ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾದರಾಯನಪುರ ಘಟನೆಗೆ ಯಾರ್ಯಾರ ಪ್ರತಿಕ್ರಿಯೆ ಏನು? ಇಲ್ಲಿವೆ ಹೇಳಿಕೆಗಳು!

|
Google Oneindia Kannada News

ಬೆಂಗಳೂರು, ಏ. 20: ಸೀಲ್‌ಡೌನ್ ನಡುವೆಯೆ ನಿನ್ನೆ ಬೆಂಗಳೂರಿನ ಪಾದರಾಯನಪುರದಲ್ಲಿ ನಡೆದ ಘಟನೆ ನಿಜಕ್ಕೂ ಖಂಡನಾರ್ಹ. ಆರೋಗ್ಯ ರಕ್ಷಣೆಗೆ ಹೋಗಿದ್ದ ಆರೋಗ್ಯ ಕಾರ್ಯಕರ್ತರು ಹಾಗೂ ಪೊಲೀಸ್ ಸಿಬ್ಬಂದಿ ಹತ್ಯೆಗೆ ಮೊದಲೇ ತಯಾರಿ ಮಾಡಿಕೊಳ್ಳಲಾಗಿತ್ತು ಎಂಬ ಮಾಹಿತಿ ಇದೀಗ ಸರ್ಕಾರಕ್ಕೆ ಸಿಕ್ಕಿದೆ. ಅತಿಹೆಚ್ಚು ಪ್ರಕರಣಗಳು ಪತ್ತೆಯಾಗಿರುವುದರಿಂದ ಪಾದರಾಯನಪುರ ಹಾಗೂ ಬಾಪೂಜಿನಗರ ವಾರ್ಡ್‌ಗಳನ್ನು ಸೀಲ್‌ಡೌನ್ ಮಾಡಲಾಗಿದೆ. ಆ ಮೂಲಕ ಬೇರೆಯವರಿಗೆ ಕೋವಿಡ್ ಸೋಂಕು ಹರಡದಂತೆ ತಡೆಯುವುದು ಹಾಗೂ ಈಗಾಗಲೇ ಸೋಂಕಿತರೊಂದಿಗೆ ಮೊದಲ ಹಾಗೂ ಎರಡನೇ ಹಂತದ ಸಂಪರ್ಕ ಹೊಂದಿದ್ದ ಜನರ ಆರೋಗ್ಯ ಕಾಪಾಡುವುದು ಸರ್ಕಾರದ ಜವಾಬ್ದಾರಿಯಾಗಿತ್ತು. ಈ ಮಧ್ಯೆ ಕ್ವಾರಂಟೈನ್‌ಗೆ ಒಳಗಾಗಬೇಕಾಗಿದ್ದವರು ವೈದ್ಯರು, ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ.

ಘಟನೆ ಕುರಿತಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಸೇರಿದಂತೆ ರಾಜ್ಯ ರಾಜಕೀಯ ನಾಯಕರು ಏನೆಂದು ಪ್ರತಿಕ್ರಿಯೆ ಕೊಟ್ಟಿದ್ದಾರೆ? ಇಲ್ಲಿವೆ ಎಲ್ಲರ ಹೇಳಿಕೆಗಳು. ಮುಂದೆ ಓದಿ.

ಪಾದರಾಯನಪುರ ಘಟನೆಗೆ ಸರ್ಕಾರದ ಧೋರಣೆಯೆ ಕಾರಣ ಎಂದ ಸಚಿವರು!ಪಾದರಾಯನಪುರ ಘಟನೆಗೆ ಸರ್ಕಾರದ ಧೋರಣೆಯೆ ಕಾರಣ ಎಂದ ಸಚಿವರು!

