• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಾಂಗ್ರೆಸಿನ ಸೋಲಿಗೆ ಹಲವು ಕಾರಣ, ನಾಯಕರ ಆತ್ಮವಿಮರ್ಶೆ

By ಡಾ. ಶಶಿಕಾಂತ ಪಟ್ಟಣ, ರಾಮದುರ್ಗ
|

1972 ಮತ್ತು 1978 ರ ನಂತರ ಕರ್ನಾಟಕದಲ್ಲಿ ಕಾಂಗ್ರೆಸಿನ ಸರಕಾರ ಎರಡು ಸಲ ನಿರಂತವಾಗಿ ಬಹುಮತದಿಂದ ಗೆದ್ದು ಬಂದಿಲ್ಲ. 1977 ರಲ್ಲಿ ಇಂದಿರಾ ವಿರೋಧಿ ಅಲೆ ಹಾಗೂ ತುರ್ತು ಪರಿಸ್ಥಿತಿಯಲ್ಲಿಯೂ ಇಡೀ ಭಾರತದಲ್ಲಿ ಕಾಂಗ್ರೆಸ್ ನೆಲಕಚ್ಚಿದರೂ ಕರ್ನಾಟಕ ಮತ್ತು ಆಂಧ್ರದಲ್ಲಿ ಕಾಂಗ್ರೆಸ್ ತನ್ನ ನೆಲೆಯನ್ನು ಉಳಿಸಿಕೊಂಡಿತ್ತು.

1983 ರಲ್ಲಿ ಕೇಂದ್ರದಲ್ಲಿ ಇಂದಿರಾ ಗಾಂಧಿಯವರ ಕಾಂಗ್ರೆಸು ಸರಕಾರವಿದ್ದಾಗ ಕರ್ನಾಟಕದಲ್ಲಿ ಜನತಾ ಪಕ್ಷ ಮತ್ತು ಕ್ರಾಂತಿರಂಗ ಪಕ್ಷಗಳ ಸರಕಾರವು ಅಧಿಕಾರಕ್ಕೆ ಬಂತು. ರಾಮಕೃಷ್ಣ ಹೆಗಡೆ, ಎಸ್ ಬಂಗಾರಪ್ಪ, ಎಸ್.ಆರ್. ಬೊಮ್ಮಾಯಿ, ಎಚ್.ಟಿ. ದೇವೇಗೌಡರ ಸಾಮೂಹಿಕ ಪ್ರಯತ್ನವೇ ಇದಕ್ಕೆ ಕಾರಣ.

ಲಿಂಗಾಯತ ಹೋರಾಟ ನೆಲಕಚ್ಚಲು ಇಪ್ಪತ್ತೆಂಟು ಕಾರಣಗಳು

ಇಲ್ಲಿ ಇದನ್ನು ಹೇಳುವ ಉದ್ಧೇಶವೇನೆಂದರೆ. ಕರ್ನಾಟಕದಲ್ಲಿ ಯಾವುದೇ ಅಲೆ ಪರಿಣಾಮಕಾರಿಯಾಗಿರುವುದಿಲ್ಲ.

ಲಿಂಗಾಯತ ಧರ್ಮ ಮಾನ್ಯತೆ ಬೇಡಿಕೆ ಕಾಂಗ್ರೆಸಿನ ಸೋಲಿಗೆ ಕಾರಣವೆಂದು ಹಲವು ದೃಶ್ಯ ಮಾಧ್ಯಮಗಳು ನಿರಂತರವಾಗಿ ಬಿತ್ತರಿಸುತ್ತಿರುವುದು ಖಂಡಿತ ತಪ್ಪು. ಕಾಂಗ್ರೆಸಿನ ಸೋಲಿಗೆ ವಿಮರ್ಶೆ ಮಾಡುವುದು ಲಿಂಗಾಯತ ಸಂಘಟನೆಗಳ ಕೆಲಸವೂ ಅಲ್ಲ. ಲಿಂಗಾಯತ ಧರ್ಮ ಬೇಡಿಕೆ ನ್ಯಾಯ ಸಮ್ಮತ ಹಾಗೂ ಕಾನೂನು ಸಮ್ಮತವಾಗಿದೆ.

