ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಡಿಸಿಎಂ ಮಾಡಿ, ಜೊತೆಗೆ ಜಲಸಂಪನ್ಮೂಲ ಖಾತೆ ಕೊಡಿ'

|
Google Oneindia Kannada News

ಬೆಂಗಳೂರು. ಫೆ. 05: ಮೊದಲು ನಮಗೆ ಅಧಿಕಾರ ಬೇಡ ನೀವು ಬಿಜೆಪಿಗೆ ಬನ್ನಿ ಎಂದವರೆ ಈಗ ಮಂತ್ರಿ ಬೇಕು ಎನ್ನುತ್ತಿದ್ದಾರೆಂದು ಬಿಜೆಪಿ ನಾಯಕರ ಮೇಲೆ ಅಥಣಿ ಕ್ಷೇತ್ರದ ಬಿಜೆಪಿ ಶಾಸಕ ಮಹೇಶ್ ಕುಮಟಳ್ಳಿ ಅಸಮಧಾನ ವ್ಯಕ್ತಪಡಿಸಿದ್ದಾರೆ. ಶಾಸಕರ ಭವನದಲ್ಲಿ ಮಾತನಾಡಿರುವ ಕುಮಟಳ್ಳಿ, ಮೊದಲು ಬಿಜೆಪಿ ಬನ್ನಿ ನಮಗೆ ಅಧಿಕಾರ ಬೇಡ. ನೀವೇ ಮಂತ್ರಿ ಆಗಿ ಎಂದವರು ಈಗ ನಮಗೇ ಮಂತ್ರಿಸ್ಥಾನ ಬೇಕು ಎನ್ನುತತಿರುವುದು ಸರಿಯಲ್ಲ ಎಂದು ಮಹೇಶ್ ಕುಮಟಳ್ಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜೊತೆಗೆ ಮಾಜಿ ಶಾಸಕ ಸಿ.ಪಿ. ಯೋಗೇಶ್ವರ್ ಅವರನ್ನು ಮಂತ್ರಿ ಮಾಡಲೇ ಬೇಕು ಎನ್ನುವ ಮೂಲಕ ಅಥಣಿ ಕ್ಷೇತ್ರದ ಬಿಜೆಪಿ ಶಾಸಕ ಮಹೇಶ್ ಕುಮಟಳ್ಳಿ ಹೊಸ ಬೇಡಿಕೆಯನ್ನು ಸಿಎಂ ಯಡಿಯೂರಪ್ಪ ಮುಂದೆ ಇಡುವ ಮೂಲಕ ಕುತೂಹಲ ಮೂಡಿಸಿದ್ದಾರೆ. ಇಡೀ ಸರ್ಕಾರ ರಚನೆ ಸಂದರ್ಭದಲ್ಲಿ ಯೋಗೇಶ್ವರ್ ನಮ್ಮೊಂದಿಗೆ ಇದ್ದರು, ಅವರೇ ಎಲ್ಲ ಓಡಾಡಿ ಮಾಡಿದ್ದಾರೆ. ಹಾಗಾಗಿ ಯೋಗೇಶ್ವರ್ ಅವರಿಗೆ ಮಂತ್ರಿಸ್ಥಾನ ಕೊಡಲೇ ಬೇಕು ಎಂದು ಆಗ್ರಹಸಿದ್ದಾರೆ.

ಮಠಗಳ ಅನ್ನಕ್ಕೆ ಕತ್ತರಿ ಹಾಕಿದ ಬಿಜೆಪಿ ಸರ್ಕಾರ: ಏನಿದು ವಿವಾದ?ಮಠಗಳ ಅನ್ನಕ್ಕೆ ಕತ್ತರಿ ಹಾಕಿದ ಬಿಜೆಪಿ ಸರ್ಕಾರ: ಏನಿದು ವಿವಾದ?

ಕೊಟ್ಟ ಮಾತು ತಪ್ಪಿಲ್ಲ ಸಿಎಂ ಬಿ.ಎಸ್. ಯಡಿಯೂರಪ್ಪ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಯಾವತ್ತೂ ಕೊಟ್ಟ ಮಾತು ತಪ್ಪಿಲ್ಲ. ನಾನು 11 ಜನರಲ್ಲಿ ಮಂತ್ರಿ ಆಗಲ್ಲ ಎಂದಾಗ ಬೇಸರ ಆಗುತ್ತಿದೆ. ಕಳೆದ ಒಂದೂವರೆ ವರ್ಷಗಳಿಂದ ರಮೇಶ್ ಜಾರಕಿಹೊಳಿ ಅವರ ಹೆಸರೇ ಮುಂಚೂಣಿಯಲ್ಲಿತ್ತು. ಅವರನ್ನು ಬಿಟ್ಟರೆ ಎರಡನೇ ಸ್ಥಾನದಲ್ಲಿ ನಾನಿದ್ದೆ, ನಾನು ಒಂಥರಾ ರನ್ನರ್ ಅಪ್ ಇದ್ದಂಗೆ. ನಂಗೆ ಸಚಿವ ಸ್ಥಾನ ಕೊಡಬೇಕು, ಇಲ್ಲದಿದ್ದರೆ ಮಾಜಿ ಸಚಿವ ಎಚ್. ವಿಶ್ವನಾಥ್ ಅವರನ್ನು ಮಂತ್ರಿ ಮಾಡಬೇಕು ಎಂದು ಕುಮಟಳ್ಳಿ ಆಗ್ರಹಿಸಿದ್ದಾರೆ.

Mahesh Kumatalli is intrigued that Yogeshwar should be made minister

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಡಿಸಿಎಂ ಮಾಡಿ ಜಲಸಂಪನ್ಮೂಲ ಖಾತೆ ಕೊಡಬೇಕು. ಅದರಿಂದ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸಹಾಯವಾಗುತ್ತದೆ ಎಂದು ಕುಮಟಳ್ಳಿ ಆಗ್ರಹಿಸಿದ್ದಾರೆ.

English summary
BJP MLA Mahesh Kumatalli is intrigued by the demand that Yogeshwar should be made a minister.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X