• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಯಡಿಯೂರಪ್ಪಗೆ ಬಂಡಾಯಗಾರರ ಖಡಕ್ ಪ್ರಶ್ನಾವಳಿ

By Srinath
|

ಬೆಂಗಳೂರು, ಮಾರ್ಚ್ 5: ಇದು ಬಿಜೆಪಿಗೆ ನಿರೀಕ್ಷಿತವೇ. ಆದರೆ ತೀರಾ ಲೋಕಸಭೆ ಚುನಾವಣೆ ಘೋಷಣೆಯಾಗುವ ಸಮಯದಲ್ಲಿ ಕಾಡತೊಡಗಿದೆ. ಈಗಾಗಲೇ ಮೂಲ ಬಿಜೆಪಿಯಲ್ಲೇ ಒಂದಷ್ಟು ಮನಸುಗಳು ವೈಮನಸ್ಸು ತುಂಬಿಕೊಂಡಿವೆ. ಭಿನ್ನಮತದ ಹೊಗೆ ಸೂಸುತ್ತಿವೆ. ಅಂತಹುದರಲ್ಲಿ ಪಕ್ಷ ಬಿಟ್ಟು ಹೋಗಿ, ಮತ್ತೆ ಪಕ್ಷಕ್ಕೆ ಸೇರ್ಪಡೆಯಾಗಿರುವವರೂ ತಮ್ಮಶಕ್ತ್ಯಾನುಸಾರ ಬಿಜೆಪಿಗೆ ಮತ್ತು ಬಿಎಸ್ ಯಡಿಯೂರಪ್ಪಗೆ ತಲೆ ಬಿಸಿ ಮಾಡಲಾರಂಭಿಸಿದ್ದಾರೆ.

ಮುಖ್ಯವಾಗಿ ಯಡಿಯೂರಪ್ಪ ಅವರ ಜತೆ ಅನುಕ್ಷಣವೂ ನಿಂತಿದ್ದು, ನಿಷ್ಠೆಯ ಪರಮಾವಧಿ ಮೆರೆದ ಪ್ರಮುಖರನ್ನು ಯಡಿಯೂರಪ್ಪ ಕಡೆಗಣಿಸಿದ್ದಾರೆ ಎಂಬುದು ಒಂದು ಕೂಗು. ಅಷ್ಟೇ ಜೋರಾದ ಕೂಗು ಅಂದರೆ ಇಂತಹವರನ್ನು ನಿರ್ಲಕ್ಷಿಸಿ ಬೇರೆಯದೆ ಗುಂಪುಗೆ ಮಣೆ ಹಾಕಿರುವುದು ಈ ಪ್ರಮುಖರನ್ನು ಕೆರಳಿಸಿದೆ. (ದೇಶದ ಹಿತಕ್ಕಾಗಿ ಷರತ್ತಿಲ್ಲದೆ ಮರಳುತ್ತಿದ್ದೇನೆ: BSY)

ಅಂತಹವರಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳುವವರು ಧನಂಜಯ್ ಕುಮಾರ್. ಲೆಹರ್ ಸಿಂಗ್ ಮತ್ತು ಎಂಡಿ ಲಕ್ಷ್ಮಿನಾರಾಯಣ. ವೇಣೂರು ಧನಂಜಯ್ ಕುಮಾರ್ ಆಳ್ವಾ ಅವರು ಈಗಾಗಲೇ ಬಂಡಾಯವೆದ್ದು, ಯಡಿಯೂರಪ್ಪ ವಿರುದ್ಧ ಮಾತನಾಡಿದ್ದು ಮುಗಿದ ವಿಚಾರವಾಗಿದೆ. ಇದೀಗ, ಯಡಿಯೂರಪ್ಪ ಅವರು ಧನಂಜಯ್ ಕುಮಾರ್ ಅವರ ಕಿವಿ ಹಿಂಡಿದ್ದು, ಇಂದೋ/ನಾಳೆಯೋ ಧನಂಜಯ್ ಬಿಜೆಪಿಗೆ ಮರಳುವುದು ನಿಕ್ಕಿಯಾಗಿದೆ.

