ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವ್ಹಾವ್: ಕಾರ್ಮಿಕರಿಗೆ ಸಿಹಿ ಸುದ್ದಿ ನೀಡಿದ ಕರ್ನಾಟಕ ಸರ್ಕಾರ

|
Google Oneindia Kannada News

ಬೆಂಗಳೂರು ಮೇ 3; ಲಾಕ್‌ಡೌನ್ ನಿಂದ ತಮ್ಮ ಊರುಗಳಿಗೆ ತೆರಳಲಾಗದೇ ಬೆಂಗಳೂರಿನ ವಿವಿದೆಡೆ ತೊಂದರೆಯಲ್ಲಿ ಸಿಲುಕಿದ್ದ ಕಾರ್ಮಿಕರನ್ನು ಅವರವರ ಊರಿಗೆ ಕಳಿಸಲು ರಾಜ್ಯ ಸರ್ಕಾರ ವ್ಯವಸ್ಥೆ ಮಾಡಿತ್ತು.

ಆದರೆ, ಬಸ್ ಪ್ರಯಾಣ ದರ ನೋಡಿ ಬಹಳಷ್ಟು ಕಾರ್ಮಿಕರು ತೀವ್ರ ಬೇಸರ ವ್ಯವ್ಯಪಡಿಸಿದ್ದರು. ಅಲ್ಲದೇ ಸರ್ಕಾರದ ಈ ನಿರ್ಧಾರಕ್ಕೆ ವಿರೋಧ ಪಕ್ಷಗಳಿಂದ, ಕಾರ್ಮಿಕ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.

ಕೆಎಸ್ಆರ್‌ಟಿಸಿ ಬಸ್‌ನಲ್ಲಿ ಸಂಚಾರ ನಡೆಸುವ ಕಾರ್ಮಿಕರಿಗೆ ಸೂಚನೆಗಳುಕೆಎಸ್ಆರ್‌ಟಿಸಿ ಬಸ್‌ನಲ್ಲಿ ಸಂಚಾರ ನಡೆಸುವ ಕಾರ್ಮಿಕರಿಗೆ ಸೂಚನೆಗಳು

ಕೊನೆಗೂ ವಿರೋಧಕ್ಕೆ ಮಣಿದಿರುವ ರಾಜ್ಯ ಸರ್ಕಾರ, ವಲಸೆ ಕಾರ್ಮಿಕರನ್ನು ಅವರವರ ಊರುಗಳಿಗೆ (ಕರ್ನಾಟಕ ರಾಜ್ಯದಲ್ಲಿ ಮಾತ್ರ) ಬಸ್ ಪ್ರಯಾಣ ದರವಿಲ್ಲದೇ ಕಳುಹಿಸಲು ತೀರ್ಮಾನ ತೆಗೆದುಕೊಂಡಿದೆ. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು, ಕಾರ್ಮಿಕರನ್ನು ಅವರವರ ಊರುಗಳಿಗೆ ಸರ್ಕಾರದ ಖರ್ಚಿನಲ್ಲೇ ಕಳುಹಿಸಿ ಕೊಡಲಾಗುತ್ತದೆ ಎಂದು ಭಾನುವಾರ ಪ್ರಕಟಿಸಿದ್ದಾರೆ.

ಮೂರು ದಿನ ಮಾತ್ರ ಅವಕಾಶ

ಮೂರು ದಿನ ಮಾತ್ರ ಅವಕಾಶ

ಕಾರ್ಮಿಕರಿಗೆ ಉಚಿತ ಪ್ರಯಾಣದ ಅವಕಾಶ ಇಂದಿನಿಂದ ಮೂರು ದಿನ ಇರಲಿದೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ. ಈ ಅವಕಾಶ ಕೂಲಿ ಕಾರ್ಮಿಕರಿಗೆ ಮಾತ್ರ. ಐಟಿ, ಬಿಟಿ ಉದ್ಯೋಗಿಗಳಿಗೆ ಅನ್ವಯಿಸಲ್ಲ ಎಂದು ಸವದಿ ಹೇಳಿದ್ದಾರೆ. ಮೂರು ದಿನ ಅವಕಾಶ ಇರುವುದರಿಂದ ಕಾರ್ಮಿಕರು ನೂಕು ನುಗ್ಗಲು ಮಾಡದೇ ಶಾಂತ ರೀತಿಯಲ್ಲಿ ವರ್ತಿಸಬೇಕು, ಕೋವಿಡ್ ತಡೆಗಟ್ಟಲು ಶ್ರಮಿಸಬೇಕು ಎಂದು ಹೇಳಿದ್ದಾರೆ

