ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೇವಡಿಗೆ ಕಾರಣವಾಯ್ತೇ ಬಿಜೆಪಿಯ 'ಬೆಂಗಳೂರು ರಕ್ಷಿಸಿ' ಯಾತ್ರೆ?!

|
Google Oneindia Kannada News

Recommended Video

ಬಿಜೆಪಿಯ ಬೆಂಗಳೂರು ರಕ್ಷಿಸಿ ಪಾದಯಾತ್ರೆಯನ್ನ ಲೇವಡಿ ಮಾಡಿದ ಜನಸಾಮಾನ್ಯರು | Oneindia Kannada

ಬೆಂಗಳೂರು, ಮಾರ್ಚ್ 03: ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲಿ ಕರ್ನಾಟಕ ಬಿಜೆಪಿ ಆಯೋಜಿಸಿರುವ ಮೂರು ದಿನಗಳ ಬೆಂಗಳೂರು 'ರಕ್ಷಿಸಿ ಯಾತ್ರೆ'ಗೆ ನಿನ್ನೆ(ಮಾ.02)ಚಾಲನೆ ದೊರೆತಿದೆ.

ಬಿಜೆಪಿಯ ಘಟಾನುಘಟಿ ನಾಯಕರು ಪಾದಯಾತ್ರೆಯಲ್ಲಿ ಭಾಗಿಯಾಗಿದ್ದು, ಬೆಂಗಳೂರಿನ ಪ್ರಮುಖ 10 ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಇವನ್ನು ನಿಭಾಯಿಸಲು ರಾಜ್ಯ ಸರ್ಕಾರ ವಿಫಲವಾಗಿರುವುದನ್ನು ಖಂಡಿಸುವುದು ಯಾತ್ರೆಯ ಉದ್ದೇಶವಾಗಿದೆ.

ಬಿಜೆಪಿಯ 'ಬೆಂಗಳೂರು ರಕ್ಷಿಸಿ' ಪಾದಯಾತ್ರೆಗೆ ಚಾಲನೆ ಬಿಜೆಪಿಯ 'ಬೆಂಗಳೂರು ರಕ್ಷಿಸಿ' ಪಾದಯಾತ್ರೆಗೆ ಚಾಲನೆ

ಮೂಲಭೂತ ಸೌಕರ್ಯ, ನಲಪಾಡ್ ಪ್ರಕರಣ ಸೇರಿದಂತೆ ಮತ್ತಿತರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಬಿಜೆಪಿ ಈ ಯಾತ್ರೆ ನಡೆಸುತ್ತಿದೆ. ಅಷ್ಟಕ್ಕೂ ಬಿಜೆಪಿ ದೃಷ್ಟಿಯಲ್ಲಿಟ್ಟುಕೊಂಡಿರುವ ಪ್ರಮುಖ ಸಮಸ್ಯೆಗಳು ಯಾವವು? ಮೂಲಸೌಕರ್ಯ ಸಮಸ್ಯೆಯ ಕುರಿತು ಧ್ವನಿ ಎತ್ತುವ ಬಿಜೆಪಿಯ ಇಂಗಿತ ಲೇವಡಿಗೆ ಕಾರಣವಾಗಿದ್ದೇಕೆ? ಇಲ್ಲಿದೆ ನೋಡಿ ಉತ್ತರ...

ಬೆಂಗಳೂರನ್ನು ರಕ್ಷಿಸೋಕೆ ಈಗ ನೆನಪಾಯ್ತೇ?!

ಬೆಂಗಳೂರನ್ನು ರಕ್ಷಿಸೋಕೆ ಈಗ ನೆನಪಾಯ್ತೇ?!

ಬೆಂಗಳೂರಿನ ಕುರಿತು ಬಿಜೆಪಿ ಬೆರಳು ಮಾಡಿ ತೋರಿಸುತ್ತಿರುವ ಸಮಸ್ಯೆಗಳಲ್ಲಿ ಬಹುಪಾಲು ಸಮಸ್ಯೆಗಳು ಎಂದಿನಿಂದಲೋ ಬೆಂಗಳೂರನ್ನು ಭಾದಿಸುತ್ತಿದೆ. ಆದರೆ ಬಿಜೆಪಿಗೆ ಚುನಾವಣೆ ಹೊಸಿಲ ಬಳಿ ಇರುವಾಗಲೇ ಈ ಎಲ್ಲ ಸಮಸ್ಯೆಗಳ ಬಗ್ಗೆ ಅರಿವು ಮೂಡಿತೆ? ಬೆಂಗಳೂರನ್ನು ರಕ್ಷಿಸುವ ಅಗತ್ಯ ಈಗ ಎದ್ದು ಕಾಣುತ್ತಿದೆಯೇ ಎಂಮಬುದು ಜನಸಾಮಾನ್ಯರ ಪ್ರಶ್ನೆ! ಸಾಮಾಜಿಕ ಮಾಧ್ಯಮಗಳಲ್ಲೂ ಈ ಕುರಿತು ಚರ್ಚೆ ನಡೆಯುತ್ತಲೇ ಇದೆ!