ಆದರೆ ಅದನ್ನು ಸಿದ್ದರಾಮರಯ್ಯನವರ ಕಾಂಗ್ರೆಸ್ ಸರಕಾರವು ಚುನಾವಣಾ ಸಂದರ್ಭದಲ್ಲಿ ಬಿಜೆಪಿ ಹಾಗೂ ಯಡಿಯೂರಪ್ಪನವರ ವಿರುದ್ಧ ದಾಳವನ್ನಾಗಿ ಬಳಸಿದ್ದು ಖಂಡಿತ ತಪ್ಪು. ಕಾಂಗ್ರೆಸ್ ಇಂದಿಗೂ ಒಬ್ಬ ವ್ಯಕ್ತಿ ಅವಲಂಬಿತ ಕೇಂದ್ರಿತ ರಾಜಕಾರಣ ಮಾಡುವುದಿಲ್ಲ.

ಶಿವನೇ ಸಿದ್ದಾರೂಢ: ಲಿಂಗಾಯತ ಪ್ರತ್ಯೇಕ ಧರ್ಮನೂ ಆಗಿಲ್ಲ, ಎಂ ಬಿ ಪಾಟೀಲ್ರು ಸಚಿವರೂ ಆಗಿಲ್ಲ

ಆದರೆ, ಕರ್ನಾಟಕದಲ್ಲಿ ಸಿದ್ದರಾಮಯ್ಯನರ ಸರಕಾರವು ಬಹುಮತ ಸಾಬೀತು ಪಡಿಸಿ ಐದು ವರ್ಷ ಸರಕಾರವನ್ನು ಹಲವು ಯೋಜನೆಗಳಿಂದ ಚೆನ್ನಾಗಿ ನಡೆಸಿಕೊಂಡು ಹೋಯಿತು.

ಬಿ.ಎಸ್. ಯಡಿಯೂರಪ್ಪನವರು ಕೆಜೆಪಿ ವಿಸರ್ಜಿಸಿ ಮತ್ತೆ ಬಿಜೆಪಿ ಸೇರಿದರು. ಅತ್ತ ಮುನಿಸಿಕೊಂಡಿದ್ದ ಬಿ.ಎಸ್.ಆರ್ ಪಕ್ಷದ ಶ್ರೀರಾಮಲು ಮತ್ತೆ ಗೂಡು ಸೇರಿದರು. ಯಡಿಯೂರಪ್ಪ ಒಬ್ಬ ಲಿಂಗಾಯತ ಮಾಸ್ ಲೀಡರ್ ಇವರನ್ನು ಹೇಗಾದರೂ ಕಟ್ಟಿ ಹಾಕಬೇಕೆನ್ನುವ ಲೆಕ್ಕದಲ್ಲಿ ಅಂದು ಚಾಲನೆಯಲ್ಲಿದ್ದ ಲಿಂಗಾಯತ ಧರ್ಮದ ಬೇಡಿಕೆಯನ್ನು ದಾಳವನ್ನಾಗಿ ಅಸ್ತ್ರವವನ್ನಾಗಿ ಬಳಸಿಕೊಂಡಿತು ಕಾಂಗ್ರೆಸ್ ಪಕ್ಷ. ಆದರೆ ಯಶಸ್ಸು ಕಾಣಲಿಲ್ಲ.

