ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಸೆಂಬರ್‌ನಲ್ಲಿ ಕರ್ನಾಟಕ ಬಿಜೆಪಿಯಲ್ಲಿ ಮಹತ್ವದ ಬದಲಾವಣೆ?

|
Google Oneindia Kannada News

ಬೆಂಗಳೂರು, ನವೆಂಬರ್ 09 : ಪಕ್ಷ ಸಂಘಟನೆ ಬಗ್ಗೆ ಕರ್ನಾಟಕ ಬಿಜೆಪಿ ಮಹತ್ವದ ತೀರ್ಮಾನವನ್ನು ಕೈಗೊಂಡಿದೆ. ಒಬ್ಬರಿಗೆ ಒಂದೇ ಹುದ್ದೆ ಎನ್ನುವ ಪಕ್ಷದೊಳಗಿನ ಅಲಿಖಿತ ನಿಯಮವನ್ನು ಕಡ್ಡಾಯವಾಗಿ ಜಾರಿಗೆ ತರಲು ಮುಂದಾಗಿದೆ.

ಡಿಸೆಂಬರ್‌ ತಿಂಗಳಿನಲ್ಲಿ ಕರ್ನಾಟಕ ಬಿಜೆಪಿಯಲ್ಲಿ ಮಂಡಲದಿಂದ ರಾಜ್ಯ ಮಟ್ಟದ ತನಕ ವಿವಿಧ ಪದಾಧಿಕಾರಿಗಳ ಆಯ್ಕೆ ನಡೆಯಲಿದೆ. ಈ ವೇಳೆ ಹಲವು ಬದಲಾವಣೆ ತರಲು ಪಕ್ಷ ತೀರ್ಮಾನಿಸಿದೆ. ಇದರ ಅನ್ವಯ ಹಲವು ನಾಯಕರ ಸ್ಥಾನಮಾನದಲ್ಲಿ ಬದಲಾವಣೆಯಾಗಲಿದೆ.

ಹುಣಸೂರು ಉಪ ಚುನಾವಣೆ; ಬಿಜೆಪಿಯ ಅಚ್ಚರಿಯ ನಡೆ! ಹುಣಸೂರು ಉಪ ಚುನಾವಣೆ; ಬಿಜೆಪಿಯ ಅಚ್ಚರಿಯ ನಡೆ!

ನಿಗಮ-ಮಂಡಳಿಗಳಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಪಡೆದವರಿಗೆ ಪಕ್ಷದಲ್ಲಿ ಯಾವುದೇ ಹುದ್ದೆ ನೀಡದಿರಲು ತೀರ್ಮಾನ ಕೈಗೊಳ್ಳಲಾಗಿದೆ. ಯುವ ಸಮೂಹಕ್ಕೆ ಪಕ್ಷ ಸಂಘಟನೆಯಲ್ಲಿ ಆದ್ಯತೆ ನೀಡಲು ಬಿಜೆಪಿ ಚಿಂತನೆ ನಡೆಸಿದ್ದು, ಯಾರಿಗೆ, ಯಾವ ಸ್ಥಾನ ಸಿಗಲಿದೆ? ಕಾದು ನೋಡಬೇಕು.

ಕಾಗವಾಡ ಉಪ ಚುನಾವಣೆ; ಬಿಜೆಪಿಗೆ ಹಿನ್ನಡೆ ತಂದ ಮಾಜಿ ಶಾಸಕಕಾಗವಾಡ ಉಪ ಚುನಾವಣೆ; ಬಿಜೆಪಿಗೆ ಹಿನ್ನಡೆ ತಂದ ಮಾಜಿ ಶಾಸಕ

ಡಿಸೆಂಬರ್ 5ರಂದು 15 ಅನರ್ಹ ಶಾಸಕರ ಕ್ಷೇತ್ರಕ್ಕೆ ಚುನಾವಣೆ ನಡೆಯಲಿದೆ. ಆದ್ದರಿಂದ, ಪದಾಧಿಕಾರಿಗಳ ನೇಮಕವೂ ಮುಂದೆ ಹೋಗುವ ನಿರೀಕ್ಷೆ ಇದೆ. ಪಕ್ಷ ಸಂಘಟನೆಯಲ್ಲಿ ಮಹತ್ವದ ಬದಲಾವಣೆಯಾಗುವ ಸೂಚನೆಯಂತೂ ಸಿಕ್ಕಿದೆ.

