ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಲ್ಯಾಣ ಕರ್ನಾಟಕಕ್ಕೆ ಅನ್ಯಾಯವಾಗಿದ್ದು ನಿಜಾಮರಿಂದ : ಖರ್ಗೆ

By Mahesh
|
Google Oneindia Kannada News

ಬೆಂಗಳೂರು, ಜುಲೈ 30: ಕಲ್ಯಾಣ ಕರ್ನಾಟಕ(ಹೈದರಾಬಾದ್-ಕರ್ನಾಟಕ) ಭಾಗಕ್ಕೆ ನಿಜವಾಗಿಯೂ ಅನ್ಯಾಯವಾಗಿರುವುದು ನಿಜಾಮರಿಂದ ಮಾತ್ರ. ಕರ್ನಾಟಕದ ಏಕೀಕರಣ, ಹೈದರಾಬಾದ್ ಕರ್ನಾಟಕದ ವಿಮೋಚನೆಗೆ ಶ್ರಮಿಸಿದವರಿಗೆ ಬೆಲೆ ಕೊಡಬೇಕಿದೆ, ರಾಜ್ಯದ ಆಖಂಡವಾಗಿರಬೇಕು, ಪ್ರತ್ಯೇಕ ರಾಜ್ಯ ಅನಗತ್ಯ ಎಂದು ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅಭಿಪ್ರಾಯಪಟ್ಟಿದ್ದಾರೆ.

ಒಂದು ಸಂಘರ್ಷದ ಕಾಲ ನಮ್ಮೆಲ್ಲರನ್ನೂ ಒಗ್ಗೂಡಿಸಬೇಕು!ಒಂದು ಸಂಘರ್ಷದ ಕಾಲ ನಮ್ಮೆಲ್ಲರನ್ನೂ ಒಗ್ಗೂಡಿಸಬೇಕು!

ಉತ್ತರ ಕರ್ನಾಟಕ ಭಾಗದಲ್ಲಿ ಅಭಿವೃದ್ಧಿ ಕುಂಠಿತವಾಗಿದ್ದು, ಈ ಕುರಿತಂತೆ ಮುಖ್ಯಮಂತ್ರಿಗಳ ಜತೆ ಚರ್ಚಿಸಿ, ಅಭಿವೃದ್ಧಿಪರ ಕಾರ್ಯಗಳಿಗೆ ಚಾಲನೆ ನೀಡಲು ಮುಂದಾಗಬೇಕು, ಅದರ ಬದಲು, ಪ್ರತ್ಯೇಕ ರಾಜ್ಯ ಮಾಡಲು ಹೊರಟರೆ, ಅಭಿವೃದ್ಧಿ ಎಂದಿಗೂ ಸಾಧ್ಯವಿಲ್ಲ ಎಂದರು.

ಪ್ರತ್ಯೇಕ ರಾಜ್ಯದ ಕೂಗಿಗೆ ಜಾತಿ, ರಾಜಕೀಯ ಕಾರಣ: ಪದ್ಮರಾಜ ದಂಡಾವತಿಪ್ರತ್ಯೇಕ ರಾಜ್ಯದ ಕೂಗಿಗೆ ಜಾತಿ, ರಾಜಕೀಯ ಕಾರಣ: ಪದ್ಮರಾಜ ದಂಡಾವತಿ

ಅಭಿವೃದ್ಧಿ ವಿಷಯದಲ್ಲಿ ಹೈದರಾಬಾದ್ ಕರ್ನಾಟಕ ಭಾಗವು 'ಸಿ' ಗ್ರೇಡ್ ಸ್ಥಾನದಲ್ಲಿದ್ದು, ಹಳೆ ಮೈಸೂರು ಹಾಗೂ ಮುಂಬೈ ಕರ್ನಾಟಕ ಭಾಗವು ಕ್ರಮವಾಗಿ ಎ ಮತ್ತು ಬಿ ಗ್ರೇಡ್ ಹೊಂದಿವೆ ಎಂಬುದನ್ನು ಖರ್ಗೆ ಒಪ್ಪಿಕೊಂಡರು.

Mallikarjun Kharge Admits H-K region development C grade

ಹೈದರಾಬಾದ್ -ಕರ್ನಾಟಕ ಭಾಗದ ಏಳಿಗೆಗಾಗಿ ಕಾಂಗ್ರೆಸ್ ಸಾಕಷ್ಟು ಶ್ರಮಿಸಿದೆ. ಸ್ವಾತಂತ್ರ್ಯ ನಂತರವೂ ಈ ಭಾಗದಲ್ಲಿ ಆಳ್ವಿಕೆ ನಡೆಸಿದ್ದ ನಿಜಾಮರು, ರಜಾಕರ ನಿರ್ಲಕ್ಷ್ಯದಿಂದ ಈ ಭಾಗ ಹಿಂದುಳಿದ ಪ್ರದೇಶವಾಗಿ ಉಳಿದಿದೆ. ಈ ಭಾಗದ ಏಳಿಗೆಗಾಗಿ ಕಾಂಗ್ರೆಸ್ ಸಾಕಷ್ಟು ಶ್ರಮಿಸಿದೆ ಎಂದು ಹೇಳಿದರು.

English summary
In terms of development, the Hyderabad Karnataka region was in ‘C’ grade, while the Old Mysore region and Mumbai Karnataka region respectively occupied A and B grade. The backwardness of this region is due to the its neglect by the Nizams said Congress leader Mallikarjun Kharge.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X