ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯ ಬಿಜೆಪಿ ಕೋರ್‌ ಕಮಿಟಿ ಸದಸ್ಯರಿಗೆ ಕೊರೊನಾ ವೈರಸ್ ಭಯ!

|
Google Oneindia Kannada News

ಬೆಂಗಳೂರು, ಜೂ. 06: ಕಳೆದ ಮೂರು ತಿಂಗಳಿನಿಂದ ಇಡೀ ಜಗತ್ತು ಕೊರೊನಾ ವೈರಸ್ ಆತಂಕವನ್ನು ಎದುರಿಸುತ್ತಿದೆ. ಕೊರೊನಾ ವೈರಸ್ ಹರಡದಂತೆ ತಡೆಯಲು ಕೇಂದ್ರ ಬಿಜೆಪಿ ಸರ್ಕಾರ ಇಡೀ ದೇಶಾದ್ಯಂತ ಏಕಾಏಕಿ ಲಾಕ್‌ಡೌನ್ ಜಾರಿ ಮಾಡಿತ್ತು. ಕೋಟ್ಯಂತರ ವಲಸೆ ಕಾರ್ಮಿಕರು ಸಂಕಷ್ಟದಲ್ಲಿ ಸಿಲುಕಿದ್ದರು. ಜೊತೆಗೆ ನೂರಾರು ಕೂಲಿ ಕಾರ್ಮಿಕರು ಕೊರೊನಾ ಬದಲು ಅನ್ಯ ಕಾರಣಗಳಿಂದಲೇ ಜೀವ ಕಳೆದುಕೊಂಡಿದ್ದಾರೆ.

Recommended Video

Sanitizer company claiming to destroy corona fined by high court| Devtol Sanitizer |Oneindia Kannada

ಮೂರು ತಿಂಗಳುಗಳ ಲಾಕ್‌ಡೌನ್‌ ಬಳಿಕ ಇದೀಗ ಕೇಂದ್ರ ಸರ್ಕಾರ ಕೂಡ ಕೊರೊನಾ ವೈರಸ್ ಜೊತೆಗೆ ನಾವು ಬದುಕಬೇಕು ಎಂಬ ತೀರ್ಮಾನಕ್ಕೆ ಬಂದಿದೆ. ಅದೇ ಹಿನ್ನೆಲೆಯಲ್ಲಿ ಲಾಕ್‌ಡೌನ್‌ 5.O ಜಾರಿಯಾಗಿ ಇದೀಗ 6 ದಿನಗಳು ಕಳೆದಿವೆ. ಇಡೀ ದೇಶ ಸಾಮಾಜಿಕ ಅಂತರ ಕಾಯ್ದುಕೊಂಡು ಸಹಜ ಸ್ಥಿತಿಗೆ ಬರಲು ಪ್ರಯತ್ನ ಪಡುತ್ತಿದೆ. ಉಡುಪಿಯಲ್ಲಿ ಮಾತನಾಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರೂ ಕೂಡ ಕೊರೊನಾ ವೈರಸ್‌ ಜೀವನದ ಒಂದು ಭಾಗವಾಗಲಿದೆ ಎಂದಿದ್ದರು. ಆದರೆ ರಾಜ್ಯ ಬಿಜೆಪಿ ನಾಯಕರಿಗೆ ಇದೀದ ಕೊರೊನಾ ವೈರಸ್ ತಗಲುವ ಭಯ ಆವರಿಸಿದೆ!

