ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಶೋಭಾ ಕರಂದ್ಲಾಜೆ, ಸ್ಮೃತಿ ಇರಾನಿಗೆ ಒಂದು ಪ್ರಶ್ನೆ ಕೇಳಲು ಬಯಸುತ್ತೇನೆ'

|
Google Oneindia Kannada News

ಬೆಂಗಳೂರು, ಮೇ 21: ಬಿಜೆಪಿ ಸರ್ಕಾರ ಮಹಿಳಾ ವಿರೋಧಿ ನೀತಿ ಅನುಸರಿಸುತ್ತಿದೆ. ಬಿಜೆಪಿ ಸರ್ಕಾರ ನಿರಂತರವಾಗಿ ಅಡುಗೆ ಅನಿಲ ಬೆಲೆ ಏರಿಕೆ ಮಾಡುತ್ತಿದ್ದು, ಕಳೆದ 8 ವರ್ಷಗಳ ಅವಧಿಯಲ್ಲಿ 845 ರೂ. ಏರಿಕೆ ಮಾಡಿದ್ದಾರೆ ಎಂದು ಕರ್ನಾಟಕ ಮಹಿಳಾ ಕಾಂಗ್ರೆಸ್ ಆರೋಪಿಸಿದೆ.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಕರ್ನಾಟಕ ಮಹಿಳಾ ಕಾಂಗ್ರೆಸ್ಸಿನ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್, "ಪ್ರಧಾನಮಂತ್ರಿಗಳ ಹೆಸರಿನಲ್ಲಿ ಕೇಂದ್ರ ಸರ್ಕಾರ ಉಜ್ವಲ ಯೋಜನೆ ಘೋಷಣೆ ಮಾಡಿತ್ತು. ಈ ಯೋಜನೆ ಎಷ್ಟು ಜನರಿಗೆ ತಲುಪಿದೆ ಎಂಬುದು ಒಂದು ಕಡೆಯಾದರೆ, ಮಹಿಳೆಯರು ಹೊಗೆರಹಿತ ಅಡುಗೆ ವ್ಯವಸ್ಥೆಯಲ್ಲಿ ಅಡುಗೆ ಮಾಡುವಲ್ಲಿ ಈ ಯೋಜನೆ ನಿರೀಕ್ಷಿತ ಮಟ್ಟದ ಯಶಸ್ಸು ಕಾಣದೇ ಹಳ್ಳ ಹಿಡಿದಿದೆ" ಎಂದು ಹೇಳಿದ್ದಾರೆ.

'ಸಿದ್ದರಾಮಯ್ಯನವರ ಮಾತಿಗೆ ಥರಗುಟ್ಟಿ ಹೋದ ಬಿಜೆಪಿಯ ನಾಯಕರು''ಸಿದ್ದರಾಮಯ್ಯನವರ ಮಾತಿಗೆ ಥರಗುಟ್ಟಿ ಹೋದ ಬಿಜೆಪಿಯ ನಾಯಕರು'

"ಮಹಿಳೆಯರಿಗೆ ಅಚ್ಛೇ ದಿನ ಕೊಟ್ಟುತ್ತೇವೆ ಎಂದು ಹೇಳಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ 8 ವರ್ಷಗಳಲ್ಲಿ ಮಹಿಳೆಯರಿಗೆ ನಿರಂತರವಾಗಿ ಮೋಸ ಮಾಡಿಕೊಂಡು ಬಂದಿದೆ. ಈ ಅನ್ಯಾಯವನ್ನು ಕೇಳಿಸಿಕೊಳ್ಳುವ ಮುಖ್ಯಮಂತ್ರಿಗಳು ಇಲ್ಲವಾಗಿದ್ದಾರೆ. ಬಿಜೆಪಿ ಮಹಿಳಾ ನಾಯಕರು ಬೆಲೆ ಏರಿಕೆ ವಿಚಾರದಲ್ಲಿ ಯಾವಾಗ ಧ್ವನಿ ಎತ್ತುತ್ತಾರೆ? ಇನ್ನು ದಲಿತ ಮಹಿಳೆಯರ ಮೇಲೆ ಅತ್ಯಾಚಾರ ಹಾಗೂ ಅನಾಚಾರ ಹೆಚ್ಚಾಗುತ್ತಿದೆ" ಎಂದು ಪುಷ್ಪಾ ಅಮರನಾಥ್ ಆರೋಪಿಸಿದ್ದಾರೆ.