ಲಿಂಗಾಯತ ಹೋರಾಟಕ್ಕೆ ಬೆಂಬಲ ಸೂಚಿಸಿ ಮಂಚೂಣಿಯಲ್ಲಿದ್ದ ಡಾ. ಶರಣ ಪ್ರಕಾಶ್ ಪಾಟೀಲ್, ವಿನಯ ಕುಲಕರ್ಣಿ, ಅಶೋಕ ಪಟ್ಟಣ, ಬಸವರಾಜ್ ರಾಯರೆಡ್ಡಿ, ವಿಜಯಾನಂದ ಕಾಶಪ್ಪನವರ್, ಬಿ.ಆರ್. ಪಾಟೀಲ್ (ಆಳಂದ), ಬಿ.ಆರ್. ಯಾವಾಗಲ್ ಮುಂತಾದವರು ಸೋತರು.

ಲಿಂಗಾಯತ ಚಳುವಳಿಯನ್ನು ಬೆಂಬಲಿಸಿದ ಮತ್ತು ಮೌಢ್ಯ ಕಂದಾಚರ ನಿಷೇಧ ವಿಧೇಯಕ ಕಾನೂನು ತಂದ ಟಿ.ಬಿ. ಜಯಚಂದ್ರ ಅವರು ತುಮಕೂರು ಭಾಗದ ಪ್ರಭಾವಿ ಸ್ವಾಮಿಗಳ ಅವಕೃಪೆಗೆ ಪಾತ್ರರಾಗಿ ಸೋತರು. ಸಿದ್ದರಾಮಯ್ಯನವರೂ ಸಹಿತ ಮೈಸೂರಿನ ಪ್ರಭಾವಿ ಸ್ವಾಮಿಗಳ ಮುನಿಸಿಗೆ ಗುರಿಯಾಗಿ ಸೋತರು.

ವಸ್ತು ಸ್ಥಿತಿ ಹೀಗಿರುವಾಗ ರಾಜಕೀಯ ವಿಶ್ಲೇಷಕರು ಲಿಂಗಾಯತ ಸಂಘಟನೆಗಳು, ಲಿಂಗಾಯತ ಚಳುವಳಿಯಿಂದ ಕಾಂಗ್ರೆಸ್ ಸೋತಿಲ್ಲ ಅಂತ ತೇಪೆ ಹಚ್ಚುವ ಕಾರ್ಯ ಮಾಡಬಾರದು. 2013 ರಲ್ಲಿ ಶೇಕಡಾ 36.7 ಕಾಂಗ್ರೆಸ್ ಮತಗಳು ಶೇ. 38 ಮತಗಳಾಗಿವೆ ಎಂದು ಜಂಬ ಕೊಚ್ಚಿಕೊಳ್ಳುವುದಕ್ಕಿಂತ ಮೊದಲು 2013 ರಲ್ಲಿ 20 % ಮತ ಪಡೆದ ಬಿಜೆಪಿ ಶೇ. 36 ಮತ ಪಡೆದು 104 ಶಾಸಕರನ್ನು ವಿಧಾನ ಸಭೆಗೆ ಆಯ್ಕೆ ಮಾಡುವಂತೆ ನೋಡಿಕೊಂಡಿತು.

1) ಅಂದರೆ ಶೇ. 16 ಮತಗಳ ಹೆಚ್ಚಳ ಬಿಜೆಪಿ ಪಡೆದಿದ್ದರಿಂದ ಆ ಪಕ್ಷ ರಾಜ್ಯದ ಹೆಚ್ಚು ಶಾಸಕರನ್ನು ಹೊಂದಿದ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿತು.

2) ಯಡಿಯೂರಪ್ಪನವರು ಲಿಂಗಾಯತರ ಮಾಸ್ ಲೀಡರ್ ಎಂದು ಜನಜನಿತವಾಗಿದ್ದು ಲಿಂಗಾಯತರು ಲಿಂಗಾಯತ ಧರ್ಮ ಬೇಡಿಕೆ ಮಾನ್ಯತೆ ಹೋರಾಟವನ್ನು ಬೆಂಬಲಿಸಲಿಲ್ಲ.

