ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಗವಂತನ ಅವಹೇಳನ ಮಾಡಿದ ಭಗವಾನ್‌ಗೆ ಮಾತಿನ ಪೆಟ್ಟು

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 28 : 'ಶ್ರೀರಾಮ ಆತ್ಮಹತ್ಯೆ ಮಾಡಿಕೊಂಡ. ರಾಮನನ್ನು ಪೂಜಿಸುವವರು ಕೊನೆಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ರಾಮ ಆದರ್ಶ ಪುರುಷನಲ್ಲ' ಮುಂತಾದ ಹೇಳಿಕೆಗಳನ್ನು ನೀಡುತ್ತಿರುವ ಪ್ರೊ.ಕೆ.ಎಸ್.ಭಗವಾನ್ ಅವರ ವಿರುದ್ಧ ಹಲವಾರು ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪೇಜಾವರ ಶ್ರೀಗಳು ಭಗವಾನ್ ಅವರನ್ನು 'ಹೇಡಿ' ಎಂದು ಕರೆದಿದ್ದರೆ, ಬಿಜೆಪಿ ಶಾಸಕರ ಸಿ.ಟಿ.ರವಿ ಅವರು 'ಭಗವಾನ್ ಅವರನ್ನು ಹುಚ್ಚಾಸ್ಪತ್ರೆಗೆ ಸೇರಿಸಬೇಕು' ಎಂದು ಹೇಳಿದ್ದಾರೆ. ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅವರು 'ಭಗವಾನ್ ಅವರು ಬುದ್ಧಿಗೇಡಿ' ಎಂದು ಟೀಕಿಸಿದ್ದಾರೆ. [ಹೇ ಭಗವಾನ್! ಯಾರು? ಏನು? ಎತ್ತ? ಏನಿದೆಲ್ಲ?]

'ಪೇಜಾವರ ಶ್ರೀಗಳು ಬಹಿರಂಗವಾಗಿ ಚರ್ಚೆಗೆ ಬನ್ನಿ ಎಂದು ಆಹ್ವಾನ ನೀಡಿರುವುದಕ್ಕೆ ಸೋಮವಾರ ಪ್ರತಿಕ್ರಿಯಿಸಿದ ಭಗವಾನ್ ಅವರು, 'ನನ್ನನ್ನು ಹೇಡಿ ಎಂದು ಕರೆದ ಪೇಜಾವರ ಶ್ರೀಗಳ ಜೊತೆ ನಾನು ಬಹಿರಂಗ ಚರ್ಚೆಗೆ ಬರುವುದಿಲ್ಲ. ನನ್ನ ಪುಸ್ತಕವನ್ನು ಅವರು ಓದಿಕೊಳ್ಳಲಿ. ನಾನು ಯಾಕೆ ಅವರೊಂದಿಗೆ ಚರ್ಚಿಸಬೇಕು?' ಎಂದು ಪ್ರಶ್ನಿಸಿದ್ದಾರೆ. ಭಗವಾನ್ ಬಗ್ಗೆ ಯಾರು ಏನು ಹೇಳಿದರು ನೋಡಿ.... [ರಾಮನ ಬಗ್ಗೆ ಭಗವಾನ್ ಹೇಳಿದ್ದೇನು?]

'ಭಗವಾನ್ ಅವರನ್ನು ಜೈಲಿಗೆ ಕಳಿಸಿ'

'ಭಗವಾನ್ ಅವರನ್ನು ಜೈಲಿಗೆ ಕಳಿಸಿ'