ಬಸ್ ಟರ್ಮಿನಲ್ ಬದಲಾವಣೆ

ಬಸ್ ಟರ್ಮಿನಲ್ ಬದಲಾವಣೆ

ನಿನ್ನೆ 120 ಬಸ್ ಗಳು ಸುಮಾರು 3600 ಜನರನ್ನು ತುಂಬಿಕೊಂಡು ಬೆಂಗಳೂರು ಕೆಂಪೇಗೌಡ ಬಸ್ ನಿಲ್ದಾಣದಿಂದ ರಾಜ್ಯದ ವಿವಿದೆಡೆ ಪ್ರಯಾಣ ಬೆಳಸಿದ್ದವು. ಇಂದು ಸಹ ೧೦೦ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ವಲಸೆ ಕಾರ್ಮಿಕರಿಗೆ ಬಸ್ ವ್ಯವಸ್ಥೆ ಹಿನ್ನಲೆಯಲ್ಲಿ ಮೆಜೆಸ್ಟಿಕ್ ಗೆ ತಂಡೋಪತಂಡವಾಗಿ ಜನ ಬರುತ್ತಿರುವುದು ಕಂಡು ಬರುತ್ತಿದೆ. ಹೀಗಾಗಿ ಇಂದು ಬಿಎಂಟಿಸಿ, ಕೆಎಸ್ ಆರ್ ಟಿಸಿ ಟರ್ಮಿನಲ್ 1 ರಿಂದ ಬಸ್ ಸೇವೆಯನ್ನು ಆರಂಭಿಸಲಾಗಿದೆ. ನಿನ್ನೆ ಕೆಎಸ್ ಆರ್ ಟಿಸಿ ಟರ್ಮಿನಲ್ 3 ರಿಂದ ಮಾತ್ರ ಬಸ್ ಸಂಚಾರ ಮಾಡಿದ್ದವು. ಜಾಗ ಕಮ್ಮಿಯಾದ ಕಾರಣ ಸಾಮಾಜಿಕ ಅಂತರ ಪಾಲನೆಯಾಗಿರಲಿಲ್ಲ. ಈ ಹಿನ್ನಲೆ ಇಂದು ಬಿಎಂಟಿಸಿ ಹಾಗೂ ಕೆಎಸ್ ಆರ್ ಟಿಸಿ ಟರ್ಮಿನಲ್ 1 ರಲ್ಲಿ ಬಸ್ ಸಂಚಾರ ವ್ಯವಸ್ಥೆ ಮಾಡಲಾಗಿದೆ. ಟಿಕೆಟ್ ಬಲ್ಕ್ ಬುಕ್ಕಿಂಗ್ ಸಹ ರದ್ದು, ಇಟಿಎಂ ಮೆಷಿನ್ ನಲ್ಲಿ ಟಿಕೆಟ್ ಹಂಚಿಕೆ ಮಾಡಲಾಗುತ್ತಿದೆ.

ಬೆಂಗಳೂರಿನಿಂದ ವಲಸೆ ಕಾರ್ಮಿಕರನ್ನು ಹೊತ್ತುಹೊರಟ ಶ್ರಮಿಕ ರೈಲುಬೆಂಗಳೂರಿನಿಂದ ವಲಸೆ ಕಾರ್ಮಿಕರನ್ನು ಹೊತ್ತುಹೊರಟ ಶ್ರಮಿಕ ರೈಲು

ಒಂದು ವಾರ ಅವಕಾಶ ಕೊಡುವಂತೆ ಕಾಂಗ್ರೆಸ್ ಒತ್ತಾಯ

ಒಂದು ವಾರ ಅವಕಾಶ ಕೊಡುವಂತೆ ಕಾಂಗ್ರೆಸ್ ಒತ್ತಾಯ

ಕೂಲಿ ಕಾರ್ಮಿಕರಿಗೆ ಅವರವರ ಊರಿಗೆ ತೆರಳಲು ಒಂದು ವಾರ ಅವಕಾಶ ಕೊಡುವಂತೆ ಕಾಂಗ್ರೆಸ್ ಒತ್ತಾಯ ಮಾಡಿದೆ. ಕೆಂಪೇಗೌಡ ಬಸ್‌ ನಿಲ್ದಾಣಕ್ಕೆ ದಾವಿಸಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಾಗೂ ಕಾಂಗ್ರೆಸ್ ಇತರೆ ಮುಖಂಡರು, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಈ ಸರ್ಕಾರಕ್ಕೆ ಕಣ್ಣು ಇಲ್ಲ ಕಿವಿ ಇಲ್ಲ. ಕಾರ್ಮಿಕರನ್ನು ಉಚಿತವಾಗಿ ಕಳುಹಿಸಿ ಎಂದು ಚೆಕ್ ಕೊಡುವುದಕ್ಕೆ ಬಂದಿದ್ದೇವೆ. ಕೆ ಎಸ್ ಆರ್ ಟಿಸಿ ನಾವು ನೀಡುವ ಚೆಕ್ ತೆಗೆದುಕೊಳ್ಳುವುದಕ್ಕೆ ರೆಡಿ ಇಲ್ಲ. ಒಂದು ವಾರ ಆದ್ರು ಅವರಿಗೆ ಪ್ರೀ ವ್ಯವಸ್ಥೆ ಮಾಡಬೇಕು. ಸರಕಾರಕ್ಕೆ ವ್ಯವಸ್ಥೆ ಮಾಡುವುದಕ್ಕೆ ಆಗಲಿಲ್ಲ ಅಂದ್ರೆ ನಮ್ಮ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ವ್ಯವಸ್ಥೆ ಮಾಡುತ್ತರೆ. ಸರ್ಕಾರಕ್ಕೆ ಆಗುವುದಿಲ್ಲ ಅಂದ್ರೆ ನಾವು ಭಿಕ್ಷೆ ಬೇಡಿ ಆದ್ರು ಹಣ ಕೊಡುತ್ತೇನೆ ಎಂದರು.