3) 2013 ರಲ್ಲಿ ಕರ್ನಾಟಕ ಶೇಕಡಾ ಮತದಾನವು 70.23. ಆದರೆ 2018 ರಲ್ಲಿ ಶೇಕಡಾ 74 ಮತದಾನದ ಪ್ರಮಾಣ ಮತ್ತು ಮತದಾರರ ಸಂಖ್ಯೆಯು ಹೆಚ್ಚಾಗಿದ್ದನ್ನು ನಾವು ಪರಿಗಣಿಸಬೇಕು. ಸುಮಾರು ಶೇಕಡಾ 4 ಹೆಚ್ಚಿನ ಮತಗಳಲ್ಲಿ ಶೇಕಡಾ 2.5 ಮತಗಳು ಬಿಜೆಪಿಗೆ ಬಿದ್ದಿವೆ. ಮತ್ತು ಜೆಡಿಎಸ್ ಕಳಪೆ ಪ್ರದರ್ಶನದ ನಡುವೆಯೂ 38 ಸೀಟು ಪಡೆದು ರಾಜ್ಯದ ದೋಸ್ತಿ ಸರಕಾರದ ಚುಕ್ಕಾಣೆ ಹಿಡಿಯಿತು.

4) ಸಿದ್ದರಾಮಯ್ಯನವರಿಗೆ ಕಾಂಗ್ರೆಸು ಗೆಲ್ಲಿಸಿಕೊಡುವುದಾಗಿ ಭರವಸೆ ನೀಡಿದ ನಮ್ಮ ಮಠಾಧೀಶರು, ಅಕ್ಕನವರು, ಅಣ್ಣನವರು ತಮ್ಮ ಮಾತು ಉಳಿಸಿಕೊಳ್ಳದೆ ಬೀದರ್ ಭಾಲ್ಕಿಯಲ್ಲಿ ಬಿಜೆಪಿ ಗೆಲುವಿಗೆ ಪ್ರಯತ್ನಿಸಿ ಸೋತು ಸುಮ್ಮನಾದರು. ಚಿತ್ರದುರ್ಗ, ಬಾಗಲಕೋಟೆ, ವಿಜಯಪುರ, ಗದಗ ಮುಂತಾದ ಕಡೆಗಳಲ್ಲಿ ಪ್ರಭಾವಿ ಸ್ವಾಮಿಗಳು ಮೌನಕ್ಕೆ ಶರಣಾದರು. ಹೀಗಾಗಿ ಆಯಾ ಜಿಲ್ಲೆಗಳಲ್ಲಿ ಕಾಂಗ್ರೆಸ್ ಸೋಲು ಅನುಭವಿಸಬೇಕಾಯಿತು.

5) ಡಾ. ಎಂ.ಬಿ. ಪಾಟೀಲ್ ರ ನೇತೃತ್ವದಲ್ಲಿ ಲಿಂಗಾಯತ ಧರ್ಮ ಅಲ್ಪಸಂಖ್ಯಾತ ಮಾನ್ಯತೆ ಮತ್ತು ಸಂವಿಧಾನ ಮಾನ್ಯತೆಗಾಗಿ ನಡೆಸಿದ ಹೋರಾಟವು ಬದ್ಧತೆಯಿಂದ ಕೂಡಿತ್ತು. ಆದರೆ ಅದರ ಮಹತ್ವವನ್ನು ಮತ್ತು ಲಾಭಗಳನ್ನು ಗ್ರಾಮೀಣ ಮತ್ತು ತಾಲೂಕು ಮಟ್ಟದಲ್ಲಿ ತಿಳಿಸುವಲ್ಲಿ ವಿಫಲರಾದ ಕಾರಣ, ಇದು ಕೊನೆ ಕೊನೆಗೆ ರಾಜಕೀಯ ಪ್ರೇರಿತ ಎಂಬ ಮಾಧ್ಯಮಗಳ ಕಾರ್ಯದಿಂದ ಸೋಲು ಅನುಭವಿಸಬೇಕಾಯಿತು.

