ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಿಟೂ: ಅರ್ಜುನ್‌ ಸರ್ಜಾ-ಶೃತಿ ಹರಿಹರನ್ ನಡುವೆ ಸಂಧಾನ ವಿಫಲ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 25: ಕನ್ನಡ ಚಿತ್ರ ನಟಿ ಶೃತಿ ಹರಿಹರನ್‌ ಅವರು ಹಿರಿಯ ನಟ ಅರ್ಜುನ್‌ ಸರ್ಜಾ ಅವರ ಮೇಲೆ ಮಾಡಿದ್ದ ಲೈಂಗಿನ ದೌರ್ಜನ್ಯ ಆರೋಪ ವಿವಾದ ಕುರಿತು ಇಂದು ಕನ್ನಡ ಫಿಲ್ಮ್‌ ಛೇಂಬರ್‌ನಲ್ಲಿ ಆಯೋಜಿಸಿದ್ದ ಸಂಧಾನ ಸಭೆ ಫಲಪ್ರದವಾಗಿಲ್ಲ.

ಹಿರಿಯ ನಟ ಅಂಬರೀಶ್, ಫಿಲ್ಮ್‌ ಚೇಂಬರ್‌ ಅಧ್ಯಕ್ಷ ಚಿನ್ನೇಗೌಡ, ನಿರ್ಮಾಪಕರ ಸಂಘದ ಮುನಿರತ್ನ, ರಾಕ್‌ಲೈನ್ ವೆಂಕಟೇಶ್, ಸಾ.ರಾ.ಗೋವಿಂದ್ ಅವರ ನೇತೃತ್ವದಲ್ಲಿ ಸಂಧಾನ ಸಭೆ ಆಯೋಜಿಸಲಾಗಿತ್ತು. ಅದರಲ್ಲಿ ಶೃತಿ ಹರಿಹರನ್ ಹಾಗೂ ಅರ್ಜುನ್ ಸರ್ಜಾ ಇಬ್ಬರೂ ಭಾಗವಹಿಸಿದ್ದರು.

ಶ್ರುತಿ ವಿರುದ್ಧ ಅರ್ಜುನ್ 5 ಕೋಟಿ ರು. ಆಗ್ರಹಿಸಿ ಮಾನನಷ್ಟ ಮೊಕದ್ದಮೆ ಶ್ರುತಿ ವಿರುದ್ಧ ಅರ್ಜುನ್ 5 ಕೋಟಿ ರು. ಆಗ್ರಹಿಸಿ ಮಾನನಷ್ಟ ಮೊಕದ್ದಮೆ

ಪ್ರಕರಣ ಈಗಾಗಲೇ ನ್ಯಾಯಾಲಯದ ಮೆಟ್ಟಿಲು ಏರಿಬಿಟ್ಟಿದೆ ಹಾಗಾಗಿ ಕೂಲಂಕುಷವಾಗಿ ನಾವು ಮಾತುಕತೆ ನಡೆಸಿದ್ದೇವೆ. ಇಬ್ಬಿರಿಗೂ ತಮ್ಮ ಅಭಿಪ್ರಾಯ ತಿಳಿಸಲು ಕಾಲಾವಕಾಶ ನೀಡಿದ್ದೇವೆ ಎಂದು ಸಂಧಾನ ಸಭೆ ಬಳಿಕ ಅಂಬರೀಶ್ ಅವರು ಹೇಳಿದರು.

Me too Negotiation between Shruthi Hariharan and Arjun Sarja failed

ಇಬ್ಬರೂ ಪರಸ್ಪರ ವಿವಾದ ಮರೆತು ಅನ್ಯೋನ್ಯದಿಂದ ಹೋಗಲಿ ಎಂಬ ಉದ್ದೇಶದಿಂದ ಈ ಸಂಧಾನ ಸಭೆ ಆಯೋಜಿಸಲಾಗಿತ್ತು. ಇಬ್ಬರೂ ತಮ್ಮ ಪರವಾದ ವಾದಗಳನ್ನು ಮಂಡಿಸಿದರು ಹಾಗಾಗಿ, ಇಬ್ಬರೂ ಇನ್ನಷ್ಟು ಸಮಯ ಪಡೆದು ಕುಟುಂಬದ ಜೊತೆ ಚರ್ಚಿಸಿ ಉತ್ತಮ ನಿರ್ಣಯಕ್ಕೆ ಬನ್ನಿ' ಎಂದು ಸಲಹೆ ನೀಡಿದ್ದಾಗಿ ಹೇಳಿದ್ದರು.

ಅರ್ಜುನ್ ವ್ಯಕ್ತಿತ್ವಕ್ಕೆ ಧಕ್ಕೆ ತರಲು ಸಂಚು : ಶ್ರುತಿ ವಿರುದ್ಧ ಕ್ರಿಮಿನಲ್ ದೂರು ಅರ್ಜುನ್ ವ್ಯಕ್ತಿತ್ವಕ್ಕೆ ಧಕ್ಕೆ ತರಲು ಸಂಚು : ಶ್ರುತಿ ವಿರುದ್ಧ ಕ್ರಿಮಿನಲ್ ದೂರು

ಪ್ರಿಯಾಂಕ ಉಪೇಂದ್ರ ಅವರು ಫೈರ್‌ ಕಮಿಟಿಗೆ ರಾಜೀನಾಮೆ ನೀಡಿದ್ದಾರೆ ಅದು ಫೈರ್‌ ಕಮಿಟಿ ಸರಿ ಇಲ್ಲ ಎಂಬುದನ್ನು ತೋರಿಸುತ್ತದೆ ಎಂದ ಅಂಬರೀಶ್ ಅವರು ಚೇತನ್‌ ನೇತೃತ್ವದ ಫೈರ್‌ ಕಮಿಟಿ ವಿರುದ್ಧ ಅಸಮಾಧಾನ ಹೊರಹಾಕಿದರು.

English summary
Kannada film chamber today arranged a negotiation between Shruthi Hariharan and Arjun Sarja who both were center of news from few days. Shruthi alleged that Arjun Sarja sexual harassed her two years back.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X