ಮಲ್ಲೇಶ್ವರದ ರಾಜ್ಯ ಬಿಜೆಪಿ ಕಚೇರಿ

ಮಲ್ಲೇಶ್ವರದ ರಾಜ್ಯ ಬಿಜೆಪಿ ಕಚೇರಿ

ಬೆಂಗಳೂರಿನ ಮಲ್ಲೇಶ್ವರದಲ್ಲಿ ರಾಜ್ಯ ಬಿಜೆಪಿಯ ಕಚೇಯಿದೆ. 5 ಅಂತಸ್ತುಗಳ ಕಟ್ಟಡದಲ್ಲಿ ಕಚೇರಿಯಲ್ಲಿ ಕೆಲಸ ಸಿಬ್ಬಂದಿಯಿಂದ ಹಿಡಿದು ಬಿಜೆಪಿ ರಾಷ್ಟ್ರೀಯ ನಾಯಕರವರೆಗೆ ಎಲ್ಲರೂ ಇರುತ್ತಾರೆ. ನೆಲ ಮಹಡಿಯಲ್ಲಿ ಬಿಜೆಪಿ ನಾಯಕರು, ಕಚೇರಿ ಸಿಬ್ಬಂದಿಗೆ ಅಡುಗೆ ಮನೆ, ಪಾರ್ಕಿಂಗ್ ವ್ಯವಸ್ಥೆಯಿದೆ. ಕಟ್ಟಡದ ಮೊದಲ ಮಹಡಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರು ಕಚೇರಿ, ಪ್ರಧಾನ ಕಾರ್ಯದರ್ಶಿಗಳಿಗೆ ಪ್ರತ್ಯೇಕ ಕಚೇರಿ, ಸ್ವಾತಗ ವಿಭಾಗವಿದೆ.

ಬಿಜೆಪಿ ಭಿನ್ನಮತಕ್ಕೆ ಅಲ್ಪವಿರಾಮ: ಸಿಎಂ ಬಿಎಸ್ವೈ ಮನೆಯಲ್ಲಿ ನಡೆದಿದ್ದೇನು?ಬಿಜೆಪಿ ಭಿನ್ನಮತಕ್ಕೆ ಅಲ್ಪವಿರಾಮ: ಸಿಎಂ ಬಿಎಸ್ವೈ ಮನೆಯಲ್ಲಿ ನಡೆದಿದ್ದೇನು?

2ನೇ ಮಹಡಿಯಲ್ಲಿ ಬಿಜೆಪಿ ಮಾಧ್ಯಮ ವಿಭಾಗವಿದೆ. ಜೊತೆಗೆ ಗ್ರಂಥಾಲಯ, ಅಕೌಂಟ್‌ ವಿಭಾಗ, ವಿವಿಧ ಮೋರ್ಚಾಗಳ ಕಚೇರಿಗಳು ಹಾಗೂ ಬಿಜೆಪಿ ನಾಯಕರು ಸುದ್ದಿಗೋಷ್ಠಿಗಳನ್ನು ನಡೆಸಲು ಸಭಾಂಗಣವಿದೆ. 3ನೇ ಮಹಡಿಯಲ್ಲಿ ಪಂಚಜನ್ಯ ಸಭಾಂಗಣವಿದೆ. ಕಟ್ಟಡದ 4ನೇ ಮಹಡಿನ ಪ್ರಭಾವಿ ಮಹಡಿ. ಅಲ್ಲಿಯ ಕೇಂದ್ರದಿಂದ ಬರುವ ಬಿಜೆಪಿ ನಾಯಕರು ವಾಸ್ತವ್ಯ ಮಾಡುತ್ತಾರೆ. ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ, ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳು ಬಿಜೆಪಿ ಕಚೇರಿಯ 4ನೇ ಮಹಡಿಯಲ್ಲಿಯೆ ವಾಸ್ತವ್ಯ ಮಾಡುತ್ತಾರೆ. ಇನ್ನು 5ನೇ ಮಹಿಡಿಯಲ್ಲಿ ಕಚೇರಿ ಸಿಬ್ಬಂದಿ, ಡ್ರೈವರ್‌ ಹಾಗೂ ಇತರ ಸಿಬ್ಬಂದಿ ವಾಸ್ತವ್ಯ ಮಾಡುತ್ತಾರೆ.