6) ಸದಾಶಿವ ಆಯೋಗವನ್ನು ಅನುಷ್ಠಾನಗೊಳಿಸದೆ ಇರುವುದರಿಂದ ಮಾದಿಗ ಎಡ ಸಮುದಾಯದವರು ಬಿಜೆಪಿಯನ್ನು ಬೆಂಬಲಿಸಿದರು.

7) ಚುನಾವಣಾ ಸಂದರ್ಭದಲ್ಲಿ ವಾಲ್ಮೀಕಿ ಜನಾಂಗಕ್ಕೆ ವಿಶೇಷ ಮೀಸಲಾತಿ ಕಲ್ಪಿಸಿ ಶ್ರೀರಾಮುಲು ಅವರನ್ನು ಉಪಮುಖ್ಯಮಂತ್ರಿ ಮಾಡುತ್ತೇವೆ ಎಂಬ ಘೋಷಣೆಯಿಂದ ನಾಯಕ ಜನಾಂಗದವರು ಬಿಜೆಪಿ ಕಡೆಗೆ ವಾಲಿದರು.

8) ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಸಿದ್ದರಾಮಯ್ಯನವರು ಅತ್ಯಂತ ಕೀಳಾಗಿ ಹೀಯಾಳಿಸಿ ಜೈಲಿಗೆ ಹೋಗಿ ಬಂದ ಭ್ರಷ್ಟ ರಾಜಕಾರಣಿ ಎಂದು ನಿರಂತರ ವಾಗ್ದಾಳಿ ಮಾಡಿದ್ದು ಲಿಂಗಾಯತರ ಕೋಪಕ್ಕೆ ಕಾರಣವಾಯಿತು.

9) ಸಿದ್ದರಾಮಯ್ಯನವರು ಎಚ್.ಡಿ. ದೇವಗೌಡ ಹಾಗೂ ಅವರ ಮಕ್ಕಳನ್ನು ಅತ್ಯಂತ ಕಟುವಾಗಿ ಟೀಕಿಸಿದ್ದಕ್ಕೆ, ಬಿಜೆಪಿ ಜೊತೆ ಜೆಡಿಎಸ್ ಒಳ ಒಪ್ಪಂದವನ್ನು ನಿರ್ಮಿಸಿಕೊಂಡು ಅತಂತ್ರ ಸ್ಥಿತಿಗೆ ಕಾರಣವಾಯಿತು.

10) ಕರ್ನಾಟಕ ಸರಕಾರದಲ್ಲಿ ಡಿ.ಕೆ. ರವಿ, ಗಣಪತಿ ಭಟ್ಟ, ಕಲ್ಲಪ್ಪ ಹಂಡಿಭಾಗ್ ಅಧಿಕಾರಿಗಳ ಸಾವು, ಆತ್ಮಹತ್ಯೆ, ಶ್ರೀಮತಿ ಶಿಖಾ ಮತ್ತು ರಶ್ಮಿ ಮಹೇಶ್ ಅಂತಹ ಮಹಿಳಾ ಐಎಎಸ ಅಧಿಕಾರಿಗಳ ಮೇಲೆ ಹಲ್ಲೆ ಕಿರುಕುಳ, ಮಂಡ್ಯದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಗೆ ಕೊಟ್ಟ ಕಿರುಕುಳ ಕಾಂಗ್ರೆಸಿನ ದುರಾಡಳಿತಕ್ಕೆ ನಿದರ್ಶನವಾದವು.