ನಮ್ಮ ಒತ್ತಾಯದ ಮೇಲೆ ಪ್ರಾರಂಭ ಮಾಡಿದ್ದಾರೆ

ನಮ್ಮ ಒತ್ತಾಯದ ಮೇಲೆ ಪ್ರಾರಂಭ ಮಾಡಿದ್ದಾರೆ

ಇದೇ ವೇಳೆ ಮಾತನಾಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಚಿತ ಸಾರಿಗೆ ವ್ಯವಸ್ಥೆಯನ್ನು ನಮ್ಮ ಒತ್ತಾಯದ ಮೇಲೆ ಪ್ರಾರಂಭ ಮಾಡಿದ್ದಾರೆ. ಲಾಕ್ ಡೌನ್ ಆದ ಮೇಲೆ ಕಾರ್ಮಿಕರಿಗೆ ಹಣ ಎಲ್ಲಿ ಇರುತ್ತೆ. ಉಚಿತವಾಗಿ ಕರೆದುಕೊಂಡು ಹೋಗುವುದಕ್ಕೆ ನಮ್ಮ ಪಕ್ಷದಿಂದ ನಿರ್ಧಾರ ಮಾಡಿದ್ವಿ. ಆ ನಂತರ ಕೆ ಎಸ್ ಆರ್ ಟಿ ಸಿಗೆ ಒಂದು ಕೋಟಿ ಹಣ ನೀಡಿದ್ವಿ ಎಂದರು.

ಕಾರ್ಮಿಕ, ಪ್ರವಾಸಿಗ, ವಿದ್ಯಾರ್ಥಿಗಳ ನೆರವಿಗೆ ಸೇವಾ ಸಿಂಧುಕಾರ್ಮಿಕ, ಪ್ರವಾಸಿಗ, ವಿದ್ಯಾರ್ಥಿಗಳ ನೆರವಿಗೆ ಸೇವಾ ಸಿಂಧು

ದರ ನೋಡಿ ಕಾರ್ಮಿಕರು ಕಂಗಾಲು

ದರ ನೋಡಿ ಕಾರ್ಮಿಕರು ಕಂಗಾಲು

ನಿನ್ನೆ 120 ಬಸ್‌ಗಳು ಬೆಂಗಳೂರಿನಿಂದ ವಿವಿಧ ಜಿಲ್ಲೆಗಳಿಗೆ ಸಂಚರಿಸಿವೆ. ಪ್ರತಿ ಬಸ್‌ನಲ್ಲಿ 30 ಪ್ರಯಾಣಿಕರಂತೆ 3,600 ಜನ ಪ್ರಯಾಣ ಮಾಡಿದ್ದಾರೆ.

ಕಿಲೋ ಮೀಟರ್, ಟೋಲ್ ಶುಲ್ಕ ಎಲ್ಲವನ್ನು ಸೇರಿಸಿ ಒಂದೊಂದು ಜಿಲ್ಲೆಗೆ ಒಂದು ದರವನ್ನು ಕೆಎಸ್‌ಆರ್‌ಟಿಸಿ ನಿಗದಿ ಮಾಡಿದೆ. ಬೀದರ್‌ಗೆ ತೆರಳುವ ಬಸ್‌ ಬುಕ್‌ ಮಾಡಲು ₹59,510, ಕಲಬುರ್ಗಿಗೆ ₹48,580, ವಿಜಯಪುರಕ್ಕೆ ₹45,720 ಹೀಗೆ ಒಂದೊಂದು ದರವಿದೆ. ರಾಮನಗರಕ್ಕೆ ಪ್ರಯಾಣಿಸಲು ಅತಿ ಕಡಿಮೆ (₹3,900) ದರವಿದೆ.

