ಸಿದ್ದರಾಮಯ್ಯರ ಫೋಟೋ ತೆಗೆದ ಖರ್ಗೆ, ಚಿತ್ರ ಏನು ಹೇಳುತ್ತದೆ?

Posted By:
Subscribe to Oneindia Kannada
   ಸಿದ್ದು ಫೋಟೋ ಕ್ಲಿಕ್ ಮಾಡಿದ ಮಲ್ಲಿಕಾರ್ಜುನ್ ಖರ್ಗೆ | ಈ ಫೋಟೋ ಸಾವಿರ ಕಥೆ ಹೇಳುತ್ತೆ | Oneindia Kannada

   'ಸಿದ್ದರಾಮಯ್ಯ ವಿರುದ್ಧ ಕಾಂಗ್ರೆಸ್ ನಾಯಕರು ಗರಂ ಆಗಿದ್ದಾರೆ, ರಾಜ್ಯ ಕಾಂಗ್ರೆಸ್‌ ಅನ್ನು ಸಿದ್ದರಾಮಯ್ಯ ತಮ್ಮ ಮುಷ್ಠಿಗೆ ತೆಗೆದುಕೊಂಡು ಬಿಟ್ಟಿದ್ದಾರೆ' ಎಂಬೆನೇನೋ ಸುದ್ದಿಗಳು ಕೆಲ ದಿನಗಳ ಹಿಂದೆ ಹರಿದಾಡುತ್ತಿತ್ತು.

   ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು

   ಜಾಫರ್ ಶರೀಫ್ ಮತ್ತು ಅವರಂತಹಾ ಎಲೆಕ್ಷನ್ ಸಮಯಕ್ಕೆ ಎದ್ದು ನಿಲ್ಲುವ ರಾಜಕಾರಣಿಗಳಿಗೆ ಹೀಗೆ ಅನ್ನಿಸಿರಲಿಕ್ಕೂ ಸಾಕು. ಆದರೆ ಸಿದ್ದರಾಮಯ್ಯ ವಿರುದ್ಧ ಬೇಸರಗೊಂಡ ಹಿರಿಯ ನಾಯಕರ ಪಟ್ಟಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರನ್ನೂ ಸೇರಿಸಲಾಗಿತ್ತು. ಆದರೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಚಿತ್ರವೊಂದು ಮಲ್ಲಿಕಾರ್ಜುನ ಖರ್ಗೆ ಹಾಗೂ ಸಿದ್ದರಾಮಯ್ಯ ನಡುವೆ ವೈಮನಸ್ಯವೇನೂ ಇಲ್ಲ ಎಂದು ಕಾಂಗ್ರೆಸ್ಸಿಗರು ಸಮಾಧಾನ ಪಟ್ಟುಕೊಳ್ಳುವುದಕ್ಕೆ ಕಾರಣವಾಗಿದೆ.

   ಸಿದ್ದರಾಮಯ್ಯ ನಡೆಗೆ ಭೇಷ್ ಎನ್ನುತ್ತಿದೆ 'ಕೈ' ಕಮಾಂಡ್ !

   ಹೌದು, ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‌ ಕಾರ್ಯಕರ್ತರು ಮೆಟ್ಟಿಲುಗಳ ಮೇಲೆ ಕೂತಿರುವುದನ್ನು ಮಲ್ಲಿಕಾರ್ಜುನ ಖರ್ಗೆ ಮೊಬೈಲ್ ನಲ್ಲಿ ಸೆರೆಹಿಡಿಯುತ್ತಿರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಸಿದ್ದರಾಮಯ್ಯ ಅವರು ನಗುತ್ತಾ ಮೊಬೈಲ್ ಹಿಡಿದ ಖರ್ಗೆ ಕಡೆ ನೋಡುತ್ತಿದ್ದಾರೆ. ಖರ್ಗೆ 'ಸ್ಮೈಲ್' ಎನ್ನುತ್ತಾ ಸಿದ್ದರಾಮಯ್ಯರ ಚಿತ್ರ ಸೆರೆಹಿಡಿಯುತ್ತಿದ್ದಾರೆ.