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿಕೆ

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿಕೆ

ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಬೆಯ ಬಳಿಕ ಮಾತನಾಡಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ಪಾದರಾಯನಪುರದಲ್ಲಿ ನಿನ್ನೆ ನಡೆದ ಘಟನೆಯಲ್ಲಿ ಪೊಲೀಸ್ ಅಧಿಕಾರಿಗಳು, ಆರೋಗ್ಯ ಕಾರ್ಯಕರ್ತರ ಜೊತೆಗೆ ಗುಂಡಾಗಿರಿ ಮಾಡಿದ್ದಾರೆ. 54 ಜನರನ್ನ ಅರೆಸ್ಟ್ ಮಾಡಲಾಗಿದೆ, ಇನ್ನು ಐವರನ್ನ ಅರೆಸ್ಟ್ ಮಾಡಲಾಗುವುದು.

ಇನ್ನು ಶಾಸಕ ಜಮೀರ್ ಅಹಮದ್ ಖಾನ್ ಮೇಲೆ ಸಿಎಂ ಹರಿಹಾಯ್ದಿದ್ದಾರೆ. ಯಾರ್ರೀ ಅವ್ರು ಕೇಳೋಕೆ? ಸರ್ಕಾರ ಮಾಡುವ ಕೆಲಸಕ್ಕೆ ಯಾರಪ್ಪಣೆ ಬೇಕು?. ಅವರು ಏನು ಮಾತನಾಡುತ್ತಿದ್ದಾರೆ? ಈ ಪ್ರಕಕರಣದ ಹಿಂದೆ ಜಮೀರ್ ಪ್ರಚೋದನೆ ಕೊಡುತ್ತಿದ್ದಾರೆ ಎಂದು ಭಾವಿಸಬೇಕಾ? ಅಲ್ಲಿನ ಶಾಸಕರಾಗಿ ಜನರಿಗೆ ತಿಳಿವಳಿಕೆ ಹೇಳಬೇಕಾದ ವ್ಯಕ್ತಿ ಸಮರ್ಥನೆ ನಿಲ್ಲೋದು ಸರಿಯಲ್ಲ ಎಂದು ಯಡಿಯೂರಪ್ಪ ಹೇಳಿದ್ದಾರೆ.

ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ

ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ

ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಅವರು ಘಟನೆಯನ್ನು ಖಂಡಿಸಿದ್ದಾರೆ. ಘಟನೆ ಕುರಿತು ಕ್ಷೇತ್ರದ ಶಾಸಕ ಜಮೀರ್ ಅಹಮದ್ ಖಾನ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಬಳಿಕ ಮಾತನಾಡಿದ್ದಾರೆ. ಪಾದರಾಯನಪುರದಲ್ಲಿ ನಡೆದ ಗಲಭೆ ಮರುಕಳಿಸದಂತೆ ತಡೆಯಬೇಕಾದರೆ ದುಷ್ಕೃತ್ಯದಲ್ಲಿ ತೊಡಗಿರುವವರನ್ನು ಗುರುತಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಕೊರೊನಾ ವಿಚಾರದಲ್ಲಿ ಸರ್ಕಾರ ಕೈಗೊಳ್ಳುವ ಕ್ರಮಗಳಿಗೆ ನಮ್ಮ ಸಹಮತವಿದೆ. ಇದನ್ನು ನಾವು ಮೊದಲಿನಿಂದಲೂ ಹೇಳಿಕೊಂಡು ಬಂದಿದ್ದೇವೆ. ಯಾರೇ ಆಗಲಿ, ಕಾನೂನಿಗೆ ಗೌರವ ಕೊಡಬೇಕು. ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.

