ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಲಿಕಾನ್ ಸಿಟಿ ಜನರಿಗಿಲ್ಲ ಬಿಸಿಗಾಳಿ ಅಪಾಯ; ಬೆಂಗಳೂರಿಗರನ್ನು ಕಾಪಾಡಿದ್ದೇ ಮಳೆರಾಯ

|
Google Oneindia Kannada News

ಬೆಂಗಳೂರು, ಏಪ್ರಿಲ್ 29: ಭಾರತದ ಉತ್ತರ ಭಾಗಗಳಲ್ಲಿ ಬಿಸಿಲಿನ ಶಾಖ ಹೆಚ್ಚಾಗಿದೆ. ಆದರೆ ಕಳೆದ ಎರಡು ವಾರಗಳಲ್ಲಿ ಉಷ್ಣವಲಯದ ಮಳೆಯಿಂದಾಗಿ ಕರ್ನಾಟಕದಲ್ಲಿ ಹೆಚ್ಚು ಪರಿಣಾಮ ಬೀರಿಲ್ಲ ಎಂದು ಹವಾಮಾನ ತಜ್ಞರು ಹೇಳಿದ್ದಾರೆ.

ರಾಜ್ಯದ ಕರಾವಳಿ ಮತ್ತು ಆಂತರಿಕ ಪ್ರದೇಶಗಳಲ್ಲಿನ ಕೆಲವು ಸ್ಥಳಗಳು ಸರಾಸರಿ ತಾಪಮಾನಕ್ಕಿಂತ ಹೆಚ್ಚಿನ ತಾಪಮಾನ ವರದಿ ಆಗಿದೆ. ಆದರೆ ತಾಪಮಾನ ಶೇ.2.6ಕ್ಕಿಂತ ಹೆಚ್ಚಾಗದಿರುವುದಕ್ಕೆ ಕಾರಣವೇ ತಿಳಿದಿಲ್ಲ ಎಂದು ಹವಾಮಾನಶಾಸ್ತ್ರಜ್ಞರು ಹೇಳಿದ್ದಾರೆ.

Heatwave : ತಾಪಮಾನದಿಂದ ತತ್ತರಿಸಿರುವ ಉತ್ತರ ಭಾರತದ ರಾಜ್ಯಗಳಲ್ಲಿ ಮುಂದಿನ ವಾರ ಮಳೆ ಸಾಧ್ಯತೆ Heatwave : ತಾಪಮಾನದಿಂದ ತತ್ತರಿಸಿರುವ ಉತ್ತರ ಭಾರತದ ರಾಜ್ಯಗಳಲ್ಲಿ ಮುಂದಿನ ವಾರ ಮಳೆ ಸಾಧ್ಯತೆ

ರಾಜ್ಯವು ಗರಿಷ್ಠ ಬೇಸಿಗೆಯ ಹವಾಮಾನ ಪರಿಸ್ಥಿತಿಗಳಿಗೆ ತೆರೆದುಕೊಂಡಿದ್ದು, ಉತ್ತರ ಒಳನಾಡಿನ ಕೆಲವು ಜಿಲ್ಲೆಗಳು 40 ಡಿಗ್ರಿ ಸೆಲ್ಸಿಯಸ್ ತಾಪಮಾನದ ಗಡಿಯನ್ನು ದಾಟಿವೆ. ಭಾರತ ಹವಾಮಾನ ಇಲಾಖೆ (IMD) ಯ ಮಾಹಿತಿಯ ಪ್ರಕಾರ ಕಲಬುರಗಿಯಲ್ಲಿ ಏಪ್ರಿಲ್ 21 ರಂದು 43 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಿಸಿದೆ.

ವಾಯುಭಾರ ಕುಸಿತ; ಮುಂದಿನ ಎರಡು ದಿನ ಭಾರೀ ಮಳೆ ಸಾಧ್ಯತೆವಾಯುಭಾರ ಕುಸಿತ; ಮುಂದಿನ ಎರಡು ದಿನ ಭಾರೀ ಮಳೆ ಸಾಧ್ಯತೆ

ಕರ್ನಾಟಕದಲ್ಲಿ ಹೇಗಿದೆ ಬಿಸಿಲಿನ ತಾಪಮಾನ?

ಕರ್ನಾಟಕದಲ್ಲಿ ಹೇಗಿದೆ ಬಿಸಿಲಿನ ತಾಪಮಾನ?