In Pics : ರಾಜ್ಯ ಸರಕಾರದ ವಿರುದ್ಧ ಬೆಂಗಳೂರು ರಕ್ಷಿಸಿ ಪಾದಯಾತ್ರೆ

ಬೆಂಗಳೂರು ರಸ್ತೆಗೆ ಮಿಜೋರಾಂ ಚಿತ್ರ!

ಬೆಂಗಳೂರು ರಕ್ಷಿಸಿ ಯಾತ್ರೆಗಾಗಿ ಬಿಜೆಪಿ ಸಿದ್ಧಪಡಿಸಿದ ಬುಕ್ ಲೆಟ್ ನಲ್ಲಿ ಬೆಂಗಳೂರಿನಲ್ಲಿ ಮೂಲಸೌಕರ್ಯ ಸಮಸ್ಯೆ ಇದೆ ಎಂದು ಬರೆದು, ಮಿಜೋರಾಂ ಮತ್ತು ಕಟ್ಮಂಡುವಿನ ಚಿತ್ರವನ್ನು ಬಳಸಿರುವುದು ಇದೀಗ ವಿವಾದ ಸೃಷ್ಟಿಸಿದೆ. ಕಾಂಗ್ರೆಸ್ ಅನ್ನು ದೂರುವ ಭರದಲ್ಲಿ ಬಿಜೆಪಿ ಈ ಚಿತ್ರಗಳನ್ನು ಬಳಸಿರುವುದನ್ನು ಶ್ರೀವತ್ಸ ಎಂಬುವವರು ಲೇವಡಿ ಮಾಡಿ ಟ್ವಿಟ್ಟರ್ ನಲ್ಲಿ ಹಾಕಿದ್ದು, ಅದನ್ನು ಕರ್ನಾಟಕ ಕಾಂಗ್ರೆಸ್ ರೀಟ್ವೀಟ್ ಮಾಡಿದೆ!

ಕಾನೂನು ಸುವ್ಯವಸ್ಥೆಯಲ್ಲಿ ಕುಸಿತ

ಕಾನೂನು ಸುವ್ಯವಸ್ಥೆಯಲ್ಲಿ ಕುಸಿತ

ಬೆಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ ಕುಸಿತ ಕಂದಿದೆ ಎಂದು ದೂರಿರುವ ಬಿಜೆಪಿ, 'ಮಹಿಳೆಯರ ಭಯ ಆತಂಕದಿಂದ, ನಡುಹಗಲಿನ ಕೊಲೆಗಳಿಂದ, ಅತ್ಯಾಚಾರಿಗಳಿಂದ, ಗೋಂಡಾಗಿರಿಯಿಂದ, ಸರಗಳ್ಳರ ಕಾಟದಿಂದ ಬೆಂಗಳೂರು ರಕ್ಷಿಸಿ, ಯಾತ್ರೆಯಲ್ಲಿ ಭಾಗಿಯಾಗಿ' ಎಂದು ಕರೆ ನೀಡಿದೆ. ಯಾತ್ರೆ ಮಾರ್ಚ್ 2 ರಿಂದ ಆರಂಭವಾಗಿದ್ದು, 15 ರವರೆಗೆ ನಡೆಯಲಿದೆ. ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದಂತೆ, ಮೊಹ್ಮದ್ ನಲಪಾಡ್ ಪ್ರಕರಣಕ್ಕೆ ಬಿಜೆಪಿ ಹೆಚ್ಚು ಒತ್ತುಕೊಡಲಿದೆ.

ಭ್ರಷ್ಟಾಚಾರ

ಭ್ರಷ್ಟಾಚಾರ

ಡ್ರಗ್ ಮಾಫಿಯಾ ಕೂಟದಿಂದ, ಭ್ರಷ್ಟ-ದುರಾಡಳಿತದಿಂದ, ತೆರಿಗೆ ಹಣದ ಲೂಟಿಯಿಂದ, ಉದ್ಯಮಗಳ ವಲಸೆಯಿಂದ, ಕಸದ ಗುಡ್ಡಗಳಿಂದ ಬೆಂಗಳೂರನ್ನು ರಕ್ಷಿಸಿ ಎಂದು ಬೆಂಗಳೂರಿನ ಸಮಸ್ಯೆಗಳನ್ನು ಬಿಜೆಪಿ ವಿವರಿಸಿ, ರಾಜ್ಯ ಸರ್ಕಾರದ ವೈಫಲ್ಯವನ್ನು ಎತ್ತಿತೋರಿಸಿದೆ.