ಕಾನೂನು ಸಚಿವ ಮಾಧುಸ್ವಾಮಿ

ಕಾನೂನು ಸಚಿವ ಮಾಧುಸ್ವಾಮಿ

ವಿಧಾನಸೌಧದಲ್ಲಿ ಘಟನೆ ಬಗ್ಗೆ ಪ್ರತಿಕ್ರಿಯೆ ಕೊಟ್ಟಿರುವ ಕಾನೂನು ಸಚಿವ ಮಾಧುಸ್ವಾಮಿ ಅವರು, ಪಾದರಾಯನಪುರ ಗಲಭೆ ಕುರಿತು ಸಂಪುಟದಲ್ಲಿ ಚರ್ಚೆ ಆಗಿದೆ. ಆರೋಪಿಗಳ ಮೇಲೆ ಕಾನೂನು ರೀತಿಯಲ್ಲಿ ಎಲ್ಲಾ ರೀತಿಯ ಕ್ರಮಗಳನ್ನು ತೆಗೆದು ಕೊಳ್ಳುತ್ತೇವೆ. ಇನ್ನುಮುಂದೆ ಅಲ್ಲಿಗೆ ಹೋಗುವ ಕಾರ್ಯಕರ್ತರಿಗೂ ಭದ್ರತೆ ಕೊಡುತ್ತೇವೆ. ಪೊಲೀಸರಿಗೆ ಯಾವತ್ತೂ ರಿಸ್ಟ್ರಿಕ್ಟ್‌ ಮಾಡಿರಲಿಲ್ಲ ಎಂದಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್

ಯಾರೋ ವ್ಯಕ್ತಿಗಳು ಮಾಡಿದ ಕೃತ್ಯಕ್ಕೆ ಇಡೀ ಸಮಾಜವನ್ನು ದೋಷಿಸುವುದು ಸರಿಯಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪಾದರಾಯನಪುರ ಪ್ರಕರಣಕ್ಕೆ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಘಟನೆಯನ್ನು ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ. ಸರ್ಕಾರ ತೆಗೆದುಕೊಳ್ಳುವ ಎಲ್ಲಾ ಒಳ್ಳೆಯ ನಿರ್ಧಾರಗಳಿಗೆ ನಾವು ಸಹಕಾರ ಕೊಡುತ್ತೇವೆ. ನಾವು ಇಷ್ಟೇಲ್ಲ ಸಹಕಾರ ನೀಡುತ್ತಿದ್ದರೂ, ಅವರ ಪಕ್ಷದವರು ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ. ಅವರ ಮೇಲೂ ಕ್ರಮ ಕೈಗೊಳ್ಳಲಿ. ಈ ಘಟನೆ ಖಂಡನೀಯ, ವ್ಯಕ್ತಿಗಳು ಮಾಡಿದ ಕೃತ್ಯಕ್ಕೆ ವ್ಯಕ್ತಿಗಳಿಗೆ ಶಿಕ್ಷೆಯಾಗಬೇಕು. ಶಾಸಕ ಜಮೀರ್ ಅಹಮದ್ ಖಾನ್ ಅವರ ಹೇಳಿಕೆಯನ್ನು ಮತ್ತೊಮ್ಮೆ ಕೇಳಿಕೊಂಡು ಪ್ರತಿಕ್ರಿಯೆ ಕೊಡುತ್ತೇನೆ ಎಂದಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್

ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್

ಪಾದರಾಯನಪುರದ ಘಟನೆಗೆ ಸಂಬಂಧಿಸಿದಂತೆ ಆರೋಪಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಂಡು ತನಿಖೆ ನಡೆಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ. ಇಡೀ ದೇಶದಲ್ಲಿ ನಮ್ಮ ರಕ್ಷಣೆ ಮಾಡುತ್ತಿರುವ ವೈದ್ಯರು, ಆಶಾ ಕಾರ್ಯಕರ್ತರು, ಪೌರ ಕಾರ್ಮಿಕರು, ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ಹಾಗೂ ಹತ್ಯೆ ಮಾಡುತ್ತಿರುವುದನ್ನು ನೋಡುತ್ತಿದ್ದೇವೆ. ಇವೆಲ್ಲ ರಾಷ್ಟ್ರದ್ರೋಹದ ಘಟನೆಗಳಾಗಿವೆ. ನಿನ್ನೆ ಪಾದರಾಯನಪುರದಲ್ಲಿ 300-400 ಜನರು ಸೇರಿಕೊಂಡು ದಾಂಧಲೆ ಮಾಡಿದ್ದನ್ನು ನಾನು ಖಂಡಿಸುತ್ತೇನೆ. ದಾಂಧಲೆ, ಹಲ್ಲೆ ಮಾಡಿದವರನ್ನು ಹುಡುಕಿ ಹುಡುಕಿ ಜೈಲಿಗೆ ಹಾಕಬೇಕು. ಉತ್ತರ ಪ್ರದೇಶ ಸರ್ಕಾರ ಮಾಡಿದಂತೆ ಅಂಥವರನ್ನು ಹುಡುಕಿ ಅವರ ಆಸ್ತಿ ಮುಟ್ಟುಗೋಲು ಹಾಕಿಕೊಂಡು ಅವರನ್ನು ಬಂಧಿಸಿ ದೇಶದ್ರೋಹದ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಂತೆ ಇಲ್ಲಿಯೂ ಮಾಡಬೇಕೆಂದು ಹೇಳಿದ್ದಾರೆ.

