ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಲಿನಿ ರಜನೀಶ್ ಸೇರಿ 23 ಐಎಎಸ್ ಆಫೀಸರ್ಸ್ ವರ್ಗ

By Mahesh
|
Google Oneindia Kannada News

ಬೆಂಗಳೂರು, ಆ.10: ಕರ್ನಾಟಕ ಸರಕಾರದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಮಾಡಲಾಗಿದೆ. 23 ಐಎಎಸ್ ಹಾಗೂ ಇಬ್ಬರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಶನಿವಾರ ಆದೇಶ ಹೊರಡಿಸಲಾಗಿದೆ. ಈ ಪೈಕಿ ರಶ್ಮಿ ಮಹೇಶ್, ಡಾ.ಶಾಲಿನಿ ರಜನೀಶ್, ರಾಜೀವ್ ಚಾವ್ಲಾ ಅವರ ವರ್ಗಾವಣೆ ಪ್ರಮುಖವಾಗಿದೆ.

ಡಿ.ಪ್ರಕಾಶ್-ಬಿಜಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಸಿ.ಎಚ್.ಸುಧೀರ್‌ಕುಮಾರ್ ರೆಡ್ಡಿ-ಬೀದರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನಾಗಿ ವರ್ಗಾವಣೆ ಮಾಡಿ ಸಿದ್ದರಾಮಯ್ಯ ಸರ್ಕಾರ ಆದೇಶ ಹೊರಡಿಸಿದೆ. ಉಳಿದಂತೆ ಐಎಎಸ್ ಅಧಿಕಾರಿಗಳ ಹೊಸ ಹುದ್ದೆಯ ವಿವರ ಇಂತಿದೆ:

* ರಾಜೀವ್ ಚಾವ್ಲಾ: ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ,

* ಎಂ.ವಿ.ಜಯಂತಿ: ಡಿಪಿಎಆರ್ ಸರ್ಕಾರದ ಪ್ರಧಾನ ಕಾರ್ಯದರ್ಶಿ,

* ಡಾ.ಶಾಲಿನಿ ರಜನೀಶ್ : ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ.

* ಎಂ.ಎಸ್.ರವಿಶಂಕರ್ :ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಯ ಸರಕಾರದ ಕಾರ್ಯದರ್ಶಿ

* ಅಂಜುಮ್ ಫರ್ವೇಝ್ : ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ(ಬಿಡಬ್ಲುಎಸ್‌ಎಸ್‌ಬಿ) ಅಧ್ಯಕ್ಷ,

* ರಶ್ಮಿ ವಿ.ಮಹೇಶ್: ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತೆ.[ದಕ್ಷ ಅಧಿಕಾರಿ ರಶ್ಮಿಗೆ ವರ್ಗಾವಣೆ ಶಿಕ್ಷೆ]

Karnataka : IAS, IPS officers transferred

* ಡಾ.ಏಕ್‌ರೂಪ್ ಕೌರ್: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ)ಯ ವ್ಯವಸ್ಥಾಪಕ ನಿರ್ದೇಶಕಿ.
* ವಿ.ಶಂಕರ್: ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿ
* ಎನ್.ಎಂ.ಪನಳಿ : ಯಾದಗಿರಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ.
* ಮೀರ್ ಅನೀಸ್ ಅಹ್ಮದ್ : ರಾಜ್ಯ ವಕ್ಫ್ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ. [ಐಪಿಎಸ್‌ ಅಧಿಕಾರಿಗಳ ವರ್ಗಾವರ್ಗಿ‌]

* ನೀಲಾ ಮಂಜುನಾಥ್: ರಾಜ್ಯ ರೇಷ್ಮೆ ಕೈಗಾರಿಕಾ ನಿಗಮ(ಕೆಎಸ್‌ಐಸಿ)ದ ವ್ಯವಸ್ಥಾಪಕ ನಿರ್ದೇಶಕಿ
* ಎಸ್.ಎ.ಜೀಲಾನಿ : ರಾಜ್ಯ ರೇಷ್ಮೆ ಮಾರುಕಟ್ಟೆ ಮಂಡಳಿ (ಕೆಎಸ್‌ಎಂಬಿಎಲ್)ಯ ವ್ಯವಸ್ಥಾಪಕ ನಿರ್ದೇಶಕ
* ಸಲ್ಮಾ ಕೆ.ಫಾಹಿಮ್ : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿ
* ಡಾ.ಜಿ.ಸಿ.ಪ್ರಕಾಶ್ :ಎಂಎಸ್‌ಐಎಲ್ ವ್ಯವಸ್ಥಾಪಕ ನಿರ್ದೇಶಕ.

* ಪಲ್ಲವಿ ಆಕೃತಿ : ಮುಜುರಾಯಿ ಇಲಾಖೆ ಆಯುಕ್ತೆ ಹಾಗೂ ಕಂದಾಯ ಇಲಾಖೆಯ ಸರಕಾರದ ಉಪ ಕಾರ್ಯದರ್ಶಿ
* ಎಸ್.ಶಶಿಕಾಂತ್ ಸೆಂಥಿಲ್ : ರಾಯಚೂರು ಜಿಲ್ಲೆಯ ಜಿಲ್ಲಾಧಿಕಾರಿ
* ಕೃಷ್ಣಾ ಬಾಜ್‌ಪೈ : ಇಡಿಸಿಎಸ್ ಹಾಗೂ ಡಿಪಿಎಆರ್(ಇ-ಆಡಳಿತ) ನಿರ್ದೇಶಕ
* ಬಿ.ಬಿ.ಕಾವೇರಿ : ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ.

* ಸುಷ್ಮಾ ಗೋಡ್ಬೋಲೆ :ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕಿ ಹಾಗೂ ರಾಜ್ಯ ಪರೀಕ್ಷಾ ಪ್ರಾಧಿಕಾರ(ಕೆಇಎ)ದ ಕಾರ್ಯಕಾರಿ ನಿರ್ದೇಶಕಿ
* ಎಸ್.ಬಿ. ಶೆಟ್ಟಣ್ಣನವರ್ : ಗದಗ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ
* ಷಡಕ್ಷರಿ ಸ್ವಾಮಿ : ತೋಟಗಾರಿಕೆ ಇಲಾಖೆಯ ನಿರ್ದೇಶಕ
* ಎಸ್.ಬಿ. ಬೊಮ್ಮನ ಹಳ್ಳಿ : ದಾವಣಗೆರೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ
* ಬಿ.ರಾಮು : ಶಿವಮೊಗ್ಗ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ.

English summary
The Karnataka government on Saturday transferred several IAS, IPS officers. Here are the list of the transferred officers and their new postings
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X