ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಿಸೆಸ್ ಇಂಡಿಯಾ ಕರ್ನಾಟಕ ಮುಕುಟ ಧರಿಸಿದ ಪ್ರಿಯಾಂಕಾ

|
Google Oneindia Kannada News

ಬೆಂಗಳೂರು, ಜೂನ್ 10: ಮಿಸೆಸ್ ಇಂಡಿಯಾ ಕರ್ನಾಟಕ 2019ರ ಫೈನಲ್ ಅದ್ಧೂರಿಯಾಗಿ ನೆರವೇರಿತು.ಅಂತಿಮ ಹಣಾಹಣಿಯಲ್ಲಿ ಪ್ರಿಯಾಂಕ ಮಿಸೆಸ್ ಇಂಡಿಯಾ ಕರ್ನಾಟಕ ಕಿರೀಟ ಮುಡಿಗೇರಿಸಿಕೊಂಡರು.

ನಗರದ ಯಶವಂತಪುರದ ಆರ್ ಜಿ ರಾಯಲ್ ಹೋಟೆಲ್ ಮತ್ತು ಕನ್ವೆನ್‍ಷನ್ ಸೆಂಟರ್‌ನಲ್ಲಿ ಕಾರ್ಯಕ್ರಮ ಜರುಗಿತು.ಮೊದಲ ರನ್ನರ್ ಅಪ್ ಆಗಿ ಅಸ್ಬಾ, ಎರಡನೇ ರನ್ನರ್ ಅಪ್ ಆಗಿ ರಿನಿ ಬೋಪಣ್ಣ, ಮೂರನೇ ರನ್ನರ್ ಅಪ್ ಆಗಿ ಲಾಸ್ಯ, ನಾಲ್ಕನೇ ರನ್ನರ್ ಅಪ್ ಆಗಿ ಶಿವಕನ್ಯಾ ಆಯ್ಕೆಯಾದರು.

ಕೇವಲ ಸೌಂದರ್ಯಕ್ಕಷ್ಟೇ ಈ ಸ್ಪರ್ಧೆ ಸೀಮಿತವಲ್ಲ. ಹೆಣ್ಣಿನೊಳಗೆ ಅಡಗಿರುವ ಅನೇಕ ಕಲೆಯನ್ನ ಅರಿಯುವುದಕ್ಕೆ ಒಂದು ಅತ್ಯುತ್ತಮ ಅವಕಾಶವಾಗಿಯೂ ಈ ಸ್ಪರ್ಧೆ ರೂಪುಗೊಂಡಿದೆ. ಇವರೆಲ್ಲಾ ಕೇವಲ ಮಾಡೆಲ್‍ಗಳಷ್ಟೇ ಅಲ್ಲ.

ಮಿಸಸ್ ಇಂಡಿಯಾ ಸ್ಪರ್ಧೆಗೆ ಆಯ್ಕೆಯಾದ ಕರ್ನಾಟಕದ 10 ಸುಂದರಿಯರು ಮಿಸಸ್ ಇಂಡಿಯಾ ಸ್ಪರ್ಧೆಗೆ ಆಯ್ಕೆಯಾದ ಕರ್ನಾಟಕದ 10 ಸುಂದರಿಯರು

ಇಡೀ ಸ್ತ್ರೀ ಸಮುದಾಯಕ್ಕೆ ರೋಲ್ ಮಾಡೆಲ್‍ಗಳು ಎಂಬುದನ್ನ ತೋರಿಸುವ ನಿಟ್ಟಿನಲ್ಲಿ ಈ ಸ್ಪರ್ಧೆಯನ್ನ ಆಯೋಜಿಸಲಾಗಿದೆ ಎಂದರು ಮಿಸೆಸ್ ಇಂಡಿಯಾ ಕರ್ನಾಟಕ ಸ್ಪರ್ಧೆಯ ಆಯೋಜಕಿ, ನಿರ್ದೇಶಕಿ ಹಾಗೂ ಮಿಸೆಸ್ ಏಶಿಯಾ ಇಂಟರ್‍ನ್ಯಾಷನಲ್ ಪ್ರತಿಭಾ ಸಂಶಿಮಠ.