11) ಲಿಂಗಾಯತ ಬೇಡಿಕೆಯಿಂದ ಯಾವುದೇ ಲಾಭ ಕಾಂಗ್ರೆಸು ಪಕ್ಷಕ್ಕೆ ಆಗಿಲ್ಲ. ಇಂದು ಎಂ.ಬಿ. ಪಾಟೀಲ್, ಬಸವರಾಜ್ ಹೊರಟ್ಟಿಯಂತಹ ಘಟಾನುಘಟಿಗಳಿಗೆ ಮಂತ್ರಿ ಪದವಿ ದೊರೆಯದಿರುವುದು ಧರ್ಮದ ಹೋರಾಟಕ್ಕೆ ಅವರು ನೀಡಿದ ಚಾಲನೆ ಮತ್ತು ಜಾತಿ ರಾಜಕಾರಣ. ಒಕ್ಕಲಿಗರ ಸುಮಾರು 11 ಮಂತ್ರಿಗಳು ಇಂದು ಸಂಪುಟದಲ್ಲಿದ್ದಾರೆ.

12) ಲಿಂಗಾಯತ ಮಹಾಸಭೆಯು ಲಿಂಗಾಯತರ ನಾಯಕ ಯಡಿಯೂರಪ್ಪನವರ ಬಗ್ಗೆ ಕೀಳು ಮಟ್ಟದ ಜಾಹೀರಾತು ನೀಡಿ ಒಂದು ಪಕ್ಷದ ಪೊಲಿಟಿಕಲ್ ಏಜೆಂಟರಂತೆ ಕೆಲಸ

ಮಾಡಿದ್ದು ದುರಂತವೇ ಸರಿ.

13) ಮೇಲ್ನೋಟಕ್ಕೆ ಲಿಂಗಾಯತ ಚಳುವಳಿ ಪಕ್ಷಾತೀತವೆಂದು ಘೋಷಿಸಿಕೊಂಡರೂ ಒಂದು ಪಕ್ಷದ ಪರವಾಗಿ ಕಾರ್ಯ ಮಾಡಿದ್ದು ಜನರಿಗೆ ಗೊಂದಲವನ್ನು ಸೃಷ್ಟಿಸಿತು.

14) ಮಂತ್ರಿಗಿರಿಗಾಗಿ ಕಾಂಗ್ರೆಸಿನ ಪ್ರಭಾವಿ ಶಾಸಕರು ತಮ್ಮ ಪಕ್ಕದ ಕಾಂಗ್ರೆಸಿನ ಅಭ್ಯರ್ಥಿಗಳನ್ನು ಸೋಲಿಸಲು ಪರೋಕ್ಷವಾಗಿ ಸಹಾಯ ಮಾಡಿದ್ದು ಕಾಂಗ್ರೆಸಿನ ಹಿನ್ನೆಡೆಗೆ ಕಾರಣವಾಯಿತು.

15) ನ್ಯಾಯ ಮೂರ್ತಿ ನಾಗಮೋಹನ್ ದಾಸ್ ಅವರ ವರದಿಯಲ್ಲಿ ನೀಡಿದ ಲಿಂಗಾಯತ ಮತ್ತು ವೀರಶೈವ ಲಿಂಗಾಯತ ಎಂಬ ದ್ವಂದ್ವ ನಿಲುವಿನ ಆದೇಶವು ಜನರಲ್ಲಿ ಗೊಂದಲಕ್ಕೆ ಈಡು ಮಾಡಿತು.

16 ) ಈಗ ಮತ್ತೆ ವೀರಶೈವ ಲಿಂಗಾಯತರು, ಸ್ವಾಮಿಗಳು, ರಾಜಕಾರಣಿಗಳು ಒಟ್ಟಾಗಿ ತಮ್ಮ ರಾಜಕೀಯ ಶಕ್ತಿ ಪ್ರದರ್ಶನಕ್ಕೆ ಮುಂದಾಗುತ್ತಿದ್ದಾರೆ ಇದಕ್ಕೆ ಏನನ್ನಬೇಕು?

