ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆ.28ರಂದು ಮೆಡಿಕಲ್ ಶಾಪ್ ಬಂದ್

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 19 : ಔಷಧಿ ಅಂಗಡಿಗಳ ಮಾಲೀಕರು ಸೆ.28ರಂದು ಒಂದು ದಿನದ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಮುಷ್ಕರದ ದಿನ ಮೆಡಿಕಲ್ ಶಾಪ್‌ಗಳು ಸಂಪೂರ್ಣವಾಗಿ ಮುಚ್ಚಿರುತ್ತದೆ.

ಅಖಿಲ ಭಾರತ ಔಷಧ ವ್ಯಾಪಾರಿಗಳ ಸಂಘದ (ಎಐಒಸಿಡಿ) ಒಂದು ದಿನದ ಮುಷ್ಕರಕ್ಕೆ ಕರೆ ನೀಡಿದೆ. ದೇಶಾದ್ಯಂತ ಮುಷ್ಕರ ನಡೆಯಲಿದ್ದು, ರಾಜ್ಯದಲ್ಲಿ 20 ಸಾವಿರಕ್ಕೂ ಅಧಿಕ ಮೆಡಿಕಲ್ ಶಾಪ್ ಬಂದ್ ಆಗಲಿದೆ.

ಹಳಿಗಳ ಮೇಲೆ ಆರೋಗ್ಯ: ಬಳ್ಳಾರಿಗೆ ಬಂದ ರೈಲು ಆಸ್ಪತ್ರೆಹಳಿಗಳ ಮೇಲೆ ಆರೋಗ್ಯ: ಬಳ್ಳಾರಿಗೆ ಬಂದ ರೈಲು ಆಸ್ಪತ್ರೆ

ಆನ್‌ಲೈನ್ ಮೂಲಕ ಔಷಧಿಗಳ ಖರೀದಿಗೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿ ಮುಷ್ಕರಕ್ಕೆ ಕರೆ ನೀಡಲಾಗಿದೆ. ಆನ್‌ಲೈನ್ ಮೂಲಕ ಔಷಧ ಖರೀದಿ ನಡೆಯುತ್ತಿದೆ, ಇದರಿಂದ 1.5 ಕೋಟಿ ಅವಲಂಬಿತ ಕುಟುಂಬಗಳು ಆತಂಕಕ್ಕೆ ಸಿಲುಕಿವೆ ಎಂದು ಎಐಒಸಿಡಿ ಹೇಳಿದೆ.

ಸರ್ಕಾರಿ ಮೆಡಿಕಲ್‌ ಸೀಟು ಶುಲ್ಕ ಮೂರು ಪಟ್ಟು ಹೆಚ್ಚಳಸರ್ಕಾರಿ ಮೆಡಿಕಲ್‌ ಸೀಟು ಶುಲ್ಕ ಮೂರು ಪಟ್ಟು ಹೆಚ್ಚಳ

Medical store owners call for strike on September 28

ಆನ್‌ಲೈನ್ ಮೂಲಕ ಔಷಧಿಗಳ ಖರೀದಿ ನಡೆದರೆ ಗುಣಮಟ್ಟ ಮತ್ತು ಬಳಕೆಯ ವಿಧಾನದ ಬಗ್ಗೆ ಜನರಿಗೆ ಮಾಹಿತಿ ಸಿಗುವುದಿಲ್ಲ. ಇದರಿಂದಾಗಿ ರೋಗಿಗಳ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಆಗಬಹುದು ಎಂದು ಸಂಘ ಕಳವಳ ವ್ಯಕ್ತಪಡಿಸಿದೆ.

ಸೊನ್ನೆ ಅಂಕ ಗಳಿಸಿದವರಿಗೂ ಕೊಟ್ಟಿದ್ದಾರೆ ಮೆಡಿಕಲ್ ಸೀಟುಸೊನ್ನೆ ಅಂಕ ಗಳಿಸಿದವರಿಗೂ ಕೊಟ್ಟಿದ್ದಾರೆ ಮೆಡಿಕಲ್ ಸೀಟು

ಸೆ.28ರಂದು ಆಸ್ಪತ್ರೆ, ನರ್ಸಿಂಗ್ ಹೋಂ ಹೊರತು ಪಡಿಸಿ ಉಳಿದ ಕಡೆ ಇರುವ ಎಲ್ಲಾ ಔಷಧಿ ಅಂಗಡಿಗಳು ಬಂದ್ ಆಗಲಿವೆ. ರೋಗಿಗಳಿಗೆ ಈಗಲೇ ಮಾಹಿತಿ ತಿಳಿದಿರಲಿ ಎಂದು ಮುಷ್ಕರದ ದಿನಾಂಕವನ್ನು ಇಂದೇ ಘೋಷಣೆ ಮಾಡಲಾಗಿದೆ.

English summary
Medical store owners across the nation called for strike on September 28, 2018. Owners demand to ban online purchase of medicine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X