ಕಳೆದ ಗುರುವಾರ ಜಿಲ್ಲೆಯಲ್ಲಿ 41.6 ಡಿಗ್ರಿ ಸೆಲ್ಸಿಯಸ್ ತಾಪಮಾನ ವರದಿಯಾಗಿತ್ತು. ರಾಯಚೂರಿನಲ್ಲಿ 41 ಡಿಗ್ರಿ ಸೆಲ್ಸಿಯಸ್, ಬೀದರ್, ವಿಜಯಪುರ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ 40 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ದಕ್ಷಿಣ ಒಳನಾಡಿನ ಕರ್ನಾಟಕಕ್ಕೆ ಬಂದರೆ, ದಾವಣಗೆರೆಯಲ್ಲಿ 37 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದರೆ, ಮೈಸೂರು ಮತ್ತು ಶಿವಮೊಗ್ಗದಲ್ಲಿ ಗುರುವಾರ 36 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು.

ಸಿಲಿಕಾನ್ ಸಿಟಿಯಲ್ಲಿ ಬಿಸಿಲಿಗೆ ನಿಯಂತ್ರಣ

ಸಿಲಿಕಾನ್ ಸಿಟಿಯಲ್ಲಿ ಬಿಸಿಲಿಗೆ ನಿಯಂತ್ರಣ

ಕಳೆದ ವಾರ ಬೆಂಗಳೂರು ನಗರದಲ್ಲಿ ಸರಾಸರಿ 34°C ರಿಂದ 36°C ತಾಪಮಾನ ದಾಖಲಾಗಿತ್ತು. ಇದರಿಂದ ಸಿಲಿಕಾನ್ ಸಿಟಿಯಲ್ಲಿ ಬೇಸಿಗೆ ಕಾವು ಈಗಾಗಲೇ ಗರಿಷ್ಠ ಮಟ್ಟಕ್ಕೆ ತಲುಪಿದೆಯಾ ಎಂಬ ಅನುಮಾನವನ್ನು ಹುಟ್ಟು ಹಾಕುವಂತಿತ್ತು. ಆದರೆ ಹವಾಮಾನ ಇಲಾಖೆ ಅಧಿಕಾರಿಗಳ ಪ್ರಕಾರ, ಕಳೆದ ವಾರದ ಸುರಿದ ಮಳೆಯಿಂದಾಗಿ ಬಿಸಿಲಿನ ತಾಪ ಕೊಂಚ ಕಡಿಮೆಯಾಗಿದೆ.

"ಬೆಂಗಳೂರು ನಗರವು ಹೆಚ್ಚಿನ ಎತ್ತರದಲ್ಲಿರುವುದರಿಂದ ತಾಪಮಾನವು ಯಾವಾಗಲೂ ಹೆಚ್ಚಾಗಿರುತ್ತದೆ. ಹಿಂದಿನ ವರ್ಷಗಳಲ್ಲಿ ತಾಪಮಾನವು 37-39 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದ ಹಿನ್ನೆಲೆಯಲ್ಲಿ ಈ ವರ್ಷ, ಏಪ್ರಿಲ್ ತುಲನಾತ್ಮಕವಾಗಿ ತಂಪಾಗಿದೆ ಎಂದು ನಾವು ಹೇಳಬಹುದು. ರಾಮನಗರ, ಚಾಮರಾಜನಗರ, ತುಮಕೂರು ಮತ್ತು ಮೈಸೂರಿನಂತಹ ಜಿಲ್ಲೆಗಳಲ್ಲಿ ಪಾದರಸದ ಮಟ್ಟವು ಯಾವಾಗಲೂ ಬಯಲು ಸೀಮೆಯಲ್ಲಿ ಹೆಚ್ಚಿರುವುದರಿಂದ ಇದು ಹೆಚ್ಚಾಗಿದೆ ಎಂದು ಐಎಂಡಿ ವಿಜ್ಞಾನಿ ವಿವರಿಸಿದರು.

