ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾರ್ಚ್ 31ರಂದು ಇತಿಹಾಸದ ಪುಟ ಸೇರಲಿದೆ 'ಮೈಸೂರು ಬ್ಯಾಂಕ್'

ಐತಿಹಾಸಿಕ, ಕರ್ನಾಟಕದ ಮಣ್ಣಿನ ಸೊಗಡಿನ, ಕನ್ನಡಿಗರ ಬಾಂಧವ್ಯದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಇತಿಹಾಸದ ಪುಟ ಸೇರಲಿದೆ. ಇದೇ ಮಾರ್ಚ್ 31 ಎಸ್.ಬಿಎಂ ಕೊನೆಯ ಬಾರಿಗೆ ಕಾರ್ಯ ನಿರ್ವಹಿಸಲಿದೆ.

By Sachhidananda Acharya
|
Google Oneindia Kannada News

ಬೆಂಗಳೂರು, ಮಾರ್ಚ್ 23: ಐತಿಹಾಸಿಕ, ಕರ್ನಾಟಕದ ಮಣ್ಣಿನ ಸೊಗಡಿನಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಇತಿಹಾಸದ ಪುಟ ಸೇರಲಿದೆ. ಇದೇ ಮಾರ್ಚ್ 31 ಎಸ್.ಬಿಎಂ ಕೊನೆಯ ಬಾರಿಗೆ ಕಾರ್ಯ ನಿರ್ವಹಿಸಲಿದೆ.

ಏಪ್ರಿಲ್ 1 ರಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್.ಬಿ.ಎಂ) ಆಗಿ ಎಸ್.ಬಿ.ಐ ಬದಲಾಗಲಿದೆ. ಈ ಹಿಂದೆಯೇ ಎಸ್.ಬಿ.ಐ ಜತೆ ಎಸ್.ಬಿ.ಎಂ ವಿಲೀನವಾಗುವುದು ನಿರ್ಧಾರವಾಗಿತ್ತು. ಇದೀಗ ಕೊನೆಯ ಹಂತದ ವಿಲೀನ ಪ್ರಕ್ರಿಯೆಗಳು ತೆರೆ ಮರೆಯಲ್ಲಿ ನಡೆಯುತ್ತಿವೆ.[ಎಸ್.ಬಿ.ಎಂ.ನಲ್ಲೀಗ ಕನ್ನಡದ ಕಂಪು]

ಈಗಾಗಲೇ ಶಾಖೆಗಳ ಬದಲಾವಣೆ, ಖಾತೆಗಳ ವರ್ಗಾವಣೆ ಮುಂತಾದ ಬ್ಯಾಂಕಿಂಗ್ ಪ್ರಕ್ರಿಯೆಗಳು ನಡೆಯುತ್ತಿವೆ. ಏಪ್ರಿಲ್ 1 ರಂದು ಎಲ್ಲಾ ಎಸ್.ಬಿ.ಎಂ ಶಾಖೆಗಳ ನಾಮಫಲಕಗಳನ್ನೂ ಎಸ್.ಬಿ.ಐ ಎಂದು ಬದಲಾಯಿಸಲಾಗುತ್ತದೆ.[5 ಬ್ಯಾಂಕುಗಳ ವಿಲೀನ: SBI- SBM ವಿಲೀನಕ್ಕೆ ಮಹೂರ್ತ]

ಇನ್ನೇನಿದ್ದರೂ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ವಿಶ್ವೇಶ್ವರಯ್ಯನವರ ಕನಸಿನ ಕೂಸಾಗಿ ಸಾಗಿ ಬಂದಿದ್ದ ಎಸ್.ಬಿ.ಎಂ ನೆನಪು ಮಾತ್ರ.

ಸರ್.ಎಂ.ವಿ ಕನಸಿನ ಕೂಸು

ಸರ್.ಎಂ.ವಿ ಕನಸಿನ ಕೂಸು

ಮೈಸೂರು ಸಂಸ್ಥಾನದ ದಿವಾನರಾಗಿದ್ದ ಸರ್.ಎಂ ವಿಶ್ವೇಶ್ವರಯ್ಯ ಈ ಸ್ಟೇಟ್ ಬ್ಯಾಂಕ್ ಆಫ್ ಮೈಸೂರನ್ನು 1913ರಲ್ಲಿ ಆರಂಭಿಸಿದ್ದರು. ಆಗ ನಾಲ್ವಡಿ ಕೃಷ್ಣರಾಜ ಒಡೆಯರ್ ಮಹಾರಾಜರಾಗಿದ್ದರು. ಇದು ಇವರಿಬ್ಬರ ಕನಸಿನ ಕೂಸಾಗಿತ್ತು. ಸಾಮಾನ್ಯ ಜನರಿಗೆ ಬ್ಯಾಂಕ್ ಸೇವೆ ನೀಡುವ ಉದ್ದೇಶದಿಂದ ಬ್ಯಾಂಕ್ ಆರಂಭಿಸಿದ್ದರು.

