ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಾದ್ಯಂತ ಚಳಿ ಇಳಿಕೆ, ತಾಪಮಾನ ಏರಿಕೆ

|
Google Oneindia Kannada News

ಬೆಂಗಳೂರು,ಜನವರಿ 21: ಕರ್ನಾಟಕದಾದ್ಯಂತ ಚಳಿ ಕಡಿಮೆಯಾಗಿದ್ದು, ತಾಪಮಾನ ಏರಿಕೆಯಾಗಿದೆ.

ಜ.25ರವರೆಗೆ ರಾಜ್ಯದಲ್ಲಿ ಒಣಹವೆ ಮುಂದುವರೆಯಲಿದೆ. ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳ ಅನೇಕ ಪ್ರದೇಶಗಳಲ್ಲಿ ಕೆಲವು ದಿನಗಳಿಂದ ಚಳಿ ಹಾಗೂ ಮಧ್ಯಾಹ್ನ ಒಣಹವೆ ಕಂಡುಬರುತ್ತಿತ್ತು.

ಇದೀಗ ಚಳಿಯ ಪ್ರಮಾಣ ನಿಧಾನವಾಗಿ ಕಡಿಮೆಯಾಗಿ, ಉಷ್ಣಾಂಶ ಏರಿಕೆಯಾಗುತ್ತಿದೆ.ಜನವರಿ 20ರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ಕನಿಷ್ಠ ತಾಪಮಾನ ಬೀದರ್‌ನಲ್ಲಿ 12.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ಕರ್ನಾಟಕ ಹವಾಮಾನ ವರದಿ,ಎಲ್ಲಿ ಹೆಚ್ಚು ಚಳಿ, ಎಲ್ಲೆಲ್ಲಿ ಸೆಕೆ?ಕರ್ನಾಟಕ ಹವಾಮಾನ ವರದಿ,ಎಲ್ಲಿ ಹೆಚ್ಚು ಚಳಿ, ಎಲ್ಲೆಲ್ಲಿ ಸೆಕೆ?

ಹಾಸನ 13, ಬೆಳಗಾವಿ, ಧಾರವಾಡ, ಬಾಗಲಕೋಟೆ, ಹಾವೇರಿ, ಬೆಂಗಳೂರು ಎಚ್‌ಎಎಲ್‌ನಲ್ಲಿ ತಲಾ 14, ಬೆಂಗಳೂರು ಕೇಂದ್ರ ಮತ್ತು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಲಾ 16.5 ಡಿಗ್ರಿ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

Minimum Temperature Reduces, Maximum Temperature Rises All Over Karnataka

ಪಣಂಬೂರು, ಕಾರವಾರದಲ್ಲಿ 34.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿದೆ.

ರಾಜ್ಯದಲ್ಲಿ ಜನವರಿಯಲ್ಲಿ ವಾಡಿಕೆ ಚಳಿ ಕನಿಷ್ಠ ಸುಮಾರು 14 ರಿಂದ 16 ಡಿಗ್ರಿ ಸೆಲ್ಸಿಯಸ್ ಹಾಗೂ ಗರಿಷ್ಠ 27 ರಿಂದ 30 ಡಿಗ್ರಿ ಸೆಲ್ಸಿಯಸ್ ಇರಬೇಕು.
ಆದರೆ ಕೆಲವು ದಿನಗಳವರೆಗೂ ಈ ಪ್ರಮಾಣದ ಉಷ್ಣಾಂಶ ದಾಖಲಾಗದೇ ಚಳಿ ಸೃಷ್ಟಿಯಾಗಿತ್ತು.

Recommended Video

ಬಿಎಂಟಿಸಿ ಬಸ್ ಅಲ್ಲಿ ಕಾಂಗ್ರೆಸ್ಸ್ ಕಾರ್ಯಕರ್ತರು!! | Oneindia Kannada

ಇದೀಗ ವಾಡಿಕೆ ಪ್ರಮಾಣದ ಚಳಿ ದಾಖಲಾಗುವ ಸಾಧ್ಯತೆ ಇದೆ, ಹೀಗಾಗಿ ಜನವರಿ 25ರವರೆಗೂ ಒಣಹವೆ ಹಾಗೂ ಬೆಳಗ್ಗೆ ಮಂಜು ಕವಿದ ವಾತಾವರಣ ಇರಲಿದೆ.

English summary
Meteorological department says that Minimum Temperature Reduces, Maximum Temperature Rises All Over Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X