ಮಾಧ್ಯಮ, ಸಾರ್ವಜನಿಕರಿಗೆ ನಿಷೇಧ

ಮಾಧ್ಯಮ, ಸಾರ್ವಜನಿಕರಿಗೆ ನಿಷೇಧ

ಇನ್ನು ಬಿಜೆಪಿ ಕಚೇರಿಯ 3ನೇ ಮಹಡಿಯಲ್ಲಿ ಮಾಧ್ಯಮ ಗೋಷ್ಠಿಗಳನ್ನು ನಡೆಸಲು ಸಭಾಂಗಣವಿದೆ. ಆದರೆ ರಾಜ್ಯ ಬಿಜೆಪಿ ಕೋರ್‌ ಕಮಿಟಿ ಸಭೆ ಸೇರಿದಂತೆ ಬೇರೆ ಯಾವುದೇ ಸಭೆಗಳಿದ್ದರೂ ನೆಲ ಮಹಡಿಯಲ್ಲಿಯೆ ಎಲೆಕ್ಟ್ರಾನಿಕ್, ಪ್ರಿಂಟ್ ಹಾಗೂ ಡಿಜಿಟಲ್ ಮಾಧ್ಯಮ ಪ್ರತಿನಿಧಿಗಳು ಕಾಯುತ್ತಿರುತ್ತಾರೆ. ಗೌಪ್ಯತೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಅದನ್ನು ಬಿಜೆಪಿ ಕಚೇರಿ ಸಿಬ್ಬಂದಿ ಮಾಡುತ್ತಾರೆ. ಇದೀಗ ಅಲ್ಲಿಗೂ ಬರಬೇಡಿ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿಯನ್ನು ರಾಜ್ಯ ಬಿಜೆಪಿ ಕಳಿಸಿದೆ.

ಅಧಿಕೃತವಾಗಿ ಸುದ್ದಿಗೋಷ್ಠಿಗಳಿದ್ದಾಗ ಮಾತ್ರ ಮೊದಲ ಹಾಗೂ ಮೂರನೇ ಮಹಡಿಗೆ ಮಾಧ್ಯಮ ಪ್ರತಿನಿಧಿಗಳಿಗೆ ಪ್ರವೇಶಕ್ಕೆ ಅವಕಾಶವಿರುತ್ತದೆ.

ಜೊತೆಗೆ ರಾಜ್ಯದಾದ್ಯಂತ ಕೊರೋನಾ ವೈರಸ್ ಹಾವಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಂದು ಪಕ್ಷದ ಕಾರ್ಯಾಲಯಕ್ಕೆ ಕಾರ್ಯಕರ್ತರಿಗೆ ಮತ್ತು ಸಾರ್ವಜನಿಕರಿಗೆ ಕಚೇರಿ ಪ್ರವೇಶ ಇರುವುದಿಲ್ಲ ಎಂದು ರಾಜ್ಯ ಬಿಜೆಪಿ ಪ್ರಕಟಣೆ ಹೊರಡಿಸಿದೆ.

ಬಿಜೆಪಿ ನಾಯಕರಿಗೆ ಕೋವಿಡ್ ಭಯ!

ಬಿಜೆಪಿ ನಾಯಕರಿಗೆ ಕೋವಿಡ್ ಭಯ!

ರಾಜ್ಯದಾದ್ಯಂತ ಕೊರೋನಾ ವೈರಸ್ ಹಾವಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಂದು ಸಂಜೆ (ಜೂ.6ರಂದು) ನಡೆಯುತ್ತಿರುವ ಬಿಜೆಪಿ ಕೋರ್ ಕಮಿಟಿ ಸಭೆ ನಂತರ ಮಾಧ್ಯಮದವರಿಗೆ ಮಾಹಿತಿ ನೀಡುವುದಕ್ಕೆ ಅವಕಾಶವಿರುವುದಿಲ್ಲ.

