ಬರಗಾಲದಲ್ಲಿ ಕರ್ನಾಟಕಕ್ಕೆ ಸಂಜೀವಿನಿಯಾದ ಮಹಾರಾಷ್ಟ್ರ

Subscribe to Oneindia Kannada

ಬೆಂಗಳೂರು, ಏಪ್ರಿಲ್ 11: ಬಿರು ಬೇಸಿಗೆಯ ಬರಗಾಲದಲ್ಲೂ ಮಹಾರಾಷ್ಟ್ರ ಕರ್ನಾಟಕಕ್ಕೆ 2.5 ಟಿಎಂಸಿ ನೀರು ನೀಡಿದೆ. ಮಂಗಳವಾರ ಮಧ್ಯರಾತ್ರಿ ಕೊಯ್ನಾ ಜಲಾಶಯದಿಂದ ಕರ್ನಾಟಕಕ್ಕೆ ಈ ಪ್ರಮಾಣದ ನೀರು ಹರಿಸಲಾಗಿದೆ.

ತನಗೆ ನೀರು ಕೊಡುವಂತೆ ಕರ್ನಾಟಕ ಸರಕಾರ ಮಹಾರಾಷ್ಟ್ರಕ್ಕೆ ಮನವಿ ಸಲ್ಲಿಸಿತ್ತು. ಕರ್ನಾಟಕದ ಮನವಿ ಮೇರೆಗೆ ಮಹಾರಾಷ್ಟ್ರ 2.5 ಟಿಎಂಸಿ ನೀರು ನೀಡಿದೆ. [ಭೀಕರ ಬರಗಾಲದಲ್ಲೂ 'ಶ್ರಮಬಿಂದು ಸಾಗರ'ದಲ್ಲಿ ನೀರೋ ನೀರು]

Maharashtra to release 2.5 TMC of water from Koyna reservoir

ಈ ಹಿಂದೆ ಉತ್ತರ ಕರ್ನಾಟಕ ಬಿಜೆಪಿ ನಾಯಕರು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನಾವೀಸ್ಗೆ ನೀರು ಬಿಡುವಂತೆ ಮನವಿ ಸಲ್ಲಿಸಿದ್ದರು. ಜತೆಗೆ ರಾಜ್ಯ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಅವರು ಆಲಮಟ್ಟಿ ಜಲಾಶಯದಿಂದ ಸೊಲ್ಲಾಪುರ ಭಾಗಕ್ಕೆ ನೀರು ಕೊಡಲಾಗುವುದು, ಕೋಯ್ನಾದಿಂದ ನೀರು ಕೊಡುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ತಿಳಿಸಿದ್ದರು. ಅದರಂತೆ ಇದೀಗ ಮಹಾರಾಷ್ಟ್ರ ನೀರು ಬಿಡುಗಡೆ ಮಾಡಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Maharashtra to release 2.5 TMC of water from Koyna reservoir tonight after Karnataka's request.
Please Wait while comments are loading...