"ಇನ್ನು ಇತ್ತೀಚೆಗೆ ಆಸಿಡ್ ದಾಳಿಯಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿದ್ದರೆ, ಗೃಹ ಸಚಿವ ಅರಗ ಜ್ಞಾನೇಂದ್ರ ಅವರ ಕ್ಷೇತ್ರದಲ್ಲಿ ದಲಿತ ಕುಟುಂಬದ ಮೇಲೆ ದೌರ್ಜನ್ಯ ನಡೆದಾಗ ಆ ಬಗ್ಗೆ ಮಾತನಾಡಲಿಲ್ಲ ಹಾಗೂ ಆ ಕುಟುಂಬಕ್ಕೆ ನ್ಯಾಯ ಕೊಡಿಸಲು ಅಧಿಕಾರಿಗಳ ಜತೆ ಮಾತನಾಡಲಿಲ್ಲ."ಎಂದು ಪುಷ್ಪಾ ಅಮರನಾಥ್ ಕಿಡಿಕಾರಿದರು.

'ಭ್ರಷ್ಟ ಸಚಿವರ ಜೊತೆ ಸಿಎಂ ಬೊಮ್ಮಾಯಿ ಬೆಂಗಳೂರು ಸಿಟಿ ರೌಂಡ್''ಭ್ರಷ್ಟ ಸಚಿವರ ಜೊತೆ ಸಿಎಂ ಬೊಮ್ಮಾಯಿ ಬೆಂಗಳೂರು ಸಿಟಿ ರೌಂಡ್'

 ಬಿಜೆಪಿ ನಾಯಕಿಯರಾದ ಶೋಭಾ ಕರಂದ್ಲಾಜೆ, ಸ್ಮೃತಿ ಇರಾನಿ

ಬಿಜೆಪಿ ನಾಯಕಿಯರಾದ ಶೋಭಾ ಕರಂದ್ಲಾಜೆ, ಸ್ಮೃತಿ ಇರಾನಿ

"ನಾನು ಬಿಜೆಪಿ ನಾಯಕಿಯರಾದ ಶೋಭಾ ಕರಂದ್ಲಾಜೆ, ಸ್ಮೃತಿ ಇರಾನಿ, ಶಶಿಕಲಾ ಜೊಲ್ಲೆ, ತಾರಾ, ಮಾಳವಿಕ ಅವರನ್ನು ಒಂದು ಪ್ರಶ್ನೆ ಕೇಳಲು ಬಯಸುತ್ತೇನೆ. ಯುಪಿಎ ಅವಧಿಯಲ್ಲಿ ಅಡುಗೆ ಅನಿಲದ ಬೆಲೆ 10 ರೂ. ಹೆಚ್ಚಾದರೆ ರಸ್ತೆಯಲ್ಲಿ ಬಿದ್ದು ಒದ್ದಾಡುತ್ತಿದ್ದ ಸ್ಮೃತಿ ಇರಾನಿ, ಶೋಭಾ ಕರಂದ್ಲಾಜೆ ಅವರು ಈಗ ಎಲ್ಲಿದ್ದಾರೆ? ಈಗ ಅವರು ಮಾತನಾಡಲು ಧೈರ್ಯ ಬರುತ್ತಿಲ್ಲವೇ? ಬೆಲೆ ಇಳಿಸಿ ಮಹಿಳೆಯರಿಗೆ ನೆರವಾಗಲು ಮನಸ್ಸಿಲ್ಲವೇ?
ನಮ್ಮ ಪ್ರಶ್ನೆಗಳಿಗೆ ಉತ್ತರಿಸಬೇಕಾದ ಸರ್ಕಾರ ಸತ್ತು ಮಲಗಿದೆ" -ಪುಷ್ಪಾ ಅಮರನಾಥ್.

 ದಿನಬಳಕೆ ವಸ್ತುಗಳ ಬೆಲೆ ಏರಿಕೆ

ದಿನಬಳಕೆ ವಸ್ತುಗಳ ಬೆಲೆ ಏರಿಕೆ

ಬಿಜೆಪಿಯ ಬೆಲೆ ಏರಿಕೆ ವಿರುದ್ಧ ನಾವು ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಹೋರಾಟ ಮಾಡಿದರೂ ಸರ್ಕಾರ ನಿರಂತರವಾಗಿ ಬೆಲೆ ಏರಿಕೆ ಮಾಡುತ್ತಲೇ ಇದೆ. ಇದನ್ನು ನಾವು ಧಿಕ್ಕರಿಸಿ, ಸರ್ಕಾರದ ಬಳಿ ನ್ಯಾಯವನ್ನು ಆಗ್ರಹಿಸುತ್ತೇವೆ. ಸರ್ಕಾರ ಉಚಿತ ಸೌದೆ ಯೋಜನೆಯನ್ನು ಘೋಷಿಸಲಿ ಎಂದು ಆಗ್ರಹಿಸುತ್ತೇವೆ. ದಿನಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಮಧ್ಯಮ ವರ್ಗದ ಜನ ಜೀವನ ನಡೆಸುವುದೇ ಕಷ್ಟವಾಗಿದೆ" ಎಂದು ಪುಷ್ಪಾ ಅಮರನಾಥ್ ಬೇಸರ ವ್ಯಕ್ತ ಪಡಿಸಿದ್ದಾರೆ .

