ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಲ್ಲಿ ಎಂಬಿಬಿಎಸ್, ಡೆಂಟಲ್ ಕೋರ್ಸ್ ಶುಲ್ಕ ಶೇ.10ರಷ್ಟು ಏರಿಕೆ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್‌ 25: ಕರ್ನಾಟಕ ಸರ್ಕಾರವು ಶುಲ್ಕದಲ್ಲಿ ಪದವಿಪೂರ್ವ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳಿಗೆ ಈ ಶೈಕ್ಷಣಿಕ ವರ್ಷದಲ್ಲಿ ಶೇಕಡಾ 10 ರಷ್ಟು ಹೆಚ್ಚಳವನ್ನು ಅನುಮೋದಿಸಿದ್ದು, ವೈದ್ಯಕೀಯ ಕೋರ್ಸ್‌ ಶುಲ್ಕ ಈ ಬಾರಿ ಮತ್ತಷ್ಟು ದುಬಾರಿಯಾಗಲಿದೆ.

ಶುಕ್ರವಾರ ಖಾಸಗಿ ವೈದ್ಯಕೀಯ ಕಾಲೇಜುಗಳ ಪ್ರತಿನಿಧಿಗಳೊಂದಿಗೆ ನಡೆದ ಸಭೆಯಲ್ಲಿ ಶುಲ್ಕ ಹೆಚ್ಚಳಕ್ಕೆ ನಿರ್ಧರಿಸಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಇಲಾಖೆಯ ಮೂಲಗಳು ಖಚಿತಪಡಿಸಿವೆ. ಈ ಹೆಚ್ಚಳದಿಂದ, ಖಾಸಗಿ ಕಾಲೇಜುಗಳಲ್ಲಿ ಸರ್ಕಾರಿ ಕೋಟಾದ ಸೀಟುಗಳ ಅಡಿಯಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳು 12,884 ರೂಪಾಯಿಗಳನ್ನು ಹೆಚ್ಚು ಪಾವತಿಸಬೇಕಾಗುತ್ತದೆ. ಹೀಗಾಗಿ ಶುಲ್ಕವು ವರ್ಷಕ್ಕೆ 1,41,630 ರೂ. ಆಗುತ್ತದೆ.

Breaking: ಚಿಕ್ಕಮಗಳೂರು ವೈದ್ಯಕೀಯ ಕಾಲೇಜಲ್ಲಿ 150ಎಂಬಿಬಿಎಸ್ ಸೀಟು ಆರಂಭBreaking: ಚಿಕ್ಕಮಗಳೂರು ವೈದ್ಯಕೀಯ ಕಾಲೇಜಲ್ಲಿ 150ಎಂಬಿಬಿಎಸ್ ಸೀಟು ಆರಂಭ

ಖಾಸಗಿ ಕಾಲೇಜುಗಳಲ್ಲಿ ಸರ್ಕಾರಿ ಕೋಟಾದ ಎಂಬಿಬಿಎಸ್ ಸೀಟುಗಳಿಗೆ ಈಗಿರುವ ಶುಲ್ಕ 1,28,746 ರೂ. ಆಗಿದೆ. ಖಾಸಗಿ ಕಾಲೇಜುಗಳು ಶೇ. 40ರಷ್ಟು ಎಂಬಿಬಿಎಸ್ ಸೀಟುಗಳನ್ನು ಸರ್ಕಾರಕ್ಕೆ ನೀಡುತ್ತವೆ. ದಂತ ವೈದ್ಯಕೀಯ, ಖಾಸಗಿ ಕಾಲೇಜುಗಳು ಶೇ.35ರಷ್ಟು ಸೀಟುಗಳನ್ನು ಸರ್ಕಾರಕ್ಕೆ ನೀಡುತ್ತವೆ. ಕಾಲೇಜುಗಳು ಕಾರ್ಯಾಚರಣೆ ವೆಚ್ಚದಲ್ಲಿ ತೊಂದರೆಯನ್ನು ಉಲ್ಲೇಖಿಸಿ 15 ಪ್ರತಿಶತ ಹೆಚ್ಚಳಕ್ಕೆ ಒತ್ತಾಯಿಸಿದ್ದವು. 2021- 22ರಲ್ಲಿ ಯಾವುದೇ ಶುಲ್ಕ ಹೆಚ್ಚಳವಾಗಿಲ್ಲ. ಆದರೆ ಬೋಧಕ ಸಿಬ್ಬಂದಿಗೆ ವೇತನ ಶ್ರೇಣಿಯನ್ನು ಹೆಚ್ಚಿಸಲಾಗಿದೆ ಎಂದು ತಿಳಿದು ಬಂದಿದೆ.