ರಾಜ್ಯಸಭಾ ಚುನಾವಣೆ: ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿಗೆ ಅತಿ ಅಚ್ಚರಿಯ ಎರಡು ಹೆಸರು ಸೇರ್ಪಡೆರಾಜ್ಯಸಭಾ ಚುನಾವಣೆ: ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿಗೆ ಅತಿ ಅಚ್ಚರಿಯ ಎರಡು ಹೆಸರು ಸೇರ್ಪಡೆ

ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾದ ಅನಿವಾರ್ಯತೆ ಇರುವುದರಿಂದ ಪಕ್ಷವು ಈ ನಿರ್ಣಯ ತೆಗೆದುಕೊಂಡಿದೆ. ಮಾಧ್ಯಮದವರು ಸಹಕರಿಸಿಬೇಕೆಂದು ಕೇಳಿಕೊಳ್ಳುತ್ತೇವೆ ಎಂದು ರಾಜ್ಯ ಬಿಜೆಪಿ ಮಾಧ್ಯಮ ವಿಭಾಗ ಪ್ರಕಟಣೆ ಹೊರಡಿಸಿದೆ. ಜೊತೆಗೆ ಪಕ್ಷದ ಕಾರ್ಯಕರ್ತರು ಹಾಗೂ ಸಾರ್ವಜನಿಕರಿಗೂ ಬಿಜೆಪಿ ಕಚೇರಿಗೆ ಪ್ರವೇಶ ಇರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾಧ್ಯಮದವರಿಂದ ತರಾಟೆ

ಮಾಧ್ಯಮದವರಿಂದ ತರಾಟೆ

ಮಾಧ್ಯಮದವರು ಮನುಷ್ಯರು, ಕೊರೊನಾ ವೈರಸ್ ಅಲ್ಲ ಎಂದು ಮಾಧ್ಯಮ ಪ್ರತಿನಿಧಿಗಳು ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಜೊತೆಗೆ ಕೊರೊನಾ ವೈರಸ್‌ನಿಂದ ಬರಿ ಬಿಜೆಪಿ ನಾಯಕರು ಮಾತ್ರ ರಕ್ಷಣೆ ಮಾಡಿಕೊಂಡರೆ ಹೇಗೆ? ಇಡೀ ರಾಜ್ಯಾದ್ಯಂತ ನಿಮ್ಮ ಕಚೇರಿ ನಿಯಮವೇ ಜಾರಿಯಾಗಲಿ. ಎಲ್ಲವನ್ನು ಮತ್ತೆ ಬಂದ್ ಮಾಡಿಸಿ. ಜನಸಾಮಾನ್ಯರ ಜೀವಕ್ಕೆ ಬೆಲೆ ಇದೆಯಲ್ಲ? ಎಂದಿದ್ದಾರೆ.

ಪಕ್ಷದ ಯಾವುದೋ ವ್ಯಕ್ತಿಯ ಅಭಿಪ್ರಾಯ ಮುಖ್ಯವಲ್ಲ ಅನ್ನೋದನ್ನು ಮಾಧ್ಯಮ ಘಟಕ ಅರ್ಥ ಮಾಡಿಕೊಳ್ಳಬೇಕು. ಒಂದು ತಿರ್ಮಾನ ಮಾಡುವಾಗ ಯೋಚನೆ ಮಾಡಿ. ಇವತ್ತು ಉಪದೇಶ ಮಾಡದವನು ಕೆಲವೇ ದಿನಗಳಲ್ಲಿ ಕಳೆದು ಹೋಗುತ್ತಾರೆ. ಆದರೆ ಪಕ್ಷ ಮತ್ತು ಪಕ್ಷದ ಸಾಂಸ್ಥಿಕ ವ್ಯವಸ್ಥೆ ಸದಾ ಇರುತ್ತದೆ. ಸರಿ ತಪ್ಪುಗಳ ಬಗ್ಗೆ ಉಪದೇಶ ಮಾಡೋ ಮಹಾನುಭಾವರಿಗೆ ತಿಳಿಸಿ ಹೇಳಿ. ಇಲ್ಲಾಂದ್ರೆ ಮಾಧ್ಯಮ ಘಟಕ Post office ಆಗಲಿದೆ. ಜವಾಬ್ದಾರಿ ನಡವಳಿಕೆ ಇರಲಿ ಅನ್ನೋದು ನನ್ನ ಅಭಿಪ್ರಾಯ ಎಂದು ಸುದ್ದಿ ಚಾನಲ್‌ವೊಂದರ ಹಿರಿಯ ವರದಿಗಾರರು ತರಾಟೆಗೆ ತೆಗೆದುಕೊಂಡಿದ್ದಾರೆ.

