ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಂತಕರನ್ನು ಶೂಟೌಟ್ ಮಾಡಿ: ಕುಮಾರಸ್ವಾಮಿ ಹೇಳಿಕೆಗೆ ಆಕ್ರೋಶ

|
Google Oneindia Kannada News

Recommended Video

ಕುಮಾರಣ್ಣನ ಹೇಳಿಕೆಗೆ ಆಕ್ರೋಶ..!

ಬೆಂಗಳೂರು, ಡಿಸೆಂಬರ್ 25: ಮದ್ದೂರಿನ ಜೆಡಿಎಸ್ ಮುಖಂಡ ತೊಪ್ಪನಹಳ್ಳಿ ಪ್ರಕಾಶ ಅವರ ಹತ್ಯೆ ಪ್ರಕರಣದಲ್ಲಿ ಹಂತಕರನ್ನು ಮುಲಾಜಿಲ್ಲದೆ ಗುಂಡಿಕ್ಕಿ ಕೊಂದು ಹಾಕುವಂತೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಮುಖ್ಯಮಂತ್ರಿ ಹುದ್ದೆಯ ಜವಾಬ್ದಾರಿಯುತ ಸ್ಥಾನದಲ್ಲಿದ್ದು ಹೀಗೆ ಆವೇಶದಿಂದ ಮಾತನಾಡುವುದು ಸರಿಯಲ್ಲ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.

ಮಂಡ್ಯ : ಮದ್ದೂರಿನಲ್ಲಿ ಹಾಡಹಗಲೇ ಜೆಡಿಎಸ್‌ ಮುಖಂಡನ ಹತ್ಯೆ ಮಂಡ್ಯ : ಮದ್ದೂರಿನಲ್ಲಿ ಹಾಡಹಗಲೇ ಜೆಡಿಎಸ್‌ ಮುಖಂಡನ ಹತ್ಯೆ

ಅತ್ತ ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಹತ್ಯೆಯನ್ನು ಖಂಡಿಸಿರುವ ಸ್ಥಳೀಯರು ಪೊಲೀಸರ ವಿರುದ್ಧ ಅಸಮಾಧಾನ ವ್ಯಕ್ತಿಪಡಿಸಿದ್ದಾರೆ.

ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಮದ್ದೂರಿನಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್‌ ಮಾಡಲಾಗಿದೆ. ಎಲ್ಲೆಡೆ ಖಾಕಿ ಪಡೆಯ ಸರ್ಪಗಾವಲು ಹಾಕಲಾಗಿದೆ.

 ಕನಕಪುರ : ಜೆಡಿಎಸ್ ಮುಖಂಡನ ಹತ್ಯೆ ಆರೋಪಿಗಳಿಗೆ ಗುಂಡೇಟು ಕನಕಪುರ : ಜೆಡಿಎಸ್ ಮುಖಂಡನ ಹತ್ಯೆ ಆರೋಪಿಗಳಿಗೆ ಗುಂಡೇಟು

ಜೆಡಿಎಸ್ ಮುಖಂಡ ಪ್ರಕಾಶ್ (50) ಅವರನ್ನು ದುಷ್ಕರ್ಮಿಗಳು ಸೋಮವಾರ ಸಂಜೆ ಮದ್ದೂರಿನ ಟಿ.ಬಿ. ವೃತ್ತದಲ್ಲಿ ಕತ್ತು ಸೀಳಿ ಹತ್ಯೆ ಮಾಡಿದ್ದರು. ಗಾಯಗೊಂಡಿದ್ದ ಪ್ರಕಾಶ್ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದರು.

ಮುಲಾಜಿಲ್ಲದೆ ಶೂಟೌಟ್ ಮಾಡಿ ಎಂದ ಸಿಎಂ!

ಮುಲಾಜಿಲ್ಲದೆ ಶೂಟೌಟ್ ಮಾಡಿ ಎಂದ ಸಿಎಂ!