ಆದರೆ ಎಂಡಿ ಲಕ್ಷ್ಮಿನಾರಾಯಣರು ಭಿನ್ನ ದಾರಿ ತುಳಿದಿದ್ದಾರೆ. ಅವರು ಧನಂಜಯ್ ಅವರಂತೆ ಬಾಯಿಮಾತಿಗೆ ಧನಂಜಯ್ ವಿರುದ್ಧ ಹರಿಹಾಯ್ದಿಲ್ಲ. ಜತೆಗೆ, ಒಂದಷ್ಟು ಪ್ರಶ್ನೆಗಳನ್ನು ಕೇಳಿ, ಯಡಿಯೂರಪ್ಪ ಅವರನ್ನು ಸಾರ್ವಜನಿಕವಾಗಿ ಇಕ್ಕಟ್ಟಿಗೆ ಸಿಲುಕಿಸಿದೆ. ಯಡಿಯೂರಪ್ಪ ಎದುರಾಳಿಗಳನ್ನೂ ಬಹುಶಃ ಇದೇ ಪ್ರಶ್ನೆಗಳು ಕಾಡುತ್ತಿರಬಹುದು. ವಿಧಾನಪರಿಷತ್ ಸದಸ್ಯ ಎಂಡಿ ಲಕ್ಷ್ಮೀನಾರಾಯಣ ಅವರು ಎತ್ತಿರುವ ಮೂಲಭೂತ ಪ್ರಶ್ನೆಗಳು ಇಂತಿವೆ. ಅಂದಹಾಗೆ, ಯಡಿಯೂರಪ್ಪ ಅವರು ನಗರದಲ್ಲಿ ಇಲ್ಲ. ಹಾಗಾಗಿ, ಡಾಲರ್ಸ್ ಕಾಲೊನಿಯಲ್ಲಿರುವ ಅವರ ಮನೆಗೆ MDL ಮಂಗಳವಾರ ಪತ್ರ ತಲುಪಿಸಿ ಬಂದಿದ್ದಾರೆ.

ಯಡಿಯೂರಪ್ಪ ಜತೆಗೆ ಕೆಜಿಪಿ ಬಂಡಾಯವೂ ಬಿಜೆಪಿಗೆ

ಯಡಿಯೂರಪ್ಪ ಜತೆಗೆ ಕೆಜಿಪಿ ಬಂಡಾಯವೂ ಬಿಜೆಪಿಗೆ

ಯಾವುದೇ ಸ್ಥಾನ ಬೇಡ ಎನ್ನುತ್ತಿದ್ದ ನೀವೇ ಮೊದಲು ಲೋಕಸಭಾ ಅಭ್ಯರ್ಥಿ ಎಂದು, ಕೇಂದ್ರದಲ್ಲಿ ಕೃಷಿ ಮಂತ್ರಿ ಎಂದು ಹೇಳಿಕೊಂಡಿದ್ದು ಎಷ್ಟು ಸರಿ?

ಬಿಎಸ್‌ವೈ ಜತೆಗೆ ಕೆಜಿಪಿ ಬಂಡಾಯವೂ ಬಿಜೆಪಿಗೆ ಸೇರ್ಪಡೆ

ಬಿಎಸ್‌ವೈ ಜತೆಗೆ ಕೆಜಿಪಿ ಬಂಡಾಯವೂ ಬಿಜೆಪಿಗೆ ಸೇರ್ಪಡೆ

ಬೆನ್ನಿಗೆ ಚೂರಿ ಹಾಕಿದ ಬಿಜೆಪಿಯನ್ನು ಮುಗಿಸುವುದೇ ನನ್ನ ಗುರಿ ಎನ್ನುತ್ತಿದ್ದ ನೀವು ಬಿಜೆಪಿಗೆ ಏಕಾಏಕಿ ಶರಣಾಗಲು ಕಾರಣವೇನು?

