ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಸ್ಕಿ, ಬಸವಕಲ್ಯಾಣ: ಇದುವರೆಗಿನ ಚುನಾವಣಾ ಇತಿಹಾಸ ಏನು ಹೇಳುತ್ತೆ?

|
Google Oneindia Kannada News

ರಾಯಚೂರು ಜಿಲ್ಲೆ ಮಸ್ಕಿ ಮತ್ತು ಬೀದರ್ ಜಿಲ್ಲೆ ಬಸವಕಲ್ಯಾಣ ಅಸೆಂಬ್ಲಿ ಕ್ಷೇತ್ರದ ಉಪ ಚುನಾವಣೆಯ ಮತ ಎಣಿಕೆಗೆ ಕ್ಷಣಗಣನೆ ಆರಂಭವಾಗಿದೆ. ಈ ಬಾರಿ ಯಾರೇ ಗೆದ್ದರೂ, ಲೀಡ್ ಜಾಸ್ತಿ ಇರುವುದಿಲ್ಲ ಎಂದು ಸಮೀಕ್ಷೆಗಳು ಹೇಳುತ್ತಿವೆ.

By Elections Results 2021 Live Updates: ಉಪ ಚುನಾವಣೆ ಫಲಿತಾಂಶBy Elections Results 2021 Live Updates: ಉಪ ಚುನಾವಣೆ ಫಲಿತಾಂಶ

ಮಸ್ಕಿಯಲ್ಲಿ ಕಳೆದ ಬಾರಿ ಕಾಂಗ್ರೆಸ್ ನಿಂದ ಗೆದ್ದ ಅಭ್ಯರ್ಥಿ, ಆಪರೇಶನ್ ಕಮಲಕ್ಕೆ ಒಳಗಾಗಿ ಬಿಜೆಪಿ ಸೇರಿದರು. ಹಾಗಾಗಿ, ಅಲ್ಲಿ ಉಪಚುನಾವಣೆ ನಡೆಯುತ್ತಿದೆ. ಇನ್ನು, ಬಸವಕಲ್ಯಾಣದ ಶಾಸಕರು ನಿಧನ ಹೊಂದಿದ್ದರಿಂದ ಅಲ್ಲಿ ಚುನಾವಣೆ ನಡೆದಿದೆ.

ಉಪ ಚುನಾವಣೆ ಫಲಿತಾಂಶಕ್ಕೂ ಮುನ್ನ ಬಿಎಸ್ವೈಗೆ ಬಿಗ್ ಶಾಕ್ಉಪ ಚುನಾವಣೆ ಫಲಿತಾಂಶಕ್ಕೂ ಮುನ್ನ ಬಿಎಸ್ವೈಗೆ ಬಿಗ್ ಶಾಕ್

ಮಸ್ಕಿಯಲ್ಲಿ ಕಳೆದ ಬಾರಿ ಕಾಂಗ್ರೆಸ್ಸಿನಿಂದ ಸ್ಪರ್ಧಿಸಿದ್ದ ಅಭ್ಯರ್ಥಿ ಈ ಬಾರಿ ಬಿಜೆಪಿಯಿಂದ, ಅದೇ ರೀತಿ ಬಿಜೆಪಿಯಿಂದ ಸ್ಪರ್ಧಿಸಿದ್ದವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಚುನಾವಣೆ ಎದುರಿಸಿದ್ದಾರೆ. ಕ್ಷೇತ್ರಗಳ ಪುನರ್ ವಿಂಗಡಣೆಯ ನಂತರ 2008ರಲ್ಲಿ ಈ ಕ್ಷೇತ್ರ ಅಸ್ತಿತ್ವಕ್ಕೆ ಬಂದಿತ್ತು. ಈಗಿನ ಉಪ ಚುನಾವಣ ನಾಲ್ಕನೇಯದ್ದು.