ಆದರೆ, ಸರ್ಕಾರ ಅವರ ಬೇಡಿಕೆಯನ್ನು ತಿರಸ್ಕರಿಸಿ ಶೇ.10 ಹೆಚ್ಚಳಕ್ಕೆ ಮನವರಿಕೆ ಮಾಡಿತು. ಕಳೆದ ವರ್ಷ, ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ, ನಾವು ಮಾನವೀಯ ಆಧಾರದ ಮೇಲೆ ಶುಲ್ಕ ಹೆಚ್ಚಳಕ್ಕೆ ಒತ್ತಾಯಿಸಲಿಲ್ಲ. ಈ ವರ್ಷ ನಾವು 15 ಶೇಕಡಾ ಹೆಚ್ಚಳಕ್ಕೆ ಒತ್ತಾಯಿಸಿದ್ದೇವೆ. ಆದರೆ, ಸರ್ಕಾರವು ಶೇಕಡಾ 10 ಕ್ಕೆ ಒಪ್ಪಿಗೆ ನೀಡಿದೆ" ಎಂದು ಖಾಸಗಿ ಕಾಲೇಜು ಆಡಳಿತ ಮಂಡಳಿ ಸದಸ್ಯರೊಬ್ಬರು ಹೇಳಿದರು.

ಔಪಚಾರಿಕವಾಗಿ ಘೋಷಣೆ ಮಾಡಲಿದ್ದಾರೆ ಸಿಎಂ

ಔಪಚಾರಿಕವಾಗಿ ಘೋಷಣೆ ಮಾಡಲಿದ್ದಾರೆ ಸಿಎಂ

ಮೂಲಗಳ ಪ್ರಕಾರ, ಒಮ್ಮತದ ಒಪ್ಪಂದಕ್ಕೆ ಸೋಮವಾರ ಸಹಿ ಹಾಕಲಾಗುವುದು. ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಥವಾ ವೈದ್ಯಕೀಯ ಶಿಕ್ಷಣ ಸಚಿವ ಕೆ ಸುಧಾಕರ್ ಅವರು ಹೊಸ ಶುಲ್ಕ ರಚನೆಯನ್ನು ಔಪಚಾರಿಕವಾಗಿ ಘೋಷಿಸಲಿದ್ದಾರೆ. ಸರ್ಕಾರಿ ಕಾಲೇಜುಗಳಲ್ಲಿ ಶುಲ್ಕ ಕಳೆದ ವರ್ಷದಂತೆಯೇ 59,800 ರೂ. ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ 2018-19ರಲ್ಲಿ ಕೊನೆಯ ಬಾರಿ ಶುಲ್ಕ ಹೆಚ್ಚಳವಾಗಿದ್ದು, ಅದು 16,700 ರೂ.ನಿಂದ 59,800 ರೂ. ಆಗಿದೆ.

ಎಂಬಿಬಿಎಸ್ ಸೀಟು ಕೊಡಿಸುವುದಾಗಿ ನಂಬಿಸಿ ವೈದ್ಯನಿಗೆ 1.16 ಕೋಟಿ ರೂ. ವಂಚನೆಎಂಬಿಬಿಎಸ್ ಸೀಟು ಕೊಡಿಸುವುದಾಗಿ ನಂಬಿಸಿ ವೈದ್ಯನಿಗೆ 1.16 ಕೋಟಿ ರೂ. ವಂಚನೆ

ಖಾಸಗಿ ಕೋಟದಲ್ಲಿ 9,81,956 ರು.

ಖಾಸಗಿ ಕೋಟದಲ್ಲಿ 9,81,956 ರು.

ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಸರ್ಕಾರಿ ಕೋಟಾ ಎಂಬಿಬಿಎಸ್ ಸೀಟುಗಳು 1,28,746 ರೂ. ಆಗಿದೆ. ಖಾಸಗಿ ಕಾಲೇಜುಗಳಲ್ಲಿ ಖಾಸಗಿ ಕೋಟಾ ಎಂಬಿಬಿಎಸ್‌ ಸೀಟುಗಳು ರೂ 9,81,956 ಆಗಿದೆ. ಇದೇ ಖಾಸಗಿ ಕಾಲೇಜುಗಳಲ್ಲಿ ಸರ್ಕಾರಿ ಕೋಟಾದ ದಂತ ವೈದ್ಯಕೀಯ ಸೀಟುಗಳು: 83,356 ರೂಪಾಯಿಯಾದರೆ ಖಾಸಗಿ ಕಾಲೇಜುಗಳಲ್ಲಿ ಖಾಸಗಿ ಕೋಟಾದ ದಂತ ವೈದ್ಯಕೀಯ ಸೀಟುಗಳು ರೂ 6,66,023 ಆಗಿದೆ.