   Malikarjun Kharge clicks Siddaramaiahs photo

   ಈ ಚಿತ್ರ ಹಲವು ವಿಷಯಗಳನ್ನು ಹೇಳುತ್ತಿದೆ. ತನಗಿಂತ ವಯಸ್ಸಿನಲ್ಲಿ, ಅನುಭವದಲ್ಲಿ ಕಿರಿಯರಾದ ಸಿದ್ದರಾಮಯ್ಯ ಅವರೊಂದಿಗೆ ಸ್ನೇಹದಿಂದ ವರ್ತಿಸುತ್ತಿರುವುದು ಚಿತ್ರದಲ್ಲಿ ಕಾಣುತ್ತದೆ. ಇನ್ನು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಳಾದರೂ ಹುಸಿ ಗಾಂಭೀರ್ಯಗಳನ್ನು ಪಕ್ಕಕ್ಕಿಟ್ಟು ಮೆಟ್ಟಿಲುಗಳ ಮೇಲೆ ಕಾರ್ಯಕರ್ತರೊಂದಿಗೆ ಕೂತು ಚಿತ್ರಕ್ಕೆ ಮುಖ ಒಡ್ಡಿರುವುದು ಅವರ ಸರಳತೆಯನ್ನು ತೋರುತ್ತದೆ.

   ಚುನಾವಣಾ ಪ್ರಚಾರ ಚಿತ್ರಸಂಪುಟ : ಬಿಜೆಪಿ | ಕಾಂಗ್ರೆಸ್ | ಜೆಡಿಎಸ್

   ಇಬ್ಬರು ಹಿರಿಯ ರಾಜಕಾರಣಿಗಳ ನಡುವೆ ರಾಜಕೀಯವನ್ನು ಮೀರಿದ ಸ್ನೇಹವನ್ನೂ ನೋಡುಗರು ಚಿತ್ರದಲ್ಲಿ ಗಮನಿಸಬಹುದಾಗಿದೆ. ಸಿದ್ದರಾಮಯ್ಯ ಅವರು ಅಲ್ಪ ಕಾಲದಲ್ಲೇ ಕಾಂಗ್ರೆಸ್‌ನ ಕಿರಿಯರ ಜೊತೆಗೆ ಹಿರಿಯರ ನಂಬುಗೆ, ವಿಶ್ವಾಸ ಮತ್ತು ಸ್ನೇಹಕ್ಕೆ ಪಾತ್ರರಾಗಿದ್ದಾರೆ ಎಂಬುದಕ್ಕೆ ಈ ಚಿತ್ರವನ್ನು ಸಾಕ್ಷಿಯಾಗಿಯೂ ಪರಿಗಣಿಸಬಹುದು.

   ಈ ಚಿತ್ರವನ್ನು ಮಲ್ಲಿಕಾರ್ಜುನ್ ಖರ್ಗೆ ಅವರ ಪುತ್ರ ಪ್ರಿಯಾಂಕ್ ಖರ್ಗೆ ಅವರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, 'ನಮ್ಮ ತಂದೆ ತಂತ್ರಜ್ಞಾನವನ್ನು ಬಳಸುವುದಕ್ಕೆ ಹಿಂಜರಿಯುವರಲ್ಲ, ಹೊಸ ತಂತ್ರಜ್ಞಾನದ ಬಗ್ಗೆ ಸದಾ ಕುತೂಹಲ ಹೊಂದಿದ್ದಾರೆ' ಎಂದು ಬರೆದಿದ್ದಾರೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Congress MP Mallikarjun Kharge clicks CM Siddaramaiah's photo. Priyank Kharge uplods the pick to social media. now its viral on facebook and twitter.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