'ಹುಣ್ಣಿಮೆ ಮತ್ತು ಅಮಾವಾಸ್ಯೆಗೆ ಹುಚ್ಚು ಹೆಚ್ಚಾದಂತೆ ಭಗವಾನ್ ಅವರಿಗೆ ಹುಚ್ಚು ಹೆಚ್ಚಾಗಿದೆ. ಅವರನ್ನು ಹುಚ್ಚಾಸ್ಪತ್ರೆಗೆ ಸೇರಿಸಬೇಕು' ಎಂದು ಬಿಜೆಪಿ ನಾಯಕ ಮತ್ತು ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಹೇಳಿದ್ದಾರೆ. 'ನಮ್ಮ ಸರ್ಕಾರಕ್ಕೆ ಜಾತ್ಯಾತೀತ ತತ್ವದ ಮೇಲೆ ನಂಬಿಕೆ ಇದ್ದರೆ ಭಗವಾನ್ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಲಿ, ಅವರ ಹೇಳಿಕೆಯಿಂದ ಶಾಂತಿ ಭಂಗವಾದರೆ ಅದಕ್ಕೆ ಸರ್ಕಾರವೇ ಹೊಣೆ' ಎಂದು ಸಿಟಿ ರವಿ ಎಚ್ಚರಿಸಿದರು.

'ಸೈತಾನ್ ಎಂದು ಹೆಸರಿಡಬೇಕಿತ್ತು'

'ಸೈತಾನ್ ಎಂದು ಹೆಸರಿಡಬೇಕಿತ್ತು'

'ಪ್ರಚೋದನಾಕಾರಿ ಭಾಷಣ ಮಾಡುವ ಭಗವಾನ್ ವಿರುದ್ಧ ಸರ್ಕಾರ ಮೃದು ಧೋರಣೆ ಅನುಸರಿಸುತ್ತಿದೆ' ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಆರೋಪಿಸಿದ್ದಾರೆ. 'ಹಿಂದೂ ಧರ್ಮದ ವಿರುದ್ಧ ಮಾತನಾಡುವ ಭಗವಾನ್ ಒಬ್ಬ ಬುದ್ಧಿಗೇಡಿ, ಅವರ ತಂದೆ-ತಾಯಿ ಭಗವಾನ್ ಎನ್ನುವ ಬದಲು ಸೈತಾನ್ ಎಂದು ಹೆಸರಿಡಬೇಕಿತ್ತು' ಎಂದು ಮುತಾಲಿಕ್ ಹೇಳಿದರು.

'ಭಗವಾನ್ ಒಬ್ಬ ಹೇಡಿ'

'ಭಗವಾನ್ ಒಬ್ಬ ಹೇಡಿ'

'ಶ್ರೀರಾಮ, ಭಗವದ್ಗೀತೆ, ಶ್ರೀಕೃಷ್ಣನ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುವ ಭಗವಾನ್ ಒಬ್ಬ ಹೇಡಿ' ಎಂದು ಪೇಜಾವರ ಶ್ರೀಗಳು ಹೇಳಿದ್ದಾರೆ. ಬಾಯಿಗೆ ಬಂದಂತೆ ಮಾತನಾಡುವ ಬದಲು ಬಹಿರಂಗವಾದ ಚರ್ಚೆಗೆ ಬನ್ನಿ ಎಂದು ಸವಾಲು ಹಾಕುತ್ತಿದ್ದೇವೆ. ಅದನ್ನು ತಿರಸ್ಕರಿಸುತ್ತಲೇ ಇದ್ದಾರೆ' ಶ್ರೀಗಳು ಹೇಳಿದರು.

'ನಾನು ಚರ್ಚೆಗೆ ಹೋಗುವುದಿಲ್ಲ'

'ನಾನು ಚರ್ಚೆಗೆ ಹೋಗುವುದಿಲ್ಲ'

