ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದಲ್ಲಿ ಚಳಿ ಕಡಿಮೆ ಆಯ್ತು, ಸೆಕೆ ವಿಪರೀತ ಹೆಚ್ಚಳ, ಕಲಬುರಗಿಯಲ್ಲಿ ಗರಿಷ್ಠ ಉಷ್ಣಾಂಶ

|
Google Oneindia Kannada News

ಬೆಂಗಳೂರು,ಮಾರ್ಚ್ 02: ರಾಜ್ಯದಲ್ಲಿ ಕಳೆದ ಒಂದು ವಾರದಿಂದ ಚಳಿ ಕಡಿಮೆಯಾಗಿದ್ದು, ಗರಿಷ್ಠ ಉಷ್ಣಾಂಶ ಹೆಚ್ಚಾಗಿದೆ.

ಮಾ.1 ರಂದು ಸೋಮವಾರ ಉತ್ತರ ಒಳನಾಡಿನ ಕಲಬುರಗಿಯಲ್ಲಿ ಅತ್ಯಂತ ಗರಿಷ್ಠ ತಾಪಮಾನ 38.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು.

ಕಲಬುರಗಿಯಲ್ಲಿ 2016ರ ಫೆಬ್ರವರಿ 24 ರಂದು 40.3 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿತ್ತು. ಇದು ಇಲ್ಲಿಯವರೆಗಿನ ಆ ಜಿಲ್ಲೆಯ ಸಾರ್ವಕಾಲಿಕ ದಾಖಲೆಯ ಪ್ರಮಾಣವಾಗಿದೆ.

24 ಗಂಟೆಗಳಲ್ಲಿ ಕೇರಳ,ಪಶ್ಚಿಮ ಬಂಗಾಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಮಳೆ24 ಗಂಟೆಗಳಲ್ಲಿ ಕೇರಳ,ಪಶ್ಚಿಮ ಬಂಗಾಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಮಳೆ

ಪ್ರತಿ ವರ್ಷ ಬೇಸಿಗೆಯ ವೇಳೆ ಮಾರ್ಚ್ ಅಂತ್ಯಕ್ಕೆ ಹಂತ ಹಂತವಾಗಿ ತಾಪಮಾನ ಏರಿಕೆಯಾಗುತ್ತಿತ್ತು. ಆದರೆ ಈ ಬಾರಿ ಮಾರ್ಚ್ 1 ರಂದೇ ಅತ್ಯಧಿಕ ತಾಪಮಾನ ವರದಿಯಾಗಿದೆ.

Karnataka Weather

ಕಲಬುರಗಿಯಲ್ಲಿ ಮಾರ್ಚ್ ತಿಂಗಳಲ್ಲಿ ವಾಡಿಕೆ ತಾಪಮಾನ ಗರಿಷ್ಠ 37 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಆದರೆ ಸೋಮವಾರ ವಾಡಿಕೆಗಿಂತ ಹೆಚ್ಚಿನ ತಾಪಮಾನ ದಾಖಲಾಗಿತ್ತು.

2012ರಲ್ಲಿ 38.3 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು, ಇದನ್ನು ಹೊರತುಪಡಿಸಿದರೆ 2021ರ ಮಾರ್ಚ್ 1 ರಂದು ಗರಿಷ್ಠ 38.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 24.1 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

ರಾಜ್ಯದಲ್ಲಿ ಮಾರ್ಚ್ 5ರವರೆಗೆ ಗರಿಷ್ಠ 33 ರಿಂದ 35 ಡಿಗ್ರಿ ಸೆಲ್ಸಿಯಸ್, ಕನಿಷ್ಠ 18 ರಿಂದ 20 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Recommended Video

ಭಾರತೀಯರಿಲ್ಲದೆ ಪರ್ಸಿವರೆನ್ಸ್ ರೋವರ್ ನಿಯಂತ್ರಣ ಸಾಧ್ಯವಿಲ್ಲ | Oneindia Kannada

ಕಲಬುರಗಿ ಸೇರಿದಂತೆ ಉತ್ತರ ಒಳನಾಡಿನ ರಾಯಚೂರು ಜಿಲ್ಲೆಯಲ್ಲಿ 37 ಡಿಗ್ರಿ ಸೆಲ್ಸಿಯಸ್, ಕೊಪ್ಪಳ 36, ವಿಜಯಪುರ 35.6, ಬೀದರ್ ಮತ್ತು ಧಾರವಾಡ ತಲಾ 35, ಮಂಡ್ಯ, ಚಿಂತಾಮಣಿ, ದಾವಣಗೆರೆಯಲ್ಲಿ 34, ಮೈಸೂರು ಜಿಲ್ಲೆಯಲ್ಲಿ 33 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.ಉತ್ತರ ಒಳನಾಡು, ಕರಾವಳಿ ಜಿಲ್ಲೆಗಳು, ದಕ್ಷಿಣ ಒಳನಾಡಿನಲ್ಲಿ ಒಣಹವೆ ಮುಂದುವರೆಯಲಿದೆ.

English summary
Kalaburagi recorded this season’s hottest day on Monday, with the maximum temperature rising to38.6 degrees Celsius, Daytime temperature is likely to stay around this mark for the next two days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X