ಕಸದ ಪರಿಸರ ಸಮಸ್ಯೆ

ಕಸದ ಪರಿಸರ ಸಮಸ್ಯೆ

ಬೆಮಗಳೂರಿ ಅತೀ ಮುಖ್ಯ ಸಮಸ್ಯೆಗಳು ಎನ್ನಿಸಿರುವ ಕೆರೆಗಳನ್ನು ಮಾಲಿನ್ಯ ಮುಕ್ತವಾಗಿಸುವ ಬಗ್ಗೆಯೂ ಯಾತ್ರೆಯಲ್ಲಿ ಧ್ವನಿ ಎತ್ತಲಾಗುತ್ತದೆ. ರೋಗ ತರುವ ಧೂಳಿನಿಂದ, ಹೊತ್ತಿ ಉರಿವ ಕೆರೆಗಳಿಂದ, ಕೆರೆಗೆ ಹರಿವ ವಿಷದಿಂದ, ಮರಗಳ ನಾಶದಿಂದ ಬೆಂಗಳೂರನ್ನು ರಕ್ಷಿಸಿ, ಬೆಂಗಳೂರನ್ನು ಮಾಲಿನ್ಯ ಮುಕ್ತ ಮಾಡಿ ಎಂದು ಬಿಜೆಪಿ ಕೋರಿದೆ.

ಕಳಪೆ ಮೂಲಸೌಕರ್ಯ

ಕಳಪೆ ಮೂಲಸೌಕರ್ಯ

ಕಳೆದ ವರ್ಷ ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆಗೆ ಬೆಂಗಳೂರಿನ ರಸ್ತೆಗಳ ಬಾವಿಗಳಂತಾಗಿದ್ದನ್ನು ದೂರಿ, ಕಳಪೆ ಮೂಲಸೌಕರ್ಯದ ಕುರಿತೂ ಬಿಜೆಪಿ ಸದ್ದು ಮಾಡಿದೆ. ಸ್ಲಂ ದುರವಸ್ಥೆಗಳಿಂದ, ಟ್ರಾಫಿಕ್ಕಿನ ಗೋಳಿನಿಂದ, ಗುಂಡನಬಿದ್ದ ರಸ್ತೆಗಳಿಂದ, ಕಿತ್ತೆದ್ದ ಫುಟ್ ಪಾತ್ ನಿಂದ, ಕುಡಿವ ನೀರು ಕೊರತೆಯಿಂದ ಬೆಂಗಳೂರನ್ನು ರಕ್ಷಿಸಿ, ಬೆಂಗಳೂರನ್ನು ಸಮಸ್ಯೆ ಮುಕ್ತವಾಗಿಸಬೇಕಿದೆ ಎಂದು ಬಿಜೆಪಿ ಅಭಿಪ್ರಾಯಪಟ್ಟಿದೆ. ಆದರೆ ಟ್ರಅಫಿಕ್ಕಿನ ಸಮಸ್ಯೆ ಬಗ್ಗೆ ಮಾತನಾಡಿದ ಬಿಜೆಪಿ ಯಾತ್ರೆಯಿಂದಲೇ ನಿನ್ನೆ ರಾಜಧಾನಿಯಲ್ಲಿ ಟ್ರಾಫಿಕ್ ಸಮಸ್ಯೆ ಎದುರಾಗಿದ್ದು, ದುರಂತವೇ ಸರಿ!

ಬಿಜೆಪಿ ಪಾದಯಾತ್ರೆ ಆರಂಭ, ಟ್ರಾಫಿಕ್ ಜಾಮ್ ಎದುರಿಸಿ ಬಿಜೆಪಿ ಪಾದಯಾತ್ರೆ ಆರಂಭ, ಟ್ರಾಫಿಕ್ ಜಾಮ್ ಎದುರಿಸಿ

English summary
Karnataka state BJP's Bengaluru Rakshisi (save Bengaluru) rally has taken place from March 2nd and rally will be continued till March 15th. As Karnataka assembly elections 2018 will be taking place in few months, this is also one of the campaign plans of BJP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X