Live Updates: 5 ರಾಜ್ಯಗಳ ಚುನಾವಣೆ ಫಲಿತಾಂಶ ಇಂದು ಪ್ರಕಟLive Updates: 5 ರಾಜ್ಯಗಳ ಚುನಾವಣೆ ಫಲಿತಾಂಶ ಇಂದು ಪ್ರಕಟ

ಇನ್ನು ಬಸವಕಲ್ಯಾಣ ಕ್ಷೇತ್ರ ಅಂದಿನ ಮೈಸೂರು ಪ್ರಾಂತ್ಯದಿಂದಲೂ ಅಸ್ತಿತ್ವದಲ್ಲಿತ್ತು. ಮೊದಲು ಈ ಕ್ಷೇತ್ರವನ್ನು ಕಲ್ಯಾಣಿ ವಿಧಾನಸಭಾ ಕ್ಷೇತ್ರ ಎಂದು ಕರೆಯಲಾಗಿತ್ತು. ಈ ಬಾರಿಯ ಉಪ ಚುನಾವಣೆ ಹದಿನೈದನೇ ಚುನಾವಣೆಯಾಗಿದೆ. ಈ ಎರಡು ಕ್ಷೇತ್ರದಲ್ಲಿ ಇದುವರೆಗೆ ಯಾವ ಅಭ್ಯರ್ಥಿ/ಪಕ್ಷ ಗೆದ್ದುಕೊಂಡು ಬರುತ್ತಿದೆ ಎನ್ನುವುದನ್ನು ಸ್ಲೈಡಿನಲ್ಲಿ ಮುಂದುವರಿಸಲಾಗಿದೆ:

5 ರಾಜ್ಯಗಳ ಚುನಾವಣೆ: ಎಲ್ಲಿ ಯಾರ ಸರಕಾರ, ಖ್ಯಾತ ಜ್ಯೋತಿಷಿಯ ಭವಿಷ್ಯ5 ರಾಜ್ಯಗಳ ಚುನಾವಣೆ: ಎಲ್ಲಿ ಯಾರ ಸರಕಾರ, ಖ್ಯಾತ ಜ್ಯೋತಿಷಿಯ ಭವಿಷ್ಯ

 ಮಸ್ಕಿಯಲ್ಲಿ ಇದುವರೆಗಿನ ಮೂರೂ ಚುನಾವಣೆಯಲ್ಲಿ ಗೆದ್ದವರು ಪ್ರತಾಪ್ ಗೌಡ ಪಾಟೀಲ್

ಮಸ್ಕಿಯಲ್ಲಿ ಇದುವರೆಗಿನ ಮೂರೂ ಚುನಾವಣೆಯಲ್ಲಿ ಗೆದ್ದವರು ಪ್ರತಾಪ್ ಗೌಡ ಪಾಟೀಲ್

ಮಸ್ಕಿಯಲ್ಲಿ ಇದುವರೆಗಿನ ಮೂರೂ ಚುನಾವಣೆಯಲ್ಲಿ ಗೆದ್ದವರು ಪ್ರತಾಪ್ ಗೌಡ ಪಾಟೀಲ್. 2008ರಲ್ಲಿ ಬಿಜೆಪಿಯಿಂದ ಮತ್ತು 2013, 2018ರಲ್ಲಿ ಕಾಂಗ್ರೆಸ್ ಟಿಕೆಟ್ ನಿಂದ ಪ್ರತಾಪ್ ಪಾಟೀಲ್ ಜಯ ಸಾಧಿಸಿದ್ದಾರೆ. 2018ರ ಚುನಾವಣೆಯಲ್ಲಿ ಪ್ರತಾಪ್ ಗೌಡ ತಮ್ಮ ಪ್ರತಿಸ್ಪರ್ಧಿ ಬಿಜೆಪಿಯ ಬಸನಗೌಡ ತುರ್ವಿಹಾಳ ವಿರುದ್ದ ಕೇವಲ 213 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

