ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇಕೆದಾಟು ವಿವಾದ; ಸಮಿತಿ ರಚಿಸಿದ್ದ ಆದೇಶಕ್ಕೆ ತಡೆ

|
Google Oneindia Kannada News

ಬೆಂಗಳೂರು, ಜೂನ್ 18; ಮೇಕೆದಾಟು ಸ್ಥಳ ಪರಿಶೀಲನೆಗೆ ಸಮಿತಿ ರಚನೆ ಮಾಡಿ ದಕ್ಷಿಣ ಪೀಠ ನೀಡಿದ್ದ ಆದೇಶಕ್ಕೆ ಎನ್‌ಜಿಟಿ ಪ್ರಧಾನ ಪೀಠ ತಡೆ ನೀಡಿದೆ. ಕರ್ನಾಟಕ ಸರ್ಕಾರ ಚೆನ್ನೈನಲ್ಲಿರುವ ದಕ್ಷಿಣ ಪೀಠ ನೀಡಿದ್ದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಕೆ ಮಾಡಿತ್ತು.

ಕರ್ನಾಟಕ ಸರ್ಕಾರ ಮೇಕೆದಾಟು ಬಳಿ ಅಕ್ರಮವಾಗಿ ನಿರ್ಮಾಣ ಚಟುವಟಿಕೆ ನಡೆಸುತ್ತಿದೆ ಎಂಬ ಪತ್ರಿಕಾ ವರದಿ ಆಧರಿಸಿ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ಚೆನ್ನೈ ಪೀಠ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿತ್ತು.

ಮೇಕೆದಾಟು; ಎನ್‌ಜಿಟಿ ಆದೇಶದ ವಿರುದ್ಧ ಕರ್ನಾಟಕದ ಕಾನೂನು ಸಮರ ಮೇಕೆದಾಟು; ಎನ್‌ಜಿಟಿ ಆದೇಶದ ವಿರುದ್ಧ ಕರ್ನಾಟಕದ ಕಾನೂನು ಸಮರ

Mekedatu Row: NGT stays Southern Benchs spot inspection order on Mekedatu

ಅರ್ಜಿಯ ವಿಚಾರಣೆ ವೇಳೆ ನಿರ್ಮಾಣ ಚಟುವಟಿಕೆ ಬಗ್ಗೆ ಪರಿಶೀಲನೆ ನಡೆಸಲು ಜಂಟಿ ಸಮಿತಿಯನ್ನು ರಚನೆ ಮಾಡಿ ಮೇ 21ರಂದು ಆದೇಶ ಹೊರಡಿಸಿತ್ತು. ಕರ್ನಾಟಕ ಸರ್ಕಾರ ಎನ್‌ಜಿಜಿ ಪ್ರಧಾನ ಪೀಠದಲ್ಲಿ ಈ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಕೆ ಮಾಡಿತ್ತು.

ಮೇಕೆದಾಟು ಯೋಜನೆ; ಕ್ಯಾತೆ ತೆಗೆದ ತಮಿಳುನಾಡು ಹೊಸ ಸರ್ಕಾರ ಮೇಕೆದಾಟು ಯೋಜನೆ; ಕ್ಯಾತೆ ತೆಗೆದ ತಮಿಳುನಾಡು ಹೊಸ ಸರ್ಕಾರ

ಎನ್‌ಜಿಟಿಯ ಚೆನ್ನೈ ಪೀಠ 2021ರ ಏಪ್ರಿಲ್ 15ರಂದು ಪತ್ರಿಕೆಗಳಲ್ಲಿ ಬಂದ ವರದಿ ಅನ್ವಯ ಸ್ವಯಂ ಪ್ರೇರಿತ ದೂರು ದಾಖಲು ಮಾಡಿಕೊಂಡಿತ್ತು. ಅರ್ಜಿ ವಿಚಾರಣೆ ನಡೆಸುವಾಗ ಜಂಟಿ ಸಮಿತಿಯನ್ನು ರಚನೆ ಮಾಡಿ, ವರದಿ ನೀಡುವಂತೆ ಆದೇಶ ನೀಡಿತ್ತು.

