ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಡ್ಯ: ಬ್ಲೂಫಿಲಂ ಪ್ರದರ್ಶಿಸುತ್ತಿದ್ದ ಚಿತ್ರಮಂದಿರಕ್ಕೆ ಬೀಗ

By ಮೈಸೂರು ಪ್ರತಿನಿಧಿ
|
Google Oneindia Kannada News

ಮಂಡ್ಯ, ಡಿಸೆಂಬರ್, 04: ಚಿತ್ರಮಂದಿರಗಳತ್ತ ಪ್ರೇಕ್ಷಕರು ಬರುತ್ತಿಲ್ಲ ಎಂಬ ಆರೋಪ ಎಲ್ಲೆಡೆಯೂ ಕೇಳಿ ಬರುತ್ತಿದೆ. ಆದರೆ ನಗರದ ಚಿತ್ರಮಂದಿರವೊಂದರಲ್ಲಿ ಅಶ್ಲೀಲ ಚಲನಚಿತ್ರಗಳನ್ನು ಪ್ರದರ್ಶಿಸುತ್ತಾ ಪ್ರೇಕ್ಷಕರನ್ನು ಸೆಳೆದು ಹಣ ಮಾಡುತ್ತಿದ್ದ ಕೃತ್ಯ ಇದೀಗ ಬಯಲಾಗಿದೆ.

ಬ್ಲೂ ಫಿಲಂ ಪ್ರದರ್ಶಿಸುತ್ತಿದ್ದ ನಗರದ ವಿಶ್ವೇಶ್ವರಯ್ಯ ರಸ್ತೆಯ ಮನೋರಂಜನ್ ವೀಡಿಯೋ ಚಿತ್ರಮಂದಿರ ಮೇಲೆ ಡಿಸೆಂಬರ್ 2ರ ಬುಧವಾರ ರಾತ್ರಿ ದಾಳಿ ಮಾಡಿದ ಪೊಲೀಸರು ಚಿತ್ರಮಂದಿರದ ಮಾಲೀಕ ಶಿವಕುಮಾರ್ (30)ನನ್ನು ಬಂಧಿಸಿದ್ದಾರೆ.[ಸರ್ಕಾರಿ ಕಂಪ್ಯೂಟರ್ ಗಳಲ್ಲಿ ಡರ್ಟಿ ಪಿಕ್ಚರ್ಸ್ ಇನ್ನಿಲ್ಲ]

Mandya police seized Manoranjan video Cinema theatre and arrested owner

ನಗರದ ಕೆಲವು ಚಿತ್ರಮಂದಿರಗಳಿಗೆ ಪ್ರೇಕ್ಷಕರ ಕೊರತೆಯಿದ್ದರೂ ನಗರದ ವಿಶ್ವೇಶ್ವರಯ್ಯ ರಸ್ತೆಯಲ್ಲಿದ್ದ ಮನೋರಂಜನ್ ವೀಡಿಯೋ ಚಿತ್ರಮಂದಿರದಲ್ಲಿ ಮಾತ್ರ ಪ್ರೇಕ್ಷಕರ ಕೊರತೆ ಕಂಡು ಬರುತ್ತಿರಲಿಲ್ಲ. ಸದಾ ಪಡ್ಡೆ ಹುಡುಗರು ಕಿಕ್ಕಿರಿದು ತುಂಬಿರುತ್ತಿದ್ದರು. ಆದರೆ ಜನಕ್ಕೆ ಇದರ ಹಿಂದಿನ ಮರ್ಮ ಮಾತ್ರ ಗೊತ್ತಾಗಿರಲಿಲ್ಲ.

ಬಹುತೇಕ ಜನರಿಗೆ ಅಲ್ಲಿ ಬಹು ಭಾಷೆಯ ಅಶ್ಲೀಲ ಚಿತ್ರಗಳ ಪ್ರದರ್ಶನ ನಡೆಯುತ್ತಿದೆ ಎಂಬ ಮಾಹಿತಿ ಇದ್ದರೂ ಸುಮ್ಮನಾಗಿದ್ದರು. ಹಾಗೆ ನೋಡಿದರೆ ಈ ವೀಡಿಯೋ ಚಿತ್ರ ಮಂದಿರದ ಮೇಲೆ 2004ರಲ್ಲಿ ದಾಳಿ ಮಾಡಲಾಗಿತ್ತು.[ಕರ್ನಾಟಕ: ಸಾಮಾಜಿಕ ಜಾಲ ತಾಣಗಳಿಗೂ ಈಗ ಕೊಕ್ಕೆ]

ನಂತರ ಒಂದೆರಡು ಬಾರಿ ದಾಳಿ ಮಾಡಿದ್ದರೂ ಅಧಿಕಾರಿಗಳು ಲಂಚ ಪಡೆದು ಸುಮ್ಮನಾಗುತ್ತಿದ್ದುದರಿಂದ ಯಾವುದೇ ಪ್ರಕರಣ ದಾಖಲಾಗಿರಲಿಲ್ಲ. ಹೀಗಾಗಿ ರಾಜಾರೋಷವಾಗಿ ಅಶ್ಲೀಲ ಚಿತ್ರಗಳ ಪ್ರದರ್ಶನ ನಡೆಯುತ್ತಿತ್ತು.

ಈ ಬಗ್ಗೆ ದೂರುಗಳು ಬಂದ ಹಿನ್ನಲೆಯಲ್ಲಿ ಖಚಿತ ಮಾಹಿತಿ ಪಡೆದ ಉಪ ವಿಭಾಗಾಧಿಕಾರಿ ಅರುಳ್ ಕುಮಾರ್ ನೇತೃತ್ವದ ತಂಡ ಡಿಸೆಂಬರ್ ೨ರ ಬುಧವಾರ ರಾತ್ರಿ ಮನೋರಂಜನ್ ಚಿತ್ರಮಂದಿರದ ಮೇಲೆ ದಾಳಿ ನಡೆಸಿ ವಿವಿಧ ಭಾಷೆಗಳ ಅಶ್ಲೀಲ ಸಿಡಿ, ಪ್ರೊಜೆಕ್ಟರ್ ವಶಪಡಿಸಿಕೊಂಡಿದ್ದು, ಚಿತ್ರಮಂದಿರಕ್ಕೆ ಬೀಗ ಜಡಿದು ಸೀಲ್ ಮಾಡಿದ್ದಾರೆ. ನಗರದ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

English summary
Mandya police seized Manoranjan video Cinema theatre and take custody to the owner Shivkumar. Because this theatre is daily shows Blue films only. Theatre is located in Vishweshawaraiah Road, Mandya.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X