ಬಿಜೆಪಿ ಸೇರಿದ್ದು ಮನಸ್ಸಿಗೆ ಸಮಾಧಾನ ತಂದಿದೆಯೇ?

ಬಿಜೆಪಿ ಸೇರಿದ್ದು ಮನಸ್ಸಿಗೆ ಸಮಾಧಾನ ತಂದಿದೆಯೇ?

ಜಾತ್ಯಾತೀತ ಪ್ರಾದೇಶಿಕ ಪಕ್ಷ ಸ್ಥಾಪಿಸುವುದಾಗಿ ನಂಬಿಸಿ ನೂರಾರು ಜನ ನಾಯಕರನ್ನು ಪಕ್ಷಕ್ಕೆ ಸೇರಿಸಿಕೊಂಡು ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಬಿಜೆಪಿ ಸೇರಿದ್ದು ನಿಮ್ಮ ಮನಸ್ಸಿಗೆ ಸಮಾಧಾನ ತಂದಿದೆಯೇ?

ಯಡಿಯೂರಪ್ಪಗೆ ಬಂಡಾಯಗಾರರ ಖಡಕ್ ಪ್ರಶ್ನಾವಳಿ

ಯಡಿಯೂರಪ್ಪಗೆ ಬಂಡಾಯಗಾರರ ಖಡಕ್ ಪ್ರಶ್ನಾವಳಿ

ಪ್ರಾಣಕ್ಕೆ ಪ್ರಾಣ ಕೊಟ್ಟು ನಿಮ್ಮ ಬೆಂಬಲಕ್ಕೆ ನಿಂತವರಿಂದ ಮಂತ್ರಿ, ಶಾಸಕ ಮತ್ತು ವಿಧಾನಪರಿಷತ್ ಸ್ಥಾನಕ್ಕೆ ರಾಜೀನಾಮೆ ಕೊಡಿಸಿದಿರಿ. ಈಗ ಅವರನ್ನು ಬೀದಿಪಾಲು ಮಾಡಿದ್ದು ನ್ಯಾಯಸಮ್ಮತವೇ?

 ಯಡಿಯೂರಪ್ಪಗೆ ಎಂಡಿ ಲಕ್ಷ್ಮಿನಾರಾಯಣ ಖಡಕ್ ಪ್ರಶ್ನಾವಳಿ

ಯಡಿಯೂರಪ್ಪಗೆ ಎಂಡಿ ಲಕ್ಷ್ಮಿನಾರಾಯಣ ಖಡಕ್ ಪ್ರಶ್ನಾವಳಿ

ಲೋಕಸಭಾ ಚುನಾವಣೆಗೆ ಸಿದ್ಧರಾಗುವಂತೆ 11 ನಾಯಕರಿಗೆ ಸೂಚಿಸಿ, ಕೊನೆಯ ಹಂತದಲ್ಲಿ ಅವರಿಗೆ ಮುಖಭಂಗ ಮಾಡಿರುವುದು ಸರಿಯೇ?

ಬೆಂಬಲಿಗರ ಪರವಾಗಿ ನಿಲ್ಲದಿರಲು ಕಾರಣಗಳೇನು?

ಬೆಂಬಲಿಗರ ಪರವಾಗಿ ನಿಲ್ಲದಿರಲು ಕಾರಣಗಳೇನು?

ಬಿಜೆಪಿ ಸೇರಿದ ಮೇಲೆ ನಿಮ್ಮ ಬೆಂಬಲಿಗರ ಪರವಾಗಿ ನಿಲ್ಲದಿರಲು ಕಾರಣಗಳೇನು?