ಸ್ಟೇಟ್ ಬ್ಯಾಂಕ್ ಇಂಡಿಯಾದ ಜತೆ ವಿಲೀನ

ಸ್ಟೇಟ್ ಬ್ಯಾಂಕ್ ಇಂಡಿಯಾದ ಜತೆ ವಿಲೀನ

ಬಹಳ ಹಿಂದೆಯೇ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಜತೆ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ವಿಲೀನಕ್ಕೆ ಚಾಲನೆ ನೀಡಲಾಗಿತ್ತು. ಇದೇ ಮಾರ್ಚ್ 21ರಂದು ಕೊನೆಯ ಬಾರಿಗೆ ಎಸ್.ಬಿ.ಎಂ ಕಾರ್ಯ ನಿರ್ವಹಣೆ ಮಾಡಲಿದ್ದು ಏಪ್ರಿಲ್ 1 ರಿಂದ ಅಧಿಕೃತವಾಗಿ ಎಸ್.ಬಿ.ಐ ಆಗಿ ಬದಲಾಗಿದೆ. ಇದೀಗ ಕೊನೆಯ ಹಂತದ ವಿಲೀನ ನಡೆಯುತ್ತಿವೆ.

ಐದು ಬ್ಯಾಂಕುಗಳು ವಿಲೀನ

ಐದು ಬ್ಯಾಂಕುಗಳು ವಿಲೀನ

ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಮಾತ್ರವಲ್ಲದೇ ಸ್ಟೇಟ್ ಬ್ಯಾಂಕ್ ಆಫ್ ಬಿಕಾನೇರ್ ಮತ್ತು ಜೈಪುರ, ಪಟಿಯಾಲಾ, ಟ್ರಾವಂಕೂರ್, ಹೈದರಾಬಾದ್ ಕೂಡಾ ವಿಲೀನವಾಗಲಿದೆ. ಈ ಹಿಂದೆ ಸೌರಾಷ್ಟ್ರ ಮತ್ತು ಇಂದೋರ್ ಬ್ಯಾಂಕುಗಳೂ ವಿಲೀನವಾಗಿದ್ದವು. ವಿಲೀನದಿಂದ ಒಟ್ಟು 22,000 ಶಾಖೆಗಳು ಮತ್ತು 58,000 ಎಟಿಎಂಗಳು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬುಟ್ಟಿಗೆ ಬಂದು ಬೀಳಲಿವೆ.

ಸಾಲಗಾರರಿಗೆ ಲಾಭ

ಸಾಲಗಾರರಿಗೆ ಲಾಭ

ಎಸ್.ಬಿ.ಎಂಗೆ ಹೋಲಿಸಿದರೆ ಎಸ್.ಬಿ.ಐ ನಲ್ಲಿ ಸಾಲದ ಮೂಲ ದರಗಳು ಕಡಿಮೆ ಇದೆ. ಹಾಗಾಗಿ ಸಾಲಗಾರರಿಗೆ ವಿಲೀನದಿಂದ ಲಾಭವಾಗಲಿದೆ. ಶೇಕಡಾ 0.10 ರಿಂದ ಶೇಕಡಾ 0.20ಯಷ್ಟು ಬಡ್ಡಿ ಕಡಿಮೆಯಾಗುವ ಸಾಧ್ಯತೆ ಇದೆ.

ಇವುಗಳಲ್ಲಿ ಬದಲಾವಣೆ ಇಲ್ಲ

ಇವುಗಳಲ್ಲಿ ಬದಲಾವಣೆ ಇಲ್ಲ

ಸದ್ಯ ಗ್ರಾಹಕರು ಹೊಂದಿರುವ ಎಸ್.ಬಿ.ಐ ನ ಬ್ಯಾಂಕ್ ಖಾತೆ, ಎಟಿಎಂ, ಕ್ರೆಡಿಟ್ ಕಾರ್ಡ್ ಮೊದಲಾದವುಗಳಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ. ಆದರೆ ಮುಂದಿನ ದಿನಗಳಲ್ಲಿ ಎಸ್.ಬಿ.ಐ ಕಾರ್ಡುಗಳನ್ನು ನೀಡಲಾಗುತ್ತದೆ. ಅಲ್ಲಿಯವರೆಗೂ ಹಳೇ ಕಾರ್ಡುಗಳನ್ನು ಬಳಸಬಹುದು.

