ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೋನಿ ಆರ್ಭಟ: ಅಂಡಮಾನ್‌ನಲ್ಲಿ ರಾಜ್ಯದ ಪ್ರವಾಸಿಗರಿಗೆ ಸಂಕಷ್ಟ

|
Google Oneindia Kannada News

ಬೆಂಗಳೂರು, ಮೇ 4: ಫೋನಿ ಚಂಡಮಾರುತದಿಂದ ದೇಶದ ಪಶ್ಚಿಮ ಭಾಗ ಅಕ್ಷರಶಃ ನಲುಗಿದೆ. ಬಿರುಗಾಳಿ ಸಹಿತ ಮಳೆ ಅಬ್ಬರಕ್ಕೆ ಸುಮಾರು ಹದಿನೈದು ಮಂದಿ ಜೀವ ಕಳೆದುಕೊಂಡಿದ್ದಾರೆ. ಕೋಟ್ಯಂತರ ರೂಪಾಯಿ ನಷ್ಟ ಉಂಟಾಗಿದೆ. ಈ ನಡುವೆ ಪ್ರವಾಸಕ್ಕೆ ತೆರಳಿದ್ದ ಕೆಲವು ಕನ್ನಡಿಗರು ಫೋನಿಯ ಆರ್ಭಟದ ನಡುವೆ ಸಿಲುಕಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಅಂಡಮಾನ್ ನಿಕೋಬಾರ್ ದ್ವೀಪಕ್ಕೆ ಪ್ರವಾಸ ತೆರಳಿದ್ದ ರಾಜ್ಯದ ಸುಮಾರು 70 ಮಂದಿ ಫೋನಿ ಚಂಡ ಮಾರುತದಿಂದಾಗಿ ಮರಳಿಬರಲು ಸಾಧ್ಯವಾಗದೆ ಸಂಕಷ್ಟದಲ್ಲಿದ್ದಾರೆ.

ಫೋನಿ ನಂತರ ಒಡಿಶಾ ಹೇಗಾಗಿದೆ ನೋಡಿ: ವೈಮಾನಿಕ ವಿಡಿಯೋಫೋನಿ ನಂತರ ಒಡಿಶಾ ಹೇಗಾಗಿದೆ ನೋಡಿ: ವೈಮಾನಿಕ ವಿಡಿಯೋ

ರಾಜ್ಯದ ವಿವಿಧೆಡೆಯ ಮಂದಿ ಏಪ್ರಿಲ್ 29ರಂದು ಅಂಡಮಾನ್ ನಿಕೋಬಾರ್ ದ್ವೀಪಕ್ಕೆ ಪ್ರವಾಸಕ್ಕೆಂದು ತೆರಳಿದ್ದರು. ನಿಗದಿಯಂತೆ ಅವರು ಶನಿವಾರ ಬೆಂಗಳೂರಿನತ್ತ ಬರಬೇಕಿತ್ತು. ಅದಕ್ಕಾಗಿ ಅವರು ಸ್ಪೈಸ್ ಜೆಟ್ ವಿಮಾನದಲ್ಲಿ ಟಿಕೆಟ್ ಬುಕ್ ಮಾಡಿಕೊಂಡಿದ್ದರು ಎನ್ನಲಾಗಿದೆ.

many tourists from Karnataka embroiled in Andaman due to fani cyclone

ತಗ್ಗಿಲ್ಲ 'ಫೋನಿ' ಅಬ್ಬರ: ಮೃತರ ಸಂಖ್ಯೆ 15 ಕ್ಕೆ ಏರಿಕೆತಗ್ಗಿಲ್ಲ 'ಫೋನಿ' ಅಬ್ಬರ: ಮೃತರ ಸಂಖ್ಯೆ 15 ಕ್ಕೆ ಏರಿಕೆ

ಆದರೆ, ಬಂಗಾಳಕೊಲ್ಲಿಯಲ್ಲಿ ಫೋನಿ ಚಂಡಮಾರುತ ಸಾಕಷ್ಟು ತೀವ್ರಗೊಂಡಿರುವುದರಿಂದ ಪೋರ್ಟ್‌ಬ್ಲೇರ್‌ನ ವಿಮಾನ ನಿಲ್ದಾಣದಿಂದ ವಿಮಾನಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಹೀಗಾಗಿ ಕರ್ನಾಟಕ ಮತ್ತು ದೇಶದ ವಿವಿಧೆಡೆಗಳಿಂದ ಪ್ರವಾಸಕ್ಕೆ ತೆರಳಿರುವವರು ವಿಮಾನ ನಿಲ್ದಾಣದಲ್ಲಿಯೇ ಕಾಲಕಳೆಯುವಂತಾಗಿದೆ ಎನ್ನಲಾಗಿದೆ.

English summary
Many tourists from Karnataka were in trouble at Andaman's Port Blair Airport due to Fani cyclone.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X