• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಣಿಪಾಲ್ ಆರೋಗ್ಯ ಕಾರ್ಡ್‌ ನೋಂದಣಿ ಆರಂಭ; ದರಪಟ್ಟಿ

|
Google Oneindia Kannada News

ಬೆಂಗಳೂರು, ಜೂನ್ 22; ಕಸ್ತೂರ ಬಾ ಆಸ್ಪತ್ರೆ ಮಣಿಪಾಲ್ 'ಮಣಿಪಾಲ್ ಆರೋಗ್ಯ ಕಾರ್ಡ್‌ 2021' ನೋಂದಣಿ ಪ್ರಕ್ರಿಯೆಯನ್ನು ಆರಂಭಿಸಿದೆ. ಕಾರ್ಡ್‌ ಹೊಂದಿರುವ ಜನರಿಗೆ ಚೆಕ್‌ಅಪ್, ಚಿಕಿತ್ಸೆ ಸೇರಿದಂತೆ ವಿವಿಧ ಸೇವೆಯಲ್ಲಿ ರಿಯಾಯಿತಿ ಸಿಗಲಿದೆ.

ಮಣಿಪಾಲ್ ಆರೋಗ್ಯ ಕಾರ್ಡ್ ಪಡೆಯಲು ಯಾವುದೇ ವಯೋಮಿತಿ ಇಲ್ಲ. ಈಗಾಗಲೇ ಸುಮಾರು 3.6 ಲಕ್ಷ ಜನರು ಆರೋಗ್ಯ ಕಾರ್ಡ್ ಅಥವ ಮಣಿಪಾಲ್ ಕಾರ್ಡ್‌ ಪಡೆದಿದ್ದಾರೆ.

ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲೂ ಸ್ಪುಟ್ನಿಕ್-ವಿ ಲಸಿಕೆ ಸಿಗುತ್ತೆ?ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲೂ ಸ್ಪುಟ್ನಿಕ್-ವಿ ಲಸಿಕೆ ಸಿಗುತ್ತೆ?

ಮೊದಲು ಈ ಕಾರ್ಡ್‌ ಸೇವೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗೆ ಮಾತ್ರ ಸೀಮಿತವಾಗಿತ್ತು. ಈಗ ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ ಸೇರಿದಂತೆ 12 ಜಿಲ್ಲೆಗಳಿಗೆ ವಿಸ್ತರಣೆ ಮಾಡಲಾಗಿದೆ. ಕೇರಳ ಮತ್ತು ಗೋವಾ ರಾಜ್ಯಗಳಲ್ಲೂ ಈ ಸೇವೆ ಲಭ್ಯವಿದೆ.

ಮಣಿಪಾಲ್ ನ ಈ ವ್ಯಾಪಾರಿಯನ್ನು ಅಣ್ಣಾ ಅಂತ ಕರೆಯಬಾರದಂತೆ!ಮಣಿಪಾಲ್ ನ ಈ ವ್ಯಾಪಾರಿಯನ್ನು ಅಣ್ಣಾ ಅಂತ ಕರೆಯಬಾರದಂತೆ!

ಕಾರ್ಡ್‌ಗಳ ದರ ಪಟ್ಟಿ; 1 ವರ್ಷದ ಯೋಜನೆ ಸದಸ್ಯತ್ವ ಪಡೆಯಲು ಒಬ್ಬರು 300 ರೂ. ಪಾವತಿ ಮಾಡಬೇಕು. ಕೌಟುಂಬಿಕ ಕಾರ್ಡ್‌ ಪಡೆದರೆ ಕಾರ್ಡ್‌ ಹೊಂದಿರುವ ವ್ಯಕ್ತಿ, 25 ವರ್ಷದ ಮಕ್ಕಳಿಗೆ 600 ರೂ. ಹೆಚ್ಚುವರಿ ಪಾವತಿಸಬೇಕು. ಕೌಟುಂಬಿಕ ಪ್ಲಸ್ ಯೋಜನೆಗೆ 750 ರೂ. ದರವಿದೆ.

ಜೂ. 21ರಿಂದ ಕೆಎಂಸಿ ಮಣಿಪಾಲ ಆಸ್ಪತ್ರೆಯಲ್ಲಿ ಎಲ್ಲ ಸೇವೆ ಲಭ್ಯ ಜೂ. 21ರಿಂದ ಕೆಎಂಸಿ ಮಣಿಪಾಲ ಆಸ್ಪತ್ರೆಯಲ್ಲಿ ಎಲ್ಲ ಸೇವೆ ಲಭ್ಯ

2 ವರ್ಷದ ಯೋಜನೆಯನ್ನು ಪಡೆಯಲು 500 ರೂ., ಕುಟುಂಬಕ್ಕೆ 800 ರೂ., ಕೌಟುಂಬಿಕ ಪ್ಲಸ್ ಯೋಜನೆಗೆ 950 ರೂ. ವೆಚ್ಚವಿದೆ. ಕಾರ್ಡ್‌ ಪಡೆದರೆ ಹೊರ ರೋಗಿಗಳಿಗೂ ಸಹ ಸಹಾಯಕವಾಗಲಿದೆ.

ಕಾರ್ಡ್‌ ಪಡೆದರೆ ವೈದ್ಯರ ಸಮಾಲೋಚನೆ ಶೇ 50, ಲ್ಯಾಬ್‌ಗೆ ಪರೀಕ್ಷೆಗೆ ಶೇ 30, ಸಿಟಿ/ ಎಂಆರ್‌ಐ/ ಅಲ್ಟ್ರಾ ಸೌಂಡ್‌ ಪರೀಕ್ಷೆಗೆ/ ಮಧುಮೇಹಕ್ಕೆ ಶೇ 20ರಷ್ಟು ರಿಯಾಯಿತಿ ಸಿಗಲಿದೆ. ಮೆಡಿಕಲ್ ಶಾಪ್‌ಗಳಲ್ಲಿ ಶೇ 12ರಷ್ಟು ರಿಯಾಯಿತಿ ಇದೆ.

ಹೆಚ್ಚಿನ ಮಾಹಿತಿಗಾಗಿ ವೆಬ್ ಸೈಟ್‌ಗೆ ಭೇಟಿ ನೀಡಿ https://manipalhealthcard.com/

English summary
Kasturba hospital Manipal began registration for the Manipal Arogya card 2021. People can get concession by getting card.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X