
ಬಿಜೆಪಿಗೆ ಮುಳುವಾಗಲಿದೆಯೇ ಬೆಳಗಾವಿ ಗಡಿ ವಿವಾದ?
ಬೆಂಗಳೂರು, ನವೆಂಬರ್ 29: 2023ರ ವಿಧಾನಸಭೆ ಚುನಾವಣೆಗೆ ಇನ್ನೂ ಕೆಲವೇ ತಿಂಗಳು ಇರುವ ವೇಳೆ ಬೆಳಗಾವಿ ಗಡಿ ವಿವಾದ ಮತ್ತೆ ಭುಗಿಲೆದ್ದಿರುವುದು ರಾಜ್ಯ ಬಿಜೆಪಿ ಸರ್ಕಾರಕ್ಕೆ ನುಂಗಲಾರದ ಬಿಸಿ ತುಪ್ಪವಾಗಿದೆ.
ಮಹಾರಾಷ್ಟ್ರ ಹಾಗೂ ಕರ್ನಾಟಕ ಗಡಿ ವಿವಾದ ಕಳೆದ 66 ವರ್ಷಗಳಿಂದ ನಡೆಯುತ್ತಿದ್ದು, ರಾಜಕೀಯ ಲಾಭಕ್ಕಾಗಿ ಎರಡು ರಾಜ್ಯಗಳು ಈ ವಿಚಾರವನ್ನ ಮುನ್ನೆಲ್ಲೆಗೆ ತಂದಿದ್ದಾರೆತ ಎಮದು ಹಲವರು ಅಭಿಪ್ರಾಯ ಪಟ್ಟಿದ್ದಾರೆ. ಇನ್ನೂ ಮುಂದಿನ ವರ್ಷ ಕರ್ನಾಟಕದಲ್ಲಿ ನಡೆಯುವ ವಿಧಾನಸಭಾ ಚುನಾವಣೆಯ ಮೇಲೆ ಸಾಕಷ್ಟು ಪರಿಣಾಮ ಬೀರಲಿದ್ದು, ಭಾಷಾವಾರು ಮತಗಳು ಧ್ರುವೀಕರಣವಾಗಲಿದೆ.
ಸೈಲೆಂಟ್ ಸುನಿಲ್ ಬಿಜೆಪಿ ಸೇರ್ಪಡೆಗೆ ಅವಕಾಶವಿಲ್ಲ: ನಳಿನ್ಕುಮಾರ್ ಕಟೀಲ್
ಇನ್ನೂ ಬೆಳಗಾವಿ ಜಿಲ್ಲೆಯಲ್ಲಿ ಕನ್ನಡ ಮತ್ತು ಮರಾಠಿ ಭಾಷಿಕ ಮತದಾರರಿದ್ದು, ಎರಡು ರಾಜ್ಯಗಳಲ್ಲೂ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿದ್ದು, ಮಹಾರಾಷ್ಟ್ರ ಹಾಗೂ ಕರ್ನಾಟಕರ ರಾಜಕೀಯ ನಾಯಕರ ಹೇಳಿಕೆ ಹಾಗೂ ಪ್ರತಿ ಹೇಳಿಕೆ ಇನ್ನಷ್ಟು ವಿವಾದ ಹೆಚ್ಚಾಗಲು ಕಾರಣವಾಗಿದೆ.
ಮಹಾರಾಷ್ಟ್ರ ಹಾಗೂ ಕರ್ನಾಟಕ ಗಡಿ ವಿವಾದ ಬಿಜೆಪಿ ವಿರುದ್ದ ಬಿಜೆಪಿ ಅಲ್ಲ, ಇದು ಕರ್ನಾಟಕ ಮತ್ತು ಮಹಾರಾಷ್ಟ್ರ ವಿರುದ್ದವಾಗಿದೆ ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದಾರೆ.
ಇನ್ನೂ ಕರ್ನಾಟಕದ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಗಡಿ ವಿವಾದದಿಂದ ಆರು ಅಥವಾ ಏನು ವಿಧಾನಸಭಾ ಕ್ಷೇತ್ರಗಳ ಮೇಲೆ ಪರಿಣಾಮ ಬೀರಲಿದೆ ಎಂಬ ಆತಂಕ ರಾಜ್ಯ ಬಿಜೆಪಿಗೆ ಇದೆ ಎನ್ನಲಾಗಿದೆ. ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಹಲವು ವರ್ಷಗಳಿಂದ ತನ್ನ ನೆಲೆಯನ್ನ ಕಳೆದುಕೊಂಡಿತ್ತು. ಇನ್ನೂ ಬಿಜೆಪಿ ಹಿಂದುತ್ವದ ಅಜೆಂಡಾದೊಂದಿಗೆ ಮತಗಳನ್ನ ಪಡೆಯುತ್ತಿತ್ತು, ಇದೀಗ ಕಳೆದ ಎರಡ್ಮೂರು ವರ್ಷಗಳಿಂದ ಶಿವಸೇನೆಯ ಬೆಂಬಲದೊಂದಿಗೆ ಎಂಇಎಸ್ ಪ್ರಭಾಲವಾಗುತ್ತಿದ್ದದು, ಕರ್ನಾಟಕದಲ್ಲಿ ತನ್ನ ಉಳಿಯುವಿಕಗೆ ಸಾಕಷ್ಟು ಪ್ರಯತ್ನಿಸುತ್ತಿದೆ ಎನ್ನಲಾಗಿದೆ.
ಉದಾಹರಣೆಗೆ, 2021 ರ ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ, ಎಂಇಎಸ್ ಸ್ವತಂತ್ರವಾಗಿ ಬೆಂಬಲಿಸಿದ ಶುಭಂ ಶೆಲ್ಕೆ ಅವರು 1. 5 ಲಕ್ಷ ಮರಾಠಿ ಮಾತನಾಡುವ ಮತಗಳನ್ನು ಪಡೆದರು. ಕೇಸರಿ ಪಕ್ಷವು ಅಲ್ಪ ಗೆಲುವು ಸಾಧಿಸಿದರೂ ಅದು ಬಿಜೆಪಿಯ ಮತಗಳನ್ನು ತೀವ್ರವಾಗಿ ಕಡಿತಗೊಳಿಸಿತ್ತು.
ಬೆಳಗಾವಿ ನಗರ, ಖಾನಾಪುರ ಗ್ರಾಮಾಂತರ ಮತ್ತು ಮರಾಠಿ ಮಾತನಾಡುವ ಜನಸಂಖ್ಯೆ ಹೆಚ್ಚಿರುವ ನಿಪ್ಪಾಣಿಯಲ್ಲಿಯೂ ಸಹ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ಎಂಇಎಸ್ ತನ್ನ ಪ್ರಭಾವವನ್ನು ವಿಸ್ತರಿಸಲು ಯೋಜಿಸಿದೆ ಎಂದು ಶೆಲ್ಕೆ ಹೇಳಿದ್ದಾರೆ.