ಕೆ. ಗೋಪಾಲಯ್ಯ ವಿರುದ್ಧ ಬಿಜೆಪಿ ಹೈಕಮಾಂಡ್‌ಗೆ ದೂರುಕೆ. ಗೋಪಾಲಯ್ಯ ವಿರುದ್ಧ ಬಿಜೆಪಿ ಹೈಕಮಾಂಡ್‌ಗೆ ದೂರು

ಪಕ್ಷದಲ್ಲಿ ಹುದ್ದೆ ಇಲ್ಲ

ಪಕ್ಷದಲ್ಲಿ ಹುದ್ದೆ ಇಲ್ಲ

ಡಿಸೆಂಬರ್‌ನಲ್ಲಿ ಪದಾಧಿಕಾರಿಗಳ ನೇಮಕ ಮಾಡುವಾಗ ಪಕ್ಷದಲ್ಲಿ ಹುದ್ದೆ ಪಡೆದವರಿಗೆ ನಿಗಮ-ಮಂಡಳಿಯಲ್ಲಿ ಸ್ಥಾನ ನೀಡದಿರಲು ತೀರ್ಮಾನಿಸಲಾಗಿದೆ. ಅದೇ ರೀತಿ ನಿಗಮ-ಮಂಡಳಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಪಡೆದವರಿಗೆ ಪಕ್ಷದಲ್ಲಿ ಯಾವುದೇ ಹುದ್ದೆ ನೀಡದಿರಲು ನಿರ್ಧರಿಸಲಾಗಿದೆ. ಇದಕ್ಕೆ ಹೈಕಮಾಂಡ್ ಒಪ್ಪಿಗೆ ಸಿಗಲಿದೆಯೇ? ಕಾದು ನೋಡಬೇಕು.

ಒಬ್ಬರಿಗೆ ಒಂದೇ ಹುದ್ದೆ

ಒಬ್ಬರಿಗೆ ಒಂದೇ ಹುದ್ದೆ

ಒಬ್ಬರಿಗೆ ಇಂದೇ ಹುದ್ದೆ ಎಂಬ ಅಲಿಖಿತ ನಿಯಮ ಬಿಜೆಪಿಯಲ್ಲಿ ಜಾರಿಯಲ್ಲಿದೆ. ಕೆಲವು ತಿಂಗಳ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷ, ಮುಖ್ಯಮಂತ್ರಿ ಎರಡು ಹುದ್ದೆ ಹೊಂದಿದ್ದ ಯಡಿಯೂರಪ್ಪ ಅವರನ್ನು ಒಂದು ಹುದ್ದೆಯಿಂದ ಬಿಡುಗಡೆಗೊಳಿಸಲಾಗಿತ್ತು. ಇದೇ ನಿಯಮವನ್ನು ಪದಾಧಿಕಾರಿಗಳ ನೇಮಕದ ವಿಚಾರದಲ್ಲಿ ಜಾರಿಗೆ ತರಲು ತೀರ್ಮಾನಿಸಲಾಗಿದೆ.

ವಯಸ್ಸಿನ ಮಿತಿ ಹೇರಿಕೆ

ವಯಸ್ಸಿನ ಮಿತಿ ಹೇರಿಕೆ

ಬಿಜೆಪಿ ಪದಾಧಿಕಾರಿಗಳ ಆಯ್ಕೆ ವೇಳೆ ವಯಸ್ಸಿನ ಮಾನದಂಡವನ್ನು ಪಾಲನೆ ಮಾಡಲಿದೆ. ಮಂಡಲ ಪದಾಧಿಕಾರಿಗಳ ವಯಸ್ಸು 45 ಮೀರಬಾರದು. ಜಿಲ್ಲಾ ಮಟ್ಟದಲ್ಲಿ ನೇಮಕಕ್ಕೆ 55 ವರ್ಷದ ವಯೋಮಿತಿಯನ್ನು ಅನುಸರಿಸಲು ಪಕ್ಷ ತೀರ್ಮಾನಿಸಿದೆ. ಈ ಮೂಲಕ ಪಕ್ಷ ಸಂಘಟನೆಯಲ್ಲಿ ಯುವಕರಿಗೆ ಆದ್ಯತೆ ನೀಡಲಾಗುತ್ತದೆ.

ಹೊಸಬರಿಗೆ ಮಣೆ

ಹೊಸಬರಿಗೆ ಮಣೆ

ಪ್ರಸ್ತುತ ಪಕ್ಷದ ವಿವಿಧ ಸಮಿತಿಗಳಲ್ಲಿ ಇರುವವರು 2ನೇ ಬಾರಿಗೆ ಆಯ್ಕೆಗೊಂಡಿದ್ದಾರೆ. ಪದಾಧಿಕಾರಿಗಳ ನೇಮಕ ಮಾಡುವಾಗ ಹೊಸಬರಿಗೆ ಆದ್ಯತೆ ನೀಡಲು ತೀರ್ಮಾನಿಸಲಾಗಿದೆ. ಒಮ್ಮೆ ಸಮಿತಿಗಳಲ್ಲಿ ಇದ್ದವರಿಗೆ ಮತ್ತೊಮ್ಮೆ ಅವಕಾಶವನ್ನು ನೀಡುವುದಿಲ್ಲ.

English summary
Major change in Karnataka BJP organization structure in the month of December. BJP set to introduce one man one post rule in state unit.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X