ವಿಜಯಪುರದಲ್ಲಿ ಮಾಧ್ಯಮದವರ ಮುಂದೆಯೇ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜೊತೆ ಮೊಬೈಲ್‌ನಲ್ಲಿ ಮಾತನಾಡಿದರು. 'ಯಾವ ವಿಚಾರಕ್ಕೆ ಕೊಲೆ ನಡೆದಿದೆ ಎನ್ನುವುದು ನನಗೆ ನಿಜಕ್ಕೂ ಗೊತ್ತಿಲ್ಲ. ಕೊಲೆಯಾದ ವ್ಯಕ್ತಿ ತುಂಬಾ ಒಳ್ಳೆಯ ಮನುಷ್ಯ. ಅವರ ಹತ್ಯೆ ಆಘಾತ ಉಂಟುಮಾಡಿದೆ. ಈ ಹಿಂದೆಯೂ ಮೂರು ಹತ್ಯೆಗಳು ನಡೆದಿವೆ ಎಂದು ಕೇಳಿದ್ದೇನೆ. ಕೂಡಲೇ ಹಂತಕರನ್ನು ಶೂಟೌಟ್ ಮಾಡಿ. ಯಾವುದೇ ತೊಂದರೆ ಇಲ್ಲ' ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಉದ್ವೇಗದ ಪ್ರತಿಕ್ರಿಯೆ

ಹಂತಕರನ್ನು ಶೌಟೌಟ್ ಮಾಡಿ ಸಾಯಿಸುವಂತೆ ನೀಡಿದ ಹೇಳಿಕೆ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆಯೇ ಎಚ್ಚೆತ್ತ ಮುಖ್ಯಮಂತ್ರಿ ಕುಮಾರಸ್ವಾಮಿ, ಈ ಪ್ರಕರಣದ ಕುರಿತು ಮಾಹಿತಿ ಪಡೆಯುವ ವೇಳೆ ಉದ್ವೇಗದಿಂದ ಶೌಟೌಟ್ ಪದ ಬಳಕೆ ಮಾಡಿದ್ದಾಗಿ ಸ್ಪಷ್ಟೀಕರಣ ನೀಡಿದ್ದಾರೆ. ಇದು ಆದೇಶವಲ್ಲ. ಸಿಎಂ ಆಗಿ ಈ ಹೇಳಿಕೆ ನೀಡಿಲ್ಲ. ಈ ಹೇಳಿಕೆಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಹೇಳಿದ್ದರು.

ಹತ್ಯೆಯಾದ ಪ್ರಕಾಶ್ ಅವರ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಲು ಮುಖ್ಯಮಂತ್ರಿ ಕುಮಾರಸ್ವಾಮಿ ಮದ್ದೂರಿಗೆ ಭೇಟಿ ನೀಡಲಿದ್ದಾರೆ.

ಮೊದಲೇ ದೂರು ನೀಡಿದ್ದೆವು

ಮೊದಲೇ ದೂರು ನೀಡಿದ್ದೆವು

ಪ್ರಕಾಶ್ ಅವರ ಮೇಲೆ ಹತ್ಯೆ ನಡೆದ ಪ್ರಯತ್ನಗಳ ಬಗ್ಗೆ ಈ ಹಿಂದೆಯೇ ಪೊಲೀಸರಿಗೆ ದೂರು ನೀಡಿದ್ದೆವು. ಅವರು ನಮ್ಮ ಮನವಿಗೆ ಸ್ಪಂದಿಸಿದ್ದರೆ ಈ ಹತ್ಯೆ ಆಗುತ್ತಿರಲಿಲ್ಲ. ಈಗ ಹಂತಕರನ್ನು ಬಂಧಿಸಿ ಅವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳದೆ ಇರುವವರೆಗೂ ಶವ ಪಡೆದುಕೊಳ್ಳುವುದಿಲ್ಲ ಎಂದು ಪ್ರಕಾಶ್ ಅವರ ಸಂಬಂಧಿಕರು ಹೇಳಿದ್ದಾರೆ.

