ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭ್ರಷ್ಟರಿಗೆ ಟಿಕೆಟ್ ಇಲ್ಲ, ಸಾಮಾನ್ಯರಿಂದ ದೇಶ ನಡೆಸುವೆ: ನೌಹೀರಾ ಶೇಖ್

|
Google Oneindia Kannada News

Recommended Video

ಭ್ರಷ್ಟರಿಗೆ ಟಿಕೆಟ್ ಇಲ್ಲ, ಸಾಮಾನ್ಯರಿಂದ ದೇಶ ನಡೆಸುವೆ: ನೌಹೀರಾ ಶೇಖ್ | Oneindia Kannada

ಬೆಂಗಳೂರು, ಮಾರ್ಚ್ 23: ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಭೂಗಳ್ಳರು, ಭ್ರಷ್ಟರು ಹಾಗೂ ಕಳ್ಳಕಾಕರಿಗೆ ಟಿಕೆಟ್ ನೀಡದೆ, ಸಾಮಾನ್ಯ ಅಭ್ಯರ್ಥಿಗಳಿಗೆ ಟಿಕೆಟ್ ನೀಡುತ್ತೇವೆ. ಕನಿಷ್ಠ ಪಕ್ಷ 100 ಕ್ಷೇತ್ರಗಳಲ್ಲಿ ಜಯಗಳಿಸುವುದಾಗಿ ಮಹಿಳಾ ಎಂಪವರ್ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷೆ ಡಾ. ನೌಹೀರಾ ಶೇಖ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಒನ್ ಇಂಡಿಯಾಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಮುಂಬರುವ ಚುನಾವಣೆಯ ರಣತಂತ್ರವನ್ನು ಹಂಚಿಕೊಂಡಿದ್ದಾರೆ. ದೇಶದಲ್ಲಿ ಈಗಾಗಲೇ ಜಿಎಸ್ ಟಿ, ಕಾಯ್ದೆ ಕುರಿತಂತೆ ಸಾಕಷ್ಟು ವಿರೋಧಭಾಸಗಳು ವ್ಯಕ್ತವಾಗುತ್ತಿದೆ. ಇತ್ತೀಚೆಗೆ ಗೋರಖ್ ಪುರದಲ್ಲಿ ನಡೆದ ಉಪ ಚುನಾವಣೆಯಲ್ಲೂ ಕೂಡ ನಮ್ಮ ಪಕ್ಷ ಸಾಕಷ್ಟು ಕೆಲಸ ಮಾಡಿದ್ದು, ಕೇಂದ್ರ ಸರ್ಕಾರದ ವಿರುದ್ಧ ಜನಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿದೆ.

224 ಕ್ಷೇತ್ರಗಳಲ್ಲಿ ಎಐಎಂಇಪಿ ಏಕಾಂಗಿಯಾಗಿ ಸ್ಪರ್ಧೆ224 ಕ್ಷೇತ್ರಗಳಲ್ಲಿ ಎಐಎಂಇಪಿ ಏಕಾಂಗಿಯಾಗಿ ಸ್ಪರ್ಧೆ

ಅದೇ ರೀತಿ ಕರ್ನಾಟಕದಲ್ಲೂ ಕೂಡ ಮುಂಬರುವ ಚುನಾವಣೆಯಲ್ಲಿ ನಾವು ಉತ್ತಮ ಸಾಧನೆಯನ್ನೇ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮಹಿಳಾ ಎಂಪವರ್ ಪಾರ್ಟಿಯಿಂದ ಸಾಮಾನ್ಯ ಅಭ್ಯರ್ಥಿಗಳಿಗೆ ಟಿಕೆಟ್ ಕೊಟ್ಟು ಭ್ರಷ್ಟ ಹಾಗೂ ಕ್ರಿಮಿನಲ್ ರಾಜಕಾರಣಿಗಳನ್ನು ಸೋಲಿಸುವುದು ನಮ್ಮ ಮೂಲ ಗುರಿಯಾಗಿದೆ. ಕರ್ನಾಟಕದಲ್ಲಿ 100 ರಿಂದ 150 ಕ್ಷೇತ್ರಗಳಲ್ಲಿ ಎಂಇಪಿ ಜಯಗಳಿಸುತ್ತದೆ ಎಂಬ ವಿಶ್ವಾಸವಿದೆ.