40-60 ವರ್ಷದ ವಿಭಾಗದಲ್ಲಿ ಡಾ. ಶಿಲ್ಪಾ ವಿಜೇತರು

40-60 ವರ್ಷದ ವಿಭಾಗದಲ್ಲಿ ಡಾ. ಶಿಲ್ಪಾ ವಿಜೇತರು

ಹಾಗೆಯೇ 40ರಿಂದ 60 ವರ್ಷದ ಗೃಹಿಣಿಯರ ಮಿಸೆಸ್ ಇಂಡಿಯಾ ಕ್ಲಾಸಿಕ್ ಸುತ್ತಿನಲ್ಲಿ ಡಾ ಶಿಲ್ಪಾ ವಿಜೇತರಾಗಿ ಆಯ್ಕೆಯಾದರು. ಉಳಿದಂತೆ ಮೊದಲ ರನ್ನರ್ ಅಪ್ ಆಗಿ ವೀಣಾ ಟಿಎಚ್‍ಎಂ, ಎರಡನೇ ರನ್ನರ್ ಅಪ್ ಆಗಿ ವೀಣಾ ಮೈಸೂರು, ಮೂರನೇ ರನ್ನರ್ ಅಪ್ ಆಗಿ ಮಧುಮತಿ ಮತ್ತು ನಾಲ್ಕನೇ ರನ್ನರ್ ಅಪ್ ಆಗಿ ಪ್ರವೀಣಾ ಕುಲಕರ್ಣಿ ಆಯ್ಕೆಯಾದರು.

60 ವರ್ಷದ ಮೇಲ್ಪಟ್ಟವರ ಸುತ್ತಿನಲ್ಲಿ ಜೂಲಿಯಟ್ ವಿನ್ನರ್

60 ವರ್ಷದ ಮೇಲ್ಪಟ್ಟವರ ಸುತ್ತಿನಲ್ಲಿ ಜೂಲಿಯಟ್ ವಿನ್ನರ್

ಇನ್ನು 60ವರ್ಷದ ಮೇಲ್ಪಟ್ಟ ಗೃಹಿಣಿಯರಿಗಾಗಿನ ಸೂಪರ್ ಕ್ಲಾಸಿಕ್ ಸುತ್ತಿನಲ್ಲಿ ಜೂಲಿಯೆಟ್ ಗೆಲುವಿನ ಕಿರೀಟ ಮುಡಿಗೇರಿಸಿಕೊಂಡರು. ಮೊದಲ ರನ್ನರ್ ಅಪ್ ಆಗಿ ತಾರಾ ಬೋಪಯ್ಯ, ಎರಡನೇ ರನ್ನರ್ ಅಪ್ ಆಗಿ ನೀಲಾಂಬಿಕಾ ಮತ್ತು ಮೂರನೇ ರನ್ನರ್ ಅಪ್ ಆಗಿ ಇಂದಿರಾ ಮೆನನ್ ಆಯ್ಕೆಯಾದರು.

ಒಟ್ಟು 46 ಸ್ಪರ್ಧಿಗಳಿದ್ದರು

ಒಟ್ಟು 46 ಸ್ಪರ್ಧಿಗಳಿದ್ದರು

ವಿವಿಧ ಆಕರ್ಷಣೆಗಳನ್ನ ಹೊಂದಿದ್ದ ಮಿಸೆಸ್ ಇಂಡಿಯಾ ಕರ್ನಾಟಕ ಫೈನಲ್‍ನಲ್ಲಿ 46 ಸ್ಪರ್ಧಿಗಳ ಭಾಗವಹಿಸಿದ್ದರು. ಆಡಿಷನ್‍ನಲ್ಲಿ ಭಾಗವಹಿಸಿದ್ದ ನೂರಾರು ಗೃಹಿಣಿಯರಲ್ಲಿ ಅಂತಿಮವಾಗಿ 46 ಜನರನ್ನ ಮಾತ್ರ ಫೈನಲ್‍ಗೆ ಆಯ್ಕೆ ಮಾಡಲಾಗಿತ್ತು. ಕಳೆದ ಎರಡು ದಿನಗಳಿಂದ ನಡೆದ ಫೈನಲ್ ಇವೆಂಟ್ ಮೂರು ಸುತ್ತುಗಳನ್ನ ಒಳಗೊಂಡಿತ್ತು.