1972 ರಲ್ಲಿ ವೀರೇಂದ್ರ ಪಾಟೀಲರನ್ನುಅಂದಿನ ಪ್ರಭಾವಿ ಲಿಂಗಾಯತ ಶಾಸಕರೇ ಅವಿಶ್ವಾಸ ಸೂಚಿಸಿ ಅಲ್ಪ ಮತ ಸರಕಾರವನ್ನಾಗಿ ಮಾಡಿದ್ದಕ್ಕೆ ಕಾಂಗ್ರೆಸಿನ ಲಿಂಗಾಯತ ನಾಯಕರೇ ಕಾರಣ.

17) 1992 ರಲ್ಲಿ ಬಹುಮತ ಪಡೆದ ಕಾಂಗ್ರೆಸಿನ ವೀರೇಂದ್ರ ಪಾಟೀಲರ ಸರಕಾರ ರಚನೆಯಾಯಿತು. ನಂತರ ಅನಾರೋಗ್ಯದ ನಿಮಿತ್ತ ಅವರನ್ನು ಅತ್ಯಂತ ಅಮಾನವೀಯವಾಗಿ ಉಚ್ಛಾಟಿಸಿ ಬಂಗಾರಪ್ಪನವರನ್ನು ಮುಖ್ಯ ಮಂತ್ರಿ ಮಾಡಿದಾಗ ಯಾವೊಬ್ಬ ಲಿಂಗಾಯತ ಶಾಸಕರು ಬಂಡೇಳಲಿಲ್ಲವೇಕೆ ?

ಎಲ್ಲ ರಾಜಕೀಯ ಪಕ್ಷಗಳು ತತ್ವ ಸಿದ್ಧಾಂತವನ್ನು ಗಾಳಿಗೆ ತೂರಿ ಅಧಿಕಾರ ದುಡ್ಡು ಮಾಡಿಕೊಳ್ಳಬೇಕೆನ್ನುವ ಏಕೈಕ ಉದ್ಧೇಶವನ್ನು ಹೊಂದಿರುತ್ತವೆ. ಲಿಂಗಾಯತರ ಅವೈದಿಕ ಹಿಂದುಯೇತರ ಧರ್ಮ ಮಾನ್ಯತೆಯೂ ಕಾನೂನು ಸಮ್ಮತ ಮತ್ತು ನ್ಯಾಯ ಸಮ್ಮತವಾಗಿದೆ. ಬಿಜೆಪಿ ಕಾಂಗ್ರೆಸಿನ ತಿಕ್ಕಾಟದಲ್ಲಿ ಧರ್ಮದ ಭಾವನೆಗಳಿಗೆ ಈ ಎರಡು ರಾಜಕೀಯ ಪಕ್ಷವು ಧಕ್ಕೆಯನ್ನು ಉಂಟು ಮಾಡದೇ ಧರ್ಮ ಮಾನ್ಯತೆಯನ್ನು ಪರಿಹರಿಸಲಿ .

ಲಿಂಗಾಯತ ಸಂಘಟನೆಗಳು ಒಂದು ಪಕ್ಷದ ಅಣತಿಯಂತೆ ನಡೆದುಕೊಳ್ಳದೆ ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ ಧರ್ಮ ಮಾನ್ಯತೆಗೆ ಹೋರಾಡಲಿ. ಧರ್ಮಕ್ಕೂ ರಾಜಕಾರಣಕ್ಕೂ ತಳಕು ಹಾಕಿ ಮುಗ್ಧ ಜನರನ್ನು ಮೋಸ ಮಾಡುವ ಕೃತ್ಯಕ್ಕೆ ಯಾವುದೇ ಪಕ್ಷವು ಕೈ ಹಾಕಬಾರದು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
It is certainly wrong that many visual media continuously cast the demand for the Lingayat religion exposure to the Congress defeat. The review of Congress defeat is not the work of Lingayat organizations. The demand for Lingayat religion is legal says congress leader Ashok Pattan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more