'ಪೇಜಾವರ ಶ್ರೀಗಳ ಜೊತೆ ನಾನು ಬಹಿರಂಗ ಚರ್ಚೆಗೆ ಹೋಗುವುದಿಲ್ಲ. ನನ್ನ ಪುಸ್ತಕವನ್ನು ಪೇಜಾವರ ಶ್ರೀಗಳು ಓದಿಕೊಳ್ಳಲಿ. ನಾನು ಯಾಕೆ ಅವರೊಂದಿಗೆ ಚರ್ಚಿಸಬೇಕು? ಎಂದು ಸೋಮವಾರ ಭಗವಾನ್ ಪ್ರಶ್ನಿಸಿದ್ದಾರೆ.
'ಸಾಮಾಜಿಕ ಜಾಲತಾಣದಲ್ಲಿ ನನಗೆ ನೀಡಿದ ಪ್ರಶಸ್ತಿಗೆ ಟೀಕೆ ಮಾಡಿದವರು ಯಾರೂ ನನ್ನ ಪುಸ್ತಕ ಓದಿದವರಲ್ಲ. ಅವರಿಗೆ ಕೃತಿಯಲ್ಲಿ ಏನಿದೆ? ಎಂಬುದು ಗೊತ್ತಿಲ್ಲ' ಎಂದು ಭಗವಾನ್ ವ್ಯಂಗ್ಯವಾಡಿದ್ದಾರೆ.

ಸಿಎಂ ಸಿದ್ದರಾಮಯ್ಯ ಏನು ಹೇಳುತ್ತಾರೆ?

ಸಿಎಂ ಸಿದ್ದರಾಮಯ್ಯ ಏನು ಹೇಳುತ್ತಾರೆ?

'ಕೆ.ಎಸ್.ಭಗವಾನ್ ಬಗ್ಗೆ ಮಾಧ್ಯಮಗಳಿಗೆ ಮಾತನಾಡಲು ಹೇಗೆ ಸ್ವಾತಂತ್ರ್ಯ ಇದೆಯೋ, ಅದೇ ರೀತಿಯಾಗಿ ಭಗವಾನ್‍ಗೆ ಕೂಡ ಅವರ ಅಭಿಪ್ರಾಯ ವ್ಯಕ್ತಪಡಿಸಲು ಸ್ವಾತಂತ್ರ್ಯ ಇದೆ' ಎಂದು ಕೆಲವು ದಿನಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. 'ಪ್ರತಿಯೊಬ್ಬರಿಗೂ ವಾಕ್ ಸ್ವಾತಂತ್ರ್ಯ ಇದೆ. ವೈಚಾರಿಕ ವಿಚಾರಗಳಿಗೆ ಯಾವಾಗಲೂ ನನ್ನ ಬೆಂಬಲವಿದೆ. ಆದರೆ, ವ್ಯಕ್ತಿಗತವಾಗಿ ಅಲ್ಲ' ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಈ ವಿಡಿಯೋ ನೋಡಿ

ಈ ವಿಡಿಯೋ ನೋಡಿ

"ಆಸ್ತಿ ಉಳ್ಳವನು ಆಸ್ತಿಕನಾದರೆ,
ಬಾಲ ಉಳ್ಳವನು ಬಾಲಕನಾ?
ನಾಯಿ ಉಳ್ಳವನು ನಾಯಕನಾ?" ಭಗವಾನ್!!!

ಭಗವಾನ್ ಸುಳ್ಳು ಹೇಳುವ ವ್ಯಕ್ತಿ ಎನ್ನುವದನ್ನ ಅವರ ಮಾತಿನಿಂದಲೇ ಸಾಬೀತು ಪಡಿಸುವ ವಿಡಿಯೋ. [ವಿಡಿಯೋ ಲಿಂಕ್]

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧಿಕಾರಿಗಳು ತಮ್ಮ ಆತ್ಮವನ್ನು ಮಾರಿಕೊಂಡಿಲ್ಲವಾದರೆ ಈ ವೀಡಿಯೋ ವೀಕ್ಷಿಸಿದ ನಂತರ ತಮ್ಮ ನಿಲುವನ್ನು ನಿಶ್ಚಿತವಾಗಿ ಬದಲಿಸಿಕೊಳ್ಳುತ್ತಾರೆ.

English summary
Kannada writer and critic Prof K.S.Bhagawan again made a controversial remarks on god Rama and Krishna. Several leaders condemned the remarks.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X