಣಿಯಲ್ಲಿದ್ದಾರೆಂದು ಸಚಿವರು ಹೇಳಿದ್ದಾರೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ನಮ್ಮ ಸರಕಾರ ಜನರಿಗೆ ಹೆಚ್ಚಿನ ವಿದ್ಯುತ್ ಒದಗಿಸುವ ಗುರಿಯನ್ನು ಹೊಂದಿದ್ದೇವೆ ಹಾಗೂ ಪ್ರತಿ ಉಪಕ್ರಮದ ಹೆಜ್ಜೆಯಲ್ಲಿ, ಜನರನ್ನು ಷೇರುದಾರರು, ಪಾಲುದಾರರು, ಸಹಭಾಗಿಗಳು ಮತ್ತು ಫಲಾನುಭವಿಗಳಾಗಿ ಮಾಡುವ ಮೂಲಕ ಅನಿಯಮಿತ ವಿದ್ಯುಚ್ಛಕ್ತಿಯ ಅನ್ವೇಷಣೆಯಲ್ಲಿ ಜನರ ಪಾಲ್ಗೊಳ್ಳುವಿಕೆಯನ್ನು ಖಾತರಿಪಡಿಸುವುದು ನಮ್ಮ ಉದ್ದೇಶ ಎಂದು ಡಿ ಕೆ ಶಿವಕುಮಾರ್ ಹೇಳಿದ್ದಾರೆ.

ಬಂಧನ ಭೀತಿಯಿಂದ ಡಿ.ಕೆ. ಶಿವಕುಮಾರ್, ಸುರೇಶ್ ಪಾರುಬಂಧನ ಭೀತಿಯಿಂದ ಡಿ.ಕೆ. ಶಿವಕುಮಾರ್, ಸುರೇಶ್ ಪಾರು

ಸಾವಿರಾರು ರೈತರಲ್ಲದೇ, ಯುವಜನರು, ಮಹಿಳೆಯರು ಹಾಗೂ ವಿದ್ಯಾರ್ಥಿಗಳು ಸರಕಾರದ ಜೊತೆ ಕೈಜೋಡಿಸುತ್ತಿದ್ದಾರೆ. ಕಳೆದ 4ವರ್ಷಗಳಲ್ಲಿ, ತಡೆಯಿಲ್ಲದ ವಿದ್ಯುಚ್ಛಕ್ತಿಯನ್ನು ಜನರಿಗೆ ಒದಗಿಸುವುದನ್ನು ಖಾತರಿಪಡಿಸುವುದಕ್ಕಾಗಿ ಹಲವು ನವೀನ ಯೋಜನೆಗಳನ್ನು ಕೈಗೊಳ್ಳಲಾಗಿದೆ ಹಾಗೂ ಸಹಭಾಗಿಗಳಾಗಿ, ಪಾಲುದಾರರಾಗಿ ನಮಗೆ ಸಹಾಯ ಮಾಡಿದವರು ಸಹ ಜನರೇ ಆಗಿರುತ್ತಾರೆಂದು ಸಚಿವರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

ವಿಶ್ವದ ಅತಿದೊಡ್ಡ ಸೋಲಾರ್ ಪಾರ್ಕ್: ಮಾರ್ಚ್ 1ಕ್ಕೆ ಕಾರ್ಯಾರಂಭವಿಶ್ವದ ಅತಿದೊಡ್ಡ ಸೋಲಾರ್ ಪಾರ್ಕ್: ಮಾರ್ಚ್ 1ಕ್ಕೆ ಕಾರ್ಯಾರಂಭ

Energy Minister DK Shivakumar thanks to public and farmers who helped to increase the states power generation

ಇಂದು ಪಾವಗಡವು ಪ್ರಪಂಚದ ಅತಿದೊಡ್ಡ ಸೌರಶಕ್ತಿ ಪಾರ್ಕಿನ ನಿರ್ಮಾಣಕ್ಕೆ ಸಾಕ್ಷಿಯಾಗಿದೆ. ಮಾದರಿ ವಿದ್ಯುನ್ಮಾನ ಗ್ರಾಮಗಳು ಪ್ರತಿ ತಾಲೂಕಿನಲ್ಲಿಯೂ ಬರಲಿವೆ. ಪರಿಣಾಮಕಾರಿ ವಿದ್ಯುತ್ ಬಳಕೆಗಾಗಿ ಸ್ಮಾರ್ಟ್ ಗ್ರಿಡ್‍ಗಳನ್ನು
ರಚಿಸಲಾಗುತ್ತಿದೆ. ಸೂರ್ಯನಿಂದ ಬೇಸಾಯ ಮಾಡಲು 'ಸೂರ್ಯ ರೈತ' ಯೋಜನೆಯ ಮೂಲಕ ರೈತರನ್ನು ಸಬಲಗೊಳಿಸಲಾಗುತ್ತಿದೆ.