ಸೆಪ್ಟೆಂಬರ್‌ನಲ್ಲಿ ಹೆಚ್ಚಳಕ್ಕೆ ಅನುಮೋದನೆ

ಸೆಪ್ಟೆಂಬರ್‌ನಲ್ಲಿ ಹೆಚ್ಚಳಕ್ಕೆ ಅನುಮೋದನೆ

ಜನವರಿಯಲ್ಲಿ ಪ್ರಸಕ್ತ ಸಾಲಿನ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಪದವಿ ಕೋರ್ಸ್ ಶುಲ್ಕವನ್ನು ಹೆಚ್ಚಳ ಮಾಡಲಾಗುತ್ತಿದೆ ಎಂಬ ಗೊಂದಲಗಳಿಗೆ ಸರ್ಕಾರ ತೆರೆ ಎಳೆದು ವೈದ್ಯಕೀಯ ಮತ್ತು ದಂತ ವೈದ್ಯಕೀಯ ಪದವಿ ಕೋರ್ಸ್‌ಗಳಿಗೆ ಸಂಬಂಧಿಸಿದಂತೆ ಯವುದೇ ಶುಲ್ಕ ಹೆಚ್ಚಳ ಮಾಡುವುದಿಲ್ಲ ಎಂದು ಸರ್ಕಾರ ಹೇಳಿತ್ತು. ಆದರೆ ಈಗ ಸೆಪ್ಟೆಂಬರ್‌ನಲ್ಲಿ ಹೆಚ್ಚಳಕ್ಕೆ ಅನುಮೋದನೆ ನೀಡಿದೆ.

ಪ್ರಸಕ್ತ ಸಾಲಿನ ಶುಲ್ಕದ ವಿವರ ರವಾನೆ

ಪ್ರಸಕ್ತ ಸಾಲಿನ ಶುಲ್ಕದ ವಿವರ ರವಾನೆ

ನೀಟ್ ಕೌನ್ಸಲಿಂಗ್ ನಡುವೆಯೇ ವೈದ್ಯಕೀಯ ಪದವಿ ಮತ್ತು ದಂತ ವೈದ್ಯಕೀಯ ಪದವಿ ಕೋರ್ಸ್‌ಗಳ ಶುಲ್ಕ ಹೆಚ್ಚಳ ಮಾಡಲಾಗುತ್ತಿದೆ. ಶುಲ್ಕ ಹೆಚ್ಚಳ ಮಾಡುವಂತೆ ಖಾಸಗಿ ಕಾಲೇಜುಗಳು ಹಾಕಿರುವ ಒತ್ತಡಕ್ಕೆ ಮಣಿದು ಸರ್ಕಾರ ಶುಲ್ಕ ಹೆಚ್ಚಳ ಮಾಡುತ್ತಿದೆ ಎಂಬ ಮಾತು ಕೇಳಿ ಬರುತ್ತಿತ್ತು. ಆದರೆ ಈಗ ಅದು ಸತ್ಯವಾಗಿದೆ. ಈ ಗೊಂದಲದ ನಡುವೆ ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಸಕ್ತ ಸಾಲಿನ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಪ್ರಸಕ್ತ ಸಾಲಿನ ಶುಲ್ಕದ ವಿವರಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ರವಾನಿಸಿತ್ತು. ಜತೆಗೆ ಈ ಶುಲ್ಕದ ವಿವರಗಳನ್ನು ಅಧಿಕೃತ ವೆಬ್‌ನಲ್ಲಿ ಪ್ರಕಟಿಸಲಾಗಿದ್ದು, ಯಾವುದೇ ಶುಲ್ಕ ಹೆಚ್ಚಳಕ್ಕೆ ಅವಕಾಶ ಮಾಡಿಲ್ಲ ಎಂದು ಹೇಳಲಾಗಿತ್ತು.

English summary
The Karnataka government has approved a 10 percent hike in fees for undergraduate medical and dental courses this academic year, making medical course fees even more expensive this time
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X