MEP chief Nowhera confident the party will win 100 seats in karnataka

ರಾಜ್ಯದ ಎಲ್ಲ 224 ಕ್ಷೇತ್ರಗಳಲ್ಲಿ ಎಂಇಪಿ ಸ್ಪರ್ಧಿಸಲಿದೆ ಎಂದು ಅವರು ತಿಳಿಸಿದ್ದಾರೆ. ಅಲ್ಲದೆ ಪಕ್ಷ ಈಗಾಗಲೇ ಆಯ್ಕೆ ಮಾಡಿರುವ ಅಧಿಕೃತ ಅಭ್ಯರ್ಥಿಗಳು ಜನಸಾಮಾನ್ಯರಾಗಿದ್ದರೂ ಕೂಡ ಅವರು ಸಾಮಾನ್ಯ ಅಭ್ಯರ್ಥಿಗಳಲ್ಲ ಯಾವುದೇ ಭ್ರಷ್ಟಾಚಾರ ಅಥವಾ ಭೂಗಳ್ಳತನ ಮಾಡಿರುವ ಆರೋಪ ಹೊಂದಿಲ್ಲ.

'ಮಹಿಳಾ ಸಬಲೀಕರಣಕ್ಕಾಗಿ 224 ಕ್ಷೇತ್ರಗಳಲ್ಲಿ ಸ್ಪರ್ಧೆ''ಮಹಿಳಾ ಸಬಲೀಕರಣಕ್ಕಾಗಿ 224 ಕ್ಷೇತ್ರಗಳಲ್ಲಿ ಸ್ಪರ್ಧೆ'

ಜನಸಾಮಾನ್ಯರಲ್ಲೇ ಉತ್ತಮ ವ್ಯಕ್ತಿಗಳನ್ನು ಆಯ್ಕೆ ಮಾಡಿ ಚುನಾವಣಾ ಕಣಕ್ಕೆ ಇಳಿಸುತ್ತೇವೆ.ರಾಜ್ಯದ ಮಹಿಳೆಯರು ಹಾಗೂ ಬಡವರಿಗೆ ಅನುಕೂಲವಾಗುವಂತೆ ಕೆಲಸ ಮಾಡುವವರನ್ನೇ ಅಭ್ಯರ್ಥಿಗಳನ್ನೇ ಕಣದಲ್ಲಿ ಇಳಿಸಿದ್ದು ಜನರು ಒಪ್ಪಿಕೊಳ್ಳುತ್ತಾರೆ ಎನ್ನುವ ಭರವಸೆ ಇದೆ ಎಂದು ಹೇಳಿದ್ದಾರೆ.

ಎಂಇಪಿ ಪಕ್ಷವನ್ನು ರಾಜ್ಯದಲ್ಲಿ ಅಧಿಕಾರ ಕ್ಕೆ ತರುವುದಾಗಿ ವಿಶ್ವಾಸ ವ್ಯಕ್ತಪಡಿಸುತ್ತಿರುವ ನೌಹೀರಾ ಶೇಖ್ ಅವರ ಸಂಪೂರ್ಣ ಸಂದರ್ಶನ ಶೀಘ್ರದಲ್ಲಿ ಒನ್ ಇಂಡಿಯಾದಲ್ಲಿ ಪ್ರಕಟಗೊಳ್ಳಲಿದೆ.

English summary
Mahila Empower Party National president Dr. Nowhera shaik expressed confidence that the party will in more than 100 seats in Karnataka and she has chosen non corrupt candidate for their party.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X