ಒಟ್ಟು ಎಷ್ಟು ಸುತ್ತು, ಆಯ್ಕೆ ಹೇಗಿತ್ತು

ಒಟ್ಟು ಎಷ್ಟು ಸುತ್ತು, ಆಯ್ಕೆ ಹೇಗಿತ್ತು

ಸಾಂಸ್ಕೃತಿಕ,ವ್ಯಕ್ತಿಯಾಧಾರಿತ, ವಿಷಯಾಧಾರಿತ,ಸಂದೇಶ ಆಧಾರಿತ ಉಡುಪು ಹೀಗೆ ಸ್ಪರ್ಧಿಗಳ ಆಯ್ಕೆಯ ಅನುಸಾರ ಮೊದಲ ಸುತ್ತನ್ನು ರೂಪಿಸಿತ್ತು. ಎರಡನೇ ಸುತ್ತಿನಲ್ಲಿ ಕ್ರೀಡಾ ಉಡುಪು ಮತ್ತು ಅಂತಿಮ ಸುತ್ತಿನಲ್ಲಿ ಇವನಿಂಗ್ ಗೌನ್ ಆಯ್ಕೆ ನೀಡಿತ್ತು. ಈ ಮೂರು ಸುತ್ತುಗಳಲ್ಲಿಯೂ ಅತ್ಯುತ್ತಮ ಪ್ರತಿಭೆ ತೋರಿದ ಸ್ಪರ್ಧಿಗೆ ವೈಯಕ್ತಿಕ ಟೈಟಲ್ ನೀಡಲಾಯ್ತ.

ಮದುವೆಯಾದ ಮಹಿಳೆಯರಲ್ಲಿನ ಪ್ರತಿಭೆಗೆ ಅತ್ಯುತ್ತಮ ವೇದಿಕೆ ಕಲ್ಪಿಸಿ ಕೊಡುವ ನಿಟ್ಟಿನಲ್ಲಿ ಕಳೆದ ನಾಲ್ಕು ವರ್ಷಗಳಿಂದ ಆರಂಭವಾಗಿರುವ ಮಿಸೆಸ್ ಇಂಡಿಯಾ ಕರ್ನಾಟಕ ಈ ಬಾರಿಯೂ ಮತ್ತಷ್ಟು ಮೆರಗು ತುಂಬಿಕೊಂಡಿತ್ತು. ನಾಡಿನ ಅನೇಕ ಗೃಹಿಣಿಯರಿಗೆ ಆತ್ಮವಿಶ್ವಾಸ ಹಾಗೂ ಹೆಮ್ಮೆ ಪಡುವಂತೆ ಮಾಡುವಲ್ಲಿ ಕಾರ್ಯಕ್ರಮ ಯಶಸ್ವಿಯಾಯಿತು.

ಮಹಿಳೆಗೆ ಸಮಾಜದಲ್ಲಿ ಪ್ರತಿ ಹೆಜ್ಜೆಗೂ ಸವಾಲು

ಮಹಿಳೆಗೆ ಸಮಾಜದಲ್ಲಿ ಪ್ರತಿ ಹೆಜ್ಜೆಗೂ ಸವಾಲು

ಮಹಿಳೆಗೆ ಸಮಾಜದಲ್ಲಿ ಹೆಜ್ಜೆ, ಹೆಜ್ಜೆಗೂ ಹಲವು ಸವಾಲುಗಳು ಎದುರಾಗುತ್ತವೆ. ಸಾಧನೆಯ ಹಾದಿಯಲ್ಲಿ ಆಕೆ ಎದುರಿಸುವ ಸವಾಲುಗಳು ಒಂದೆರೆಡಲ್ಲ. ಅದರಲ್ಲೂ ಮದುವೆಯಾದ ಮಹಿಳೆಗೆ ಸಾಧನೆಯೆಂಬುದು ನಿಜಕ್ಕೂ ಸುಲಭ ಸಾಧ್ಯವಲ್ಲ. ಮನೆ, ಗಂಡ, ಮಕ್ಕಳು ಎಂಬ ಪರಿಧಿಯಿಂದ ಆಕೆ ಆಚೆ ಬಂದು ಇದನ್ನೆಲ್ಲಾ ಯೋಚಿಸುವುದೇ ಕಷ್ಟಸಾಧ್ಯ. ಅಂತಹದ್ದರಲ್ಲಿ ಎಲ್ಲ ಅಡೆತಡೆಗಳನ್ನ ಮೆಟ್ಟಿ ನಿಂತು ಸಮಾಜಕ್ಕೆ ನೆರವಾದ ಹಾಗೂ ಪ್ರೇರಣೆಯಾದ ನಾಡಿನ ಐವರು ಮಹಿಳಾ ಸಾಧಕಿಯರನ್ನ ಕೂಡಾ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯ್ತು.

English summary
The Finale of Mrs India Karnataka 2019 was held at Royal Orchid Resort and Convention Centre on Monday June 10.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X