ಕಂದಾಯ ಸಚಿವ ಆರ್. ಅಶೋಕ್

ಕಂದಾಯ ಸಚಿವ ಆರ್. ಅಶೋಕ್

ಹಲ್ಲೆಗೆ ಸಂಬಂಧಿಸಿದಂತೆ ಮಾತನಾಡಿರುವ ಕಂದಾಯ ಸಚಿವ ಆರ್. ಅಶೋಕ್, ನಿಮ್ಮನ್ನು ಹಾಗೂ ನಿಮ್ಮ ಕುಟುಂಬದವರನ್ನು ರಕ್ಷಣೆ ಮಾಡಲು ಬರುವವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸುವುದು, ಹಲ್ಲೆ ಮಾಡುವುದು ರಾಕ್ಷಸ ಪ್ರವೃತ್ತಿ ಎಂದಿದ್ದಾರೆ. ಕಿಡಿಗೇಡಿಗಳು ಸರ್ಕಾರದ ಆಸ್ತಿಯನ್ನು ನಾಶ ಮಾಡುವ ಪ್ರಯತ್ನ ಮಾಡಿದ್ದಾರೆ. ಇದು ಗುಂಡಾಗಿರಿ ವರ್ತನೆ. ಸರ್ಕಾರ ಕರೋನಾ ಸೋಂಕಿತರನ್ನು ಕ್ಚಾರಂಟೈನ್ ಮಾಡಿ ಅವರಿಗೆ ಚಿಕಿತ್ಸೆ ನೀಡುತ್ತಿದೆ. ಕೊರೊನಾ ವಿರುದ್ಧದ ಹೋರಾಟ ಒಂದು ಕಡೆಯಾದರೆ, ಇಂತಹ ಗೂಂಡಾಗಳನ್ನು ಮಟ್ಟಹಾಕೋದು ಕೂಡ ಇನ್ನೊಂದು ಕೆಲಸವಾಗಿದೆ. ಇದನ್ನು ಮೊದಲ ಹಂತದಲ್ಲೇ ಮಟ್ಟ ಹಾಕಬೇಕು. ಹಲ್ಲೆ ಮಾಡಿರುವವರ ವಿರುದ್ಧ ಕಾನೂನು ಸಮರವನ್ನು ಸಾರುತ್ತೇವೆ, ಯಾವುದೇ ಕಾರಣಕ್ಕೂ ಬಿಡೋದಿಲ್ಲ ಎಂದಿದ್ದಾರೆ.

ಗೃಹಸಚಿವ ಬಸವರಾಜ್ ಬೊಮ್ಮಾಯಿ

ಗೃಹಸಚಿವ ಬಸವರಾಜ್ ಬೊಮ್ಮಾಯಿ

ಪಾದರಾಯನಪುರ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಕೈಗೊಳ್ಳಲಿರುವ ಕ್ರಮ ಮುಂದೆ ಮಾದರಿಯಾಗಲಿದೆ ಎಂದು ಗೃಹಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಪಾದರಾಯನಪುರ ಘಟನೆ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸಂಪೂರ್ಣ ಮಾಹಿತಿ ನೀಡಿದ್ದೇನೆ. ಯಾವುದೇ ಮುಲಾಜಿಗೆ ಒಳಗಾಗದೇ ಕ್ರಮಕೈಗೊಳ್ಳಿ ಎಂದು ಸಿಎಂ ಅವರು ಸೂಚನೆ ಕೊಟ್ಟಿದ್ದಾರೆ. ನಾನು ಅಧಿಕಾರಿಗಳಿಗೂ ತಿಳಿಸಿದ್ದೇನೆ, ಇದು ಸಣ್ಣ ಕಾನೂನು ಉಲ್ಲಂಘನೆ ಪ್ರಕರಣ ಅಲ್ಲ. ಇದೊಂದು ಸಮಾಜ ದ್ರೋಹಿಗಳ ಕೆಲಸ.‌ ಸರ್ಕಾರ ಅದನ್ನು ಸಹಿಸಲ್ಲ.