 1957ರಿಂದ 1972ರವರೆಗೆ ನಡೆದ ಚುನಾವಣೆಯಲ್ಲಿ ಮೂರು ಬಾರಿ ಕಾಂಗ್ರೆಸ್ ಗೆಲುವು

1957ರಿಂದ 1972ರವರೆಗೆ ನಡೆದ ಚುನಾವಣೆಯಲ್ಲಿ ಮೂರು ಬಾರಿ ಕಾಂಗ್ರೆಸ್ ಗೆಲುವು

ಇನ್ನು ಬಸವಕಲ್ಯಾಣ ಅಸೆಂಬ್ಲಿ ಕ್ಷೇತ್ರಕ್ಕೆ 1957ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಅನ್ನಪೂರ್ಣ ಬಾಯಿ ಗೆಲುವು ಸಾಧಿಸಿದ್ದರು. ಇದಾದ ನಂತರ, 1962ರಲ್ಲೂ ಇವರೇ ಗೆಲುವು ಸಾಧಿಸಿದ್ದರು. 1967ರಲ್ಲಿ ಪಕ್ಷೇತರ ಅಭ್ಯರ್ಥಿ ಸಂಗನಬಸಪ್ಪ ಗೆಲುವು ಸಾಧಿಸಿದ್ದರೆ, 1972ರಲ್ಲಿ ಕಾಂಗ್ರೆಸ್ಸಿನ ಬಾಪೂರಾವ್ ಆನಂದ್ ರಾವ್ ಗೆಲುವು ಸಾಧಿಸಿದ್ದರು.

 1985ರಿಂದ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದ ಬಸವರಾಜ ಅಟ್ಟೂರ (ಜನತಾ ಪಾರ್ಟಿ)

1985ರಿಂದ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದ ಬಸವರಾಜ ಅಟ್ಟೂರ (ಜನತಾ ಪಾರ್ಟಿ)

1978ರಲ್ಲಿ ಕಾಂಗ್ರೆಸ್ಸಿನ ಬಾಪೂರಾವ್, 1983ರಲ್ಲಿ ಜನತಾ ಪಾರ್ಟಿಯ ಬಸವರಾಜ ಶಂಕರಪ್ಪ ಪಾಟೀಲ, 1985ರಲ್ಲಿ ಜನತಾ ಪಾರ್ಟಿಯ ಬಸವರಾಜ ಅಟ್ಟೂರ ಗೆಲುವು ಸಾಧಿಸಿದ್ದರು. ಅಟ್ಟೂರ 1989 ಮತ್ತು 1994ರಲ್ಲೂ ಜನತಾ ಪಾರ್ಟಿಯ ಚಿಹ್ನೆಯಿಂದ ಗೆಲುವು ಸಾಧಿಸಿದ್ದರು.

 2018ರಲ್ಲಿ ಕಾಂಗ್ರೆಸ್ಸಿನಿಂದ ಬಿ.ನಾರಾಯಣ ರಾವ್ ಗೆಲುವು ಸಾಧಿಸಿದ್ದರು

2018ರಲ್ಲಿ ಕಾಂಗ್ರೆಸ್ಸಿನಿಂದ ಬಿ.ನಾರಾಯಣ ರಾವ್ ಗೆಲುವು ಸಾಧಿಸಿದ್ದರು

1999ರಲ್ಲಿ ಜೆಡಿಎಸ್ ನಿಂದ ಎಂ.ಜಿ.ಮುಲೆ, 2004ರಲ್ಲಿ ಜೆಡಿಎಸ್ ನಿಂದ ಮಲ್ಲಿಕಾರ್ಜುನ ಸಿದ್ದರಾಮಪ್ಪ ಖೂಬಾ, 2008ರಲ್ಲಿ ಬಿಜೆಪಿಯಿಂದ ಬಸವರಾಜ ಅಟ್ಟೂರ, 2013ರಲ್ಲಿ ಮತ್ತೆ ಜೆಡಿಎಸ್ ನಿಂದ ಖೂಬಾ, 2018ರಲ್ಲಿ ಕಾಂಗ್ರೆಸ್ಸಿನಿಂದ ಬಿ.ನಾರಾಯಣ ರಾವ್ ಗೆಲುವು ಸಾಧಿಸಿದ್ದರು.

English summary
Maski And Basavakalyan Assembly Election Result So Far, Which Party Won More Time.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X