ತೋಳ ಬಂತು ತೋಳ ಅಲ್ಲ: ಪಾವಗಡಕ್ಕೆ ಸೋಲಾರ್ ಪವರ್ ಬಂದ ಯಶೋಗಾಥೆ ತೋಳ ಬಂತು ತೋಳ ಅಲ್ಲ: ಪಾವಗಡಕ್ಕೆ ಸೋಲಾರ್ ಪವರ್ ಬಂದ ಯಶೋಗಾಥೆ

ಹೊಸಬೆಳಕು ಯೋಜನೆ ಕರ್ನಾಟಕದಲ್ಲಿ ಪ್ರತಿ ಮನೆಯಲ್ಲಿಯೂ ವಿದ್ಯುಚ್ಛಕ್ತಿಯನ್ನು ತರಲಿದೆ. ಇದರ ಜೊತೆಯಾಗಿ ಹೈವೊಲ್ಟೇಜ್ ಡಿಸ್ಟ್ರಿಬ್ಯೂಷನ್ ಸಿಸ್ಟಂಗಳು, ಪ್ರತಿ ಮನೆಗಾಗಿ ಸಿಎಫ್‍ಎಲ್ ಬಲ್ಬ್, ರೂಫ್ಟಾಪ್ ಸೋಲಾರ್ ಯುನಿಟ್ಸ್, ಟ್ರಾನ್ಸ್ ಫಾರ್ಮರ್ ಬ್ಯಾಂಕ್ಸ್, ಹೊಸ ಟ್ರಾನ್ಸಿಷನ್ ಲೈನ್ಸ್, ಸಣ್ಣ ಜಲ ಘಟಕಗಳು, ಬೃಹತ್ ಪವನಶಕ್ತಿ, ಸೌರಶಕ್ತಿ, ಉಷ್ಣ, ಜಲ ಹಾಗೂ ಹಸಿರು ವಿದ್ಯುಚ್ಛಕ್ತಿ ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದು ಸಚಿವ ಡಿಕೆಶಿ, ಇಲಾಖೆ ತೆಗೆದುಕೊಂಡ ಕ್ರಮವನ್ನು ವಿವರಿಸಿದ್ದಾರೆ.

ಪಾವಗಡದ ಬೃಹತ್‌ ಸೊಲಾರ್‌ ಪಾರ್ಕ್‌ಗೆ 'ಟೈಟಾನಿಕ್' ಹೀರೊ ಮೆಚ್ಚುಗೆಪಾವಗಡದ ಬೃಹತ್‌ ಸೊಲಾರ್‌ ಪಾರ್ಕ್‌ಗೆ 'ಟೈಟಾನಿಕ್' ಹೀರೊ ಮೆಚ್ಚುಗೆ

Energy Minister DK Shivakumar thanks to public and farmers who helped to increase the states power generation

ಕೇವಲ 5 ವರ್ಷಗಳ ಅಲ್ಪಾವಧಿಯಲ್ಲಿ, ಕರ್ನಾಟಕವು ತನ್ನ ವಿದ್ಯುಚ್ಛಕ್ತಿ ಸಾಮರ್ಥ್ಯವನ್ನು 9,349 ಮೆವ್ಯಾಗೆ ಹೆಚ್ಚಿಸಿದೆ. ವಿದ್ಯುಚ್ಛಕ್ತಿ ಉತ್ಪಾದನೆ ಕಡೆಗಿನ ಅನ್ವೇಷಣೆಯಲ್ಲಿ ಭಾಗವಹಿಸಿ ಹಾಗೂ ಹೆಚ್ಚುವರಿ ಪರಿಶ್ರಮ ವಹಿಸಿದ ಕರ್ನಾಟಕದ ಜನತೆಯನ್ನು ನಾನು ಸರಕಾರದ ಪರವಾಗಿ ಅಭಿನಂದಿಸುತ್ತೇನೆ ಎಂದು ಇಂಧನ ಸಚಿವ ಡಿ ಕೆ ಶಿವಕುಮಾರ್ ಹೇಳಿದ್ದಾರೆ.

English summary
Karnataka energy Minister D K Shivakumar thanks to public and farmers who helped government to increase the state's power generation. DKS said, state power generation has been increased 9,349 MW.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X