ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Mann Ki Baat; ಕಲಬುರಗಿಯ ಸಿರಿಧಾನ್ಯ ಉತ್ಪಾದನೆ ಶ್ಲಾಘಿಸಿದ ಮೋದಿ

ಭಾನುವಾರ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಕಲಬುರಗಿಯ ಅಳಂದದಲ್ಲಿನ ಸಿರಿಧಾನ್ಯ ಉತ್ಪಾದನೆಯನ್ನು ಶ್ಲಾಘಿಸಿದರು.

|
Google Oneindia Kannada News

ಬೆಂಗಳೂರು, ಜನವರಿ 29; ಭಾರತದ ಪ್ರಧಾನಿ ನರೇಂದ್ರ ಮೋದಿ ತಿಂಗಳ ರೇಡಿಯೊ ಕಾರ್ಯಕ್ರಮ ಮನ್ ಕೀ ಬಾತ್ ಮೂಲಕ ದೇಶವನ್ನು ಉದ್ದೇಶಿಸಿ ಮಾತನಾಡಿದರು. ಸಿರಿಧಾನ್ಯ ಸೇರಿದಂತೆ ವಿವಿಧ ವಿಚಾರಗಳ ಕುರಿತು ಅವರು ಮಾತನಾಡಿದರು.

2023ರ ಮೊದಲ ಮತ್ತು 97ನೇ ಸಂಚಿಕೆಯ ಮನ್ ಕೀ ಬಾತ್ ಕಾರ್ಯಕ್ರಮದ ಮೂಲಕ ಭಾನುವಾರ ಮೋದಿ ದೇಶವನ್ನು ಉದ್ದೇಶಿಸಿ ಮಾತನಾಡಿದರು. ಜನರ ಆರೋಗ್ಯಕ್ಕಾಗಿ ಯೋಗ ಮತ್ತು ಸಿರಿಧಾನ್ಯ ಎಷ್ಟು ಮುಖ್ಯ ಎಂದು ವಿವರಣೆ ನೀಡಿದರು.

ಧಾರವಾಡ; ಜನರನ್ನು ಸೆಳೆದ ಸಿರಿಧಾನ್ಯ ನಡಿಗೆ ಧಾರವಾಡ; ಜನರನ್ನು ಸೆಳೆದ ಸಿರಿಧಾನ್ಯ ನಡಿಗೆ

ರಾಗಿ ಸೇರಿದಂತೆ ಸಿರಿಧಾನ್ಯಗಳು ಜನರ ಆರೋಗ್ಯ ಉತ್ತಮವಾಗಿಸುತ್ತದೆ. ಜನರು ಆರೋಗ್ಯ ಕಾಪಾಡಿಕೊಳ್ಳಲು ಸಿರಿಧಾನ್ಯಗಳ ಸೇವನೆಗೆ ಹೆಚ್ಚು ಆದ್ಯತೆ ನೀಡಬೇಕು ಎಂದು ಮೋದಿ ಕರೆ ನೀಡಿದರು. ಯೋಗವನ್ನು ಜೀವನ ಕ್ರಮದಲ್ಲಿ ಆಳವಡಿಸಿಕೊಳ್ಳಬೇಕು ಎಂದರು.

ಸಿರಿಧಾನ್ಯ ಮೂಲಕ ಕ್ಯಾನ್ಸರ್‌ಗೆ ಔಷಧಿಕೊಡುವ ಮೈಸೂರಿನ ಡಾ.ಖಾದರ್ ಸಿರಿಧಾನ್ಯ ಮೂಲಕ ಕ್ಯಾನ್ಸರ್‌ಗೆ ಔಷಧಿಕೊಡುವ ಮೈಸೂರಿನ ಡಾ.ಖಾದರ್

Mann Ki Baat Modi Praised Aland Bhootai Millets Farmers Producer Company Kalaburgi

ಮನ್ ಕೀ ಬಾತ್‌ನಲ್ಲಿ ಮೋದಿ ಭಾರತದ ಮನವಿಯಂತೆ ವಿಶ್ವಸಂಸ್ಥೆಯು ಅಂತಾರಾಷ್ಟ್ರೀಯ ಯೋಗ ದಿನ ಮತ್ತು ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷದ ಆಚರಣೆಯನ್ನು ಘೋಷಿಸಿದೆ ಎಂದು ಹೇಳಿದರು.

 ಮಕ್ಕಳಲ್ಲಿ ಅಪೌಷ್ಟಿಕತೆ ತಡೆಯಲು ರಾಯಚೂರು ಜಿಲ್ಲೆಯಲ್ಲಿ ಸಿರಿಧಾನ್ಯ ಲಡ್ಡು ಯೋಜನೆ ಮಕ್ಕಳಲ್ಲಿ ಅಪೌಷ್ಟಿಕತೆ ತಡೆಯಲು ರಾಯಚೂರು ಜಿಲ್ಲೆಯಲ್ಲಿ ಸಿರಿಧಾನ್ಯ ಲಡ್ಡು ಯೋಜನೆ

