ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಧ್ಯಂತರ ಚುನಾವಣೆ ನಮ್ಮ ಆಯ್ಕೆ ಅಲ್ಲ: ಯಡಿಯೂರಪ್ಪ

|
Google Oneindia Kannada News

Recommended Video

ಮಧ್ಯಂತರ ಚುನಾವಣೆ ನಮ್ಮ ಆಯ್ಕೆ ಅಲ್ಲ: ಯಡಿಯೂರಪ್ಪ B. S. Yeddyurappa | Oneindia Kannada

ಕರ್ನಾಟಕದಲ್ಲಿ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರಕಾರದ ಅಳಿವೋ ಉಳಿವೋ ಎಂಬುದು ಮಂಗಳವಾರದಂದು ಬಹುತೇಕ ಖಾತ್ರಿ ಆಗಲಿದೆ. ಆದರೆ ಮಧ್ಯಂತರ ಚುನಾವಣೆ ಆಗಬಹುದಾ ಎಂಬ ಪ್ರಶ್ನೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರೇನೋ 'ಇಲ್ಲ, ನಾವು ಸರಕಾರ ರಚನೆ ಮಾಡುತ್ತೇವೆ' ಎಂದು ಹೇಳಿದ್ದಾರೆ.

ಅಲ್ಪಮತಕ್ಕೆ ಕುಸಿದ ಎಚ್ಡಿಕೆ ಸರ್ಕಾರ, ವಿಧಾನಸಭೆ ಸಂಖ್ಯಾಬಲ?ಅಲ್ಪಮತಕ್ಕೆ ಕುಸಿದ ಎಚ್ಡಿಕೆ ಸರ್ಕಾರ, ವಿಧಾನಸಭೆ ಸಂಖ್ಯಾಬಲ?

ವಿಧಾನಸಭೆ ಕಾಲಾವಧಿ ಇನ್ನೂ ನಾಲ್ಕು ವರ್ಷ ಇದೆ. ಇಂಥ ಸಮಯದಲ್ಲಿ ಚುನಾವಣೆಗೆ ಹೋಗುವುದಿಲ್ಲ. ಆ ಮೂಲಕ ಸರಕಾರದ ಹಣವನ್ನು ಪೋಲು ಮಾಡುವುದಿಲ್ಲ ಎಂದು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದ್ದಾರೆ. ಲೋಕಸಭೆ ಚುನಾವಣೆ ಫಲಿತಾಂಶ ಬಂದಾಗ ಕರ್ನಾಟಕದಲ್ಲಿ ಮಧ್ಯಂತರ ಚುನಾವಣೆಗೆ ಹೋಗುವ ಬಗ್ಗೆ ಬಿಜೆಪಿಯ ಬಹುತೇಕ ನಾಯಕರು ಉತ್ಸುಕರಾಗಿದ್ದರು.

Yeddyurappa

ಕರ್ನಾಟಕದ ಇಪ್ಪತ್ತೆಂಟು ಸ್ಥಾನಗಳ ಪೈಕಿ ಇಪ್ಪತ್ತೈದರಲ್ಲಿ ಗೆದ್ದಿದ್ದ ಬಿಜೆಪಿ ಅತ್ಯಂತ ವಿಶ್ವಾಸದಲ್ಲಿ ಇತ್ತು. ಆದರೆ ಯಡಿಯೂರಪ್ಪ ಅವರು ಈಗ ಆ ನಿಲುವಿನಿಂದ ಹಿಂದೆ ಸರಿದಂತೆ ಇದೆ. ಇನ್ನು ಸದ್ಯಕ್ಕೆ ಕರ್ನಾಟಕದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗೂ ಬಿಜೆಪಿಗೂ ಯಾವುದೇ ಸಂಬಂಧ ಇಲ್ಲ ಎಂದು ಇದೇ ಸಮಯದಲ್ಲಿ ಅವರು ಹೇಳಿದ್ದಾರೆ.

English summary
Karnataka political crisis: Mid term election is not our option, said state BJP chief Yeddyurappa in an interview. HD Kumaraswamy led coalition government lost it's majority after 13 MLA's resignation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X