ಕಚೇರಿಗಳಿಗೆ ಬಾಗಿಲು

ಕಚೇರಿಗಳಿಗೆ ಬಾಗಿಲು

ವಿಲೀನದ ನಂತರ ಎಸ್.ಬಿ.ಎಂಗೆ ಸೇರಿದ ಅರ್ಧಕರ್ಧ ಕಚೇರಿಗಳನ್ನು ಮುಚ್ಚುವ ಸಾಧ್ಯತೆ ಇದೆ. ಎಸ್.ಬಿ.ಐನಲ್ಲಿ ವಿಲೀನವಾಗಲಿರುವ ಐದು ಬ್ಯಾಂಕುಗಳ ಶೇಕಡಾ 47ರಷ್ಟು ಕಚೇರಿಗಳು ಮುಚ್ಚಲಿವೆ. ಇನ್ನು ಅಧೀನ ಬ್ಯಾಂಕುಗಳ 5 ಆಡಳಿತ ಕಚೇರಿಗಳಲ್ಲಿ 2ನ್ನು ಉಳಿಸಿಕೊಳ್ಳಲಾಗುತ್ತದೆ. 27 ವಲಯವಾರು ಕಚೇರಿಗಳು, 81 ಪ್ರಾದೇಶಿಕ ಕಚೇರಿಗಳು, 11 ನೆಟ್ವರ್ಕ್ ಕಚೇರಿಗಳು ಬಾಗಿಲೆಳೆದುಕೊಳ್ಳಲಿವೆ. ಆದರೆ ಇವುಗಳು ಆಡಳಿತಾತ್ಮಕ ಕಚೇರಿಗಳಾಗಿದ್ದು ಇದರಿಂದ ಗ್ರಾಹಕರಿಗೆ ಯಾವುದೇ ಸಮಸ್ಯೆ ಇಲ್ಲ. ಆದರೆ ಉದ್ಯೋಗಿಗಳು ಒಂದು ಕಡೆಯಿಂದ ಮತ್ತೊಂದು ಕಡೆಗೆ ವರ್ಗವಾಗಬಹುದು. ಒಟ್ಟು 550 ಆಡಳಿತಾತ್ಮಕ ಕಚೇರಿಗಳಲ್ಲಿ 259 ಕಚೇರಿಗಳನ್ನಷ್ಟೇ ಉಳಿಸಿಕೊಳ್ಳಲಿದೆ ಎಸ್.ಬಿ.ಐ.

ಶಾಖೆಗಳನ್ನು ಮುಚ್ಚುತ್ತಾರಾ?

ಶಾಖೆಗಳನ್ನು ಮುಚ್ಚುತ್ತಾರಾ?

ಈಗಿರುವ ಬ್ಯಾಂಕುಗಳ ಶಾಖೆಗಳನ್ನು ಮುಚ್ಚುವ ಸಾಧ್ಯತೆಗಳು ಕಡಿಮೆ. ಆದರೆ ಒಂದೇ ಸ್ಥಳದಲ್ಲಿ ಎರಡೂ ಬ್ಯಾಂಕುಗಳ ಶಾಖೆಗಳಿದ್ದಲ್ಲಿ ಮಾತ್ರ ಒಂದನ್ನು ಮುಚ್ಚಿ, ಮತ್ತೊಂದನ್ನು ಪಕ್ಕದ ಸ್ಥಳಗಳಿಗೆ ಸ್ಥಳಾಂತರ ಮಾಡುವ ಸಾಧ್ಯತೆ ಇದೆ. ಇದರಿಂದ ಗ್ರಾಹಕರಿಗೂ ಸಮಸ್ಯೆಯಾಗದು. ಜತೆಗೆ ನೌಕರರನ್ನು ಕೆಲಸದಿಂದ ಕಿತ್ತು ಹಾಕುವ ಸಾಧ್ಯತೆಗಳೂ ಇಲ್ಲ.

ಜಾಗತಿಕ ಬ್ಯಾಂಕುಗಳ ಪಟ್ಟಿಗೆ ಎಸ್.ಬಿ.ಐ

ಜಾಗತಿಕ ಬ್ಯಾಂಕುಗಳ ಪಟ್ಟಿಗೆ ಎಸ್.ಬಿ.ಐ

ದೇಶದ ಻ಅತೀ ದೊಡ್ಡ ಬ್ಯಾಂಕ್ ಅಂದರೆ ಅದು ಎಸ್.ಬಿ.ಐ. ಮೈಸೂರು ಬ್ಯಾಂಕ್ ಹಾಗೂ ಇತರ 4 ಬ್ಯಾಂಕುಗಳ ವಿಲೀನದೊಂದಿಗೆ ಎಸ್.ಬಿ.ಐ ಮತ್ತೂ ದೊಡ್ಡ ಬ್ಯಾಂಕ್ ಆಗಿ ಬದಲಾಗಲಿದೆ. ಸದ್ಯ ವಿಶ್ವದ ಟಾಪ್ 64ನೇ ಸ್ಥಾನದಲ್ಲಿರುವ ಎಸ್.ಬಿ.ಐ ಒಟ್ಟು 30.72 ಲಕ್ಷ ಕೋಟಿ ಆಸ್ತಿ ಹೊಂದಿದೆ. 5 ಬ್ಯಾಂಇಉಗಳ ವಿಲೀನದೊಂದಿದೆ ಅದರ ಆಸ್ತಿ ಮೌಲ್ಯ 40 ಲಕ್ಷ ಕೋಟಿಗೆ ಏರಿಕೆಯಾಗಲಿದ್ದು ವಿಶ್ವದ ಟಾಪ್ 50 ಬ್ಯಾಂಕ್ ಗಳ ಪಟ್ಟಿಗೆ ಸೇರ್ಪಡೆಯಾಗಲಿದೆ.

English summary
State bank of Mysuru and 4 more banks merging with State Bank of India. All branches of merger banks will function as branches of SBI from April 1, 2017.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X