ದೇಶದ ವಿವಿಧೆಡೆ ಇರುವ ಸಿರಿಧಾನ್ಯ ಉದ್ಯಮಿಗಳ ಶ್ರಮವನ್ನು ಮೋದಿ ಪ್ರಸ್ತಾಪಿಸಿದರು. ಸಿರಿಧಾನ್ಯಗಳ ಉತ್ಪಾದನೆಯಲ್ಲಿ ಅಭೂತಪೂರ್ವ ಸಾಧನೆ ಮಾಡಿರುವ ಕರ್ನಾಟಕದ ಕಲಬುರಗಿಯ ಜಿಲ್ಲೆಯ ಆಳಂದ ತಾಲೂಕಿನ ಆಳಂದ ಭೂತಾಯಿ ಸಿರಿಧಾನ್ಯ ಉತ್ಪಾದನಾ ಸಂಸ್ಥೆಯು ಕಾರ್ಯವನ್ನು ಶ್ಲಾಘಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿ, 'ಸಿರಿಧಾನ್ಯಗಳ ಉತ್ಪಾದನೆಯಲ್ಲಿ ಅಭೂತಪೂರ್ವ ಸಾಧನೆ ಮಾಡಿರುವ ಕಲ್ಬುರ್ಗಿ ಜಿಲ್ಲೆಯ ಆಳಂದ ತಾಲೂಕಿನ ಆಳಂದ ಭೂತಾಯಿ ಸಿರಿಧಾನ್ಯ ಉತ್ಪಾದನಾ ಸಂಸ್ಥೆಯು ಪ್ರಧಾನಮಂತ್ರಿ ಶ್ರೀ @NarendraModi
ಅವರ ಮನ್ ಕೀ ಬಾತ್ ನಲ್ಲಿ ಶ್ಲಾಘನೆಗೆ ಒಳಗಾಗಿದೆ. ಆಳಂದ ಭೂತಾಯಿ ಸಿರಿಧಾನ್ಯ ಉತ್ಪಾದನಾ ಸಂಸ್ಥೆಗೆ ಹಾರ್ದಿಕ ಅಭಿನಂದನೆಗಳು' ಎಂದು ಹೇಳಿದ್ದಾರೆ.

ಆಳಂದ ಭೂತಾಯಿ ಸಿರಿಧಾನ್ಯ ಉತ್ಪಾದನಾ ಸಂಸ್ಥೆಯು ಕಳೆದ ವರ್ಷ ತನ್ನ ಕಾರ್ಯವನ್ನು ಆರಂಭಿಸಿದೆ. ಸಂಸ್ಥೆ ತಯಾರು ಮಾಡುವ ಬಿಸ್ಕೆಟ್, ಲಡ್ಡುವನ್ನು ಜನರು ಇಷ್ಟಪಡುತ್ತಿದ್ದಾರೆ. ಬೀದರ್‌ನಲ್ಲಿ ಮಹಿಳಾ ಕಿಸಾನ್ ಮಿಲೆಟ್ ಕಂಪನಿ ಸಿರಿಧಾನ್ಯ ಬೆಳೆದು ಅದರ ಹಿಟ್ಟು ತಯಾರು ಮಾಡುತ್ತಿದ್ದಾರೆ. ಇದರಿಂದ ಲಾಭವನ್ನು ಸಹ ಗಳಿಸುತ್ತಿದ್ದಾರೆ ಎಂದು ಮೋದಿ ತಿಳಿಸಿದರು.

ಸಿರಿಧಾನ್ಯಗಳ ಬಗ್ಗೆ ಮಾತು ಮುಂದುವರೆಸಿದ ಮೋದಿ ಭಾರತದಲ್ಲಿ ನಡೆಯುವ ಜಿ20 ಶೃಂಗಸಭೆಯಲ್ಲಿ ಸಿರಿಧಾನ್ಯಯುಕ್ತ ಆಹಾರಗಳನ್ನು ತಯಾರಿಸಿ ನೀಡಲಾಗುತ್ತದೆ ಎಂದು ಹೇಳಿದರು. ರಾಗಿ ಪಾಯಸ ಸೇರಿದಂತೆ ಕೆಲವು ಖಾದ್ಯಗಳನ್ನು ಪ್ರಸ್ತಾಪಿಸಿದರು.

ಸಚಿವರ ಟ್ವೀಟ್; ಕೇಂದ್ರ ಸಚಿವ, ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ಟ್ವೀಟ್ ಮಾಡಿ, 'ಕರ್ನಾಟಕದ ಕಲಬುರಗಿಯ ಆಳಂದ ಭೂತಾಯಿ ಹಾಗೂ ಬೀದರ್‌ನ ಮಹಿಳೆಯರ ತಂಡ ಸಿರಿಧಾನ್ಯಗಳಿಂದ ವಿವಿಧ ಉತ್ಪನ್ನಗಳನ್ನು ತಯಾರಿಸಿ ಯಶಸ್ವಿ ಉದ್ಯಮ ನಡೆಸುತ್ತಿದ್ದಾರೆ. ಇವರನ್ನು ಗುರುತಿಸಿ ತಮ್ಮ #MannKiBaat ನಲ್ಲಿ ಮೆಚ್ಚುಗೆಯ ಸೂಚಿಸಿದ್ದಕ್ಕಾಗಿ ಪ್ರಧಾನಮಂತ್ರಿ @narendramodi ಅವರಿಗೆ ಅನಂತ ಧನ್ಯವಾದಗಳು. ಇವರ ಸಾಧನೆ ಪ್ರೇರಣೆಯಾಗಿದೆ' ಎಂದು ಹೇಳಿದ್ದಾರೆ.

English summary
In the 97th episode of Mann Ki Baat and the first of 2023 PM Narendra Modi addressed nation on January 29th. He praised Aland Bhootai (Aland Bhutai) Millets Farmers Producer Company at Kalaburgi, Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X