ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಎಂ ಬಿಎಸ್ವೈ ಬದಲಾವಣೆಯ ಜೊತೆಗೆ ಮೇಜರ್ ಸಂಪುಟ ಸರ್ಜರಿ?

|
Google Oneindia Kannada News

ಮುಖ್ಯಮಂತ್ರಿ ಯಡಿಯೂರಪ್ಪ ರಾಜೀನಾಮೆಯ ಸುತ್ತ ಹಲವು ಸುದ್ದಿಗಳು ಹರಿದಾಡುತ್ತಲೇ ಇದೆ. ಇದೆಲ್ಲಾ ಅಂತೆಕಂತೆ ಸುದ್ದಿ ಎಂದು ಯಡಿಯೂರಪ್ಪ ಹೇಳದೇ ಇರುವುದರಿಂದ ಮತ್ತು ಹೈಕಮಾಂಡ್ ನುಡಿದಂತೆ ನಡೆಯುತ್ತೇನೆ ಎಂದು ಇವರು ಹೇಳಿರುವುದರಿಂದ ಇದು ಈಗ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದು ನಿಂತಿದೆ.

ಇನ್ನೆರಡು ದಿನಗಳಲ್ಲಿ ಈ ಎಲ್ಲಾ ಸುದ್ದಿಗಳಿಗೆ ಫುಲ್ ಸ್ಟಾಪ್ ಬೀಳುವ ಸಾಧ್ಯತೆಯಿದೆ. ಲಿಂಗಾಯತ ಸಮುದಾಯದ ಮಠಾಧಿಪತಿಗಳು ಸೇರಿದಂತೆ ವಿವಿಧ ಸ್ವಾಮೀಜಿಗಳು ಹಾಕುತ್ತಿರುವ ಒತ್ತಡವನ್ನು ಅವಲೋಕಿಸಿದರೆ, ಯಡಿಯೂರಪ್ಪ ರಾಜೀನಾಮೆಗೆ ಒತ್ತಡ ಇದೆ ಎಂದು ಹೇಳಬಹುದಾಗಿದೆ.

 ಬಿಜೆಪಿ ಹೈಕಮಾಂಡಿಗೆ ಯಡಿಯೂರಪ್ಪ ನೀಡಿದ ಸ್ಪಷ್ಟ ಭರವಸೆ ಬಿಜೆಪಿ ಹೈಕಮಾಂಡಿಗೆ ಯಡಿಯೂರಪ್ಪ ನೀಡಿದ ಸ್ಪಷ್ಟ ಭರವಸೆ

ಸಿಎಂ ರಾಜೀನಾಮೆಯ ಜೊತೆಗೆ ಇನ್ನೊಂದು ಸುದ್ದಿಯೂ ವೇಗವನ್ನು ಪಡೆಯುತ್ತಿದ್ದು, ಅದು ಸಚಿವ ಸಂಪುಟದಲ್ಲಿ ಭಾರೀ ಬದಲಾವಣೆ. ನೂತನ ಮುಖ್ಯಮಂತ್ರಿ ಮೇಜರ್ ಸರ್ಜರಿಯನ್ನು ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ಕೇಂದ್ರದಲ್ಲಿ ನರೇಂದ್ರ ಮೋದಿ ಸರಕಾರ ಇತ್ತೀಚೆಗೆ ಭಾರೀ ಬದಲಾವಣೆಯನ್ನು ಸಂಪುಟದಲ್ಲಿ ಮಾಡಿದ್ದರು. ಅದೇ ರೀತಿ ಕರ್ನಾಟಕದಲ್ಲೂ ಮಾಡುವ ಇಂಗಿತವನ್ನು ಯಡಿಯೂರಪ್ಪ ವ್ಯಕ್ತ ಪಡಿಸಿದ್ದರು.

 ಯಡಿಯೂರಪ್ಪ ಬೆಂಬಲಿಸಿ ಬಂದ ಪೀಠಾಧಿಪತಿಗಳು 'ಸ್ಪಾನ್ಸರ್ಡ್ ಸ್ವಾಮೀಜಿಗಳು' ಯಡಿಯೂರಪ್ಪ ಬೆಂಬಲಿಸಿ ಬಂದ ಪೀಠಾಧಿಪತಿಗಳು 'ಸ್ಪಾನ್ಸರ್ಡ್ ಸ್ವಾಮೀಜಿಗಳು'