ಕರ್ನಾಟಕದಲ್ಲಿ ಹೀಟ್ ಅಲರ್ಟ್ ಇಲ್ಲ

ಕರ್ನಾಟಕದಲ್ಲಿ ಹೀಟ್ ಅಲರ್ಟ್ ಇಲ್ಲ

ಈ ಬೇಸಿಗೆಯಲ್ಲಿ ಇದುವರೆಗೆ ರಾಜ್ಯದಲ್ಲಿ ಯಾವುದೇ ಬಿಸಿಲಿನ ಅಲೆ ಕಂಡುಬಂದಿಲ್ಲ. ಹವಾಮಾನ ಇಲಾಖೆಯಿಂದ ಯಾವುದೇ ಎಚ್ಚರಿಕೆಗಳನ್ನು ನೀಡಲಾಗಿಲ್ಲ. "ತಾಪಮಾನವು 45 ಡಿಗ್ರಿ ಸೆಲ್ಸಿಯಸ್ ಗಿಂತ ಹೆಚ್ಚಾದಾಗ ಅಥವಾ ಸಾಮಾನ್ಯಕ್ಕಿಂತ 4.5ರಷ್ಟು ಹೆಚ್ಚಾದಾಗ ನಾವು ಅದನ್ನು ಶಾಖದ ಅಲೆ ಎಂದು ಕರೆಯುತ್ತೇವೆ. ಮುಂದಿನ ಮೂರು ದಿನಗಳವರೆಗೆ ರಾಜ್ಯದಲ್ಲಿ ಹೀಟ್ ಅಲರ್ಟ್ ಇರುವುದಿಲ್ಲ ಎಂದು ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.

ಸಿಲಿಕಾನ್ ಸಿಟಿಯಲ್ಲಿ ವಿದ್ಯುತ್ ವ್ಯತ್ಯಯ

ಸಿಲಿಕಾನ್ ಸಿಟಿಯಲ್ಲಿ ವಿದ್ಯುತ್ ವ್ಯತ್ಯಯ

ಬೆಸ್ಕಾಂ ಅಧಿಕಾರಿಗಳ ಪ್ರಕಾರ, ಹೆಚ್ಚುತ್ತಿರುವ ತಾಪಮಾನವು ನಗರದಾದ್ಯಂತ ವಿದ್ಯುತ್ ಪೂರೈಕೆಯ ಮೇಲೆ ಸ್ವಲ್ಪ ಪರಿಣಾಮ ಬೀರಿದೆ. ನಗರದ ಕೆಲವು ಭಾಗಗಳು ಹಗಲಿನಲ್ಲಿ ವಿದ್ಯುತ್ ಕಡಿತ ಆಗುವ ಸಾಧ್ಯತೆಯಿದ್ದು, ಭೂಗತ ಕೇಬಲ್ ಅಳವಡಿಕೆಗೆ ಅಡಚಣೆಗಳಾಗಿವೆ. "ಅನಿಯಮಿತ ವಿದ್ಯುತ್ ಕಡಿತಗಳು ಕಡಿಮೆಯಾಗಲಿದೆ. ಬಹುತೇಕ ಭೂಗತ ಕೇಬಲ್‌ ಅಳವಡಿಕೆ ಕಾಮಗಾರಿಯನ್ನು ಮಳೆಗಾಲದೊಳಗೆ ಪೂರ್ಣಗೊಳಿಸಲು ಉದ್ದೇಶಿಸಿರುವುದರಿಂದ ಕಾಮಗಾರಿಯನ್ನು ಚುರುಕುಗೊಳಿಸಿದ್ದು, ಕೆಲವೆಡೆ ವಿದ್ಯುತ್‌ ವ್ಯತ್ಯಯ ಉಂಟಾಗಿದೆ ಎಂದು ಬೆಸ್ಕಾಂ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

"ಬೇಸಿಗೆಯಲ್ಲಿ, ಹೆಚ್ಚಿನ ಶಾಖದ ಕಾರಣ ಕೆಲವು ಯಂತ್ರಗಳು ಕೈ ಕೊಡಬಹುದು. ಅಂತಹ ಸಂದರ್ಭಗಳಲ್ಲಿ, ನಾವು ತಕ್ಷಣ ದುರಸ್ತಿ ಕಾರ್ಯಗಳನ್ನು ಮಾಡುತ್ತೇವೆ. ಬೇಸಿಗೆಯಲ್ಲಿ ಲೋಡ್ ಹೆಚ್ಚಾಗುವುದರಿಂದ ಟ್ರಾನ್ಸ್‌ಫಾರ್ಮರ್ ವೈಫಲ್ಯವೂ ಹೆಚ್ಚಾಗುವ ಸಾಧ್ಯತೆಯಿದೆ, "ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

English summary
Heatwave in Karnataka: No heatwave has been observed in the state so far this summer and no alerts have been issued by the India Meteorological Department (IMD).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X