ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಡ್ಯ : ಮೂಡಾ ಹಗರಣದ ಕುರಿತು ಸಿಬಿಐ ತನಿಖೆ

|
Google Oneindia Kannada News

ಮಂಡ್ಯ, ಜು. 2 : ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂಬ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಲು ಮುಡಾ ಆಯಕ್ತರಿಗೆ ಬುಧವಾರ ಸೂಚನೆ ನೀಡಲಾಗಿದೆ.

ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರ (ಮೂಡಾ)ದ 1821 ನಿವೇಶನಗಳ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಮೂಡಾ ಆಯುಕ್ತ ಕೆ.ಮಥಾಯ್ ನಗರಾಭಿವೃದ್ಧಿ ಇಲಾಖೆಗೆ ವರದಿ ನೀಡಿದ್ದರು. ನಿವೇಶನಗಳನ್ನು ಅರ್ಹರಿಗೆ ನೀಡದೆ ಪ್ರಭಾವಿಗಳಿಗೆ ಹಂಚಿಕೆ ಮಾಡಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದ್ದರು.

MUDA

ನಗರಾಭಿವೃದ್ಧಿ ಇಲಾಖೆ ವರದಿಯನ್ನು ಪರಿಶೀಲನೆ ನಡೆಸಿದ ಬಳಿಕ ಸಿಬಿಐ ತನಿಖೆಗೆ ವಹಿಸಿ ಆದೇಶ ಹೊರಡಿಸಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳ ವಿರುದ್ಧ ಎರಡು ಅಥವ ಮೂರು ದಿನಗಳಲ್ಲಿ ಎಫ್ಐಆರ್ ದಾಖಲಿಸುತ್ತೇನೆ ಎಂದು ಕೆ.ಮಥಾಯ್ ಮಂಡ್ಯದಲ್ಲಿ ಬುಧವಾರ ಹೇಳಿದ್ದಾರೆ. [ಮೂಡಾ ವೆಬ್ ಸೈಟ್ ನೋಡಿ]

ವಕೀಲ ಸತ್ಯಾನಂದ ಅವರು ಮೂಡಾದಲ್ಲಿ ನಡೆದ ಈ ಹಗರಣವನ್ನು ಬಯಲಿಗೆಳೆದಿದ್ದರು. ಸಚಿವ ಅಂಬರೀಶ್ ಸೇರಿದಂತೆ ಹಲವರಿಗೆ 1821 ನಿವೇಶನಗಳು ಹಂಚಿಕೆಯಾಗಿವೆ ಎಂಬ ಆರೋಪಗಳಿವೆ. ರಾಜಕೀಯ ಪ್ರಭಾವ ಬಳಿಸಿ ಹಲವು ಪ್ರಭಾವಿ ನಾಯಕರು ನಿವೇಶನ ಪಡೆದಿದ್ದು, ಅರ್ಹರಿಗೆ ನಿವೇಶನ ಸಿಕ್ಕಿಲ್ಲ ಎಂದು ಸತ್ಯಾನಂದ ಆರೋಪಿಸಿದ್ದರು. ಸದ್ಯ ಸರ್ಕಾರ ಈ ಹಗರಣವನ್ನು ಸಿಬಿಐ ತನಿಖೆಗೆ ವಹಿಸಿ ಆದೇಶ ಹೊರಡಿಸಿದೆ.

English summary
Karnataka Urban Development Ministry orderd for CBI probe on Mandya Urban Development Authority (MUDA) site scam. MUDA commissioner K Mathai submitted report to Urban Development Minister over site scam.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X