ಎಂಟು ಮಂದಿ ವಿರುದ್ಧ ಎಫ್‌ಐಆರ್

ಎಂಟು ಮಂದಿ ವಿರುದ್ಧ ಎಫ್‌ಐಆರ್

ಪ್ರಕಾಶ್ ಅವರ ಹತ್ಯೆ ಸಂದರ್ಭದಲ್ಲಿ ಅವರ ಜೊತೆಗಿದ್ದ ಅಭಿಲಾಷ್ ಎಂಬುವವರು ಮದ್ದೂರು ಠಾಣೆಯಲ್ಲಿ ದೂರು ನೀಡಿದ್ದಾರೆ.

ಪ್ರಸನ್ನ, ಸ್ವಾಮಿ, ಮುತ್ತೇಶ್, ಯೋಗೇಶ್, ಶಿವರಾಜ್, ಹೇಮಂತ್ ಸೇರಿದಂತೆ ಎಂಟು ಮಂದಿ ವಿರುದ್ಧ ದೂರು ದಾಖಲಾಗಿದ್ದು, ಐಪಿಸಿ ಸೆಕ್ಷನ್ 143, 146, 148, 120 (B), 114 ಮುಂತಾದವುಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅಭಿಲಾಷ್ ಎಂಟು ಮಂದಿಯ ಹೆಸರನ್ನು ದೂರಿನಲ್ಲಿ ಉಲ್ಲೇಖಿಸಿದ್ದು, ಅದರಂತೆ ಎಫ್‌ಐಆರ್ ದಾಖಲು ಮಾಡಲಾಗಿದೆ.

ಮುಖ್ಯಮಂತ್ರಿ ಅಲ್ಲವೇ?

ಮುಖ್ಯಮಂತ್ರಿ ಅಲ್ಲವೇ?

ಕುಮಾರಸ್ವಾಮಿ ಅವರು ಹಂತಕರನ್ನು ಶೂಟೌಟ್ ಮಾಡಿ ಎಂದು ಹೇಳಿಕೆ ನೀಡಿರುವುದು ತಪ್ಪು. ಅವರು ಕೂಡಲೇ ಈ ಬಗ್ಗೆ ರಾಜ್ಯದ ಜನರ ಕ್ಷಮೆ ಕೋರಬೇಕು. ಮುಖ್ಯಮಂತ್ರಿ ಹೇಳಿಕೆ ಜನರ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದರಿಂದ ಅಧಿಕಾರಿಗಳಿಗೆ ಮುಕ್ತ ಅವಕಾಶ ಕೊಟ್ಟಂತೆ ಆಗುತ್ತದೆ. ಸಿಎಂ ಆಗಿ ಈ ರೀತಿ ಹೇಳಿಲ್ಲ, ಆವೇಶದಿಂದ ಹೇಳಿದ್ದೇನೆ ಎಂದು ಸಿಎಂ ಹೇಳಿದ್ದಾರೆ. ಹಾಗಾದರೆ ಅವರು ಈಗ ಮುಖ್ಯಮಂತ್ರಿ ಆಗಿಲ್ಲವೇ ಎಂದು ಯಡಿಯೂರಪ್ಪ ಪ್ರಶ್ನಿಸಿದರು.

ಜೆಡಿಎಸ್, ಬಿಜೆಪಿ ಅಥವಾ ಕಾಂಗ್ರೆಸ್ ಆಗಲಿ, ಯಾವುದೇ ಪಕ್ಷದ ಕಾರ್ಯಕರ್ತರ ಹತ್ಯೆಯನ್ನು ಸಹಿಸುವುದು ಸಾಧ್ಯವಿಲ್ಲ. ಹಂತಕರಿಗೆ ಶಿಕ್ಷೆಯಾಗಬೇಕು. ಅದರಲ್ಲಿ ಎರಡು ಮಾತಿಲ್ಲ ಎಂದು ಯಡಿಯೂರಪ್ಪ ಹೇಳಿದ್ದಾರೆ.

English summary
People condemned HD Kumaraswamy's direction to Mandya SP to shootout the murderes mercilessly who killed JDS Maddur local leader Prakash on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X