ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೌಡ, ಸ್ವಾಮಿ ಭೇಟಿಯೊಂದಿಗೆ ಮಹಾಮೈತ್ರಿ ದಂಡಯಾತ್ರೆ ಆರಂಭಿಸಿದ ನಾಯ್ಡು

|
Google Oneindia Kannada News

ಬೆಂಗಳೂರು, ನವೆಂಬರ್ 08: ದೇಶವನ್ನು ಉಳಿಸಲು, ಪ್ರಜಾಪ್ರಭುತ್ವವನ್ನು ಉಳಿಸಲು ದೇವೇಗೌಡರ ಸಲಹೆ, ನೆರವು ಕೇಳಲು ಇಲ್ಲಿಗೆ ಬಂದಿದ್ದೇನೆ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ, ಟಿಡಿಪಿ ಪಕ್ಷದ ನಾಯಕ ಚಂದ್ರಬಾಬು ನಾಯ್ಡು ಹೇಳಿದರು.

ದೇವೇಗೌಡ ಅವರ ನಿವಾಸಕ್ಕೆ ಬಂದಿದ್ದ ಅವರು ಕುಮಾತಸ್ವಾಮಿ ಹಾಗೂ ದೇವೇಗೌಡ ಅವರೊಂದಿಗೆ ಚರ್ಚಿಸಿದ ನಂತರ ಮಾತುಕತೆಯ ವಿವರವನ್ನು ಮಾಧ್ಯಮಗಳೊಂದಿಗೆ ಚಂದ್ರಬಾಬು ನಾಯ್ಡು ಹಂಚಿಕೊಂಡರು.

ದೇವೇಗೌಡ-ಚಂದ್ರಬಾಬು ನಾಯ್ಡು ಭೇಟಿ: ಮೈತ್ರಿಯದ್ದೇ ಮಾತುದೇವೇಗೌಡ-ಚಂದ್ರಬಾಬು ನಾಯ್ಡು ಭೇಟಿ: ಮೈತ್ರಿಯದ್ದೇ ಮಾತು

ದೇಶದ ಪ್ರಜಾಸತ್ತಾತ್ಮಕ ಸಂಸ್ಥೆಗಳು ಅಪಾಯದಲ್ಲಿವೆ. ಅತ್ಯುನ್ನತ ತನಿಖಾ ಸಂಸ್ಥೆಯಾದ ಸಿಬಿಐ, ಸ್ವಾಯತ್ತ ಸಂಸ್ಥೆಯಾದ ಆರ್‌ಬಿಐ, ಐಟಿ, ಇಡಿಗಳು ಕೇಂದ್ರದ ಆಟದ ಸಾಮಗ್ರಿಗಳಾಗಿವೆ ದೇಶ ಅಪಾಯದಲ್ಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ತನಿಖಾ ಸಂಸ್ಥೆಗಳ ಮೂಲಕ ದೌರ್ಜನ್ಯ

ತನಿಖಾ ಸಂಸ್ಥೆಗಳ ಮೂಲಕ ದೌರ್ಜನ್ಯ

ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧ ಪಕ್ಷದ ರಾಜಕಾರಣಿಗಳ ಮೇಲೆ ದೌರ್ಜನ್ಯ ಎಸಗುತ್ತಿದೆ ಬಿಜೆಪಿ, ಹಿಂದೆಂದೂ ಇಂತಹಾ ಸ್ಥಿತಿಯನ್ನು ದೇಶ ಕಂಡಿರಲಿಲ್ಲ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಈಗಾಗಲೇ ಹಲವು ನಾಯಕರ ಭೇಟಿ

ಈಗಾಗಲೇ ಹಲವು ನಾಯಕರ ಭೇಟಿ

ಈಗಾಗಲೇ ಮಾಯಾವತಿ, ಅಖಿಲೇಶ್ ಸೇರಿದಂತೆ ಹಲವು ಪ್ರಾದೇಶಿಕ ಪಕ್ಷಗಳ ಮುಖಂಡರನ್ನು ಭೇಟಿ ಆಗಿದ್ದಾಗಿದೆ. ಮೊದಲಿಗೆ ನಾವು ಚರ್ಚೆ ಮಾಡುತ್ತೇವೆ, ಮೈತ್ರಿಯು ಹೇಗೆ ಕಾರ್ಯ ನಿರ್ವಹಿಸಬೇಕು ಹೇಗೆ ಚುನಾವಣೆ ಎದುರಿಸಬೇಕು, ನಾಯಕತ್ವ ಯಾರು ವಹಿಸಿಕೊಳ್ಳುತ್ತಾರೆ ಅಥವಾ ಸಂಘಟಿತ ನಾಯಕತ್ವದ ರೂಪು-ರೇಷೆ ಹೇಗಿರುತ್ತದೆ ಎಂಬುದನ್ನು ಚರ್ಚಿಸಿ ಕಾರ್ಯರೂಪಕ್ಕೆ ತರುತ್ತೇವೆ ಎಂದು ಅವರು ಹೇಳಿದರು.

ಎನ್ ಟಿಆರ್ ಅಳಿಯ ಈಗ ಕಾಂಗ್ರೆಸ್ ದೋಸ್ತಿ, ಏನಾಯ್ತು ತೆಲುಗರ ಸ್ವಾಭಿಮಾನ?ಎನ್ ಟಿಆರ್ ಅಳಿಯ ಈಗ ಕಾಂಗ್ರೆಸ್ ದೋಸ್ತಿ, ಏನಾಯ್ತು ತೆಲುಗರ ಸ್ವಾಭಿಮಾನ?

