ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾರದಲ್ಲಿ ಒಂದೆರಡು ದಿನ ಹಾಲು ಖರೀದಿ ಸ್ಥಗಿತ?

|
Google Oneindia Kannada News

ಬೆಂಗಳೂರು, ಮೇ 28; ಲಾಕ್‌ಡೌನ್ ಘೋಷಣೆ ಮಾಡಿದ ಬಳಿಕ ನಂದಿನಿ ಹಾಲಿನ ಮಾರಾಟ ಕುಸಿದಿದೆ. ಆದರೆ ಒಕ್ಕೂಟಗಳಿಗೆ ಬರುತ್ತಿರುವ ಹಾಲಿನ ಪ್ರಮಾಣ ಹೆಚ್ಚಾಗಿದೆ. ವಾರದಲ್ಲಿ ಒಂದೆರಡು ದಿನ ಹಾಲು ಖರೀದಿ ಸ್ಥಗಿತಗೊಳಿಸಲು ಚಿಂತನೆ ನಡೆದಿದೆ.

ಕರ್ನಾಟಕದಲ್ಲಿ ಲಾಕ್‌ಡೌನ್ ಘೋಷಣೆ ಬಳಿಕ ಹೋಟೆಲ್‌ಗಳಲ್ಲಿ ಹಾಲಿನ ಬಳಕೆ ತಗ್ಗಿದೆ. ಶುಭ ಸಮಾರಂಭಗಳಿಗೆ ಕಡಿವಾಣ ಬಿದ್ದಿದ್ದು, ಹಾಲು ಖರೀದಿ ಕಡಿಮೆಯಾಗಿದೆ.

ಹಾಲು ಖರೀದಿ ದರ ಕಡಿತ; ಜೂನ್ 1ರಿಂದ ಜಾರಿಗೆ ಹಾಲು ಖರೀದಿ ದರ ಕಡಿತ; ಜೂನ್ 1ರಿಂದ ಜಾರಿಗೆ

ಮೇ ಮೊದಲ ವಾರದಲ್ಲಿ ದಿನಕ್ಕೆ ಸುಮಾರು 70 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿತ್ತು. ಕಳೆದ ವಾರ ಇದು 82 ಲಕ್ಷ ಲೀಟರ್‌ಗೆ ಏರಿಕೆಯಾಗಿತ್ತು. ಈ ವಾರ 88 ಲಕ್ಷ ಲೀಟರ್ ಸಂಗ್ರಹವಾಗುತ್ತಿದೆ.

ಅರಿಶಿನ ಹಾಲು ಸೇವಿಸಿ, ಕೊರೊನಾ ಸೋಂಕಿನಿಂದ ರಕ್ಷಣೆ ಪಡೆಯಿರಿ ಅರಿಶಿನ ಹಾಲು ಸೇವಿಸಿ, ಕೊರೊನಾ ಸೋಂಕಿನಿಂದ ರಕ್ಷಣೆ ಪಡೆಯಿರಿ

Milk Unions May Stop Purchase One Or Two Days

ಹಾಲಿನ ಪ್ಯಾಕೇಟ್ ಮಾರಾಟ, ಬೆಣ್ಣೆ, ತುಪ್ಪ, ಹಾಲಿನ ಉತ್ಪನ್ನಗಳು ಸೇರಿ ಸುಮಾರು 53 ಲಕ್ಷ ಲೀಟರ್ ಹಾಲು ಬಳಕೆಯಾಗುತ್ತದೆ. ಉಳಿದ ಹಾಲನ್ನು ಪುಡಿಯಾಗಿ ಪರಿವರ್ತನೆ ಮಾಡಲಾಗುತ್ತದೆ. ಆದರೆ ಈಗ ಅದರ ಮಿತಿಯೂ ಮೀರಿದ್ದು ಒಕ್ಕೂಟಗಳಿಗೆ ತಲೆನೋವಾಗಿದೆ.

ಲಾಕ್‌ಡೌನ್: ಸುಬ್ರಹ್ಮಣ್ಯದಲ್ಲಿ ಹಾಲು ತಂದ ಕೃಷಿಕರ ವಾಹನಗಳು ಸೀಜ್ ಲಾಕ್‌ಡೌನ್: ಸುಬ್ರಹ್ಮಣ್ಯದಲ್ಲಿ ಹಾಲು ತಂದ ಕೃಷಿಕರ ವಾಹನಗಳು ಸೀಜ್

ಹಾಲಿನ ಸಂಗ್ರಹ ಹೆಚ್ಚಿರುವುದರಿಂದ ವಾರದಲ್ಲಿ ಖರೀದಿಗೆ ಒಂದೆರಡು ದಿನ ಬಿಡುವು ನೀಡಲು ತೀರ್ಮಾನಿಸಲಾಗಿದೆ. ಲಾಕ್‌ಡೌನ್ ಘೋಷಣೆ ಬಳಿಕ ಹಾಲಿನ ಪುಡಿಯ ಸಂಗ್ರಹವೂ ಹೆಚ್ಚಾಗಿದೆ. ಆದರೆ ಬೇಡಿಕೆ ಕಡಿಮೆಯಾಗಿದೆ.

Recommended Video

ಎಲ್ಲಾ High command ನಿರ್ಧಾರ !! Dhruvanarayan KPCC Working president | Oneindia Kannada

ಹಾಲನ್ನು ಖರೀದಿ ಮಾಡುವ ದರವನ್ನು ಜೂನ್ 1 ರಿಂದ 1.50 ರೂ. ಇಳಿಕೆ ಮಾಡಲು ಹಾಲು ಒಕ್ಕೂಟಗಳು ತೀರ್ಮಾನಿಸಿವೆ. ಇದರ ಜೊತೆಗೆ ಈಗ ಹಾಲು ಖರೀದಿಗೆ ಒಂದೆರಡು ದಿನ ರಜೆ ನೀಡುವ ಸಾಧ್ಯತೆ ಇದೆ.

English summary
Milk unions in Karnataka may stop milk purchase on or two days in week. Milk production raised and demand come down in the time of lockdown.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X