 ಯಡಿಯೂರಪ್ಪನವರು ದೆಹಲಿ ಪ್ರವಾಸದಿಂದ ವಾಪಸ್ ಬಂದ ನಂತರ

ಯಡಿಯೂರಪ್ಪನವರು ದೆಹಲಿ ಪ್ರವಾಸದಿಂದ ವಾಪಸ್ ಬಂದ ನಂತರ

ಇತ್ತೀಚೆಗೆ ಯಡಿಯೂರಪ್ಪನವರು ದೆಹಲಿ ಪ್ರವಾಸದಿಂದ ವಾಪಸ್ ಬಂದ ನಂತರ, ರಾಜ್ಯದಲ್ಲೂ ಮೇಜರ್ ಸರ್ಜರಿ ಮಾಡುವ ಬಗ್ಗೆ ಹೇಳಿಕೆಯನ್ನು ನೀಡಿದ್ದರು. ಯುವಕರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡುವ ಬಗ್ಗೆ ಸಿಎಂ ಒಲವನ್ನು ತೋರಿದ್ದರು. ಹಾಗಾಗಿ, ಸಂಪುಟ ಸರ್ಜರಿಯ ಬಗ್ಗೆ ಸುದ್ದಿಗಳು ಬರಲಾರಂಭಿಸಿದೆ. (ಚಿತ್ರ: ಪಿಟಿಐ)

 ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರಕಾರದಲ್ಲೂ ಸಂಪುಟ ಸರ್ಜರಿ

ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರಕಾರದಲ್ಲೂ ಸಂಪುಟ ಸರ್ಜರಿ

ಮುಂದಿನ ವರ್ಷದ ಆದಿಯಲ್ಲಿ ಉತ್ತರ ಪ್ರದೇಶದ ಅಸೆಂಬ್ಲಿ ಚುನಾವಣೆ ನಡೆಯಬೇಕಿದೆ. ಈ ನಿಟ್ಟಿನಲ್ಲಿ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರಕಾರದಲ್ಲೂ ಸಂಪುಟ ಸರ್ಜರಿ ಮಾಡಲಾಗಿತ್ತು. ಅದೇ ರೀತಿ ಕರ್ನಾಟಕದಲ್ಲೂ ಮಾಡಲು ವರಿಷ್ಠರು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ. (ಚಿತ್ರ: ಪಿಟಿಐ)

 ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸೂಚಿಸಿದೆ ಎನ್ನುವ ಮಾತು

ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸೂಚಿಸಿದೆ ಎನ್ನುವ ಮಾತು

ಸಂಪುಟದಲ್ಲಿ ಭಾರೀ ಬದಲಾವಣೆಯ ಜೊತೆಗೆ, ಉಪ ಮುಖ್ಯಮಂತ್ರಿಗಳನ್ನೂ ಬದಲಾಯಿಸಲು ಹೈಕಮಾಂಡ್ ಚಿಂತನೆ ನಡೆಸಿದೆ ಎನ್ನುವ ಮಾತುಗಳೂ ಕೇಳಿ ಬರುತ್ತಿದೆ. ಪ್ರಮುಖವಾಗಿ, ಮೂಲ ಬಿಜೆಪಿಗರನ್ನೇ ಈ ಹುದ್ದೆಗೆ ಆಯ್ಕೆ ಮಾಡುವಂತೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸೂಚಿಸಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. (ಚಿತ್ರ: ಪಿಟಿಐ)

 ಆಡಳಿತ ಯಂತ್ರ ಚುರುಕುಗೊಳಿಸಲು ವರಿಷ್ಠರ ನಿರ್ಧಾರ

ಆಡಳಿತ ಯಂತ್ರ ಚುರುಕುಗೊಳಿಸಲು ವರಿಷ್ಠರ ನಿರ್ಧಾರ

ಯುವಕರ ಜೊತೆಗೆ ಜಾತಿಗೂ ಪ್ರಾತಿನಿಧ್ಯ ನೀಡಿ, ಆಡಳಿತ ಯಂತ್ರ ಚುರುಕುಗೊಳಿಸಲು ವರಿಷ್ಠರು ನಿರ್ಧರಿಸಿದ್ದಾರೆ. ಇದಲ್ಲದೇ, ಸಂಭಾವ್ಯ ಮೂರನೇ ಅಲೆಯನ್ನು ಎದುರಿಸಲು ಸಮರ್ಥವಾದ ತಂಡ ಕಟ್ಟುವುದಕ್ಕೆ ವರಿಷ್ಠರು ಚಿಂತನೆ ನಡೆಸಿದ್ದು, ಈ ಎಲ್ಲಾ ವಿಚಾರಗಳಿಗೆ ಇನ್ನೊಂದು ವಾರದಲ್ಲಿ ಕ್ಲ್ಯಾರಿಟಿ ಸಿಗಲಿದೆ. (ಚಿತ್ರ: ಪಿಟಿಐ)

Recommended Video

BJP ಜಾತಿ ರಾಜಕೀಯಕ್ಕೆ ಮಣೆ ಹಾಕುತ್ತಿರುವ ಬಿಜೆಪಿ ಹೈ ಕಮಾಂಡ್! | Oneindia Kannada

English summary
Karnataka Leadership Change; apart from CM Yediyurappa change major cabinet changes expected.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X