ಮೈತ್ರಿಯ ಪ್ರಾಥಮಿಕ ಪ್ರಯೋಗ ಪ್ರಾರಂಭ

ಮೈತ್ರಿಯ ಪ್ರಾಥಮಿಕ ಪ್ರಯೋಗ ಪ್ರಾರಂಭ

ಮೈತ್ರಿಯ ಪ್ರಾಥಮಿಕ ಪ್ರಯೋಗಗಳು ಪ್ರಾರಂಭವಾಗಿವೆ, ಮಮತಾ ಬ್ಯಾನರ್ಜಿ ಅವರು ಜನವರಿಯಲ್ಲಿ ಮೈತ್ರಿ ನಾಯಕರನ್ನು ಒಟ್ಟು ಸೇರಿಸಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಿದ್ದಾರೆ. ಅಖಿಲೇಶ್ ಸಹ ಸಮಾವೇಶ ಆಯೋಜಿಸಲಿದ್ದಾರೆ. ನಾವು ಕಾಂಗ್ರೆಸ್‌ನ ಹೊರ ಬೆಂಬಲ ಪಡೆಯುವುದೋ ಅಥವಾ ಕಾಂಗ್ರೆಸ್‌ಗೆ ಬೆಂಬಲ ನೀಡುವುದೋ ಎಲ್ಲವೂ ಚರ್ಚಿಸಿ ನಿರ್ಣಯಿಸಲಾಗುವುದು ಎಂದು ಹೇಳಿದರು.

ಕಾಂಗ್ರೆಸ್‌ ಬೆಂಬಲದ ಕುರಿತು ಚರ್ಚೆ

ಕಾಂಗ್ರೆಸ್‌ ಬೆಂಬಲದ ಕುರಿತು ಚರ್ಚೆ

1996 ರಲ್ಲಿ ಯುನೈಟೆಡ್‌ ಪ್ರಂಟ್‌ನ ಅಧ್ಯಕ್ಷರು ದೇವೇಗೌಡರಾಗಿದ್ದರು, ನಾನು ಉಪಾಧ್ಯಕ್ಷ ಆಗಿದ್ದೆ ಆಗ ಕಾಂಗ್ರೆಸ್‌ನ ಬಾಹ್ಯ ಬೆಂಬಲದೊಂದಿಗೆ ತೃತೀಯ ರಂಗ ಅಧಿಕಾರ ಹಿಡಿಯಿತು ದೇವೇಗೌಡ ಅವರು ಪ್ರಧಾನಿ ಆದರು. ಈಗಿನ ಪರಿಸ್ಥಿತಿಯಲ್ಲಿ ಇನ್ನೂ ಮೈತ್ರಿ ಪ್ರಾಥಮಿಕ ಹಂತದಲ್ಲಿದ್ದು ಪ್ರಯೋಗಗಳು, ಮಾತುಕತೆಗಳ ಬಳಿಕ ಪಕ್ವವವಾಗಲಿದೆ ಎಂದು ಅವರು ಹೇಳಿದರು.

ರಾಹುಲ್ ಭೇಟಿ ಮಾಡಲಿದ್ದಾರೆ ಚಂದ್ರಬಾಬು ನಾಯ್ಡು, ಬಿಜೆಪಿಗೆ ತಲೆನೋವು?ರಾಹುಲ್ ಭೇಟಿ ಮಾಡಲಿದ್ದಾರೆ ಚಂದ್ರಬಾಬು ನಾಯ್ಡು, ಬಿಜೆಪಿಗೆ ತಲೆನೋವು?

1996 ರ ಮ್ಯಾಜಿಕ್‌ ಮತ್ತೆ ನಡೆಯುತ್ತೆ

1996 ರ ಮ್ಯಾಜಿಕ್‌ ಮತ್ತೆ ನಡೆಯುತ್ತೆ

ಕುಮಾರಸ್ವಾಮಿ ಅವರು ಮಾತನಾಡಿ, ಜಾತ್ಯಾತೀತ ಶಕ್ತಿಗಳನ್ನು ಬಲಪಡಿಸಲು ಚಂದ್ರಬಾಬು ನಾಯ್ಡು ಅವರು ಮುಂದೆಬಂದಿದ್ದಾರೆ. ಪ್ರಜಾಪ್ರಭುತ್ವವನ್ನು ರಕ್ಷಿಸುವ ಕಾರ್ಯಕ್ಕೆ ಬೆಂಬಲ ಕೇಳುತ್ತಿದ್ದಾರೆ. ದೇವೇಗೌಡ ಹಾಗೂ ನಾಯ್ಡು ಅವರು ಹಳೆಯ ಮಿತ್ರರು ಅವರಿಬ್ಬರ ಪುನರ್‌ ಸಂಗಮದಿಂದ 1996 ರ ಪ್ರಯೋಗ ಮರಳುತ್ತದೆ ಎಂಬ ವಿಶ್ವಾಸ ನನಗಿದೆ ಎಂದು ಅವರು ಹೇಳಿದರು.

English summary
Andhra Pradesh CM Chandrababu Naidu said, visited Deve Gowda to discuss about third front and seek his help and guidelines to protect democracy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X