ಒಂದು ವಾರ ಸಹಕಾರ ಕೊಟ್ಡಿದ್ದ ಜನರನ್ನ ದಾರಿ ತಪ್ಪಿಸಿದ್ದು ಯಾರು ಎಂದು ತನಿಖೆ ಮಾಡುತ್ತೇವೆ. ಉಳಿದ ಎಲ್ಲ ಸ್ಥಳಗಳಲ್ಲಿ ಭದ್ರತೆ ಮಾಡಿದ್ದೇವೆ. ಪಾದರಾಯನಪುರ, ಬಾಪೂಜಿನಗರ, ಟಿಪ್ಪುನಗರದಲ್ಲಿ ಹೆಚ್ಚಿನ ಭದ್ರತೆ ಮಾಡಿದ್ದೇವೆ. ನಾಲ್ಕು ಕೆಎಸ್‌ಆರ್‌ಪಿ ತುಕಡಿಗಳನ್ನ ನಿಯೋಜನೆ ಮಾಡಿದ್ದೇವೆ. ಯಾಕೆಂದರೆ ಈ ಮೂರು ಪ್ರದೇಶಗಳಲ್ಲಿ 19ಕ್ಕಿಂತ ಹೆಚ್ಚು ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಎರಡನೇ ಹಂತದ ಸಂಪರ್ಕ ಹೊಂದಿದ್ದವರನ್ನು ಪತ್ತೆ ಮಾಡುತ್ತಿದ್ದೇವೆ. ಘಟನೆಗೆ ಕಾರಣ ಏನು, ಯಾರು ಪ್ರಚೋದನೆ ಕೊಟ್ಡಿದ್ದಾರೆ, ಇದರ ಯಾರಿದ್ದಾರೆ ಅನ್ನೋದು ತನಿಖೆಯಲ್ಲಿ ಗೊತ್ತಾಗಲಿದೆ. ಎಷ್ಟೇ ದೊಡ್ಡ ವ್ಯಕ್ತಿಗಳಿದ್ದರೂ ಕಠಿಣ ಕ್ರಮಕೈಗೊಳ್ಳುತ್ತೇವೆ ಎಂದಿದ್ದಾರೆ.

ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ

ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ

ದೇಶದ ಕಾನೂನಿಗೆ ವ್ಯತಿರಿಕ್ತವಾಗಿ ನಡೆದುಕೊಳ್ಳುವವರನ್ನು ಮುಲಾಜಿಲ್ಲದೆ "ಬಲಿ' ಹಾಕಬೇಕು. ಇಡೀ ಜಗತ್ತು ಎದುರಿಸುತ್ತಿರುವ ಕರೋನಾ ವೈರಸ್ ವಿರುದ್ಧ ಜನತೆ ಸಂಘರ್ಷ ಮಾಡುತ್ತಿದ್ದಾರೆ. ಇಂತಹ ವಿಷಮ ಪರಿಸ್ಥಿತಿಯಲ್ಲಿ ಧರ್ಮದ ಗುರಾಣಿಯನ್ನು ಅಡ್ಡ ತಂದು ವ್ಯವಸ್ಥೆ ಬುಡಮೇಲು ಮಾಡುವುದನ್ನು ಅತ್ಯುಗ್ರವಾಗಿ ಖಂಡಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಪಾದರಾಯನಪುರ ಘಟನೆಯನ್ನು ಖಂಡಿಸಿದ್ದಾರೆ. ದೇಶದ ಸ್ವಾಸ್ಥ್ಯಕ್ಕಿಂತ ಬೇರಾವುದೂ ಮುಖ್ಯವಲ್ಲ. ಈ ಘಟನೆ ನಾಗರಿಕ ಸಮಾಜ ತಲೆತಗ್ಗಿಸುವಂತಹದು. ಕಾನೂನು ಕೈಗೆತ್ತಿಕೊಂಡು ಗೂಂಡಾಗಿರಿ, ದೌರ್ಜನ್ಯ ನಡೆಸಿರುವುದು ಅಕ್ಷಮ್ಯ ಅಪರಾಧ. ಯಾವುದೇ ಧರ್ಮದವರಿರಲಿ ಈ ದೇಶದ ಕಾನೂನಿಗೆ ತಲೆ ಬಾಗಿಸಬೇಕು. ಇಂತಹ ಅತಿರೇಕದ ಹುಚ್ಚಾಟಗಳನ್ನು ಯಾರೂ ಪ್ರದರ್ಶಿಸಕೂಡದು. ಅವುಗಳನ್ನು ಸಹಿಸಲಾಗುವುದಿಲ್ಲ ಎಂದಿದ್ದಾರೆ.

