ಜೈಲಿನ ಭ್ರಷ್ಟಾಚಾರ ಬಯಲಿಗೆಳೆದ ರೂಪಾಗೆ ವರ್ಗಾವಣೆ ಶಿಕ್ಷೆ

Posted By:
Subscribe to Oneindia Kannada

ಬೆಂಗಳೂರು, ಜುಲೈ17 : ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಮಹತ್ವದ ವರ್ಗಾವಣೆಗೆ ಕರ್ನಾಟಕ ಸರ್ಕಾರವು ಸೋಮವಾರ ಮಧ್ಯಾಹ್ನ ಆದೇಶ ನೀಡಿದೆ. ಕಾರಾಗೃಹ ಡಿಐಜಿಯಾಗಿದ್ದ ಡಿ ರೂಪಾ ಅವರನ್ನು ಟ್ರಾಫಿಕ್ ಇಲಾಖೆಡಿಐಜಿಯಾಗಿ ವರ್ಗಾವಣೆ ಮಾಡಲಾಗಿದೆ.

ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿನ ಭ್ರಷ್ಟಾಚಾರ, ಅಕ್ರಮದ ಬಗ್ಗೆ ಎರಡು ವರದಿ ನೀಡಿ ಡಿಜಿ ಹಾಗೂ ಐಜಿ ಸತ್ಯನಾರಾಯಣ ರಾವ್ ಅವರ ಮೇಲೆ ಆರೋಪ ಹೊರೆಸಿದ್ದ ಡಿ ರೂಪಾ ಅವರಿಗೆ ವರ್ಗಾವಣೆ ಶಿಕ್ಷೆ ಲಭಿಸಿದೆ. ಟ್ರಾಫಿಕ್, ರಸ್ತೆ ಸುರಕ್ಷತೆ ವಿಭಾಗದ ಡಿಜಿಪಿಯಾಗಿ ನೇಮಿಸಲಾಗಿದೆ.

ಲಂಚ, ಡ್ರಗ್ಸ್, ಲೈಂಗಿಕತೆ : ಏನಿದು ಪರಪ್ಪನ ಅಗ್ರಹಾರ ಜೈಲಿನ ಕಥೆ?

Roopa ips

* ಎಂಎನ್ ರೆಡ್ಡಿ- ಗುಪ್ತಚರ ಇಲಾಖೆ ಡಿಜಿಪಿಯಿಂದ ಭ್ರಷ್ಟಾಚಾರ ನಿಗ್ರಹದಳ ಡಿಜಿಪಿಯಾಗಿ ವರ್ಗಾವಣೆ
* ಎನ್ ಎಸ್ ಮೇಘರಿಕ್-ಭ್ರಷ್ಟಾಚಾರ ನಿಗ್ರಹದಳ ಎಡಿಜಿಪಿ ಹುದ್ದೆಯಿಂದ ಕಾರಾಗೃಹ ಇಲಾಖೆ ಎಡಿಜಿಪಿಯಾಗಿ ವರ್ಗಾವಣೆ.
* ಅಮೃತ್ ಪಾಲ್- ಗುಪ್ತಚರ ಇಲಾಖೆ ಐಜಿಪಿ ಸ್ಥಾನದಿಂದಗುಪ್ತಚರ ಇಲಾಖೆ ಡಿಜಿಪಿ ಸ್ಥಾನಕ್ಕೆ ವರ್ಗ.
*ಕಾರಾಗೃಹ ಡಿಐಜಿಯಾಗಿದ್ದ ಡಿ ರೂಪಾ ಅವರನ್ನು ಟ್ರಾಫಿಕ್, ರಸ್ತೆ ಸುರಕ್ಷತೆ ವಿಭಾಗದ ಡಿಐಜಿ ಹಾಗೂ ಆಯುಕ್ತರಾಗಿ ನೇಮಕ.

ಲಂಚ ಆರೋಪ ಸುಳ್ಳು, ತನಿಖೆಗೆ ಸಿದ್ಧ-ರೂಪಾಗೆ ಸತ್ಯನಾರಾಯಣ ತಿರುಗೇಟು

DIG Roopa gets notice from Siddaramaiah | Oneindia Kannada
Major reshuffle in police force : D Roopa transferred to Traffic department DGP

* ಎಎನ್ಎಸ್ ಮೂರ್ತಿ- ಎಡಿಜಿಪಿ ಟ್ರಾಫಿಕ್ ಇಲಾಖೆಯಿಂದ ಎಡಿಜಿಪಿ, ಅರಣ್ಯ ವಿಭಾಗಕ್ಕೆ ವರ್ಗ.
* ಕಾರಾಗೃಹದ ಡಿಜಿ ಹಾಗೂ ಐಜಿಯಾಗಿದ್ದ ಸತ್ಯನಾರಾಯಣರಾವ್ ಅವರು ಸದ್ಯ ರಜೆ ಮೇಲಿದ್ದು, ಅವರಿಗೂ ವರ್ಗಾವಣೆ ಭಾಗ್ಯ ಸಿಗಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Major reshuffle in police force : D Roopa transferred to Traffic department DIG of police and post of Commissioner for traffic and road safety.
Please Wait while comments are loading...