ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮನ್ಸೂರ್‌ ಅಲಿಖಾನ್ ಜು.26ರ ತನಕ ಇಡಿ ವಶಕ್ಕೆ

|
Google Oneindia Kannada News

ಬೆಂಗಳೂರು, ಜುಲೈ 24 : ಐಎಂಎ ಸಮೂಹ ಸಂಸ್ಥೆಗಳ ಮಾಲೀಕ ಮನ್ಸೂರ್ ಖಾನ್‌ ಜುಲೈ 26ರ ತನಕ ಇಡಿ ವಶದಲ್ಲಿಯೇ ಇರಬೇಕಿದೆ. ಬಹುಕೋಟಿ ಹಗರಣದ ರೂವಾರಿ ಹೇಳಿಕೆಯನ್ನು ಇಡಿ ಇನ್ನೂ ದಾಖಲು ಮಾಡಿಕೊಂಡಿಲ್ಲ.

ಮೊದಲು ಮೂರು ದಿನಗಳ ಕಾಲ ಮನ್ಸೂರ್ ಖಾನ್‌ರನ್ನು ಇಡಿ ವಶಕ್ಕೆ ನೀಡಲಾಗಿತ್ತು. ನ್ಯಾಯಾಲಯ ಈ ಆದೇಶವನ್ನು ಜುಲೈ 26ರ ತನಕ ವಿಸ್ತರಣೆ ಮಾಡಿದೆ. ವಿಕ್ಟೋರಿಯಾ ಆಸ್ಪತ್ರೆ ವೈದ್ಯರು ಖಾನ್ ಆರೋಗ್ಯವಾಗಿದ್ದಾರೆ ಎಂದು ಹೇಳಿದೆ.

ಐಎಂಎ ಮನ್ಸೂರ್ ಖಾನ್ ಆಸ್ಪತ್ರೆಗೆ ದಾಖಲುಐಎಂಎ ಮನ್ಸೂರ್ ಖಾನ್ ಆಸ್ಪತ್ರೆಗೆ ದಾಖಲು

ಜಾರಿ ನಿರ್ದೇಶನಾಲಯ (ಇಡಿ) ವಶದಲ್ಲಿದ್ದ ಮನ್ಸೂರ್ ಖಾನ್‌ರನ್ನು ಎದೆ ನೋವಿನ ಕಾರಣ ಭಾನುವಾರ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅನಾರೋಗ್ಯದ ಕಾರಣ ಹೇಳಿಕೆ ದಾಖಲು ಮಾಡಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಇಡಿ ಹೇಳಿತ್ತು.

ಐಎಂಎ ಹಗರಣ: ಪ್ರಭಾವಿಗಳ ಹೆಸರು ಹೊರ ಹಾಕಿದ ಮನ್ಸೂರ್ ಖಾನ್ಐಎಂಎ ಹಗರಣ: ಪ್ರಭಾವಿಗಳ ಹೆಸರು ಹೊರ ಹಾಕಿದ ಮನ್ಸೂರ್ ಖಾನ್

Mansoor Khan in the custody of ED till July 26

ಇಡಿ ಪರವಾಗಿ ವಾದ ಮಂಡನೆ ಮಾಡಿದ ಹೆಚ್ಚುವರಿ ಸಾಲಿಟರ್ ಜನರಲ್ ಕೆ. ಎಂ. ನಟರಾಜ್ ಜುಲೈ 30ರ ತನಕ ವಶಕ್ಕೆ ನೀಡಬೇಕು ಎಂದು ಮನವಿ ಮಾಡಿದರು. ನ್ಯಾಯಾಲಯ ಜುಲೈ 26ರ ತನಕ ವಶಕ್ಕೆ ನೀಡಿ ಆದೇಶ ಹೊರಡಿಸಿತು.

ಐಎಂಎ ಹಗರಣ ಆರೋಪಿ ಮನ್ಸೂರ್ ಖಾನ್ ಬಂಧನಐಎಂಎ ಹಗರಣ ಆರೋಪಿ ಮನ್ಸೂರ್ ಖಾನ್ ಬಂಧನ

ಮನ್ಸೂರ್ ಖಾನ್ ಪರ ವಕೀಲ ಎಂ.ನಾರಾಯಣ ರೆಡ್ಡಿ ಐಎಂಎ ಹಗರಣದ ತನಿಖೆಯನ್ನು ಕರ್ನಾಟಕ ಸರ್ಕಾರ ರಚನೆ ಮಾಡಿರುವ ಎಸ್‌ಐಟಿ ನಡೆಸುತ್ತಿದೆ. ಇಡಿ ವಶಕ್ಕೆ ಅವರನ್ನು ನೀಡಿರುವುದು ಏಕೆ? ಎಂದು ವಾದ ಮಂಡನೆ ಮಾಡಿದರು.

ಐಟಿಯಿಂದ ತನಿಖೆ : "ಐಎಂಎ ಹಗರಣದ ಬಗ್ಗೆ ನಮಗೆ ದೂರು ನೀಡಿದರೆ ತನಿಖೆ ನಡೆಸುತ್ತೇವೆ. ಈಗ ಈ ಪ್ರಕರಣದ ತನಿಖೆಯನ್ನು ಇಡಿ ಮತ್ತು ಎಸ್‌ಐಟಿ ನಡೆಸುತ್ತಿದೆ" ಎಂದು ಆದಾಯ ತೆರಿಗೆ ಇಲಾಖೆ ಡಿಜಿ ಬಾಲಕೃಷ್ಣನ್ ಹೇಳಿದ್ದಾರೆ.

English summary
IMA founder Mansoor Khan in the custody of the Enforcement Directorate (ED) until July 26, 2019. SIT and ED probing the IMA scam case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X