ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಟ್ಟ ಕಾಡಿನ ಮಧ್ಯೆ ಡಿಕೆಶಿಗೆ ತಾತಯ್ಯ ನುಡಿದಿದ್ದ ಭವಿಷ್ಯವೇನು?

|
Google Oneindia Kannada News

ದೇವರು, ಭವಿಷ್ಯವನ್ನು ತುಂಬಾ ನಂಬುವ ರಾಜ್ಯದ ಜಲಸಂಪನ್ಮೂಲ ಖಾತೆಯ ಸಚಿವ ಮತ್ತು ಪಕ್ಕಾ ಆಸ್ತಿಕ ರಾಜಕಾರಣಿ ಡಿ ಕೆ ಶಿವಕುಮಾರ್, ದಟ್ಟಾರಣ್ಯದ ಮಧ್ಯೆಯಿರುವ ಮಠವೊಂದರ ಸ್ವಾಮೀಜಿಗಳನ್ನು ಭೇಟಿಯಾಗಿದ್ದರು.

ಉಪಚುನಾವಣೆಯ ಓಡಾಟದಲ್ಲಿದ್ದ ಡಿಕೆಶಿ, ಬಳ್ಳಾರಿ ಜಿಲ್ಲೆ ಸಂಡೂರು ವ್ಯಾಪ್ತಿಯಲ್ಲಿ ಬರುವ ಅನ್ನಪೂರ್ಣೇಶ್ವರಿ ಮಠದ ರಾಜಭಾರತಿ ತಾತಯ್ಯನವರನ್ನು ಭೇಟಿಯಾಗಿ, ಆಶೀರ್ವಾದ ಮತ್ತು ಭವಿಷ್ಯ ಕೇಳಲು ಹೋಗಿದ್ದರು ಎಂದು ವರದಿಯಾಗಿದೆ.

ಒಂದೇ ಒಂದು ಪಾನ್ ಅಲ್ಲಾಡಿಸಿದ್ದಕ್ಕೆ ಡಿಕೆಶಿ ನೀಡಿದ ಖಡಕ್ ಉತ್ತರ ಇದು!ಒಂದೇ ಒಂದು ಪಾನ್ ಅಲ್ಲಾಡಿಸಿದ್ದಕ್ಕೆ ಡಿಕೆಶಿ ನೀಡಿದ ಖಡಕ್ ಉತ್ತರ ಇದು!

ಬಳ್ಳಾರಿ ಲೋಕಸಭಾ ಕ್ಷೇತ್ರದ ಉಸ್ತುವಾರಿ ತನ್ನ ಹೆಗಲಮೇಲಿದ್ದ ಸಂದರ್ಭದಲ್ಲಿ, ಜಾರಕಿಹೊಳಿ ಕುಟುಂಬದಿಂದ ನಿರೀಕ್ಷಿತ ಬೆಂಬಲ ಡಿಕೆಶಿಗೆ ಸಿಗುತ್ತಿರಲಿಲ್ಲ. ಕ್ಷೇತ್ರದ ಮತದಾರರ ಮುಂದೆಯೇ ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ಮತ್ತು ಡಿಕೆಶಿ ನಡುವಿನ ಸಂಬಂಧ ಅಷ್ಟಕಷ್ಟೇ ಎಂದು ಸಾಬೀತಾಗಿತ್ತು.

ಬಳ್ಳಾರಿಯ ಉಪಚುನಾವಣೆ, ಡಿ ಕೆ ಶಿವಕುಮಾರ್ ವರ್ಸಸ್ ಶ್ರೀರಾಮುಲು ಎಂದೇ ಬಿಂಬಿತವಾಗಿತ್ತು. ಕಾಂಗ್ರೆಸ್ಸಿನ ಹಲವು ಹಿರಿಯ ಮುಖಂಡರು ಜಂಟಿಯಾಗಿ ಪ್ರಚಾರ ನಡೆಸಿದ್ದರು. ಇನ್ನೊಂದು ಕಡೆ ಶ್ರೀರಾಮುಲು ಕೂಡಾ ಭಾರೀ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು.