ಆರೋಗ್ಯ ಸಚಿವ ಬಿ. ಶ್ರೀರಾಮುಲು

ಆರೋಗ್ಯ ಸಚಿವ ಬಿ. ಶ್ರೀರಾಮುಲು

ಯಾರೇ ತಪ್ಪಿತಸ್ಥರು ಆಗಿದ್ದರೂ ಅವರಿಗೆ ತಕ್ಷಣ ಶಿಕ್ಷೆ ಕೊಡಬೇಕು ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದ್ದಾರೆ. ಇಂತಹ ಪ್ರಕರಣಗಳು ಮರುಕಳಿಸದ ಹಾಗೆ ಮಾಡಬೇಕು. ಆಶಾ ಕಾರ್ಯಕರ್ತರಿಗೆ ಈ ರೀತಿ ತೊಂದರೆ ಆಗುವುದನ್ನು ನಾವು ಸಹಿಸುವುದಿಲ್ಲ. ಈ ಬಗ್ಗೆ ಈಗಾಗಲೇ ಗೃಹ ಸಚಿವರ ಜತೆ ಚರ್ಚೆ ಮಾಡಿದ್ದೇನೆ ಎಂದಿದ್ದಾರೆ. ಇನ್ನು ಶಾಸಕ ಜಮೀರ್ ಅಹ್ಮದ್ ಖಾನ್ ಹೇಳಿಕಗೆ ಪ್ರತಿಕ್ರಿಯೆ ಕೊಟ್ಟು, ಕ್ವಾರಂಟೈನ್‌ನಲ್ಲಿ ಕಾಳಜಿ ಮಾಡಬೇಕಾಗಿದ್ದು ಸರ್ಕಾರದ ಕರ್ತವ್ಯ. ಚಿಕಿತ್ಸೆ ಪ್ರಕ್ರಿಯೆಗಳನ್ನ ನಡೆಸಲು ನಮಗೆ ಯಾವುದೇ ಟೈಂ ಇರಲ್ಲ. ಘಟನೆ ನಡೆದಿರುವುದು ತಪ್ಪು ಎಂದಿದ್ದಾರೆ.

ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್

ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್

ಯಾರು ಈ ರೀತಿ ಹಲ್ಲೆ ಮಾಡುತ್ತಾರೊ ಅವರನ್ನು ಬಂಧಿಸಿ, ಅವರ ಮೇಲೆ ಎಫ್‌ಐಆರ್ ದಾಖಲಿಸಬೇಕು. ಆಶಾ ಕಾರ್ಯಕರ್ತರು ನಿಮ್ಮ ಆರೋಗ್ಯ ರಕ್ಷಣೆಗೆ ಬರುತ್ತಾರೆ. ಕ್ವಾರಂಟೈನ್ ಮಾಡಿದ್ರೆ ನಿಮ್ಮ ಆರೋಗ್ಯ ಸರಿಯಾಗುತ್ತದೆ. ಈ ರೀತಿಯ ಘಟನೆ ಆಗಬಾರದು, ಆದರೆ ಪರಿಸ್ಥಿತಿ ತುಂಬಾ ಗಂಭೀರವಾಗುತ್ತದೆ. ಆ ಧರ್ಮದ ಗುರುಗಳು ಹಾಗೂ ಜನಪ್ರತಿನಿಧಿಗಳು ಅವರಿಗೆ ತಿಳಿ ಹೇಳಬೇಕು. ಯಾರೂ ಕೂಡ ಪಿತೂರಿ ಮಾಡುವ ಕೆಲಸ ಮಾಡಬಾರದು ಎಂದಿದ್ದಾರೆ.

ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ

ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ

ಪುಂಡಾಟ ಮಾಡಿದವರಿಗೆ ಕನಿಕರ ತೋರಿಸುವ ಅಗತ್ಯ ಇಲ್ಲ. ಗಲಭೆ ಹಿಂದೆ ಯಾರೇ ಇದ್ದರೂ ಅವರ ವಿರುದ್ಧ ಕ್ರ‌ಮ ಆಗಬೇಕು. ಪ್ರಕರಣದ ಹಿಂದೆ ಶಾಸಕ ಜಮೀರ್ ಅಹ್ಮದ್ ಖಾನ್ ಇದ್ದರು ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಹೇಳಿದ್ದಾರೆ. ಹಿಂದೆ ಸಾದಿಕ್‌ಪಾಳ್ಯದಲ್ಲಿ ಹಲ್ಲೆ ನಡೆದಾಗ ಕೆಲವರು ಅವರ ಪರವಾಗಿ ಮಾತನಾಡಿದ್ದರು. ಅನುಮತಿ ತಗೊಂಡು ಹೋಗಿದ್ರಾ ಎಂದು ಸಮರ್ಥನೆ ಮಾಡಿಕೊಂಡಿದ್ದರು. ಅವರ ಹೇಳಿಕೆಗಳೆ ನಿನ್ನೆಯ ಪ್ರಕರಣಕ್ಕೆ ಕಾರಣ. ಹೀಗಾಗಿ ಅಂಥವರ ಹೆಡೆಮುರಿ ಕಟ್ಟಬೇಕಾಗುತ್ತದೆ. ಯಾಕೆ ಒಂದೇ ಸಮುದಾಯದ ಜನ ಹೀಗಾಡುತ್ತಾರೆ? ಇವರ ಹಿಂದೆ ಯಾರ ಪ್ರಚೋದನೆ ಇದೆ? ಇವೆಲ್ಲ ಸಂಶಯಗಳು ಕಾಡುತ್ತವೆ. ಶೇ.30 ರಷ್ಟು ಸೋಂಕು ದೇಶದಲ್ಲಿ ತಬ್ಲಿಘಿಗಳಿಂದಲೆ ಅಂಟಿದೆ. ರಾಜ್ಯದಲ್ಲೂ ತಬ್ಲಿಘಿ ಮತ್ತು ನಂಜನಗೂಡು ವ್ಯಕ್ತಿಯಿಂದಲೇ ಸೋಂಕು ಹೆಚ್ಚಾಯಿತು. ಇದನ್ನೆಲ್ಲಾ ಮಟ್ಟಹಾಕಿ‌ ಸಾಧಿಸಿ ತೋರಿಸಬೇಕಿದೆ.