ಶೋಭಾ, ಸಿಎಂ ಉದಾಸಿಗೆ ಚುನಾವಣೆ ಸಮಿತಿಯಲ್ಲಿ ಸ್ಥಾನ ಏಕೆ?

ಶೋಭಾ, ಸಿಎಂ ಉದಾಸಿಗೆ ಚುನಾವಣೆ ಸಮಿತಿಯಲ್ಲಿ ಸ್ಥಾನ ಏಕೆ?

ಬಿಜೆಪಿಗೆ ಹೋದ ಮೇಲೆ ನಿಮ್ಮ ಬೆಂಬಲಿಗರಿಗೆ ಸೂಕ್ತ ಸ್ಥಾನಮಾನ ಕೊಡಿಸುವ ಭರವಸೆ ನೀಡಿದ್ದಿರಿ. ಆದರೆ ಶೋಭಾ ಕರಂದ್ಲಾಜೆ ಮತ್ತು ಸಿಎಂ ಉದಾಸಿಗೆ ಚುನಾವಣೆ ಸಮಿತಿಯಲ್ಲಿ ಸ್ಥಾನ ಕೊಡಿಸಿ, ಉಳಿದವರಿಗೆ ಕೈಕೊಡಲು ಕಾರಣವೇನು?

ಕೆಜೆಪಿ ಕಟ್ಟಿದ್ದೇ ದೊಡ್ಡ ತಪ್ಪು

ಕೆಜೆಪಿ ಕಟ್ಟಿದ್ದೇ ದೊಡ್ಡ ತಪ್ಪು

ಕೆಜೆಪಿ ಕಟ್ಟಿದ್ದೇ ದೊಡ್ಡ ತಪ್ಪು. ಕೆಜೆಪಿ ಒಂದು ಕೆಟ್ಟ ಕನಸು. ಅದನ್ನು ಮರೆತುಬಿಡಿ ಎಂದು ಹೇಳುತ್ತಿರುವುದು ಎಷ್ಟು ಸರಿ?

ಶೋಭಾ ಕರಂದ್ಲಾಜೆ ದಿಢೀರ್ ಲೋಕಸಭಾ ಚುನಾವಣೆಗೆ?

ಶೋಭಾ ಕರಂದ್ಲಾಜೆ ದಿಢೀರ್ ಲೋಕಸಭಾ ಚುನಾವಣೆಗೆ?

ಶೋಭಾ ಕರಂದ್ಲಾಜೆ ಅವರನ್ನು ದಿಢೀರನೆ ಲೋಕಸಭಾ ಚುನಾವಣಾ ಕಣಕ್ಕಿಳಿಸಲು ಏನು ಕಾರಣ?

ಬೆಂಬಲಿಗರ ಪರವಾಗಿ ಹೋರಾಟ ಮಾಡದಿರಲು ಕಾರಣವೇನು?

ಬೆಂಬಲಿಗರ ಪರವಾಗಿ ಹೋರಾಟ ಮಾಡದಿರಲು ಕಾರಣವೇನು?

ಸಂಸದ ಜಿ ಎಲ್ ಬಸವರಾಜು, ವಿ ಧನಂಜಯ ಕುಮಾರ್, ಶಂಕರಗೌಡ, ರಾಜೇಂದ್ರಗೋಖಲೆ, ಲೆಹರ್ ಸಿಂಗ್ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಬಿಜೆಪಿ ಮುಖಂಡರು ಹೇಳಿದ್ದರೂ ಅವರ ಪರವಾಗಿ ಹೋರಾಟ ಮಾಡದಿರಲು ಕಾರಣವೇನು?

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
BS Yeddyurappa's trusted lieutenant BJP Upper House Member MD Lakshminarayana is unhappy with the ex Chief Minister. As such he has sent some questions (questing his loyalty) to BSY in Bangalore on March 4. Here are some of those questions. He wanted to know why Yeddyurappa had hurriedly joined the BJP without consulting KJP office-bearers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more