ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರ ಬಿಜೆಪಿಯನ್ನು ಕ್ಷಮಿಸುವುದಿಲ್ಲ

|
Google Oneindia Kannada News

ಬೆಂಗಳೂರು, ಮಾರ್ಚ್ 30: ಸಿಡಿ ವಿಚಾರದಲ್ಲಿ ಬಿಜೆಪಿ ವಿರುದ್ದ ಟ್ವೀಟ್ ಸಮರವನ್ನೇ ನಡೆಸಿದ್ದ ಕೆಪಿಸಿಸಿ, ಈಗ, ವಂಚನೆ ವಿಚಾರವನ್ನು ಮುಂದಿಟ್ಟುಕೊಂಡು ಬಿಜೆಪಿ ವಿರುದ್ದ ಕಿಡಿಕಾರಿದೆ.

ಮರ್ಯಾದಾ ಪರುಷೋತ್ತಮ ಶ್ರೀರಾಮಚಂದ್ರ ಬಿಜೆಪಿಯನ್ನು ಕ್ಷಮಿಸುವುದಿಲ್ಲ ಎಂದಿರುವ ಕೆಪಿಸಿಸಿ, ಇನ್ನು ಮುಂದೆಯಾದರೂ ಬಿಜೆಪಿಯವರು ರಾಮನ ಹೆಸರಿನಲ್ಲಿ ರಾಜಕೀಯ ಮಾಡುವುದನ್ನು ನಿಲ್ಲಿಸಲಿ ಎನ್ನುವ ಸಲಹೆಯನ್ನು ನೀಡಿದೆ.

ಸಿಡಿ ಪ್ರಕರಣ: ಮಹಾನಾಯಕನಾಗಲು ಹೋಗಿ ಜೈಲುಹಕ್ಕಿ ಖಳನಾಯಕನಾದ ಕಥೆಸಿಡಿ ಪ್ರಕರಣ: ಮಹಾನಾಯಕನಾಗಲು ಹೋಗಿ ಜೈಲುಹಕ್ಕಿ ಖಳನಾಯಕನಾದ ಕಥೆ

"ರಾಮನೆಂದರೆ ಹಿಂದೂಗಳಿಗೆ ಧ್ಯಾನ, ಭಕ್ತಿ, ಶ್ರದ್ಧೆ. ಸಮಸ್ತ ಹಿಂದುಗಳ ಭಾವನೆ ಗೌರವಿಸಿ @BJP4Karnataka ಇನ್ನು ಮುಂದೆ ರಾಮನ ಹೆಸರು ಹೇಳುವುದನ್ನ ನಿಲ್ಲಿಸಬೇಕು. ರಾಜಕೀಯ, ಕೊಲೆ, ಸುಲಿಗೆ, ಹಿಂಸೆ, ವಂಚನೆ ಮುಂತಾದ ಅಧರ್ಮಗಳು ತನ್ನ ಹೆಸರಲ್ಲಿ ಮಾಡುವುದನ್ನ ರಾಮ ಸಹಿಸುವುದಿಲ್ಲ, ರಾಮನ ನಿಜ ಭಕ್ತರೂ ಸಹಿಸುವುದಿಲ್ಲ"ಎಂದು ಕೆಪಿಸಿಸಿ ಟ್ವೀಟ್ ಮಾಡಿದೆ.

Maryada Purusotham Sree Ramachandra Will Not Forgive BJP, KPCC Tweet

"ಬಿಜೆಪಿಗರು "ಜೈ ಶ್ರೀರಾಮ್" ಎಂದರೆ ಸ್ವತಃ ರಾಮನೇ ಅಸಹ್ಯಪಟ್ಟುಕೊಳ್ಳುತ್ತಾನೆ. ರಾಮನ ಹೆಸರಲ್ಲಿ @BJP4Karnataka ಮಾಡಬಾರದ್ದೆಲ್ಲವನ್ನೂ ಮಾಡುತ್ತಿದೆ. ಪ್ರಸಾದ್ ಅತ್ತಾವರ ಎನ್ನುವ ಬಿಜೆಪಿ ಮುಖಂಡನ ವಂಚನೆ ಜಾಲ ಬಯಲಾಗಿದೆ. ಪ್ರಾಧ್ಯಾಪಕರಿಗೆ ಕುಲಪತಿ ಹುದ್ದೆ ಕೊಡಿಸುವುದಾಗಿ 17 ಲಕ್ಷ ವಂಚಿಸಿದ್ದಾನೆ. ರಾಮ ಬಿಜೆಪಿಯನ್ನು ಕ್ಷಮಿಸುವುದಿಲ್ಲ" ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಟ್ವೀಟ್ ಮೂಲಕ, ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದೆ.

Recommended Video

RCB ತಂಡ ಸೇರಲು ಚೆನ್ನೈಗೆ ಬಂದ ಮ್ಯಾಕ್ಸ್ ವೆಲ್ | Oneindia Kannada

ರಾಮಸೇನೆಯ ಮುಖಂಡ ಪ್ರಸಾದ್ ಅತ್ತಾವರ್ ಅವರ ಬಂಧನವನ್ನು ಉಲ್ಲೇಖಿಸಿ ಕೆಪಿಸಿಸಿ ಟ್ವೀಟ್ ಮಾಡಿದೆ. ಮಂಗಳೂರು ವಿವಿಯ ಪ್ರಾಧ್ಯಾಪಕರೊಬ್ಬರಿಗೆ, ರಾಯಚೂರು ವಿಶ್ವವಿದ್ಯಾಲಯದ ಕುಲಪತಿ ಮಾಡಿಸುವುದಾಗಿ 17.5ಲಕ್ಷ ರೂಪಾಯಿ ಹಣವನ್ನು ಪಡೆದು ಅತ್ತಾವರ್ ವಂಚಿಸಿದ್ದಾರೆ ಎನ್ನುವ ಆರೋಪ ಇವರ ಮೇಲಿದೆ.

ವಿವಿಧ ಹಿಂದೂ ಸಂಘಟನೆಗಳ ಜೊತೆ ನಂಟನ್ನು ಹೊಂದಿದ್ದ ಪ್ರಸಾದ್ ಅತ್ತಾವರ್, 2016ರಲ್ಲಿ ಬಿಜೆಪಿಯನ್ನು ಸೇರಿದ್ದರು. ಅಲ್ಲದೇ, 2009ರಲ್ಲಿ ನಡೆದ ಪಬ್ ದಾಳಿಯ ಪ್ರಮುಖ ಆರೋಪಿಯೂ ಇವರು ಆಗಿದ್ದರು.

English summary
Maryada Purusotham Sree Ramachandra Will Not Forgive BJP, KPCC Tweet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X