ಲಾಕ್‌ಡೌನ್‌ನಿಂದ ರಾಜ್ಯದಲ್ಲಿ ಪ್ರತಿದಿನ 1500-1700 ಕೋಟಿ ರೂ. ನಷ್ಟವಾಗುತ್ತಿದೆ. ಮುಖ್ಯಮಂತ್ರಿಗಳು ಸಂಯಮದಿಂದ ವರ್ತಿಸುತ್ತಿರುವುದನ್ನು ದೌರ್ಬಲ್ಯ ಎಂದು ಭಾವಿಸಿದಂತಿದೆ. ಯಾವುದರ ಮೂಲಕ ಉತ್ತರ ನೀಡಬೇಕೋ ಹಾಗೆ ನೀಡಬೇಕು. ಯುಪಿಗೂ ಒಂದು ಹೆಜ್ಜೆ ಮುಂದೆ ಹೋಗಿ ಕ್ರಮ ಕೈಗೊಂಡರೂ ತೊಂದರೆ ಇಲ್ಲ. ಸಿಎಂ ಉದಾರತೆಯನ್ನು, ಸಂಯಮದ ಮಾತನ್ನು ಪುಂಡಾಟಕ್ಕೆ ಕೊಟ್ಟ ಲೈಸೆನ್ಸ್‌ ಎಂದೇ ಭಾವಿಸಿದ್ದಾರೆ. ಇಂತಹವರಿಗೆ ಸಂಯಮ ತೋರುವ ಅಗತ್ಯವಿಲ್ಲ. ರಾಜ್ಯದ ಪೊಲೀಸರಿಗೆ ಸಾಮರ್ಥ್ಯ ಇದೆ, ಇಲ್ಲದೇ ಇದ್ದಲ್ಲಿ‌ ಸಿಆರ್‌ಪಿಎಫ್ ಕರೆ ಪರಿಸ್ಥಿತಿ ತಿಳಿಗೊಳಿಸಲಿ ಎಂದಿದ್ದಾರೆ.

ಮಾಜಿ ಸಚಿವ, ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್

ಮಾಜಿ ಸಚಿವ, ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್

ಘಟನೆಗೆ ಸಂಬಂಧಿಸಿದಂತೆ ಶಾಸಕ ಜಮೀರ್ ಅಹ್ಮದ್ ಖಾನ್, ಶನಿವಾರ ರಾತ್ರಿ 50 ಜನರನ್ನು ಕರೆದುಕೊಂಡು ಹೋಗಲು ಬಂದಿದ್ದರು. ಆರೋಗ್ಯ ಇಲಾಖೆಯವರಿಗೆ ನಾನಿರುವ ಸಂದರ್ಭದಲ್ಲಿ ಬನ್ನಿ ಎಂದು ತಿಳಿಸಿದ್ದೆ. ಆದ್ರೆ ಸಂಜೆಯವರೆಗೂ ಯಾರೂ ಬಂದಿರಲಿಲ್ಲ. ನಂತರ ಸಂಜೆ ಏಕಾಏಕಿ ಹೋಗಿದ್ದಾರೆ. ಸಾರಾಯಿಪಾಳ್ಯ ಮತ್ತು ಈ ಘಟನೆಗೆ ಹೋಲಿಕೆ ಮಾಡಬೇಡಿ. ಪಾದರಾಯನಪುರದ ಜನರು ನಮ್ಮನ್ನು ಇಲ್ಲಿಯೇ ಪರೀಕ್ಷೆ ಮಾಡಿ ಎಂದು ಕೇಳಿದ್ದಾರೆ ಅಷ್ಟೆ. ಬಿಬಿಎಂಪಿಯವರು ಬೆಳಿಗ್ಗೆ ಹೋಗಬೇಕಿತ್ತು, ರಾತ್ರಿ ಯಾಕೆ ಹೋಗಬೇಕಿತ್ತು? ಎಂದು ಆರೋಗ್ಯ ಇಲಾಖೆಯವರು ತಪ್ಪು ಮಾಡಿದ್ದಾರೆ ಎಂದು ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.

ಪಾದರಾಯನಪುರದಲ್ಲಿ ಬಿಬಿಎಂಪಿ ಸಿಸಿ ಕ್ಯಾಮರಾಗಳನ್ನು ಧ್ವಂಸಗೊಳಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಜಮೀರ್, ಇದನ್ನು ನಾನು ಖಂಡಿಸುತ್ತೇನೆ, ಅವರ ವಿರುದ್ದ ಕ್ರಮ ತೆಗೆದುಕೊಳ್ಳಲಿ ಎಂದಿದ್ದಾರೆ.

English summary
Many politicians have responded to the Padarayanapura incident. Talking about the incident, MLA zameer ahmed khan said the BBMP had made a mistake.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X