ಸೋತ ಶ್ರೀರಾಮುಲುಗೆ ಅಭಿನಂದನೆ ಸಲ್ಲಿಸಿದ ಡಿಕೆ ಶಿವಕುಮಾರ್‌ಸೋತ ಶ್ರೀರಾಮುಲುಗೆ ಅಭಿನಂದನೆ ಸಲ್ಲಿಸಿದ ಡಿಕೆ ಶಿವಕುಮಾರ್‌

ಚುನಾವಣಾ ಕಾವು ದಿನದಿಂದ ದಿನಕ್ಕೆ ಏರುತ್ತಿದ್ದಂತಹ ಸಂದರ್ಭದಲ್ಲಿ ಸಚಿವ ಡಿ ಕೆ ಶಿವಕುಮಾರ್, ಅನ್ನಪೂರ್ಣೇಶ್ವರಿ ಮಠದ ತಾತಯ್ಯನ ಬಳಿ ಬಳ್ಳಾರಿ ಚುನಾವಣೆಯ ಭವಿಷ್ಯ ಕೇಳಿದ್ದರಂತೆ. ತಾತಯ್ಯ ನುಡಿದಿದ್ದ ಭವಿಷ್ಯವೇನು? ಮುಂದೆ ಓದಿ..

ಸಿದ್ದರಾಮಯ್ಯನವರ ಮಗನ ಸಾವಿನ ವಿಚಾರದಲ್ಲಿ ನೀಡಿದ್ದ ಹೇಳಿಕೆ

ಸಿದ್ದರಾಮಯ್ಯನವರ ಮಗನ ಸಾವಿನ ವಿಚಾರದಲ್ಲಿ ನೀಡಿದ್ದ ಹೇಳಿಕೆ

ಜನಾರ್ದನ ರೆಡ್ಡಿ, ಮಾಜಿ ಸಿಎಂ ಸಿದ್ದರಾಮಯ್ಯನವರ ಮಗನ ಸಾವಿನ ವಿಚಾರದಲ್ಲಿ ನೀಡಿದ್ದ ಆಕ್ಷೇಪಾರ್ಹ ಹೇಳಿಕೆ, ಶ್ರೀರಾಮುಲು ಮತ್ತು ಬಿಜೆಪಿ ಅಭ್ಯರ್ಥಿ ಜೆ ಶಾಂತಾ ಕನ್ನಡದವರಲ್ಲ ಎನ್ನುವ ಕಾಂಗ್ರೆಸ್ಸಿನವರ ಆರೋಪದ ನಡುವೆ ಪ್ರಚಾರದ ಭರಾಟೆ ತೀವ್ರವಾಗಿ ಸಾಗಿತ್ತು. ರೆಡ್ಡಿ ಹೇಳಿಕೆಗೆ ಬಿಜೆಪಿ ಮುಖಂಡರು ಆದಿಯಾಗಿ ಎಲ್ಲರೂ ಕಿಡಿಕಾರಿ, ಕ್ಷಮೆಕೋರಲು ಆಗ್ರಹಿಸಿದ್ದರು.

ಅಭ್ಯರ್ಥಿ ಆಯ್ಕೆಯ ವಿಚಾರದಲ್ಲಿಯೂ ಸರಿಯಾದ ಹೆಜ್ಜೆಯನ್ನು ಇಟ್ಟಿದ್ದೇವೆ

ಅಭ್ಯರ್ಥಿ ಆಯ್ಕೆಯ ವಿಚಾರದಲ್ಲಿಯೂ ಸರಿಯಾದ ಹೆಜ್ಜೆಯನ್ನು ಇಟ್ಟಿದ್ದೇವೆ

ನಮ್ಮದೇ ಆದಂತಹ ತಂತ್ರವನ್ನು ಬಳಸಿ, ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದೇವೆ. ಅಭ್ಯರ್ಥಿ ಆಯ್ಕೆಯ ವಿಚಾರದಲ್ಲಿಯೂ ಸರಿಯಾದ ಹೆಜ್ಜೆಯನ್ನು ಇಟ್ಟಿದ್ದೇವೆ. ಒಂದು ಲಕ್ಷದ ಅಂತರದಿಂದ ಗೆಲ್ಲುತ್ತೇವೆ ಎನ್ನುವ ವಿಶ್ವಾಸದಲ್ಲಿ ಕಾರ್ಯಕರ್ತರು ಇದ್ದರು. ಕೆಲವೊಮ್ಮೆ ನಾನೇ ಓವರ್ ಕಾನ್ಫಿಡೆನ್ಸ್ ನಲ್ಲಿ ಕೆಲಸ ಮಾಡಬೇಡಿ ಎಂದು ಕಿವಿಮಾತು ಹೇಳಿದ್ದೆ ಎಂದು ಡಿ ಕೆ ಶಿವಕುಮಾರ್ ಹೇಳಿದ್ದಾರೆ.