ಕಾರ್ಮಿಕರು ಸಹಕರಿಸಬೇಕು

ಕಾರ್ಮಿಕರು ಸಹಕರಿಸಬೇಕು

ಕೆ‌ ಎಸ್ ಆರ್ ಟಿ‌ ಸಿ‌ ಯು ಇಂದು ಬೆಳಗ್ಗೆ 10 ರಿಂದ ಸಂಜೆ 6 ರವರೆಗೆ, ಕಾರ್ಮಿಕರಿಗಾಗಿ ಕೆಂಪೇಗೌಡ ಬಸ್ ನಿಲ್ದಾಣ ( ಮೆಜೆಸ್ಟಿಕ್) ನಿಂದ ಬಸ್ಸುಗಳನ್ನು ಕಾರ್ಯಚರಣೆಯನ್ನು , ಬಿ ಎಂ ಟಿ‌ ಸಿ ಬಸ್ ನಿಲ್ದಾಣ ( ಮೆಜೆಸ್ಟಿಕ್) ಗೆ ಸ್ಥಳಾಂತರಿಸಲಾಗಿದೆ. ಸಾಮಾಜಿಕ ಅಂತರವನ್ನು ಕಾಪಾಡಲು ಅನುಕೂಲವಾಗುವ ನಿಟ್ಟಿನಲ್ಲಿ ಈ ವ್ಯವಸ್ಥೆ ಮಾಡಲಾಗಿದ್ದು, ಈ ಬಸ್ ವ್ಯವಸ್ಥೆಯು (ಕೆಂಪು ವಲಯ ಹೊರತು ಪಡಿಸಿ) ಬೇರೆ ಸ್ಥಳಗಳಿಗೆ ಕಾರ್ಯಚರಣೆಯಾಗಲಿದೆ. ಕಾರ್ಮಿಕರು ಯಾವುದೇ ಆತಂಕಕ್ಕೆ ಒಳಗಾಗಬಾರದು, ಸೂಕ್ತ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲು ಸಹಕರಿಸಬೇಕು. ಬಸ್ಸುಗಳ ನಿರಂತರ ಪೂರೈಕೆ ಇರುತ್ತದೆ. ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಬಸ್ಸುಗಳಿಗೆ ತೆರಳುವ ಮುನ್ನ ಸೂಕ್ತ ಆರೋಗ್ಯ ಪರಿಶೀಲನೆ ‌ನಡೆಸಿ, ಸಂಪೂರ್ಣ ಮಾಹಿತಿಯನ್ನು ದಾಖಲಿಸುವ ವ್ಯವಸ್ಥೆ ಮಾಡಲಾಗಿದೆ. ಬಸ್ಸುಗಳ ನಿರ್ಗಮನದ ಮಾಹಿತಿಯನ್ನು ಸಂಬಂದಪಟ್ಡ. ನಿಗಮದ ವಿಭಾಗಗಳಿಗೆ ಹಾಗೂ ಜಿಲ್ಲಾಡಳಿತಕ್ಕೆ ನೀಡಲಾಗುತ್ತಿದೆ. ಮಾರ್ಗ ಮಧ್ಯೆ ಯಾವುದೇ ಪ್ರಯಾಣಿಕರನ್ನು ಇಳಿಸುವುದಿಲ್ಲ, designated ಬಸ್ ನಿಲ್ದಾಣಗಳಲ್ಲಿಯೇ ಇಳಿಸಲಾಗುತ್ತಿದ್ದು, ಅಲ್ಲಿ ಅವರಿಗೆ ಮತ್ತೊಮ್ಮೆ ಜಿಲ್ಲಾಡಳಿತದಿಂದ ಆರೋಗ್ಯ ತಪಾಸಣೆ‌ ನಡೆಸಿ Home quarantine ಗೆ ಸಂಬಂಧಪಟ್ಡಂತೆ ಮಾಹಿತಿ‌ ನೀಡಲಾಗುತ್ತಿದೆ. ಇಂದು ಪ್ರತಿ‌ ಗಂಟೆಗೊಮ್ಮೆ ಬಸ್ ಕಾರ್ಯಚರಣೆಯ ಮಾಹಿತಿಯನ್ನು ಸಂಬಂಧಪಟ್ಟ ಜಿಲ್ಲಾಡಳಿತಕ್ಕೆ ನೀಡಲಾಗುತ್ತದೆ. ಸಹಕರಿಸಲು ಕೋರಿದೆ ಎಂದು ಕೆ ಎಸ್ ಆರ್ ಟಿ ಸಿ ಹಿರಿಯ ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ.

English summary
Migrate Labours Free Shifting To Native: Says Karnataka Government. next 3 days only migrate labours are shifting in ksrtc bus and no bus fare them.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X