ಜೊತೆಗೆ ಇನ್ನೂ ಹಲವು ಮಾಧ್ಯಮ ಪ್ರತಿನಿಧಿಗಳು ರಾಜ್ಯ ಬಿಜೆಪಿ ತೀರ್ಮಾನವನ್ನು ಖಂಡಿಸಿದ್ದಾರೆ.

ಯಡಿಯೂರಪ್ಪ ಅವರಿಗಿಲ್ಲದ ಭಯ!

ಯಡಿಯೂರಪ್ಪ ಅವರಿಗಿಲ್ಲದ ಭಯ!

ಕೊರೊನಾ ವೈರಸ್ ಬದುಕಿನ ಒಂದು ಭಾಗವಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಉಡುಪಿಯಲ್ಲಿ ಹೇಳಿಕೆ ಕೊಟ್ಟಿದ್ದರು. ಆದರೆ ಮಾಧ್ಯಮ ಹಾಗೂ ಸಾರ್ವಜನಿಕರು ಬಿಜೆಪಿ ಕಚೇರಿಗೆ ಹೋದರೆ ಕೊರೊನಾ ವೈರಸ್ ತಗಲುತ್ತದೆ ಎಂಬ ಭಾವನೆ ರಾಜ್ಯದ ಜನರಲ್ಲಿ ಬರುವಂತಹ ಸಂದೇಶವನ್ನು ಬಿಜೆಪಿ ಕೊಟ್ಟಿದೆ.

ಜೊತೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ಕಾಳಿಟ್ಟ ದಿನದಿಂದಲೇ ಸಾಮಾಜಿಕ ಅಂತರ ಕಾಯ್ದುಕೊಂಡು ಸತತವಾಗಿ ಸಭೆಗಳನ್ನು, ಸುದ್ದಿಗೋಷ್ಠಿಗಳನ್ನು ಮಾಡಿದ್ದಾರೆ, ಮಾಡುತ್ತಿದ್ದಾರೆ. ಅವರಿಗೆ ಇಲ್ಲದ ಆತಂಕ ಉಳಿದ ಬಿಜೆಪಿ ನಾಯಕರಿಗೆ ಬಂದಿದ್ದು ಯಾಕೆ? ಕೊರೊನಾ ವೈರಸ್ ಹರಡುವುದನ್ನು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಸ್ಯಾನಿಟೈಸರ್ ಬಳಕೆ, ಮಾಸ್ಕ್‌ ಬಳಕೆಯಿಂದ ತಡೆಯಬಹುದು ಎಂಬುದು ಉಳಿದ ಬಿಜೆಪಿ ನಾಯಕರಿಗೆ ಗೊತ್ತಿಲ್ಲವಾ? ಗೊತ್ತಿರದೆ ಇದ್ದರೆ ಸೂಕ್ತ ತಿಳಿವಳಿಕೆ ಇರುವವರಿಂದ ಅವರಿಗೆ ಮಾಹಿತಿ ಕೊಡಿಸಿ ಎಂದು ಸಾರ್ವಜನಿಕರು ಆಗ್ರಹಿಸಿ, ರಾಜ್ಯ ಬಿಜೆಪಿಯ ನಡೆಯನ್ನು ಖಂಡಿಸಿದ್ದಾರೆ.

English summary
The announcement was made by the state BJP office blocking the public and the media in the wake of the coronavirus outbreak.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X