 ಅಡುಗೆ ಅನಿಲ ಇಂದು 1,112 ರೂ. ಆಗಿದೆ

ಅಡುಗೆ ಅನಿಲ ಇಂದು 1,112 ರೂ. ಆಗಿದೆ

ಮಾಜಿ ಮೇಯರ್ ಪದ್ಮಾವತಿ ಮಾತನಾಡುತ್ತಾ, "ಅಡುಗೆ ಅನಿಲ ಇಂದು 1,112 ರೂ. ಆಗಿದೆ. ಕೇಂದ್ರ ಸರ್ಕಾರ ಉಜ್ವಲ ಯೋಜನೆ ತರುತ್ತೇವೆ ಎಂದು ಹೇಳಿತ್ತು. ಈ ಯೋಜನೆ ಏನಾಯಿತು ಎಂದು ಈಗ ಹುಡುಕಬೇಕಾಗಿದೆ. ಈ ಯೋಜನೆಗಾಗಿ ಕೇಂದ್ರ ಸರ್ಕಾರ ಪ್ರತಿ ಗ್ರಾಹಕರಿಂದ 200 ರೂ. ಸಂಗ್ರಹಿಸಿತು. ಈ ಹಣ ಎಲ್ಲಿ ಹೋಯಿತು? ಎಲ್ಲಾ ಬಡ ಮಹಿಳೆಯರಿಗಗೆ ಈ ವ್ಯವಸ್ಥೆ ಸಿಕ್ಕಿದೆಯಾ? ಪ್ರೆಟ್ರೋಲ್ 111, ಡೀಸೆಲ್ 95, ಅಡುಗೆ ಅನಿಲ 1,112 ರೂ. ಆಗಿದೆ. ಜನ ಸಾಮಾನ್ಯರು ಕೋವಿಡ್ ಮಹಾಮಾರಿಯಿಂದ ಚೇತರಿಸಿಕೊಳ್ಳುವ ಹೊತ್ತಲ್ಲಿ ಈ ಬೆಲೆ ಏರಿಕೆಯಾಗಿದೆ" ಎಂದು ಹೇಳಿದರು.

 ಮಾಜಿ ಮೇಯರ್ ಪದ್ಮಾವತಿ, ಬಿಜೆಪಿ ವಿರುದ್ದ ಕಿಡಿ

ಮಾಜಿ ಮೇಯರ್ ಪದ್ಮಾವತಿ, ಬಿಜೆಪಿ ವಿರುದ್ದ ಕಿಡಿ

"ಇನ್ನು ನೀರಿನ ಬಿಲ್ ಪ್ರಮಾಣ ಹೆಚ್ಚಾಗಿದ್ದು, ಪ್ರತಿ ಕುಟುಂಬ 800 ರೂ. ಕಟ್ಟಬೇಕಿದೆ. ವಿದ್ಯುತ್ ಬಿಲ್ ಕೂಡ ಏರಿಕೆಯಾಗಿದೆ. ಇನ್ನು ಧಾರಾಕಾರ ಮಳೆ ಬೀಳುತ್ತಿದೆ. 2016ರಲ್ಲೂ ಇದೇ ರೀತಿ ದಾಖಲೆ ಪ್ರಮಾಣದ ಮಳೆಯಾಗಿತ್ತು. ಆಗ ಸಿದ್ದರಾಮಯ್ಯ ಅವರ ಸರ್ಕಾರ ಮುತುವರ್ಜಿ ವಹಿಸಿ ಅಗತ್ಯ ಕ್ರಮ ಕೈಗೊಳ್ಳಲಾಗಿತ್ತು. ಇನ್ನು ಪಾಲಿಕೆಯಲ್ಲಿ ಎಲ್ಲಾ ಜನಪ್ರತಿನಿಧಿಗಳಿದ್ದರು, ಆಗ ಜನಪ್ರತಿನಿಧಿಗಳು ಜನರ ಮಧ್ಯೆ ಹೋಗಿ ಸಮಸ್ಯೆಗೆ ಸ್ಪಂದಿಸಿದ್ದರು" ಎಂದು ಮಾಜಿ ಮೇಯರ್ ಪದ್ಮಾವತಿ, ಬಿಜೆಪಿ ವಿರುದ್ದ ಕಿಡಿಕಾರಿದರು.

Recommended Video

ಬೆಂಗಳೂರಿನಲ್ಲಿ ಭಾರೀ ಮಳೆ , ಸಿದ್ದರಾಮಯ್ಯ ಹೇಳಿದ್ದೇನು | OneIndia Kannada

English summary
Karnataka Mahila Congress Questions To BJP Leaders Including Shobha Karandlaje, Smriti Irani. Know More,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X