ನಮ್ಮ ಶಾಸಕರ ಖಾತೆಗೆ ಬಿಜೆಪಿ ಹಣ ವರ್ಗಾಯಿಸಿದೆ: ಡಿ.ಕೆ.ಶಿವಕುಮಾರ್‌ನಮ್ಮ ಶಾಸಕರ ಖಾತೆಗೆ ಬಿಜೆಪಿ ಹಣ ವರ್ಗಾಯಿಸಿದೆ: ಡಿ.ಕೆ.ಶಿವಕುಮಾರ್‌

ಅನ್ನಪೂರ್ಣೇಶ್ವರಿ ಮಠಕ್ಕೆ ಹೋಗಿದ್ದ ಸಚಿವ ಡಿ ಕೆ ಶಿವಕುಮಾರ್

ಅನ್ನಪೂರ್ಣೇಶ್ವರಿ ಮಠಕ್ಕೆ ಹೋಗಿದ್ದ ಸಚಿವ ಡಿ ಕೆ ಶಿವಕುಮಾರ್

ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಸಂಡೂರಿನ ದಟ್ಟಾರಣ್ಯದಲ್ಲಿರುವ ಅನ್ನಪೂರ್ಣೇಶ್ವರಿ ಮಠಕ್ಕೆ ಹೋಗಿದ್ದ ಸಚಿವ ಡಿ ಕೆ ಶಿವಕುಮಾರ್, ದಿಗಂಬರ ತಾತಯ್ಯನವರ ಬಳಿ, ಚುನಾವಣೆಯಲ್ಲಿ ಗೆಲುವು ನಮ್ಮದೋ ಅಥವಾ ಶ್ರೀರಾಮುಲು ಅವರದ್ದೋ ಎಂದು ಕೇಳಲು ಹೋಗಿದ್ದರು. ಗೆಲುವು ನಿಮ್ಮದೇ ಎಂದು ತಾತಯ್ಯ ಭವಿಷ್ಯ ನುಡಿದು, ಹರಸಿ ಕಳುಹಿಸಿದ್ದರು ಎಂದು ಪಬ್ಲಿಕ್ ಟಿವಿ ವರದಿ ಮಾಡಿದೆ.

ತಾತಯ್ಯ ನುಡಿದ ಭವಿಷ್ಯ

ತಾತಯ್ಯ ನುಡಿದ ಭವಿಷ್ಯ

ತಾತಯ್ಯ ನುಡಿದ ಭವಿಷ್ಯದಂತೆ, ಬಳ್ಳಾರಿಯಲ್ಲಿ ಕಾಂಗ್ರೆಸ್ ಭರ್ಜರಿ ಜಯಗಳಿಸಿದೆ. ಬಿಜೆಪಿ ನಿರೀಕ್ಷೆಯನ್ನೂ ಮಾಡದಂತಹ ಅಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿ ಎಸ್ ಉಗ್ರಪ್ಪ ಇಲ್ಲಿ ಗೆಲುವು ಸಾಧಿಸಿದ್ದಾರೆ. ಉಗ್ರಪ್ಪ, ಬಿಜೆಪಿ ಅಭ್ಯರ್ಥಿ ಶಾಂತಾ ವಿರುದ್ದ ಸುಮಾರು 2.20 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಶ್ರೀರಾಮುಲು ಅಣ್ಣ ಎಂದೇ ಬಿಜೆಪಿ ವಿರುದ್ದ ರಣತಂತ್ರ

ಶ್ರೀರಾಮುಲು ಅಣ್ಣ ಎಂದೇ ಬಿಜೆಪಿ ವಿರುದ್ದ ರಣತಂತ್ರ

ಶ್ರೀರಾಮುಲು ಅಣ್ಣ ಎಂದೇ ಬಿಜೆಪಿ ವಿರುದ್ದ ರಣತಂತ್ರ ರೂಪಿಸಿದ್ದ ಡಿ ಕೆ ಶಿವಕುಮಾರ್ ಮತ್ತೆ ರಾಜ್ಯ ರಾಜಕಾರಣದಲ್ಲಿ ತಮ್ಮ ವರ್ಚಸ್ಸನ್ನು ತೋರಿಸಿದ್ದಾರೆ. ರಾಮನಗರದಲ್ಲಿ ಬಿಜೆಪಿ ಅಭ್ಯರ್ಥಿ ಹಿಂದಕ್ಕೆ ಸರಿಯುವಂತೆ ಮಾಡಿ, ಬಳ್ಳಾರಿಯಲ್ಲಿ ಪಕ್ಷ ನೀಡಿದ ಜವಾಬ್ದಾರಿಯನ್ನು ಮತ್ತೊಮ್ಮೆ ಸರಿಯಾಗಿ ನಿಭಾಯಿಸಿ, ಡಿಕೆಶಿ ಸೈ ಎನಿಸಿಕೊಂಡಿದ್ದಾರೆ.

English summary
Before Bellary LS bypoll: Minister D K Shivakumar met Tatayya of Annapuneshwari Mutt in Sanduru. Tatayya has given a prediction to DK Shivakumar that Congress will win in the by election
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X