ಮತ್ತೆ ಸುದ್ದಿಯಾದ ಮೇಕೆದಾಟು ವಿವಾದ; ಸಮಿತಿ ರಚಿಸಿದ ಎನ್‌ಜಿಟಿ ಮತ್ತೆ ಸುದ್ದಿಯಾದ ಮೇಕೆದಾಟು ವಿವಾದ; ಸಮಿತಿ ರಚಿಸಿದ ಎನ್‌ಜಿಟಿ

ಕರ್ನಾಟಕ ಸರ್ಕಾರ ಪ್ರಧಾನ ಪೀಠಕ್ಕೆ ಈ ಕುರಿತು ಮೇಲ್ಮನವಿ ಸಲ್ಲಿಕೆ ಮಾಡಿತ್ತು. ರಾಜ್ಯದ ಪರವಾಗಿ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ವಾದ ಮಂಡಿಸಿದ್ದರು. ಎನ್‌ಜಿಟಿ ದಕ್ಷಿಣ ಪೀಠ ಸ್ವಯಂ ಪ್ರೇರಣೆಯಿಂದ ದೂರು ದಾಖಲಿಸಿಕೊಂಡು ವಿಚಾರಣೆ ನಡೆಸಲು ಅವಕಾಶವಿಲ್ಲ ಎಂದು ವಾದಿಸಿದ್ದರು.

ಮೇಕೆದಾಟು ಯೋಜನೆ ವಿರೋಧಿಸಿ ಈಗಾಗಲೇ ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಈ ಅರ್ಜಿಯ ವಿಚಾರಣೆ ಇನ್ನೂ ಬಾಕಿ ಇದೆ. ಈ ಕುರಿತು ತಮಿಳುನಾಡು ಸರ್ಕಾರ ಕೇಂದ್ರ ಸರ್ಕಾರಕ್ಕೆ ಸಹ ಪತ್ರ ಬರೆದಿದೆ ಎಂದು ವಾದ ಮಂಡಿಸಿದ್ದರು.

ಕರ್ನಾಟಕ ಸರ್ಕಾರ ಮೇಕೆದಾಟು ಬಳಿ ಕಾವೇರಿ ನದಿಯ ಹೆಚ್ಚುವರಿ ನೀರನ್ನು ತಡೆದು ಬೆಂಗಳೂರು ಮತ್ತು ಸುತ್ತಮುತ್ತಲ ಪ್ರದೇಶಕ್ಕೆ ಕುಡಿಯುವ ನೀರು ಪೂರೈಕೆ ಮಾಡಲು ಯೋಜನೆ ರೂಪಿಸಿದೆ.

ಯೋಜನೆ ಸ್ಥಳದಲ್ಲಿ ಕಾಮಗಾರಿ ಆರಂಭಿಸಿಲ್ಲ. ಯಾವುದೇ ರೀತಿಯ ಅಕ್ರಮಕ್ಕೆ ಅವಕಾಶವಿಲ್ಲ ಎಂದು ಕರ್ನಾಟಕದ ಪರವಾಗಿ ವಾದ ಮಂಡಿಸಲಾಯಿತು. ವಾದ ಅಲಿಸಿದ ನ್ಯಾಯಮೂರ್ತಿ ಆದರ್ಶ ಕುಮಾರ್ ಗೋಯೆಲ್ ನೇತೃತ್ವದ ಪ್ರಧಾನ ಪೀಠ ಚೆನ್ನೈ ಪೀಠ ನೀಡಿದ್ದ ಆದೇಶಕ್ಕೆ ತಡೆ ನೀಡಿತು.

Recommended Video

ಫ್ಲೈಯಿಂಗ್ ಸಿಖ್ Milka Singh ಕೊರೊನಾಗೆ ಬಲಿ | Oneindia Kannada

English summary
National Green Tribunal (NGT) principal bench has stayed the tribunal's Chennai bench order of May 21, 2021. Bench formed committee for spot inspection to find out whether Karnataka has made preparation to build a reservoir at Mekedatu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X